ಯೋಗಪಟುಗಳಿಂದ ಪರಿಸರ ಕಾಳಜಿ…ಚಾಮುಂಡಿತಾಯಿ ಮಡಿಲಿನಲ್ಲಿ 20 ಲಕ್ಷ ಬೀಜ ಹಾಕಿ ಕಾರ್ಯಕ್ರಮ…
- MysoreNews
- July 7, 2024
- No Comment
- 101
ಮೈಸೂರು,ಜು7,Tv10 ಕನ್ನಡ
ಮೈಸೂರಿನ ವಿಶ್ವೇಶ್ವರ ನಗರದಲ್ಲಿರುವ ಮಹರ್ಷಿ ಪಬ್ಲಿಕ್ ಶಾಲೆಯ ಆವರಣದಲ್ಲಿ ಯೋಗ ತರಗತಿಗಳು ನಡೆಸುವ
ಪ್ರಣವ ಯೋಗ ಮತ್ತು ಆಧ್ಯಾತ್ಮಿಕ ಕೇಂದ್ರದ ಯೋಗ ಪಟುಗಳು ಇಂದು ಪರಿಸರ
ಕಾಳಜಿಯನ್ನ ಪ್ರದರ್ಶಿಸಿದ್ದಾರೆ.ಆರೋಗ್ಯಕ್ಕೆ ಯೋಗ ಹೇಗೆ ಮುಖ್ಯವೋ ಹಾಗೇ ಪರಿಸರ ಸಂರಕ್ಷಣೆಯೂ ಆರೋಗ್ಯಕ್ಕೆ ಪ್ರಾಮುಖ್ಯ ಎಂದು ಸಾಬೀತು ಪಡಿಸಿದ್ದಾರೆ.ಚಾಮುಂಡಿ ತಾಯಿ ನೆಲೆಸಿರುವ ಕ್ಷೇತ್ರದ ಅರಣ್ಯ ಪ್ರದೇಶದಲ್ಲಿ ಕಾಲ್ನಡಿಗೆಯಲ್ಲಿ ಸಾಗಿದ ಯೋಗಪಟುಗಳು ಹೊಂಗೆ,ಹುಣಸೆ,ಬೇವು ಮರಗಳ ಸುಮಾರು 20 ಲಕ್ಷ ಬೀಜಗಳನ್ನ ಹಾಕಿ ಪರಿಸರ ಕಾಳಜಿ ಮೆರೆದಿದ್ದಾರೆ.ಪ್ರಣವ ಯೋಗ ಕೇಂದ್ರದ ಸಂಸ್ಥಾಪಕರಾದ ಶ್ರೀಧರ್ ಗುರೂಜಿ ಮಾರ್ಗದರ್ಶನದಲ್ಲಿ ಸುಮಾರು 30 ಕ್ಕೂ ಹೆಚ್ಚು ಯೋಗಪಟುಗಳು ನಂದಿ ವರೆಗೆ ಕಾಲ್ನಡಿಗೆಯಲ್ಲಿ ತೆರಳಿ ರಸ್ತೆಯ ಇಕ್ಕೆಲಗಳಲ್ಲಿ ಮರಗಳ ಬೀಜಗಳನ್ನ ಹಾಕುವ ಮೂಲಕ ವೃಕ್ಷಗಳ ಅಭಿವೃದ್ದಿಗೆ ಸಂಕಲ್ಪ ತೊಟ್ಟಿದ್ದಾರೆ.ಪ್ರತಿವರ್ಷ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳುವ ಶ್ರೀಧರ ಗುರೂಜಿ ರವರು ಈ ವರ್ಷವೂ ಸಹ ತಮ್ಮ ಶಿಷ್ಯಂದಿರ ಜೊತೆ ಸೇರಿ ಪರಿಸರ ಉಳಿವಿಗಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.ಯೋಗದ ಮೂಲಕ ಆರೋಗ್ಯ ಭಾಗ್ಯ ಕಲ್ಪಿಸುವ ಶ್ರೀಧರ ಗುರೂಜಿಯವರು ಪರಿಸರ ಉಳಿವೂ ನಮ್ಮ ಜವಾಬ್ದಾರಿ ಎಂಬ ಸಂದೇಶವನ್ನ ಈ ಕಾರ್ಯಕ್ರಮದ ಮೂಲಕ ಸಾರಿದ್ದಾರೆ…