ತಂತಿ ಬೇಲಿ ಕಿಂಡಿಗಳನ್ನ ಮುಚ್ಚಿದ ಅರಣ್ಯ ಇಲಾಖೆ ಅಧಿಕಾರಿಗಳು…Tv10 ಕನ್ನಡ ಇಂಪ್ಯಾಕ್ಟ್…
- MysoreTV10 Kannada Exclusive
- July 26, 2023
- No Comment
- 135
ತಂತಿ ಬೇಲಿ ಕಿಂಡಿಗಳನ್ನ ಮುಚ್ಚಿದ ಅರಣ್ಯ ಇಲಾಖೆ ಅಧಿಕಾರಿಗಳು…Tv10 ಕನ್ನಡ ಇಂಪ್ಯಾಕ್ಟ್…
ಹುಣಸೂರು,ಜು26,Tv10 ಕನ್ನಡ
ಕೊನೆಗೂ ಕಿಂಡಿ ಬಿದ್ದ ತಂತಿ ಬೇಲಿಗಳನ್ನ ಮುಚ್ಚುವ ಕಾಮಗಾರಿಯನ್ನ ಅರಣ್ಯ ಇಲಾಖೆ ಅಧಿಕಾರಿಗಳು ಕೈಗೊಂಡಿದ್ದಾರೆ.ಕಾಡುಪ್ರಾಣಿಗಳು ಗ್ರಾಮ ಪ್ರವೇಶಿಸುವುದನ್ನ ತಡೆಗಟ್ಟಲು ಮುಂದಾಗಿದ್ದಾರೆ.Tv10 ಕನ್ನಡ ವರದಿಗೆ ಎಚ್ಚೆತ್ತ ಅಧಿಕಾರಿಗಳು ಗ್ರಾಮಸ್ಥರ ಮನವಿಗೆ ಸ್ಪಂದಿಸಿದ್ದಾರೆ
ಹುಣಸೂರು ತಾಲೂಕು ರಂಗಾಯನಕೊಪ್ಪಲು ಕುಪ್ಪೆಕೊಳಘಟ್ಟ ಗ್ರಾಮದ ಬಳಿ ನಿರ್ಮಿಸಲಾಗಿದ್ದ ಅರಣ್ಯ ತಂತಿ ಬೇಲಿಗಳಲ್ಲಿ ಕಿಂಡಿಗಳು ಸೃಷ್ಠಿಯಾಗಿತ್ತು.ಇದರಿಂದ ಕಾಡುಪ್ರಾಣಿಗಳು ಗ್ರಾಮ ಪ್ರವೇಶಿಸಿ ಸಾಕು ಪ್ರಾಣಿಗಳನ್ನ ಹೊತ್ತೊಯ್ಯುತ್ತಿದ್ದವು.ಗ್ರಾಮಸ್ಥರ ಕಣ್ಣಿಗೆ ಬಿದ್ದು ಭೀತಿ ಸೃಷ್ಟಿಸಿದ್ದವು.ಕಾಡು ಪ್ರಾಣಿಗಳು ಪ್ರವೇಶಿಸುವುದನ್ನ ತಡೆಗಟ್ಟಲು ನಿರ್ಭಂದಿಸುವ ಸಲುವಾಗಿ ನಿರ್ಮಿಸಿದ ತಂತಿ ಬೇಲಿಯಿಂದ ಯಾವುದೇ ರಕ್ಷಣೆ ಇರಲಿಲ್ಲ.ಕೂಡಲೇ ಕಿಂಡಿಗಳನ್ನ ಮುಚ್ಚುವಂತೆ ಗ್ರಾಮಸ್ಥರು ಮನವಿ ಮಾಡಿದ್ದರೂ ಅಧಿಕಾರಿಗಳು ಸ್ಪಂದಿಸಿರಲಿಲ್ಲ.ಈ ಬಗ್ಗರ ಕೆಲವು ದಿನಗಳ ಹಿಂದೆ Tv10 ಕನ್ನಡ ವಾಹಿನಿಯಲ್ಲಿ ಸುದ್ದಿ ಪ್ರಸಾರ ಮಾಡಿ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು.ಎಚ್ಚೆತ್ತ ಅಧಿಕಾರಿಗಳು ಹೊಸ ತಂತಿ ಬೇಲಿ ಅಳವಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.ರಂಗಾಯನ ಕೊಪ್ಪಲು ಕುಪ್ಪೆಕೊಳಘಟ್ಟ ಗ್ರಾಮದಿಂದ ಮೂಡನಕೊಪ್ಪಲು ವರೆಗೆ ರಕ್ಷಣಾ ತಂತಿ ಬೇಲಿ ಬದಲಿಸುವ ಕಾಮಗಾರಿ ಭರದಿಂದ ಸಾಗಿದೆ.ಇದು Tv10 ಕನ್ನಡ ವರದಿ ಫಲಶೃತಿ…