ಎಕ್ಸಾಂ ಫೀಸ್ ಸಮೇತ ಪ್ರೊಫೆಸರ್ ಎಸ್ಕೇಪ್…ವಿಧ್ಯಾರ್ಥಿಗಳು ಶಾಕ್…ಪೇಚಿಗೆ ಸಿಲುಕಿದ ಸ್ಟೂಡೆಂಟ್ಸ್…
- CrimeMysore
- July 25, 2023
- No Comment
- 79
ಎಕ್ಸಾಂ ಫೀಸ್ ಸಮೇತ ಪ್ರೊಫೆಸರ್ ಎಸ್ಕೇಪ್…ವಿಧ್ಯಾರ್ಥಿಗಳು ಶಾಕ್…ಪೇಚಿಗೆ ಸಿಲುಕಿದ ಸ್ಟೂಡೆಂಟ್ಸ್…
*ಮೈಸೂರು,ಜು25,Tv10 ಕನ್ನಡ
ವಿಧ್ಯಾರ್ಥಿಗಳು ಪರೀಕ್ಷೆ ಬರೆಯಲು ಪಾವತಿಸಿದ ಹಣದ ಸಮೇತ ಪ್ರೊಫೆಸರ್ ಒಬ್ಬರು ಎಸ್ಕೇಪ್ ಆಗಿರುವ ಪ್ರಕರಣ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ.ಪರೀಕ್ಷೆ ಬರೆಯಲು ಸಾಧ್ಯವಾಗದ ಕಾರಣ ವಿಧ್ಯಾರ್ಥಿಗಳು ಪೇಚಿಗೆ ಸಿಲುಕಿದ್ದಾರೆ. ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರೊಫೆಸರ್ ನಡುವಿನ ಶೀತಲ ಸಮರಕ್ಕೆ ವಿಧ್ಯಾರ್ಥಿಗಳು ಪರಿಪಾಟಲು ಪಡುತ್ತಿದ್ದಾರೆ.ಕಾಲೇಜಿನ ಆಡಳಿತ ಮಂಡಳಿ ವಿರುದ್ದ ಪೋಷಕರು ಆಕ್ರೋಷ ವ್ಯಕ್ತಪಡಿಸುತ್ತಿದ್ದಾರೆ.
25 ಲಕ್ಷ ರೂಗಳೊಂದಿಗೆ ಮಹಿಳಾ ಪ್ರೊಫೆರ್ ನಾಪತ್ತೆಯಾಗಿರುವುದಾಗಿ ತಿಳಿದುಬಂದಿದೆ.
ಮೈಸೂರಿನ ಪ್ರತಿಷ್ಠಿತ ಎಟಿಎಂಇ ಕಾಲೇಜಿನಲ್ಲಿ ಈ ಪ್ರಕರಣ ನಡೆದಿದ್ದು, 200 ವಿದ್ಯಾರ್ಥಿಗಳು ವಂಚನೆಗೆ ಒಳಗಾಗಿದ್ದಾರೆ.
ವಿದ್ಯಾರ್ಥಿಗಳಿಂದ ಫೀಸ್ ಕಲೆಕ್ಟ್ ಮಾಡಿದ್ದ ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಷನ್ ಸಹಾಯಕ ಪ್ರಾಧ್ಯಾಪಕಿ ಹರ್ಷಿತಾ ಎಂಬ ಪ್ರೊಫೆಸರ್ ಸಂಗ್ರಹಿಸಿದ ಹಣದೊಂದಿಗೆ ಎಸ್ಕೇಪ್ ಆಗಿದ್ದಾರೆ.
ಈ ಸಂಬಂಧ ವಿದ್ಯಾರ್ಥಿಗಳು ವರುಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆರೋಪಿ ಪ್ರೊ.ಹರ್ಷಿತಾ ಹಾಗೂ ಎಟಿಎಂಐ ಕಾಲೇಜು ಆಡಳಿತ ಮಂಡಳಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.ನಾಳೆಯೇ ಪರೀಕ್ಷೆ ನಿಗದಿಯಾಗಿದೆ.ಅತ್ತ ಪ್ರೊ.ಹರ್ಷಿತ ನಾಪತ್ತೆಯಾಗಿದ್ದಾರೆ ಇತ್ತ ಕಾಲೇಜು ಆಡಳಿತ ಮಂಡಳಿ
ಹರ್ಷಿತಾಗೂ ನಮಗೂ ಸಂಬಂಧ ಇಲ್ಲ.
ಹೊಸದಾಗಿ ಫೀಸ್ ಕಟ್ಟಿ ಎನ್ನುತ್ತಿದೆ.ಗೂಗಲ್ ಪೇ, ಫೋನ್ ಪೇ ಮೂಲಕ ಹಣ ಕಟ್ಟಿರುವುದರಿಂದ ಸರಿಯಾದ ದಾಖಲೆ ಇಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆಗೆ ಸಿಲುಕಿದ್ದಾರೆ.
ಪರೀಕ್ಷೆ ಬರೆಯಲು ಆಡಳಿತ ಮಂಡಳಿ ಬಿಡುವುದೆ,ಪೊಲೀಸರು ಅವರಿಗೆ ನ್ಯಾಯ ದೊರಕಿಸಿ ಕೊಟ್ಟಾರೆಯೆ ಎಂಬುದನ್ನು ಕಾದು ನೋಡಬೇಕಿದೆ.
ನಕಲಿ ರಶೀದಿ ನೀಡಿ ಪ್ರೊ.ಹರ್ಷಿತಾ ವಿದ್ಯಾರ್ಥಿಗಳನ್ನು ಯಾಮಾರಿಸಿದ್ದಾರೆ ಪೊಲೀಸರು ಏನು ಕ್ರಮ ಕೈಗೊಳ್ಳುವರು,ಆಡಳಿತ ಮಂಡಳಿ ಆಕೆಯ ವಿರುದ್ದ ಏನು ಕ್ರಮ ತೆಗೆದುಕೊಳ್ಳುವುದು ಎಂಬುದು ಕಾದುನೋಡಬೇಕಿದೆ…