ಸಾಲ ವಸೂಲಿಗೆ ಯುವಕನ ಕಿಡ್ನಾಪ್…30 ಜನರ ತಂಡದಿಂದ ಕೃತ್ಯ ಆರೋಪ..7 ಮಂದಿ ಅರೆಸ್ಟ್…

ಸಾಲ ವಸೂಲಿಗೆ ಯುವಕನ ಕಿಡ್ನಾಪ್…30 ಜನರ ತಂಡದಿಂದ ಕೃತ್ಯ ಆರೋಪ..7 ಮಂದಿ ಅರೆಸ್ಟ್…

ಮೈಸೂರು,ಜು17,Tv10 ಕನ್ನಡಕೊಟ್ಟ ಸಾಲ ವಸೂಲಿ ಮಾಡಲು ಯುವಕನನ್ನ ಮಾರಕಾಸ್ತ್ರಗಳನ್ನ ತೋರಿಸಿ ಬಲವಂತವಾಗಿ ಎಳೆದೊಯ್ದು ಅಕ್ರಮವಾಗಿ ಬಂಧನದಲ್ಲಿರಿಸಿದ ಘಟನೆ ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನಡೆದಿದೆ.ಸುಮಾರು 30 ಮಂದಿ ತಂಡದಿಂದ ಕೃತ್ಯ ನಡೆದಿದೆ.ಪ್ರಕರಣ ದಾಖಲಿಸಿಕೊಂಡ ಕುವೆಂಪುನಗರ ಪೊಲೀಸರು ಪ್ರಮುಖ ಆರೋಪಿ ಸೇರಿದಂತೆ 7 ಮಂದಿಯನ್ನ ಬಂಧಿಸಿದ್ದಾರೆ.ವಾಜಮಂಗಲ ನಿವಾಸಿ ಹಾಗೂ ಆದಿಚುಂಚನಗಿರಿ ಕಾಲೇಜಿನ ವಿಧ್ಯಾರ್ಥಿಯಾಗಿದ್ದ ದರ್ಶನ್(20) ಅಪಹರಣಕ್ಕೆ ಒಳಗಾದ ಯುವಕ.ಪವನ್ ಹಾಗೂ ಈತನ ಸ್ನೇಹಿತರು ಅಪಹರಿಸಿದ ಆರೋಪಿಗಳು.ಜುಲೈ 13 ರಂದು ದರ್ಶನ್ ದಟ್ಟಗಳ್ಳಿಯ ಲೆಮೆನ್ ಟ್ರೀ ಹೋಟೆಲ್ ಬಳಿ ಇದ್ದಾಗ ಏಕಾಏಕಿ ಬಂದ ಪವನ್ ಹಾಗೂ 30 ಮಂದಿ ತಂಡ ಮಾರಕಾಸ್ತ್ರಗಳನ್ನ ತೋರಿಸಿ ಬೆದರಿಸಿ ವಾಹನವೊಂದರಲ್ಲಿ ಬಲವಂತವಾಗಿ ಕರೆದೊಯ್ದಿದ್ದಾರೆ.ಪವನ್ ನಿಂದ ದರ್ಶನ್ ಸಾಲ ಪಡೆದಿದ್ದ ಎನ್ನಲಾಗಿದೆ.ಸಮಯಕ್ಕೆ ಸರಿಯಾಗಿ ದರ್ಶನ್ ಹಣ ಹಿಂದಿರುಗಿಸಿಲ್ಲ.ಇದೇ ವಿಚಾರದಲ್ಲಿ ಪವನ್ ತನ್ನ ಸ್ನೇಹಿತರ ಜೊತೆ ಸೇರಿ ದರ್ಶನ್ ನ ಬಲವಂತವಾಗಿ ಕರೆದೊಯ್ದಿದ್ದಾನೆ.ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಹಣ ಪೀಕಲು ಯತ್ನಿಸಿದ್ದಾನೆ.ಸುಮಾರು 3 ಗಂಟೆಗಳ ಕಾಲ ಬಂಧನದಲ್ಲಿರಿಸಿ ಹಿಂಸೆ ನೀಡಿದ್ದಾನೆ ಎನ್ನಲಾಗಿದೆ.ಪವನ್ ಕಪಿಮುಷ್ಠಿಯಿಂದ ದರ್ಶನ್ ತಪ್ಪಿಸಿಕೊಂಡು ಬಂದಿದ್ದಾನೆ.ಈ ವಿಚಾರ ಮನೆಯಲ್ಲಿ ಹೇಳಿದ್ರೆ ಕೊಲೆ ಮಾಡುವುದಾಗಿ ಪವನ್ ಎಚ್ಚರಿಕೆ ನೀಡಿದ್ದಾನೆ.ಈ ಸಂಭಂಧ ದರ್ಶನ್ ತಂದೆ ಉಮೇಶ್ ರವರು ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಘಟನೆ ನಡೆದ 24 ಗಂಟೆಯಲ್ಲಿ ಪವನ್ ಸೇರಿದಂತೆ 7 ಮಂದಿಯನ್ನ ಕುವೆಂಪುನಗರ ಪೊಲೀಸರು ಬಂಧಿಸಿದ್ದಾರೆ…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *