ಚಿರತೆ ಸೆರೆಹಿಡಿದು ಬೈಕ್ ನಲ್ಲಿ ಹೊತ್ತೊಯ್ದ ಯುವಕ…ವಿಡಿಯೋ ವೈರಲ್…
- TV10 Kannada Exclusive
- July 15, 2023
- No Comment
- 48
ಚಿರತೆ ಸೆರೆಹಿಡಿದು ಬೈಕ್ ನಲ್ಲಿ ಹೊತ್ತೊಯ್ದ ಯುವಕ…ವಿಡಿಯೋ ವೈರಲ್…
ಹಾಸನ,ಜು15,Tv10 ಕನ್ನಡ
ತನ್ನ ಮೇಲೆ ದಾಳಿ ನಡೆಸಲು ಬಂದ ಚಿರತೆಯನ್ನ ಸೆರೆಹಿಡಿದ ಯುವಕನೋರ್ವ ತನ್ನ ಬೈಕ್ ನಲ್ಲಿ ಕಟ್ಟಿಕೊಂಡು ಹೊತ್ತೊಯ್ದ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕು ಬಾಗಿವಾಳು ಗ್ರಾಮದಲ್ಲಿ ನಡೆದಿದೆ.ಬೈಕ್ ನಲ್ಲಿ ಕಟ್ಟಿ ಸಾಗಿಸಿದ ವಿಡಿಯೋ ವೈರಲ್ ಆಗಿದೆ. ಸೆರೆ ಹಿಡಿದ ಚಿರತೆಯನ್ನ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾನೆ.
ವೇಣುಗೋಪಾಲ್ ಅಲಿಯಾಸ್ ಮುತ್ತು ಚಿರತೆ ಹಿಡಿದ ಯುವಕನಾಗಿದ್ದಾನೆ.
ಬೆಳಗ್ಗೆ ತಮ್ಮಜಮೀನಿಗೆ ಹೋಗಿದ್ದ ವೇಳೆ ಚಿರತೆ ದಾಳಿ ನಡೆಸಿದೆ.ಈ ವೇಳೆ ಚಿರತೆಯನ್ನ ಸೆರೆಹಿಡಿದಿದ್ದಾನೆ.
ಗಂಡಸಿ ಪಶು ವೈದ್ಯಕೀಯ ಆಸ್ಪತ್ರೆಯಲ್ಲಿ ಚಿರತೆಗೆ ಚಿಕಿತ್ಸೆ ನೀಡಲಾಗುತ್ತಿದೆ.
ಗಂಡಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ…