ಪತ್ನಿಯನ್ನ ಭೀಕರವಾಗಿ ಕೊಂದ ಪತಿ…ಹತ್ಯೆಗೈದು ಜಗುಲಿಯ ಮೇಲೆ ಕುಳಿತಿದ್ದ ಕ್ರೂರಿ…
- CrimeMysore
- July 15, 2023
- No Comment
- 94
ಮೈಸೂರು,ಜು15,Tv10 ಕನ್ನಡ
ತವರು ಮನೆ ಸೇರಿದ ಪತ್ನಿಯನ್ನ ಭೀಕರವಾಗಿ ಕೊಂದ ಪತಿರಾಯ ಪೊಲೀಸರ ಅತಿಥಿಯಾಗಿದ್ದಾನೆ.ಅಡ್ಡ ಬಂದ ಅತ್ತೆಯನ್ನೂ ಕೊಲೆ ಮಾಡಲು ಯತ್ನಿಸಿದ್ದಾನೆ.ಮೈಸೂರಿನ ಕುಂಬಾರಕೊಪ್ಪಲಿನಲ್ಲಿ ಘಟನೆ ನಡೆದಿದೆ.ತವರು ಮನೆಗೆ ಕರೆದೊಯ್ಯಲು ಬಂದ ಪತಿರಾಯ ಬ್ಯಾಗ್ ನಲ್ಲಿ ತಂದಿದ್ದ ಚಾಕುವಿನಿಂದ ಮನಸೋ ಇಚ್ಛೆ ಇರಿದು ಕೊಂದಿದ್ದಾನೆ.ಮಗಳನ್ನ ಉಳಿಸಿಕೊಳ್ಳಲು ಬಂದ ತಾಯಿ ಮೇಲೂ ಇರಿಯಲು ಯತ್ನಿಸಿದ್ದಾನೆ.ಹರ್ಷಿತಾ(21) ಮೃತ ದುರ್ದೈವಿ.ಮಾದೇಶ(30) ಪತ್ನಿಯನ್ನ ಇರಿದು ಕೊಂದ ಪತಿರಾಯ.ಘಟನೆಯಲ್ಲಿ ಗಾಯಗೊಂಡ ಅತ್ತೆ ಗೀತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಾಂಡವಪುರ ತಾಲೂಕಿನ ಚಿನಕುರಳಿ ಗ್ರಾಮದ ಹರ್ಷಿತಾಳನ್ನ ಗುಂಡ್ಲುಪೇಟೆ ತಾಲೂಕಿನ ಬೇರಂಬಳ್ಳಿ ಗ್ರಾಮದ ಮಾದೇಶ ಒಂದು ವರ್ಷದ ಹಿಂದೆ ಮದುವೆ ಆಗಿದ್ದ.ಪ್ರಾರಂಭದ ದಿನಗಳಲ್ಲಿ ಅನ್ಯೋನ್ಯತೆಯಿಂದ ಇದ್ದ ದಂಪತಿ ನಡುವೆ ಕ್ಷುಲ್ಲಕ ಕಾರಣಕ್ಕೆ ವಿರಸ ಮೂಡಿದೆ.ಆಗಾಗ ಕಿರಿಕ್ ಮಾಡುತ್ತಿದ್ದ ಮಾದೇಶ್ ಕೊಲೆ ಮಾಡುವುದಾಗಿ ಬೆದರಿಸುತ್ತಿದ್ದ.ಜೊತೆಯಾಗಿ ಮಲಗುವ ವೇಳೆ ಸಮೀಪ ಮೊಚ್ಚು ಇಟ್ಟುಕೊಳ್ಳುತ್ತಿದ್ದ ಮಾದೇಶನ ವರ್ತನೆಗೆ ಹೆದರಿದ ಹರ್ಷಿತಾ ತವರು ಮನೆ ಸೇರಿದ್ದಾಳೆ.ಆಗಾಗ ಪತ್ನಿಯನ್ನ ತನ್ನ ಮನೆಗ ಕರೆದೊಯ್ಯಲು ಮಾದೇಶ ಯತ್ನಿಸಿ ವಿಫಲನಾಗಿದ್ದಾನೆ.
ಇಂದು ಮೈಸೂರಿನ ಕುಂಬಾರಕೊಪ್ಪಲಿನ ಮನೆಗೆ ಬ್ಯಾಗ್ ನಲ್ಲಿ ಚಾಕು ಇಟ್ಟುಕೊಂಡು ಬಂದಿದ್ದಾನೆ.ಮನೆಗೆ ಬರುವಂತೆ ಕರೆದಿದ್ದಾನೆ.ನಿರಾಕರಿಸಿದ ಹರ್ಷಿತಾಳನ್ನ ಚಾಕುವಿನಿಂದ ಇರಿದು ಕೊಂಡು ಅಡ್ಡಬಂದ ಅತ್ತೆಗೂ ಹಲ್ಲೆ ಮನೆ ಮುಂದಿದ್ದ ಜಗುಲಿ ಮೇಲೆ ಕುಳಿತಿದ್ದಾನೆ.ಮಾಹಿತಿ ಅರಿತ ಮೇಟಗಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ವಶಕ್ಕೆ ಪಡೆದಿದ್ದಾರೆ…