ಆಲನಹಳ್ಳಿ ಪೊಲೀಸರ ಮಿಂಚಿನ ಕಾರ್ಯಾಚರಣೆ…ಭಾರಿ ವಾಹನಗಳ ಇಂಜಿನ್ ಕದಿಯುತ್ತಿದ್ದ ಇಬ್ಬರ ಬಂಧನ…ಮೂವರು ಪರಾರಿ…24 ಲಕ್ಷ ಮೌಲ್ಯದ ಪದಾರ್ಥಗಳು ವಶ…
- Crime
- February 8, 2024
- No Comment
- 345
ಮೈಸೂರು,ಫೆ8,Tv10 ಕನ್ನಡ
ಮೈಸೂರಿನ ಆಲನಹಳ್ಳಿ ಠಾಣೆ ಪೊಲೀಸರು ನಡೆಸಿದ ಯಶಸ್ವಿಕಾರ್ಯಾಚರಣೆಯಲ್ಲಿ ಇಬ್ಬರು ಐನಾತಿ ಖದೀಮರು ಸಿಕ್ಕಿಬಿದ್ದಿದ್ದಾರೆ.ಬಂಧಿತರಿಂದ ಭಾರಿ ವಾಹನಗಳ ಇಂಜಿನ್ ಗಳು ಹಾಗೂ ಲಾರಿ ಸೇರಿದಂತೆ 24 ಲಕ್ಷ ಮೌಲ್ಯದ ಬಿಡಿಬಾಗಗಳನ್ನ ವಶಪಡಿಸಿಕೊಳ್ಳಲಾಗಿದೆ.5 ಕಳ್ಳರ ತಂಡ ಕೃತ್ಯವೆಸಗಿದ್ದು ಇಬ್ಬರು ಆರೋಪಿಗಳು ಪೊಲೀಸರು ಹಣೆದ ಬಲೆಗೆ ಸಿಕ್ಕಿಬಿದ್ದರೆ ಮೂವರು ಕಳ್ಳರು ಪರಾರಿಯಾಗಿದ್ದಾರೆ.
ಟಿ.ನರಸೀಪುರ ರಸ್ತೆ ಸಿಗ್ನಲ್ ಬಳಿ ಇರುವ ಫ್ರೆಂಡ್ಲಿ ಆಟೋ ಗ್ಯಾರೇಜ್ ನಲ್ಲಿ ಲಾರಿ,ಕಾರುಗಳ ಇಂಜಿನ್ ಗಳು, ಕ್ಲಚ್ ಪ್ಲೇಟ್ ಗಳು ಸೇರಿದಂತೆ ಬಿಡಿಬಾಗಗಳನ್ನ ಕಳುವು ಮಾಡಿ ಪರಾರಿಯಾಗಿದ್ದರು.ಫೆ5 ರಂದು ಆಲನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಮಿಂಚಿನ ಕಾರ್ಯಾಚರಣೆ ನಡೆಸಿದ ಆಲನಹಳ್ಳಿ ಠಾಣೆ ಪೊಲೀಸರು ಕೆಲವೇ ಗಂಟೆಗಳಲ್ಲಿ ಖದೀಮರನ್ನ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಪರಾರಿಯಾಗಿರುವ ಮೂವರು ಕಳ್ಳರ ಪತ್ತೆಗೆ ಜಾಲ ಬೀಸಲಾಗಿದೆ.
ಅಪರಾಧ ಮತ್ತು ಸಂಚಾರ ಡಿಸಿಪಿ ರವರಾದ ಜಾಹ್ನವಿ ರವರ ಮಾರ್ಗದರ್ಶನದಲ್ಲಿ ಎಸಿಪಿ ಶಾಂತಮಲ್ಲಪ್ಪ ರವರ ಉಸ್ತುವಾರಿಯಲ್ಲಿ ಆಲನಹಳ್ಳಿ ಠಾಣೆ ಇನ್ಸ್ಪೆಕ್ಟರ್ ಸ್ವರ್ಣ ರವರ ನೇತೃತ್ವದಲ್ಲಿ ಪಿಎಸ್ಸೈ ಗಂಗಾಧರ್ ಎಎಸ್ಸೈ ಲಕ್ಷ್ಮಿನಾರಾಯಣ್ ಸಿಬ್ಬಂದಿಗಳಾದ ಶಿವಪ್ರಸಾದ್,ಸುಹೇಲ್,ರುಕ್ಮಿಣಿ,ರಂಗಸ್ವಾಮಿ ರವರು ಕಾರ್ಯಾಚರಣೆಯನ್ನ ಯಶಸ್ವಿಗೊಳಿಸಿದ್ದಾರೆ.
ಆಲನಹಳ್ಳಿ ಠಾಣೆ ಪೊಲೀಸರ ಕಾರ್ಯಾಚರಣೆಯನ್ನ ನಗರ ಪೊಲೀಸ್ ಆಯುಕ್ತ ಡಾ.ಬಿ ರಮೇಶ್ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವರಾದ ಮುತ್ತುರಾಜ್ ಶ್ಲಾಘಿಸಿದ್ದಾರೆ…