ಯೋಗ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಸಾಮೂಹಿಕ ಯಜುರ್ವೇದದ ಯಜುರ್ ಉಪಾಕರ್ಮ…ಭಾಷ್ಯಂಸ್ವಾಮಿಗಳಿಂದ ಶುಭಹಾರೈಕೆ…
- TV10 Kannada Exclusive
- August 19, 2024
- No Comment
- 160
ಮೈಸೂರು,ಆ19,Tv10 ಕನ್ನಡ
ಮೈಸೂರಿನ ವಿಜಶ್ರೀಯನಗರದಲ್ಲಿರುವ ಶ್ರೀ ಯೋಗ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ
ಯಜುರ್ವೇದದ ಸಾಮೂಹಿಕ ಯಜುರ್ ಉಪಾಕರ್ಮ ನೆರವೇರಿತು. ಬ್ರಾಹ್ಮಣರು ಯಜ್ಞೋಪವೀತಂ ಜನಿವಾರ
ಬದಲಾಯಿಸಿಕೊಂಡು ಸಂಧ್ಯಾವಂದನೆ, ಗಾಯತ್ರಿ ಜಪ, ಹೋಮ ನೆರವೇರಿಸುವ ಮೂಲಕ ಆಚರಿಸಿದರು. ಉಪಾಕರ್ಮದ ಅಂಗವಾಗಿ ಜನಿವಾರ ಧಾರಣೆ ಮಾಡಿದ ಸಮಾಜದ ಬ್ರಾಹ್ಮಣರಿಗೆ
ದೇವಸ್ಥಾನದ ಸಂಸ್ಥಾಪಕರಾದ ಡಾಕ್ಟರ್
ಬಾಷ್ಯಂ ಸ್ವಾಮೀಜಿ ಶುಭಕೋರಿ ಆಶೀರ್ವದಿಸಿದರು.
ನಂತರ ಮಾತನಾಡಿ
ಹಿಂದೂ ಧರ್ಮ ಶ್ರೇಷ್ಠವಾದದ್ದು. ಮಕ್ಕಳಲ್ಲಿ ಧಾರ್ಮಿಕತೆಯ ವಾಸ್ತವದ ವಿಚಾರಗಳ ಅರಿವಿನ ಕೊರತೆಯಿಂದ, ಧರ್ಮಕ್ಕೆ ಹಿನ್ನಡೆಯಾಗುತ್ತಿದೆ.ಹಿಂದೆ ವೃದ್ಧಾಶ್ರಮಗಳಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಜನತೆಯಲ್ಲಿ ಸಂಸ್ಕಾರ ಹಾಗೂ ಜೀವನ ಮೌಲ್ಯಗಳ ಕೊರತೆಯಿಂದಾಗಿ ಹಿರಿಯರ ಬಗ್ಗೆ ಗೌರವವಿಲ್ಲದೆ. ಇದರ ಪರಿಣಾಮ ಹಿರಿಯರನ್ನು ವೃದ್ಧಾಶಮಕ್ಕೆ ಸೇರಿಸುತ್ತಿರುವುದು ವಿಷಾದನೀಯ. ದೇವಸ್ಥಾನಗಳು ಕೇವಲ ಪೂಜೆ ಹಾಗೂ ಧಾರ್ಮಿಕ ಆಚರಣೆಗಳಿಗೆ ಸಿಮೀತವಾಗದೆ, ಸಾಮಾಜಿಕ ಕ್ಷೇತ್ರಗಳ ಅಭಿವೃದ್ಧಿಯ ಚಟುವಟಿಕೆಗಳೊಂದಿಗೆ ಸಮಾಜದ ಕುಂದು ಕೊರತೆಗಳಿಗೆ ಸ್ವಂದಿಸುವ ಕೇಂದ್ರಗಳಾಗಬೇಕು ಎಂದು ಹೇಳಿದರು.‘ಉಪ ಎಂದರೆ ಸಮೀಪ. ದೇವರ ಸಾಮಿಪ್ಯ ಹೊಂದಲು (ಮೋಕ್ಷ ಪ್ರಾಪ್ತಿ) ಪ್ರತಿಯೊಬ್ಬರು ದೇವರ ಮೇಲೆ ಶ್ರದ್ಧೆ ಇಟ್ಟು, ಉಪಾಸನೆ ಮಾಡಿ ಮೋಕ್ಷ ಪಡೆಯಲು ಪ್ರಯತ್ನಿಸಬೇಕು. ಆಚಾರ , ಒಳ್ಳೆಯ ಚಾರಿತ್ರ್ಯ, ಸನ್ಮಾರ್ಗಗಳನ್ನು ಅಳವಡಿಸಿಕೊಂಡು ದೇವರನ್ನು ಪೂಜಿಸಿದರೆ ನಮ್ಮ ಜನ್ಮ ಸಫಲವಾಗುತ್ತದೆ’ ಎಂದರು.ಯೋಗ ನರಸಿಂಹಸ್ವಾಮಿ ದೇವಸ್ಥಾನದ ವ್ಯವಸ್ಥೆಪಾಕರಾದ ಎನ್ ಶ್ರೀನಿವಾಸನ್, ಶೇಷಾದ್ರಿ, ಗಿರೀಶ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಚಕ್ರಪಾಣಿ, ಹಾಗೂ ಇನ್ನಿತರರು ಹಾಜರಿದ್ದರು..