ಮೈಸೂರು:ಗೃಹಲಕ್ಷ್ಮಿ ಯೋಜನೆ ಫೇಕ್ ಸರ್ಟಿಫಿಕೇಟ್ ಸಿದ್ದಪಡಿಸುತ್ತಿದ್ದ ಸೈಬರ್ ಸೆಂಟರ್ ಮಾಲೀಕ ಬಂಧನ…
- CrimeMysore
- July 26, 2023
- No Comment
- 330
ಮೈಸೂರು:ಗೃಹಲಕ್ಷ್ಮಿ ಯೋಜನೆ ಫೇಕ್ ಸರ್ಟಿಫಿಕೇಟ್ ಸಿದ್ದಪಡಿಸುತ್ತಿದ್ದ ಸೈಬರ್ ಸೆಂಟರ್ ಮಾಲೀಕ ಬಂಧನ…
ಮೈಸೂರು,ಜು26,Tv10 ಕನ್ನಡ
ಮುಖ್ಯಮಂತ್ರಿ ಸಿದ್ದರಾಮಯ್ಯ ಜಾರಿಗೊಳಿಸಿದ ಮಹತ್ತರ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ನಕಲಿ ಸರ್ಟಿಫಿಕೇಟ್ ಗಳನ್ನ ಸಿದ್ದಪಡಿಸುತ್ತಿದ್ದ ಸೈಬರ್ ಸೆಂಟರ್ ಮಾಲೀಕನನ್ನ ಮೈಸೂರು ಪೊಲೀಸರು ಬಂಧಿಸಿದ್ದಾರೆ.ಮೇಟಗಳ್ಳಿಯ ಸುಧಾಮೂರ್ತಿ ರಸ್ತೆಯಲ್ಲಿ ಸೈಬರ್ ಸೆಂಟರ್ ನಡೆಸುತ್ತಿರುವ ಮಾಲೀಕ ಸುರೇಶ್ ಕುಮಾರ್ ಎಂಬಾತನನ್ನ
ಬಂಧಿಸಲಾಗಿದೆ.ಎಸಿಪಿ ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ಸೈಬರ್ ಸೆಂಟರ್ ಮೇಲೆ ದಾಳಿ ನಡೆಸಲಾಗಿದೆ.ಕೆಲವು ಫೇಕ್ ಸರ್ಟಿಫಿಕೇಟ್ ಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.ಸುಕೇಶ್ ಕುಮಾರ್ ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.ನಕಲಿ ಸರ್ಟಿಫಿಕೇಟ್ ಗಳನ್ನ ಸಿದ್ದಪಡಿಸುತ್ತಿದ್ದ ಸೈಬರ್ ಸೆಂಟರ್ ಗೆ ಬೀಗ ಜಡಿಯಲಾಗಿದೆ.ಮಹಿಳೆಯರಿಗೆ ತಿಂಗಳಿಗೆ 2000 ರೂ ನೀಡುವ ಮಹತ್ತರ ಯೋಜನೆ ಗೃಹಲಕ್ಷ್ಮಿ ಯೋಜನೆ ಇದಾಗಿದೆ.ಸಾಕಷ್ಟು ಮಹಿಳೆಯರು ನೊಂದಣಿಗಾಗಿ ಸೈಬರ್ ಸೆಂಟರ್ ಗಳ ಮೊರೆ ಹೋಗಿದ್ದಾರೆ.ಇದನ್ನೇ ಲಾಭ ಮಾಡಿಕೊಂಡ ಖದೀಮ ಸುರೇಶ್ ಕುಮಾರ್ ನಕಲಿ ಸರ್ಟಿಫಿಕೇಟ್ ಗಳನ್ನ ಸಿದ್ದಪಡಿಸಿ ಯಾಮಾರಿಸಿದ್ದಾನೆ.ಮೇಟಗಳ್ಳಿಯ ಸುಧಾಮೂರ್ತಿ ರಸ್ತೆಯಲ್ಲಿ ನಕುಲ್ ನೆಟ್ ವರ್ಲ್ಡ್ ಎಂಬ ಹೆಸರಿನಲ್ಲಿ ಅನಧಿಕೃತವಾಗಿ ಸೇವಾ ಕೇಂದ್ರ ಆರಂಭಿಸಿ ನಕಲಿ ಸರ್ಟಿಫಿಕೇಟ್ ಗಳನ್ನ ಸಿದ್ದಪಡಿಸುತ್ತಿರವುದು ಪೊಲೀಸರಿಗೆ ತಿಳಿದು ಬಂದಿದೆ.ಸಧ್ಯ ಸೈಬರ್ ಸೆಂಟರ್ ನ ಕಂಪ್ಯೂಟರ್ ಗಳನ್ನ ಸೀಜ್ ಮಾಡಲಾಗಿದೆ.
ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್ ಮಾರ್ಗದರ್ಶನದಲ್ಲಿ ಹಾಗೂ ಡಿಸಿಪಿ ಗಳಾದ ಮುತ್ತುರಾಜ್ ಮತ್ತು ಜಾಹ್ನವಿ ರವರ ಉಸ್ತುವಾರಿಯಲ್ಲಿ ಎಸಿಪಿ ಗಜೇಂದ್ರ ಪ್ರಸಾದ್ ಮತ್ತು ಮೇಟಗಳ್ಳಿ ಠಾಣೆ ಇನ್ಸ್ಪೆಕ್ಟರ್ ದಿವಾಕರ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಯನ್ನ ಬಂಧಿಸಿದ್ದಾರೆ…