ಕೆಲಸವನ್ನು ನಿರ್ವಹಿಸಬೇಕಾದರೆ ಶಿಸ್ತು ಅತಿಮುಖ್ಯ : ಡಾ.ಕುಮಾರ
- TV10 Kannada Exclusive
- July 17, 2023
- No Comment
- 45
ಮಂಡ್ಯ,ಜು,17:-ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುವುದು ಭಾಗ್ಯ ಮತ್ತು ಪುಣ್ಯದ ಕೆಲಸವಾಗಿದ್ದು ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುವವರು ಬಹಳ ಶಿಸ್ತಿನಿಂದ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ್ ರವರು ಹೇಳಿದರು
ಜಿಲ್ಲಾಡಳಿತ ಇವರ ಸಹಯೋಗದೊಂದಿಗೆ ಜಿಲ್ಲೆಯಲ್ಲಿ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳಿಗೆ ಇಂದಿನಿಂದ ಜುಲೈ28 ರವರೆಗೆ ನಡೆಸಲಾಗುತ್ತಿರುವ
ವೃತ್ತಿ ಬುನಾದಿ ತರಬೇತಿ ಕಾರ್ಯಕ್ರಮವನ್ನು
ಉದ್ಘಾಟಿಸಿ ಅವರು ಮಾತನಾಡಿದರು.
ಕಂದಾಯ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಎಲ್ಲಾ ಇಲಾಖೆಗಳ ಅಧಿಕಾರಿಗಳಿಗೆ ಸಿಗುವ ಗೌರವಕ್ಕಿಂತ ಹೆಚ್ಚಿನ ಗೌರವವನ್ನು ಜನಸಾಮಾನ್ಯರು ನೀಡುತ್ತಾರೆ ಆದ್ದರಿಂದ ಕಂದಾಯ ಇಲಾಖೆಯನ್ನ ಮಾತೃ ಇಲಾಖೆ ಎಂದು ಕರೆಯಲಾಗಿದೆ ಎಂದು ಹೇಳಿದರು.
ಗ್ರಾಮಗಳಲ್ಲಿ ಎಲ್ಲರೂ ಈ ಇಲಾಖೆಯನ್ನು ವಿಶೇಷವಾಗಿ ನೋಡುವರು ಕಂದಾಯ ಇಲಾಖೆಗೆ ಅದರದ್ದೇ ಆದ ಪ್ರಾಮಾಣಿಕವಾದ ಮತ್ತು ಪವಿತ್ರವಾದ ಮಹತ್ವವಿದ್ದು ಇಲ್ಲಿ ಕೆಲಸ ಮಾಡುತ್ತಿದ್ದೀರಿ ಎಂದರೆ ನಿಮಗೆ ಇದರಲ್ಲಿ ಅಭಿಮಾನ ಮತ್ತು ಹೆಮ್ಮೆ ಇರಬೇಕು ಎಂದರು.
ಪ್ರಾಮಾಣಿಕ ಕರ್ತವ್ಯ ನಿರ್ವಹಿಸಬೇಕಾದರೆ ಯಾವುದೇ ಅಮಿಷಕ್ಕು ಒಳಗಾಗದೆ ಸಮಗ್ರತೆ ಮತ್ತು ನಿಷ್ಠೆಯಿಂದ ಕೆಲಸವನ್ನು ನಿರ್ವಹಿಸಬೇಕು ಆಗ ಮಾತ್ರ ಯಶಸ್ಸನ್ನು ಕಾಣಲು ಸಾಧ್ಯ ಎಂದರು.
ಕಂದಾಯ ಇಲಾಖೆಯ ಕಾರ್ಯಚಟವಟಿಕೆಯನ್ನು ತಹಶೀಲ್ದಾರ್, ಅಪರ ಜಿಲ್ಲಾಧಿಕಾರಿ, ಜಿಲ್ಲಾಧಿಕಾರಿ ಹೀಗೆ ಹಲವು ಮೇಲ್ಮಟ್ಟದ ಅಧಿಕಾರಿಗಳು ಗಮನಿಸುತ್ತಾರೆ ಗಮನಿಸುತ್ತಾರೆ. ಆದ್ದರಿಂದ ಕಂದಾಯ ಇಲಾಖೆಗೆ ತನ್ನದೇ ಆದ ಮಹತ್ವ ಇದೆ ಎಂದರು.
ಕಂದಾಯ ಇಲಾಖೆಗೆ ಹೆಚ್ಚಾಗಿ ರೈತರು ಬಡವರು ತಮ್ಮ ಕೆಲಸಕ್ಕಾಗಿ ಬರುತ್ತಾರೆ ಆದ್ದರಿಂದ ವಿನಮ್ರತೆ ಹಾಗೂ ತಾಳ್ಮೆ ಯಿಂದ ವರ್ತಿಸಿ ಎಂದು ಅಪರ ಜಿಲ್ಲಾಧಿಕಾರಿ ಡಾ. ಹೆಚ್.ಎಲ್ ನಾಗರಾಜು ರವರು ಮಾತನಾಡಿದರು.
ನಾವು ಕೆಲಸ ನಿರ್ವಹಿಸುತ್ತಿರುವುದು ಜನ ಸಾಮಾನ್ಯರ ಮಧ್ಯೆ ಯಾವುದೇ ಹಸ್ತಕ್ಷೇಪವಿಲ್ಲದೆ ಕೆಲಸ ನಿರ್ವಹಿಸಬೇಕು ಜನರ ಸೇವೆ ಜನಾರ್ದನ ಸೇವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ರಾಜಲಕ್ಷ್ಮಿ ಹೆಚ್, ಜಿಲ್ಲಾ ತರಬೇತಿ ಸಂಸ್ಥೆಯ ಉಪ ಪ್ರಾಚಾರ್ಯರಾದ ಆನಂದ್ ಎ.ಎನ್, ಜಿಲ್ಲಾ ತರಬೇತಿ ಸಂಸ್ಥೆಯ ಭೋದಕರಾದ ನಾಗೇಶ್ ಎಸ್ ಹಾಗೂ ಜಿಲ್ಲೆಯ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳು ಹಾಜರಿದ್ದರು.