ಯುಕೆ (ಯುನೈಟೆಡ್ ಕಿಂಗ್‌ಡಮ್)
ಕನ್ನಡ ಬಳಗದ ಅದ್ದೂರಿ 40ನೇ ವಾರ್ಷಿಕೋತ್ಸವ

ಕನ್ನಡ ಬಳಗ, ಯುನೈಟೆಡ್ ಕಿಂಗ್‌ಡಂ ತನ್ನ 40 ನೇ ವಾರ್ಷಿಕೋತ್ಸವವನ್ನು ಸೆಪ್ಟೆಂಬರ್ 30 ಮತ್ತು ಅಕ್ಟೋಬರ್ 1 ರಂದು ಅದ್ಧೂರಿ ಕಾರ್ಯಕ್ರಮದೊಂದಿಗೆ ಆಚರಿಸಿತು. ಕಾರ್ಯಕ್ರಮದಲ್ಲಿ ಯುಕೆ ಮತ್ತು ವಿಶ್ವದ ವಿವಿಧ ಭಾಗಗಳಿಂದ ಆಗಮಿಸಿದ ಕನ್ನಡಿಗರ ಭಾಗವಹಿಸಿದರು

ಮೈಸೂರಿನ ರಾಜವಂಶಸ್ಥರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕನ್ನಡದ ಹೆಸರಾಂತ ಲೇಖಕರು ಮತ್ತು ಸ್ಥಳೀಯ ಪ್ರತಿಭೆಗಳ ಕೊಡುಗೆಗಳನ್ನು ಒಳಗೊಂಡ ವಿಶೇಷ ಸ್ಮರಣಿಕೆ “ಸಂಭ್ರಮ”ವನ್ನು ಅನಾವರಣಗೊಳಿಸಿದರು. 1939ರಲ್ಲಿ ಲಂಡನ್‌ನಲ್ಲಿ ದಸರಾ ಆಚರಣೆಗಾಗಿ ಅಂದಿನ ರಾಜಕುಮಾರ ಅವರು ಮಾಡಿದ ಕನ್ನಡ ಭಾಷಣವನ್ನು ನೆನಪಿಸಿಕೊಂಡ ಅವರು, ಕರ್ನಾಟಕದ ಶ್ರೀಮಂತ ಪರಂಪರೆ, ಬಸವ ತತ್ವ ಮತ್ತು ವಿವಿಧ ಕ್ಷೇತ್ರಗಳಿಗೆ ರಾಜ್ಯದ ಮಹತ್ವದ ಕೊಡುಗೆಗಳನ್ನು ಸ್ಮರಿಸಿದರು

ಸ್ವಾಮಿ ಜಪಾನಂದಜಿಯವರು ಸಾಂಸ್ಕೃತಿಕ ಗುರುತಿನ ಆಧ್ಯಾತ್ಮಿಕ ಅಂಶದ ಮೇಲೆ ಮಾತನಾಡಿದರು. ಆಧ್ಯಾತ್ಮಿಕತೆ ಮತ್ತು ಸಂಸ್ಕೃತಿಯ ನಡುವಿನ ಆಳವಾದ ಸಂಪರ್ಕದ ಕುರಿತು ತಿಳಿಸಿಕೊಟ್ಟರು. ಪೂರ್ಣ ಮತ್ತು ಸಾಮರಸ್ಯದ ಜೀವನಕ್ಕಾಗಿ ಎರಡೂ ಅಂಶಗಳನ್ನು ಅಳವಡಿಸಿಕೊಳ್ಳುವ ಅಗತ್ಯತೆಯನ್ನು ‌ಒತ್ತಿ ಹೇಳಿದರು. ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಮತ್ತು ತಂಡದವರ ಮಧುರವಾದ ಸಂಗೀತ ಸಭಿಕರನ್ನು ಮಂತ್ರಮುಗ್ಧಗೊಳಿಸಿತು

ಯುಕೆ ಕನ್ನಡಿಗರು ಸಾಂಪ್ರದಾಯಿಕ ಭರತನಾಟ್ಯ ಮತ್ತು ಕೂಚಿಪುಡಿ ನೃತ್ಯ ಪ್ರದರ್ಶನ ಮಾಡಿದರು. ‘ಬಾರಿಸು ಕನ್ನಡ ಡಿಂಡಿಮವ’ ಶೀರ್ಷಿಕೆಯ ಆಕರ್ಷಕ ನೃತ್ಯ ನಾಟಕವು ಪ್ರೇಕ್ಷಕರನ್ನು ಕರ್ನಾಟಕದ ಕಲೆ, ಸಂಸ್ಕೃತಿ ಮತ್ತು ಶತಮಾನಗಳ ಐತಿಹಾಸಿಕ ಪಯಣಕ್ಕೆ ಕರೆದೊಯ್ಯಿತು. ‘ಕನ್ನಡ ಕಲಿ’ ಕಾರ್ಯಕ್ರಮದ ಮೂಲಕ ಭಾಷೆಯನ್ನು ಕಲಿಸುವ ಮತ್ತು ಉಳಿಸುವಲ್ಲಿ ಕನ್ನಡಿಗರು ಮಾಡುತ್ತಿರುವ ಶ್ಲಾಘನೀಯ ಪ್ರಯತ್ನವನ್ನು ಶ್ಲಾಘಿಸಲಾಯಿತು. ಯುವ ಪ್ರತಿಭೆಗಳು ಕಿರು ನಾಟಕಗಳು ಮತ್ತು ಹಾಡುಗಳೊಂದಿಗೆ ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದರು. ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಅವರು ಸಾಮರ್ಥ್ಯ ಮತ್ತು ಮನಸ್ಸಿನ ಶಕ್ತಿಯ ಮೇಲಿನ ನಂಬಿಕೆಯ ಮಹತ್ವ ಕುರಿತು ಮಾತನಾಡಿದರು

ಎರಡನೇ ದಿನದ ಮನರಂಜನಾ ಕಾರ್ಯಕ್ರಮದಲ್ಲಿ ಯಾರ್ಕ್‌ಷೈರ್ ಕನ್ನಡ ಬಳಗದ ಗಾಯನ ತಂಡ ನಿತ್ಯೋತ್ಸವ ಮತ್ತು ಅಪರ ಕೀರ್ತಿಯೊಂದಿಗೆ ಗಾನಸುಧೆ ಹರಿಸಿ, ಹಬ್ಬದ ಉತ್ಸಾಹವನ್ನು ಇಮ್ಮಡಿಗೊಳಿಸಿದರು. ಗುರುಪ್ರಸಾದ್ ಪಟ್ವಾಲ್ ಅವರ ನೇತೃತ್ವದಲ್ಲಿ ಸ್ಥಳೀಯವಾಗಿ ತರಬೇತಿ ಪಡೆದ ತಂಡದಿಂದ ‘ಪಂಚವಟಿ’ ಯಕ್ಷಗಾನ ಪ್ರದರ್ಶನವು ಕನ್ನಡ ಜಾನಪದ, ಸಂಪ್ರದಾಯಗಳ ವೈವಿಧ್ಯತೆ ಮತ್ತು ಶ್ರೀಮಂತ ಪರಂಪರೆಯನ್ನು ಪ್ರದರ್ಶಿಸಿತು.
ಯುಕೆ ಕನ್ನಡ ಬಳಗದ ಅಧ್ಯಕ್ಷೆ ಸುಮನಾ ಗಿರೀಶ್‌, ಉಪಾಧ್ಯಕ್ಷೆ ಸ್ನೇಹಾ ಕುಲಕರ್ಣಿ, ಕಾರ್ಯದರ್ಶಿ ಮಧುಸೂಧನ್‌, ಖಜಾಂಚಿ ರಶ್ಮಿ ಮಂಜುನಾಥ್‌, ಸಾಂಸ್ಕೃತಿಕ ಕಾರ್ಯದರ್ಶಿ ವೃತಾ ಚಿಟಗುಪ್ಪಿ, ಯುವ ಕಾರ್ಯದರ್ಶಿ ವಿದ್ಯಾರಾಣಿ, ಕಾರ್ಯಕಾರಿ ಸಮಿತಿ ಸದಸ್ಯರಾದ ವ್ರತ ಚಿಗಟೇರಿ ಚಂದ್ರಪ್ಪ, ಆಶೀರ್ವಾದ್‌ ಮೆರ್ವೆ, ರಾಜೀವ್ ಮೇಟ್ರಿ, ಪ್ರವೀಣ್ ತಾಯಪ್ಪ ಈ ಎಲ್ಲ ಯಶಸ್ವಿ ಕಾರ್ಯಕ್ರಮದ ರೂವಾರಿಗಳು. ಖ್ಯಾತ ಕನ್ನಡ ದಿನಪತ್ರಿಕೆ ಪತ್ರಿಕೆಗಳ ಸಂಪಾದಕರಾದ ವಿಶ್ವೇಶ್ವರ ಭಟ್ ಮತ್ತು ರವಿ ಹೆಗಡೆ ಭಾಗವಹಿಸಿದ್ದರು.

Spread the love

Related post

ಮಹಿಳೆ ಬಗ್ಗೆ ಕಂಪನಿ ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಪೋಸ್ಟ್…ಅಪ್ ಲೋಡ್ ಮಾಡಿದ ಮಹಿಳೆ ಮೇಲೆ FIR…

ಮಹಿಳೆ ಬಗ್ಗೆ ಕಂಪನಿ ಸಾಮಾಜಿಕ ಜಾಲತಾಣದಲ್ಲಿ ಅಸಭ್ಯ ಪೋಸ್ಟ್…ಅಪ್ ಲೋಡ್ ಮಾಡಿದ…

ಮೈಸೂರು,ಜು6,Tv10 ಕನ್ನಡ ಖಾಸಗಿ ಕಂಪನಿ ಉದ್ಯೋಗಿ ಬಗ್ಗೆ ಅಸಭ್ಯ ಹಾಗೂ ಅಶ್ಲೀಲವಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಮಹಿಳೆಯೊಬ್ಬರ ಮೇಲೆ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕ್ರಾಪಿನ್ ಕಂಪನಿಗೆ ಸೇರಿದ…
ಅಗಲಿದ ಬಸವನಿಗೆ ಶ್ರದ್ದಾಂಜಲಿ…ಸಮಾಧಿ ಬಳಿ ಕಂಬನಿ ಮಿಡಿದ ಶ್ವಾನ…ಮೇಟಗಳ್ಳಿಯಲ್ಲಿ ಹೃದಯಸ್ಪರ್ಶಿ ಘಟನೆ…

ಅಗಲಿದ ಬಸವನಿಗೆ ಶ್ರದ್ದಾಂಜಲಿ…ಸಮಾಧಿ ಬಳಿ ಕಂಬನಿ ಮಿಡಿದ ಶ್ವಾನ…ಮೇಟಗಳ್ಳಿಯಲ್ಲಿ ಹೃದಯಸ್ಪರ್ಶಿ ಘಟನೆ…

ಅಗಲಿದ ಬಸವನಿಗೆ ಶ್ರದ್ದಾಂಜಲಿ…ಸಮಾಧಿ ಬಳಿ ಕಂಬನಿ ಮಿಡಿದ ಶ್ವಾನ…ಮೇಟಗಳ್ಳಿಯಲ್ಲಿ ಹೃದಯಸ್ಪರ್ಶಿ ಘಟನೆ… ಮೈಸೂರು,ಜು6,Tv10 ಕನ್ನಡ ಹುಚ್ಚುನಾಯಿ ಕಡಿತದಿಂದ ಮೃತಪಟ್ಟ ಮಹಾಲಿಂಗೇಶ್ವರ ದೇವಸ್ಥಾನದ ಬಸವನಿಗೆ ಮೇಟಗಳ್ಳಿ ಗ್ರಾಮಸ್ಥರು ಶ್ರದ್ದಾಂಜಲಿ ಅರ್ಪಿಸಿದ್ದಾರೆ.ಕೆಲವು…
ಮೂರು ಹಸುಗಳ ಮೇಲೆ ಹುಲಿ ದಾಳಿ…ಒಂದು ಸಾವು ಎರಡಕ್ಕೆ ಗಾಯ…ಅರಣ್ಯ ಇಲಾಖೆ ಕ್ಯಾಮರ ಕಣ್ಣಿಗೆ ಸೆರೆಯಾದ ವ್ಯಾಘ್ರ…

ಮೂರು ಹಸುಗಳ ಮೇಲೆ ಹುಲಿ ದಾಳಿ…ಒಂದು ಸಾವು ಎರಡಕ್ಕೆ ಗಾಯ…ಅರಣ್ಯ ಇಲಾಖೆ…

ನಂಜನಗೂಡು,ಜು4,Tv10 ಕನ್ನಡ ಒಂದೇ ದಿನ ಮೂರು ಹಸುಗಳ ಮೇಲೆ ದಾಳಿ ಮಾಡಿದ ವ್ಯಾಘ್ರ ಒಂದು ಸಾವನ್ನಪ್ಪಿದ್ದು ಎರಡು ಹಸುಗಳು ಗಾಯಗೊಂಡ ಘಟನೆ ನಂಜನಗೂಡು ತಾಲೂಕು ಮಡುವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.ಘಟನೆಯಿಂದ…

Leave a Reply

Your email address will not be published. Required fields are marked *