ಕಬ್ಬಿನ ಬಾಕಿ ಹಣ ಪಾವತಿಸುವಂತೆ ಒತ್ತಾಯ…ಬಣ್ಣಾರಿ ಸಕ್ಕರೆ ಕಾರ್ಖಾನೆ ಉಪಕಚೇರಿಗೆ ಬೀಗ ಜಡಿದು ಪ್ರತಿಭಟನೆ…
- TV10 Kannada Exclusive
- July 27, 2023
- No Comment
- 48
ಮೈಸೂರು,ಜು27,Tv10 ಕನ್ನಡ
ಕಬ್ಬಿನ ಬಾಕಿ ಹಣ ಪಾವತಿಸದೆ ಕಾರ್ಖಾನೆಗೆ ಕಬ್ಬು ಕಟಾವು ಅನುಮತಿ ನೀಡಬಾರದು ಎಂದು ಆಗ್ರಹಿಸಿ ಬಣ್ಣಾರಿ ಸಕ್ಕರೆ ಕಾರ್ಖಾನೆ ಉಪ ಕಚೇರಿಗೆ ಬೀಗ ಜಡಿದ ರೈತರು ಪ್ರತಿಭಟನೆ ನಡೆಸಿದರು.ರಾಜ್ಯ ಕಬ್ಬು ಬೆಳೆಗಾರರ ಸಂಘದ ಮೈಸೂರು ತಾಲೂಕು ಘಟಕದ ವತಿಯಿಂದ ಬಣ್ಣಾರಿ ಅಮ್ಮನ್ ಕಾರ್ಖಾನೆಯ ಮೈಸೂರು ತಾಲೂಕಿನ ಕಡಕೋಳದಲ್ಲಿರುವ ಡಿವಿಜನ್ ಆಫೀಸ್ ಗೆ ಬೀಗ ಹಾಕಿ ಪ್ರತಿಭಟನೆ ನಡೆಸಿ ಕಾರ್ಖಾನೆ ವಿರುದ್ಧ ದಿಕ್ಕಾರ ಕೂಗಿ ಆಕ್ರೋಷ ವ್ಯಕ್ತಪಡಿಸಿದರು.
ಕಳೆದ ವರ್ಷದ ಬಾಕಿ ಹಣ ಒಂದು ಟನ್ ಕಬ್ಬಿಗೆ 150 ರೂಗಳನ್ನು ನೀಡಿ ನಂತರ ಕಾರ್ಖಾನೆ ಕಬ್ಬು ಅರೆಯುವುದನ್ನು ಪ್ರಾರಂಭ ಮಾಡಲಿ
24.07.2023ರಂದು ಮೈಸೂರಿನ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲೆಯ ರೈತರು ಮತ್ತು ಕಾರ್ಖಾನೆಯವರ ನಡುವೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದರೂ ಸಹ ಕಾರ್ಖಾನೆ ಅವರು ಹಣ ನೀಡದೆ ಕಾರ್ಖಾನೆ ಆರಂಭಿಸಿ ರೈತರಿಗೆ ವಂಚನೆ ಮಾಡುತ್ತಿದ್ದಾರೆ. ಆದ್ದರಿಂದ ಕಳೆದ ವರ್ಷದ ಬಾಕಿ ಹಣವನ್ನು ಕೊಟ್ಟು ನಂತರ ಕಾರ್ಖಾನೆ ಪ್ರಾರಂಭ ಮಾಡಲಿ ಅಲ್ಲಿಯವರೆಗೂ ಕಬ್ಬು ಕಟಾವು ಮಾಡುವುದು ಬೇಡ ಎಂದು ಬಣ್ಣಾರಿ ಕಾರ್ಖಾನೆಯ ಎಲ್ಲಾ ತಾಲೂಕಿನ ಶಾಖ ಕಚೇರಿಗಳನ್ನು ಬೀಜಮುದ್ರೆ ಹಾಕಿ ಬೀಗ ಜಡಿದು ಸಂಜೆ ಒಳಗೆ ಹಣ ನೀಡುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ನಾಳೆಯಿಂದ ಕಾರ್ಖಾನೆ ವಿರುದ್ಧ ಉಗ್ರ ಹೋರಾಟ ನಡೆಸುವುದಾಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಚಾಮರಾಜನಗರ ಜಿಲ್ಲಾ ಉಪಾಧ್ಯಕ್ಷರಾದ ಪಟೇಲ್ ಶಿವಮೂರ್ತಿ, ಮೈಸೂರು ತಾಲೂಕು ಅಧ್ಯಕ್ಷ ಲಕ್ಷ್ಮಿಪುರ ವೆಂಕಟೇಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಕಮಲಮ್ಮ, ಮುಖಂಡರಾದ ಕುರುಬೂರು ಪ್ರದೀಪ್, ಹೆಗ್ಗೂರು ರಂಗರಾಜು, ಅಂಬಳೆ ಮಂಜುನಾಥ್, ವರಕೋಡು ನಾಗೇಶ್, ಜಯರಾಮು, ಮಾರ್ಬಳ್ಳಿ ನೀಲಕಂಠಪ್ಪ,ವಾಜಮಂಗಲ ಮಾದೇವು, ಮಾಲಿಂಗ ನಾಯಕ, ನಾಗರಾಜು, ಹೆಗ್ಗೋಟಾರ ಶಿವ ಸ್ವಾಮಿ, ಉಡಿಗಾಲ ರೇವಣ್ಣ, ಸುಂದರಪ್ಪ, ಕುರುಬೂರು ಜಗ್ಗೇಶ್, ಭಾಗವಹಿಸಿದ್ದರು…