ನಂಜನಗೂಡು:ಮೂರು ದಿನದಲ್ಲಿ 6 ಕಳುವು ಪ್ರಕರಣ…ಸರ್ಕಾರಿ ಶಾಲೆಗಳು ಟಾರ್ಗೆಟ್…
- CrimeMysore
- July 15, 2023
- No Comment
- 69
ನಂಜನಗೂಡು:ಮೂರು ದಿನದಲ್ಲಿ 6 ಕಳುವು ಪ್ರಕರಣ…ಸರ್ಕಾರಿ ಶಾಲೆಗಳು ಟಾರ್ಗೆಟ್…
ನಂಜನಗೂಡು,ಜು15,Tv10 ಕನ್ನಡ
ನಂಜನಗೂಡು ತಾಲೂಕಿನಲ್ಲಿ ಕಳೆದ ಎರಡು ದಿನಗಳಲ್ಲಿ 6 ಸ್ಥಳಗಳಲ್ಲಿ ಕಳ್ಳತನವಾಗಿದೆ.ಸರ್ಕಾರಿ ಶಾಲೆಗಳು ಹೆಚ್ಚಾಗಿ ಖದೀಮರ ಟಾರ್ಗೆಟ್ ಆಗಿದೆ.ಹಸ್ಕೂರು ಹಾಗೂ ಒಳಗೆರೆ ಗ್ರಾಮದಲ್ಲಿ ಸರ್ಕಾರಿ ಶಾಲೆ ಹಾಗೂ ಹಾಲಿನ ಡೈರಿಗೆ ಕನ್ನ ಹಾಕಿದ್ದಾರೆ.ಮೂರು ಕಡೆ ಕಳ್ಳತನ ಮಾಡಿ ತಮ್ಮ ಕೈಚಳಕ ತೋರಿಸಿದ್ದಾರೆ.
ಮೊನ್ನೆ ತಾಲೂಕಿನ ಹೆಗ್ಗಡಳ್ಳಿ ಗ್ರಾಮದಲ್ಲಿ ಎರಡು ಕಡೆ ಶಾಲೆಗಳಲ್ಲಿ ಕಳ್ಳತನ ನಡೆದಿತ್ತು.ಹುಸ್ಕೂರು ಸರ್ಕಾರಿ ಶಾಲೆಯಲ್ಲಿ ಬಾಗಿಲು ಹಾಗೂ ಅಲ್ಮೆರಾಗಳ ಬೀಗ ಹೊಡೆದು ಎರಡು ಟ್ಯಾಬ್ ಗಳನ್ನು ಕದಿಯಲಾಗಿದೆ.
ಒಳಗೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಅಕ್ಕಿ ಎಣ್ಣೆ ಕಾಳುಗಳು ಸೇರಿದಂತೆ ಪಡಿತರ ಪದಾರ್ಥಗಳನ್ನು ಹಾಗೂ ಹಾಲಿನ ಡೈರಿಯಲ್ಲಿ ಕಂಪ್ಯೂಟರ್ ಸಿಸ್ಟಮ್ ಗಳನ್ನು ಕದ್ದೊಯಿದ್ದಿದ್ದಾರೆ.
ಇಂದು ಬೆಳಿಗ್ಗೆ ಹಾಲಿನ ಡೈರಿ ಮತ್ತು ಶಾಲೆಗಳನ್ನು ತೆರೆದಾಗ ಈ ಕಳ್ಳತನ ಪ್ರಕರಣಗಳು ಬೆಳಕಿಗೆ ಬಂದಿದೆ.ಘಟನಾಸ್ಥಳಕ್ಕೆ ಹುಲ್ಲಹಳ್ಳಿ ಹಾಗೂ ನಂಜನಗೂಡು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಪೊಲೀಸರು ಬೆರಳು ಮುದ್ರೆ ತಜ್ಞರು ಮತ್ತು ಶ್ವಾನ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದೆ.ಕಳವು ಪ್ರಕರಣಗಳಿಂದ ಸಾರ್ವಜನಿಕರು ಆತಂಕಕ್ಕೆ ಸಿಲುಕಿದ್ದಾರೆ.ಮತ್ತೊಂದೆಡೆ ಖದೀಮರು ಪೊಲೀಸರ ನಿದ್ದೆ ಕೆಡಿಸಿದ್ದಾರೆ…