ಇಂದು ಸಿಂಹಾಸನ ಜೋಡಣೆ…ಅರಮನೆಯಲ್ಲಿ ಶರನ್ನವರಾತ್ರಿ ಉತ್ಸವ ಸಂಭ್ರಮ…
- TV10 Kannada Exclusive
- October 9, 2023
- No Comment
- 298
ಮೈಸೂರು,ಅ9,Tv10 ಕನ್ನಡ
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವ 2023 ಹಿನ್ನಲೆ ಮೈಸೂರು ಅರಮನೆಯಲ್ಲಿ ಇಂದಿನಿಂದ ಶರನ್ನವರಾತ್ರಿ ಉತ್ಸವ ಸಂಭ್ರಮ ಮನೆ ಮಾಡಲಿದೆ.
ಇಂದಿನಿಂದ ನವಂಬರ್ 8 ರವರೆಗೆ ಖಾಸಗಿ ದರ್ಬಾರ್ ಸೇರಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆಯಲಿವೆ.
ಇಂದು ಬೆಳಗ್ಗೆ 7.15ಕ್ಕೆ ನವಗ್ರಹ ಹೋಮ ಮತ್ತು ಇತರೆ ಶಾಂತಿ ಪೂಜೆ ನೆರವೇರಲಿದೆ.
ಬೆಳಗ್ಗೆ 10.05 ರಿಂದ 10.35ರವರೆಗೆ ಅಂಬಾವಿಲಾಸ ದರ್ಬಾರ್ ಹಾಲ್‌ನಲ್ಲಿ ಸಿಂಹಾಸನ ಜೋಡಣೆ ಮಾಡಲಾಗುತ್ತದೆ.
ಕನ್ನಡಿ ತೊಟ್ಟಿಯಲ್ಲಿ ಭದ್ರಾಸನ ಕಾರ್ಯಕ್ರಮ.
ಬೆಳಗ್ಗೆ 11ಕ್ಕೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು, ಅಶ್ವ ಮತ್ತು ಗಜನನ್ನು ಗೋಶಾಲೆಗೆ ಕರೆತಂದು ಪೂಜೆ ನೆರವೇರಿಸಲಾಗುತ್ತದೆ.
ರಾಜಮನೆತನದವರಿಂದ ಶರನ್ನವರಾತ್ರಿ ಪೂಜೆ ಪುನಸ್ಕಾರ ನಡೆಯಲಿದೆ…