9 ಕೋಟಿ ಆಸೆಗೆ ಮರುಳಾಗಿ 65 ಲಕ್ಷ ಕಳೆದುಕೊಂಡ ವೃದ್ದೆ…ಆನ್ ಲೈನ್ ದೋಖಾ…
- TV10 Kannada Exclusive
- February 9, 2024
- No Comment
- 173
ಮೈಸೂರು,ಫೆ9,Tv10 ಕನ್ನಡ
9.16 ಕೋಟಿ ಆಸೆಗೆ ಮರುಳಾಗಿ ವೃದ್ದೆಯೊಬ್ಬರು 65.76 ಲಕ್ಷ ಕಳೆದುಕೊಂಡ ಪ್ರಕರಣವೊಂದು ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಬೋಗಾದಿಯ ನಿವಾಸಿ ಗೀತಾ ನಾಯರ್ (65) ಹಣ ಕಳೆದುಕೊಂಡ ವೃದ್ದೆ.9,16,98,663/- ಗೂಗಲ್ ಅವಾರ್ಡ್ ಬಂದಿದೆ ಇದನ್ನ ಪಡೆದುಕೊಳ್ಳಲು ಕೆಲವು ಚಾರ್ಜಸ್ ಕಟ್ಟಬೇಕು ಎಂಬ ಮೆಸೇಜ್ ನಂಬಿದ ಗೀತಾ ನಾಯರ್ ಹಂತಹಂತವಾಗಿ 65,72,376/- ರೂಗಳನ್ನ ಪಾವತಿಸಿದ್ದಾರೆ.ಮತ್ತಷ್ಟು ಹಣ ಪಾವತಿಸುವಂತೆ ಹೇಳಿದಾಗ ಅನುಮಾನಗೊಂಡು ಹಣ ಪಾವತಿಸುವುದನ್ನ ಸ್ಥಗಿತಗೊಳಿಸಿದ್ದಾರೆ.ನಂತರ ತಾವು ವಂಚನೆಗೆ ಒಳಗಾಗಿರುವುದು ಖಚಿತವಾಗಿ ಈ ಸಂಭಂಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…