ಚಂಪಾಕಲಿ,ಪಪ್ಸ್ ತಿಂದ ಹಣ ಕೇಳಿದ್ದಕ್ಕೆ ರೌಡಿಸಂ…ಬೇಕರಿ ನೌಕರನಿಗೆ ಚಾಕು ಇರಿತ…

ಚಂಪಾಕಲಿ,ಪಪ್ಸ್ ತಿಂದ ಹಣ ಕೇಳಿದ್ದಕ್ಕೆ ರೌಡಿಸಂ…ಬೇಕರಿ ನೌಕರನಿಗೆ ಚಾಕು ಇರಿತ…

ಮೈಸೂರು,ಜು7,Tv10 ಕನ್ನಡ

ಚಂಪಾಕಲಿ ಹಾಗೂ ಪಪ್ಸ್ ತಿಂದ ಹಣ ಕೇಳಿದ್ದಕ್ಕೆ ರೌಡಿಸಂ ಮಾಡಿ ಬೇಕರಿ ನೌಕರನಿಗೆ ಚಾಕುವಿನಿಂದ ಇರಿದ ಘಟನೆ ಹೂಟಗಳ್ಳಿ ಕಾಲೋನಿಯಲ್ಲಿ ನಡೆದಿದೆ.ಕೃಷ್ಣಾ ಬೇಕರಿಯಲ್ಲಿ ಕೆಲಸ ಮಾಡುವ ಮಹಮದ್ ಸಾಜಿದ್ ಎಂಬುವರಿಗೆ ಚಾಕುವಿನಿಂದ ಇರಿದಿದ್ದಾರೆ.ಅದೃಷ್ಟವಶಾತ್ ಮಹಮದ್ ಸಾಜಿದ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ರೌಡಿಶೀಟರ್ ಪ್ರಜ್ವಲ್@ಸ್ಪಾಟ್ ಹಾಗೂ ಸಂಜು ಎಂಬುವರು ದಾಂಧಲೆ ನಡೆಸಿದ ಆರೋಪಿಗಳು.
ರಾತ್ರಿ ಸುಮಾರು 10 ಗಂಟೆ ವೇಳೆಯಲ್ಲಿ ಬೇಕರಿಗೆ ಬಂದ ಪ್ರಜ್ವಲ್ ಹಾಗೂ ಸಂಜು ಚೆಂಪಾಕಲಿ ಹಾಗೂ ಪಪ್ಸ್ ತಿಂದಿದ್ದಾರೆ.ಹಣ ಕೇಳಿದಾಗ ಟ್ರೇಗಳನ್ನ ತಳ್ಳಿ ಪದಾರ್ಥಗಳನ್ನ ಬೀಳಿಸಿ ರೌಡಿಸಂ ಪ್ರದರ್ಶಿಸಿ ಮಹಮದ್ ಸಾಜಿದ್ ಗೆ ಚಾಕುವಿನಿಂದ ಇರಿದಿದ್ದಾರೆ.ಅದೃಷ್ಟವಶಾತ್ ಮಹಮದ್ ಸಾಜಿದ್ ಸ್ವೆಟರ್ ಧರಿಸಿದ್ದರಿಂದ ಚಾಕು ಸಿಲುಕಿಕೊಂಡಿದೆ.ನಂತರ ಮಹಮದ್ ಸಾಜಿದ್ ಧರಿಸಿದ್ದ 30 ಗ್ರಾಂ ಚಿನ್ನದ ಸರ ಲಪಟಾಯಿಸಿ ಪ್ರಜ್ವಲ್ ಹಾಗೂ ಸಂಜು ಪರಾರಿಯಾಗಿದ್ದಾರೆ.ಪ್ರಜ್ವಲ್ ಹಾಗೂ ಸಂಜು ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸಂಜು ಅರೆಸ್ಟ್ ಆಗಿದ್ದು ಪ್ರಜ್ವಲ್ ತಲೆಮರೆಸಿಕೊಂಡಿದ್ದಾನೆ…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *