ಶೈಕ್ಷಣಿಕ ಕಾರ್ಯಗಾರವು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಜವಾಬ್ದಾರಿಯ ಜೊತೆಗೆ ಉಪನ್ಯಾಸಕರು ಕ್ರಿಯಾಶೀಲವಾಗಲು ಸಹಕಾರಿ- ಶ್ರೀ ಎಮ್ . ಮರಿಸ್ವಾಮಿ ಉಪನಿರ್ದೇಶಕರ ಕರೆ
- TV10 Kannada Exclusive
- October 5, 2023
- No Comment
- 378
ಮೈಸೂರು oct 5 tv10 kannada ಮೈಸೂರು ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಸಮಾಜಶಾಸ್ತ್ರ ಉಪನ್ಯಾಸಕರ ವೇದಿಕೆಯ
ಶೈಕ್ಷಣಿಕ ಪುನಶ್ಚೇತನ ಮತ್ತು ಆಂತರಿಕ ಮೌಲ್ಯಮಾಪನ ಕಾರ್ಯಗಾರದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರು ಶ್ರೀ ಎಂ. ಮರಿಸ್ವಾಮಿ ರವರು ಅಧ್ಯಕ್ಷತೆ ವಹಿಸಿ ಇಂತಹ ಕಾರ್ಯಗಾರವು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಜವಾಬ್ದಾರಿಯನ್ನು ಹೊಂದಿವೆ. ಇಲಾಖೆಯ ಆದೇಶದ ಮೇರೆಗೆ ಬದಲಾವಣೆಗಳಿಗೆ ಅನುಗುಣವಾಗಿ ಇಂತಹ ವೇದಿಕೆಯ ಮೂಲಕ ವಿದ್ಯಾರ್ಥಿಗಳ ಬಾಳಲ್ಲಿ ಬೆಳಕನ್ನು ತರುತ್ತವೆ. ಇಂತಹ ವೇದಿಕೆಗಳ ಮುಖಾಂತರ ಈ ಶೈಕ್ಷಣಿಕ ವರ್ಷದಲ್ಲಿ ಫಲಿತಾಂಶವನ್ನು ಎತ್ತರಕ್ಕೆ ಹೇರಿಸುವುದರ ಮೂಲಕ ಜಿಲ್ಲೆಗೆ ಒಳ್ಳೆಯ ಹೆಸರನ್ನು ತಂದು ಕೊಡುವುದರ ಮೂಲಕ ಉಪನ್ಯಾಸಕರು ಶ್ರಮಿಸಬೇಕಾಗಿದೆ ಎಂದು ಶುಭ ಹಾರೈಸಿದರು.
ಹಿರಿಯ ಪ್ರಾಧ್ಯಾಪಕರು ಸಮಾಜಶಾಸ್ತ್ರ ಅಧ್ಯಯನ ವಿಭಾಗ ಮಹಾರಾಜ ಕಾಲೇಜಿನ ಡಾ. ಗೋಪಾಲರಾಜು ಆರ್. ರವರು ಕಾರ್ಯಾಗಾರವನ್ನು ಉದ್ಘಾಟನೆ ಮಾಡಿ ತಮ್ಮ ವಿಶೇಷ ಉಪನ್ಯಾಸದಲ್ಲಿ ಪ್ರಸ್ತುತ ಸಮಾಜದಲ್ಲಿ ಸಾಮಾಜಿಕ ವ್ಯವಸ್ಥೆಯಲ್ಲಿ ಬದುಕುತ್ತಿರುವ ನಾವುಗಳು ನಮ್ಮನ್ನು ನಾವು ತೊಡಗಿಸಿಕೊಂಡು ಪ್ರೇರಣೆ ನೀಡಬೇಕಾಗಿದೆ.ಸಮಾಜಶಾಸ್ತ್ರ ಅಧ್ಯಯನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಪ್ರೇರಣೆ ಉಂಟು ಮಾಡಿ ಬದಲಾದ ಪರಿಸ್ಥಿತಿಗಳಿಗೆ ನಮ್ಮನ್ನು ನಾವುಗಳು ತೆರೆದುಕೊಳ್ಳಬೇಕಾಗಿದೆ ಎಂದು ಉಪನ್ಯಾಸ ನೀಡಿದರು. ಈ ಕಾರ್ಯಗಾರದಲ್ಲಿ ಪ್ರಾಚಾರ್ಯರಾದ ಶ್ರೀ ಚಲುವಯ್ಯ ರವರು ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯಗಳನ್ನು ತಿಳಿಸಿಕೊಳ್ಳಬೇಕಾದ ಅಗತ್ಯವಿದೆ ಎಂದು ಮಾತನಾಡಿದು. ಪ್ರಾಂಶುಪಾಲರಾದ ಶ್ರೀ ಲಯನ್ ದಿನೇಶ್ ರವರು ಮಾತನಾಡಿ ಸಮಾಜಶಾಸ್ತ್ರ ವಿಷಯದಲ್ಲಿ ಕ್ಷೇತ್ರಕಾರ್ಯವು ಬಹಳ ಪ್ರಮುಖ ಪಾತ್ರ ವಹಿಸುವುದರ ಮುಖಾಂತರ ವಿದ್ಯಾರ್ಥಿಗಳಲ್ಲಿ ಕಲಿಕೆಯಲ್ಲಿ ತೊಡಗಿಸಿಕೊಳ್ಳಬಹುದು ಎಂದು ಮಾತನಾಡಿದರು. ಕಾರ್ಯಗಾರದಲ್ಲಿ ಪ್ರಾಂಶುಪಾಲರುಗಳಾದ ಶ್ರೀ ಯೋಗಣ್ಣ, ಶ್ರೀಮತಿ ಸೀಮಾ ಮತ್ತು ಶ್ರೀ ರಾಘವೇಂದ್ರ ಮತ್ತು ವೇದಿಕೆಯ ಅಧ್ಯಕ್ಷರಾದ ಶ್ರೀ ರವಿಶಂಕರ್ ರವರು ಪ್ರಾಸ್ತಾವಿಕ ನುಡಿಯನ್ನು ತಿಳಿಸಿದರು.ವೇದಿಕೆಯ ಪ್ರಧಾನ ಕಾರ್ಯದರ್ಶಿ ಮಹಾದೇವಸ್ವಾಮಿ,ಖಚಾಂಚಿ ರೇವಣ್ಣ ಮತ್ತು ಜಿಲ್ಲೆಯ ಸಮಾಜಶಾಸ್ತ್ರ ಉಪನ್ಯಾಸಕರು ಹಾಜರಿದ್ದರು. ಸಮಾಜಶಾಸ್ತ್ರ ವಿಷಯದಲ್ಲಿ ಅತೀ ಹೆಚ್ಚು ಅಂಕಗಳನ್ನು ತೆಗೆದುಕೊಂಡಿರುವ ವಿದ್ಯಾರ್ಥಿಗಳಿಗೆ ಒಂದು ಸಾವಿರ ರೂಪಾಯಿಗಳು ಮತ್ತು ಸ್ಮರಣಾ ಫಲಕ ಕೊಟ್ಟು ಪ್ರೋತ್ಸಾಹಿಸಲಾಯಿತು.