ಹುಣಸೂರು:ಬೋರ್ ವೆಲ್ ನಲ್ಲಿ ಕಲ್ಲು ಚಪ್ಪಡಿಗಳನ್ನ ಹಾಕಿ ಧ್ವೇಷ ತೀರಿಸಿಕೊಂಡ ಸಂಭಂಧಿಕ…

ಹುಣಸೂರು:ಬೋರ್ ವೆಲ್ ನಲ್ಲಿ ಕಲ್ಲು ಚಪ್ಪಡಿಗಳನ್ನ ಹಾಕಿ ಧ್ವೇಷ ತೀರಿಸಿಕೊಂಡ ಸಂಭಂಧಿಕ…

ಹುಣಸೂರು,ಮೇ19,Tv10 ಕನ್ನಡ

ಹುಣಸೂರಿನಲ್ಲಿ ನಡೆದ ಬೋರ್ ವೆಲ್ ಕಿರಿಕ್ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ.ಬೋರ್ ವೆಲ್ ಹಾಕುವುದನ್ನ ವಿರೋಧಿಸುತ್ತಾ ಬಂದಿದ್ದ ಸಂಭಂಧಿಕ ಅಮಾನವೀಯವಾಗಿ ಧ್ವೇಷ ತೀರಿಸಿಕೊಂಡಿದ್ದಾನೆ.ಲಕ್ಷಾಂತರ ರೂ ಖರ್ಚು ಮಾಡಿ ಕೊರೆಸಿದ ಬೋರ್ ವೆಲ್ ಗೆ ಕಲ್ಲು ಚೆಪ್ಪಡಿಗಳನ್ನ ತುಂಬಿ ಧ್ವೇಷ ತೀರಿಸಿಕೊಂಡಿದ್ದಾನೆ.ಹುಣಸೂರಿನ ಹೆಮ್ಮಿಗೆ ಗ್ರಾಮದಲ್ಲಿ ಘಟನೆ ನಡೆದಿದೆ.

ಹೆಮ್ಮಿಗೆ ಗ್ರಾಮದ ಸುಜಾತ ಹಾಗೂ ಕೃಷ್ಣೇಗೌಡ ಸಂಭಂಧಿಕರು.ಅಕ್ಕಪಕ್ಕದಲ್ಲೇ ಇವರಿಬ್ಬರ ಜಮೀನಿದೆ.ನೀರಿಗಾಗಿ ಸುಜಾತ ಬೋರ್ ವೆಲ್ ಕೊರೆಸಿದ್ದಾರೆ.ಮೊದಲಬಾರಿಗೆ ನೀರು ಸಿಕ್ಕಿಲ್ಲ.ನಂತರ ಮತ್ತೊಂದು ಬೋರ್ ವೆಲ್ ಕೊರೆಸಿದಾಗ ನೀರು ಬಂದಿದೆ.ಈ ವೇಳೆ ಸಂಭಂಧಿಕ ಕೃಷ್ಣೇಗೌಡ ಕ್ಯಾತೆ ತೆಗೆದಿದ್ದಾನೆ.ಪಕ್ಕದಲ್ಲೇ ಬೋರ್ ಹಾಕಿದ್ರೆ ನಮ್ಮ ಬೋರ್ ವೆಲ್ ನಲ್ಲಿ ನೀರಿನ ಪ್ರಮಾಣ ಕಡಿಮೆ ಆಗುತ್ತದೆ ಎಂದು ಕಾರಣ ನೀಡಿ ಕಿರಿಕ್ ಮಾಡಿದ್ದಾನೆ.ಬೋರ್ ವೆಲ್ ಕೊರೆಸಲು ಬಿಡದೆ ಅಡ್ಡಿಪಡಿಸಿದ್ದಾನೆ.ಕೆಲವು ದಿನಗಳ ಹಿಂದಷ್ಟೆ ಈ ಕಿರಿಕ್ ನಡೆದಿದ್ದು ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.ಎರಡೂ ಕುಟುಂಬಗಳನ್ನ ಕರೆಸಿ ಪೊಲೀಸರು ಬುದ್ದಿವಾದ ಹೇಳಿದ್ದಾರೆ.ನಂತರ ಗ್ರಾಮದಲ್ಲಿ ಪಂಚಾಯ್ತಿ ನಡೆದು ಅನುಸರಿಸಿಕೊಂಡು ಹೋಗುವಂತೆ ಸಲಹೆ ನೀಡಿದ್ದಾರೆ.ಇಷ್ಟಕ್ಕೆ ಸುಮ್ಮನಿರದ ಕೃಷ್ಣೇಗೌಡ ರಾತ್ರೋ ರಾತ್ರಿ ಬೋರ್ ವೆಲ್ ನಲ್ಲಿ ಕಲ್ಲು ಚೆಪ್ಪಡಿಗಳನ್ನ ತುಂಬಿ ಹಗೆ ತೀರಿಸಿಕೊಂಡಿದ್ದಾನೆ.ಕೃಷ್ಣೇಗೌಡನ ಕುತಂತ್ರಕ್ಕೆ ಬೋರ್ ವೆಲ್ ನ ಪರಿಕರಗಳು ನಾಶವಾಗಿ ಸಾವಿರಾರು ರೂ ನಷ್ಟವಾಗಿದೆ.ಇದೀಗ ಸುಜಾತ ಮನೆಯವರು ಮತ್ತೆ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರ ಮೊರೆ ಹೋಗಿ ಕೃಷ್ಣೇಗೌಡ ವಿರುದ್ದ ದೂರು ದಾಖಲಿಸಿದ್ದಾರೆ…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *