ಚಿರತೆ ದಾಳಿ… ಯುವಕನಿಗೆ ಗಾಯ
- CrimeMysore
- July 16, 2023
- No Comment
- 106
ಹುಣಸೂರು,ಜು16,Tv10 ಕನ್ನಡ
ಚಿರತೆ ದಾಳಿ ನಡೆಸಿ ಯುವಕನೊರ್ವನನ್ನು ಗಾಯಗೊಳಿಸಿರುವ ಘಟನೆ ಹುಣಸೂರು ತಾಲೂಕಿನ ರಾಮೇನಹಳ್ಳಿ ಬೆಟ್ಟದ ತಪ್ಪಲಿನನಲ್ಲಿ ನಡೆದಿದೆ. ಹನಗೋಡು ರಸ್ತೆಯ ರಾಮೇನಹಳ್ಳಿ ಬೆಟ್ಟದ ತಪ್ಪಲಿನ ಜಾತ್ರೆ ಮಾಳದ ಮಂಟಪದ ಬಳಿ ಸ್ನೇಹಿತರೊಂದಿಗೆ ಕುಳಿತಿದ್ದ ವೇಳೆ ಚಿರತೆ ದಾಳಿ ನಡೆಸಿದ್ದು, ಮಂಡಿ ಹಾಗೂ ಭುಜ ಗಾಯಗೊಳಿಸಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದೆ.
ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ಚಿರತೆ ಸೆರೆ ಹಿಡಿಯುವ ಭರವಸೆ ನೀಡಿದ್ದಾರೆ…