ಜಂಬೂಸವಾರಿ,ಪಂಜಿನಕವಾಯತು ಕಾರ್ಯಕ್ರಮಕ್ಕೆ ಆನ್ ಲೈನ್ ನಲ್ಲಿ ಟಿಕೆಟ್ ಮಾರಾಟ…ಕೇವಲ ಒಂದುಗಂಟೆ
- TV10 Kannada Exclusive
- October 18, 2023
- No Comment
- 404
ಅವಧಿಯಲ್ಲೇ ಟಿಕಟ್ ಸೇಲ್…
ಮೈಸೂರು,ಅ18,Tv10 ಕನ್ನಡ
ವಿಶ್ವವಿಖ್ಯಾತ ದಸರಾ ಮಹೋತ್ಸವ 2023 ಅಂಗವಾಗಿ ಅಕ್ಟೋಬರ್ 24 ರಂದು ಅರಮನೆ ಆವರಣದಲ್ಲಿ ನಡೆಯಲಿರುವ ಜಂಬೂಸವಾರಿ ಹಾಗೂ ಬನ್ನಿಮಂಟಪದ ಮೈದಾನದಲ್ಲಿ ನಡೆಯುವ ಪಂಜಿನ ಕವಾಯತು ಕಾರ್ಯಕ್ರಮ್ ವೀಕ್ಷಣೆಗಾಗಿ ಜಿಲ್ಲಾಡಳಿತ ಆನ್ ಲೈನ್ ಮೂಲಕ ಗೋಲ್ಡ್ ಕಾರ್ಡ್ ಹಾಗೂ ಟಿಕೆಟ್ ಗಳನ್ನ ಮಾರಾಟ ಮಾಡಿದೆ.ಆನ್ ಲೈನ್ ನಲ್ಲಿ ಕೇವಲ ಒಂದು ಗಂಟೆ ಅವಧಿಗೇ ಗೋಲ್ಡ್ ಕಾರ್ಡ್ ಹಾಗೂ ಟಿಕೆಟ್ ಗಳು ಸೇಲ್ ಆಗಿದೆ.1000 ಗೋಲ್ಡ್ ಕಾರ್ಡ್ ಗಳು ಹಾಗೂ ಪಂಜಿನ ಕವಾಯತು ಮೈದಾನದಲ್ಲಿ ವೀಕ್ಷಿಸಲು 2000 ಟಿಕೆಟ್ ಗಳು ಒಂದು ಗಂಟೆ ಅವಧಿಯಲ್ಲೇ ಸೇಲ್ ಆಗಿದೆ.
ಅರಮನೆ ಆವರಣದಲ್ಲಿ ವೀಕ್ಷಿಸಲು 3000/- ಮುಖಬೆಲೆಯ 400 ಟಿಕೆಟ್ ಗಳು,2000/- ಮುಖಬೆಲೆಯ 600 ಟಿಕೆಟ್ ಗಳು ಹಾಗೂ ಪಂಜಿನಕವಾಯತು ಮೈದಾನದ 500/- ಮುಖಬೆಲೆಯ 1000 ಟಿಕೆಟ್ ಗಳು ಮಾರಾಟವಾಗಿದೆ…