ಕಾವೇರಿ ವಿವಾದ:ಕೆ.ಆರ್.ಎಸ್.ಮುತ್ತಿಗೆಗೆ ಯತ್ನ…ವಾಟಾಳ್ ನಾಗರಾಜ್ ಬಂಧನ…
- TV10 Kannada Exclusive
- October 5, 2023
- No Comment
- 137

ಮಂಡ್ಯ,ಅ5,Tv10 ಕನ್ನಡ

ತಮಿಳುನಾಡಿಗೆ ಕಾವೇರಿ ನೀರು ಹರಿಯುವುದನ್ನ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಕನ್ನಡ ಚಳುವಳಿಗಾರ ವಾಟಾಳ್ ನಾಗರಾಜ್ ಕೆ.ಆರ್.ಎಸ್.ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದರು.ಕೆ.ಆರ್.ಎಸ್. ಬಳಿ ತಮ್ಮ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್ ಒಳಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ಅಡ್ಡಿಪಡಿಸಿದರು.ಈ ವೇಳೆ ಪೊಲೀಸರು ಹಾಗೂ ವಾಟಾಳ್ ನಾಗರಾಜ್ ನಡುವೆ ಮಾತಿನ ಚಕಮಕಿ ನಡೆಯಿತು.ಎರಡು ದಿನಗಳ ಹಿಂದೆ ರಾಜಮಾತೆ ಪ್ರಮೋದದೇವಿ ಒಡೆಯರ್ ರನ್ನ ಬಿಟ್ಟಿದ್ದೀರ ನಮ್ಮನ್ನ ನಿಯಂತ್ರಿಸುತ್ತೀರ ಎಂದು ಗರಂ ಆದರು.ಪೊಲೀಸರ ಪ್ರತಿರೋಧದ ನಡುವೆ ಮುತ್ತಿಗೆಗೆ ಹಾಕಲು ಯತ್ನಿಸಿದ ವಾಟಾಳ್ ನಾಗರಾಜ್ ರನ್ನ ಪೊಲೀಸರು ಬಂಧಿಸಿದರು.
ಪೊಲೀಸರ ಮೂಲಕ ಹೋರಾಟ ಹತ್ತಿಕ್ಕುವ ಕೆಲಸ ಆಗುತ್ತಿದೆ.
ನಮ್ಮ ಹೋರಾಟ ಯಾವುದೇ ಕಾರಣಕ್ಕು ನಿಲ್ಲಲ್ಲ.ಕಾವೇರಿ ನಮ್ಮದು, ಹೋರಾಟ ನಿರಂತರವಾಗಿ ಇರುತ್ತದೆ ಎಂದು ವಾಟಾಳ್ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು…
