ಹಿಂದೂ ಯುವಕರನ್ನ ಬಡಿದೆಬ್ಬಿಸಲು ಶೌರ್ಯಜಾಗರಣ ರಥಯಾತ್ರೆ…ಬಜರಂಗದಳದಿಂದ ಆಯೋಜನೆ…
- TV10 Kannada Exclusive
- October 5, 2023
- No Comment
- 88

ಮೈಸೂರು,ಅ5,Tv10 ಕನ್ನಡ
ಸನಾತನ ಧರ್ಮದ ಉಳಿವಿಗಾಗಿ,ಹಿಂದೂ ಯುವಕರನ್ನ ಬಡಿದೆಬ್ಬಿಸುವ ಸಲುವಾಗಿ ಆಯೋಜಿಸಲಾದ ಶೌರ್ಯ ಜಾಗರಣಾ ರಥಯಾತ್ರೆ ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮಕ್ಕೆ ಆಗಮಿಸಿತ್ತು.ಬಜರಂಗದಳದಿಂದ ಆಯೋಜಿಸಲಾದ ರಥಯಾತ್ರೆ ರಾಜ್ಯದ ಮೂಲೆ ಮೂಲೆಗಳಿಗೆ ತಲುಪಿಸಿ ಹಿಂದೂ ಧರ್ಮದ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಗಣಪತಿ ಆಶ್ರಮಕ್ಕೆ ಆಗಮಿಸಿದ ವೇಳೆ ಕಿರಿಯ ಶ್ರೀಗಳಾದ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ರವರು ಸ್ವಾಗತಿಸಿ ರಥಯಾತ್ರೆಗೆ ಶುಭ ಕೋರಿದರು.ಈ ವೇಳೆ ಸನಾತನ ಧರ್ಮದ ಉಳಿವಿಗಾಗಿ ಜಾಗೃತಿ ಅವಶ್ಯಕ ಎಂಬ ಸಂದೇಶ ನೀಡಿದರು.ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ರಥಯಾತ್ರೆ ಜಾಗೃತಿ ಮೂಡಿಸುತ್ತಾ ಹುಣಸೂರಿನತ್ತ ಸಾಗಲಿದೆ…