ಕೌಟುಂಬಿಕ ಕಲಹ ಹಿನ್ನಲೆ…ಆತ್ಮಹತ್ಯೆಗೆ ಯತ್ನಿಸಿದ ಗರ್ಭಿಣಿ ಪತ್ನಿ…ಹುಟ್ಟಿದ ಮಗು ಒಂದೇ ದಿನಕ್ಕೆ ಸಾವು…
- CrimeMysore
- July 17, 2023
- No Comment
- 119
ಹೆಚ್.ಡಿ.ಕೋಟೆ,ಜು17,Tv10 ಕನ್ನಡ
ಕೌಟುಂಬಿಕ ಕಲಹ ಹಿನ್ನಲೆ ಗರ್ಭಿಣಿಯಾಗಿದ್ದ ಪತ್ನಿ ಮಾತ್ರೆಗಳನ್ನ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ಹುಟ್ಟಿದ ಮಗು ಒಂದೇ ದಿನಕ್ಕೆ ಸಾವನ್ನಪ್ಪಿದ ಘಟನೆ ಹೆಚ್.ಡಿ.ಕೋಟೆ ತಾಲೂಕು ಕಣಿಯನಹುಂಡಿ ಗ್ರಾಮದಲ್ಲಿ ನಡೆದಿದೆ.ಆಗತಾನೆ ಜನಿಸಿದ ಹೆಣ್ಣುಮಗು ಸಾವನ್ನಪ್ಪಿದೆ.ಆತ್ಮಹತ್ಯೆಗೆ ಯತ್ನಿಸಿದ ತಾಯಿ ಅರ್ಪಿತಾಳಿಗೆ ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಕಣಿಯನಹುಂಡಿ ಗ್ರಾಮದ ಸಿದ್ದರಾಜು ಎಂಬುವರನ್ನ ವಿವಾಹವಾಗಿದ್ದ ಅರ್ಪಿತಾ ಗರ್ಭಿಣಿಯಾಗಿದ್ದರು.ಸೆಪ್ಟೆಂಬರ್ ಗೆ ಹೆರಿಗೆ ದಿನಾಂಕ ನೀಡಲಾಗಿತ್ತು.ಈ ಮಧ್ಯೆ ಪತಿ ಸಿದ್ದರಾಜು ಜೊತೆ ಜಗಳವಾಗಿದೆ.ಬೇಸತ್ತ ಅರ್ಪಿತಾ ಸಂಭಂಧಪಡದ ಮಾತ್ರೆಗಳನ್ನ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಕೂಡಲೇ ಈಕೆಯನ್ನ ಮೈಸೂರಿನ ಚೆಲುವಾಂಬ ಆಸ್ಪತ್ರೆಗೆ ದಾಖಲಿಸಲಾಗಿದೆ.ನಿಗದಿತ ಅವಧಿಗೂ ಮುನ್ನ ಅರ್ಪಿತಾ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.ಮರುದಿನವೇ ಮಗು ಮೃತಪಟ್ಟಿದೆ.ಅರ್ಪಿತಾರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ…