ಪಬ್ಲಿಕ್ ಸ್ಥಳಗಳಲ್ಲಿ ಸ್ಮೋಕಿಂಗ್ ವಿರುದ್ದ ಕುವೆಂಪುನಗರ ಠಾಣೆ ಪೊಲೀಸರ ಸಮರ…13,800 ರೂ ದಂಡ ವಸೂಲಿ…
- MysoreTV10 Kannada Exclusive
- July 21, 2023
- No Comment
- 162

ಪಬ್ಲಿಕ್ ಸ್ಥಳಗಳಲ್ಲಿ ಸ್ಮೋಕಿಂಗ್ ವಿರುದ್ದ ಕುವೆಂಪುನಗರ ಠಾಣೆ ಪೊಲೀಸರ ಸಮರ…13,800 ರೂ ದಂಡ ವಸೂಲಿ…

ಮೈಸೂರು,ಜು21,Tv10 ಕನ್ನಡ
ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದುತ್ತಾ ಮುಜುಗರ ತರುವ ಯುವಕರಿಗೆ ಕುವೆಂಪುನಗರ ಠಾಣೆ ಪೊಲೀಸರು ಬಿ ಸಿ ಮುಟ್ಟಿಸಿದ್ದಾರೆ. ಯುವಕರಿಗೆ ಟೀ ಕೊಟ್ಟು ಸಿಗರೇಟ್ ಸೇದಲು ಅವಕಾಶ ಕಲ್ಪಿಸಿಕೊಟ್ಟ ಚಾಯ್ ವಾಲಾಗಳಿಗೂ ಬಿಸಿ

ಮುಟ್ಟಿಸಿದ್ದಾರೆ.ಸಿಗರೇಟ್ ಸೇದುತ್ತಾ ಕಾಲಹರಣ ಮಾಡುತ್ತಿದ್ದ ಯುವಕರಿಗೆ ದಂಡ ವಿಧಿಸಲಾಗಿದೆ.ಸ್ಮೋಕ್ ಮಾಡಿದವರಿಗೆ ತಲಾ 100 ರೂ ದಂಡ ವಿಧಿಸಿದರೆ.ಟೀ ಅಂಗಡಿ ಮಾಲೀಕರಿಗೆ 200 ರೂ ದಂಡ ವಿಧಿಸಿದ್ದಾರೆ.ಕುವೆಂಪುನಗರ ಠಾಣಾ ವ್ಯಾಪ್ತಿಯ ಬಹುತೇಕ ಟೀ ಅಂಗಡಿಗಳ ಮುಂದೆ ನಿಂತು ಸಿಗರೇಟ್ ಸೇದಿದ ಯುವಕರು ದಂಡ ತೆತ್ತಿದ್ದಾರೆ.ಸುಮಾರು 15 ದಿನಗಳಲ್ಲಿ 127 ಪ್ರಕರಣಗಳು ದಾಖಲಾಗಿವೆ.ಸಧ್ಯ ಟೀ ಅಂಗಡಿ ಮಾಲೀಕರು ಹಾಗೂ ಸಿಗರೇಟ್ ಸೇವನೆ ಮಾಡಿದ ಯುವಕರು ಸೇರಿದಂತೆ 18,800/- ರೂ ದಂಡ ವಸೂಲಿ ಮಾಡಲಾಗಿದೆ. ಈ ಕಾರ್ಯಾಚರಣೆ ಮತ್ತಷ್ಟು ಮುಂದುವರೆಯಲಿದೆ.ಟೀ ಅಂಗಡಿ ಮುಂದೆ ನಿಂತು ಸಿಗರೇಟ್ ಸೇದುವ ಅಭ್ಯಾಸವಿದ್ದಲ್ಲಿ ಕೂಡಲೇ ಕೈ ಬಿಡಿ ಇಲ್ಲದಿದ್ದಲ್ಲಿ ಪೊಲೀಸರು ಹಾಜರಾಗುವುದು ಗ್ಯಾರೆಂಟಿ.
ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್,ಡಿಸಿಪಿ ಮುತ್ತುರಾಜ್ ಹಾಗೂ ಜಾಹ್ನವಿ ರವರ ಸೂಚನೆ ಮೇರೆಗೆ ಹಾಗೂ ಕೆ.ಆರ್.ಉಪವಿಭಾಗದ ಎಸಿಪಿ ಗಂಗಾಧರಸ್ವಾಮಿ ಮಾರ್ಗದರ್ಶನದಂತೆ ಕುವೆಂಪುನಗರ ಠಾಣೆ ಇನ್ಸ್ಪೆಕ್ಟರ್ ಎಲ್.ಅರುಣ್ ರವರು ಪಬ್ಲಿಕ್ ಪ್ಲೇಸ್ ನಲ್ಲಿ ಸ್ಮೋಕ್ ಮಾಡುವವರ ವಿರುದ್ದ ಸಮರ ಸಾರಿದ್ದಾರೆ…