ಜೋಳ ಬೆಳೆದ ಹೊಲದಲ್ಲಿ ಕಾಡುಪ್ರಾಣಿ ಮಾಂಸ ಪತ್ತೆ…ಇಬ್ಬರ ಬಂಧನ…2 ಜಿಂಕೆ ತಲೆ,8 ಕಾಲುಗಳು ವಶ…
- Crime
- July 21, 2023
- No Comment
- 94
ಹುಣಸೂರು,ಜು21,Tv10 ಕನ್ನಡ
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ವನ್ಯಜೀವಿ ವಲಯ ವ್ಯಾಪ್ತಿಯ ನೇಗತ್ತೂರು ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಕಾಡುಪ್ರಾಣಿ ಮಾಂಸ ವಶಪಡಿಸಿಕೊಳ್ಳಲಾಗಿದೆ.ಖಚಿತ ಮಾಹಿತ ಆಧರಿಸಿ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು 6 ಆರೋಪಿಗಳ ಪೈಕಿ ಇಬ್ಬರನ್ನ ಬಂಧಿಸಿದ್ದಾರೆ.ನಾಲ್ವರು ಆರೋಪಿಗಳು ಎಸ್ಕೇಪ್ ಆಗಿದ್ದಾರೆ.ಜೋಳದ ಹೊಲದಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಎರಡು ಜಿಂಕೆ ತಲೆಗಳು,8 ಜಿಂಕೆ ಕಾಲುಗಳು ಹಾಗೂ ರಕ್ತಮಯವಾಗಿದ್ದ ಎರಡು ಕತ್ತಿ ಮತ್ತು ಒಂದು ಚಾಕು ವಶಪಡಿಸಿಕೊಳ್ಳಲಾಗಿದೆ.ಪ್ರದೀಪ್ ಮತ್ತು ಮಧು ಬಂಧಿತ ಆರೋಪಿಗಳು.
ಅರಣ್ಯ ಇಲಾಖೆ ಅಧಿಕಾರಿಗಳಾದ ಹರ್ಷಕುಮಾರ್.ಸಿ,ದಯಾನಂದ್ ಸಿ,ರತನ್ ಕುಮಾರ್,ಗಣರಾಜ್ ಪಟಗಾರ್,ಸಿದ್ದರಾಜು,ಪ್ರಸನ್ನಕುಮಾರ್ ಸೇರಿದಂತೆ ಇನ್ನಿತರ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ…