ಮದುವೆ ಆಗುವಂತೆ ಇನ್ಫೋಸಿಸ್ ಉದ್ಯೋಗಿಗೆ ಟಾರ್ಚರ್…ಮನೆಗೆ ನುಗ್ಗಿ ರಂಪಾಟ,ಕೊಲೆ ಬೆದರಿಕೆ…ಯುವಕನ ವಿರುದ್ದ FIR ದಾಖಲು

ಮದುವೆ ಆಗುವಂತೆ ಇನ್ಫೋಸಿಸ್ ಉದ್ಯೋಗಿಗೆ ಟಾರ್ಚರ್…ಮನೆಗೆ ನುಗ್ಗಿ ರಂಪಾಟ,ಕೊಲೆ ಬೆದರಿಕೆ…ಯುವಕನ ವಿರುದ್ದ FIR ದಾಖಲು

ಮೈಸೂರು,ಡಿ9,Tv10 ಕನ್ನಡ

ಮದುವೆ ಆಗುವಂತೆ ಒತ್ತಾಯಿಸಿದ ಯುವಕನೊಬ್ಬ ಇನ್ಫೋಸಿಸ್ ಉದ್ಯೋಗಿಯ ಮನೆಗೆ ನುಗ್ಗಿ ಹಲ್ಲೆ ನಡೆಸಿ ರಂಪಾಟ ಮಾಡಿ ಕೊಲೆ ಬೆದರಿಕೆ ಹಾಕಿದ ಘಟನೆ ಮೈಸೂರಿನ ಮೇಟಗಳ್ಳಿ ಠಾಣೆ ವ್ಯಾಪ್ತಿಯ ಸುಭಾಷ್ ನಗರದಲ್ಲಿ ನಡೆದಿದೆ.ಟಾರ್ಚರ್ ನೀಡಿ ಹಲ್ಲೆ ನಡೆಸಿದ ಯುವಕನ ವಿರುದ್ದ ಇನ್ಫೋಸಿಸ್ ಉದ್ಯೋಗಿ ಕಾನೂನು ಕ್ರಮ ಕೈಗೊಳ್ಳುವಂತೆ FIR ದಾಖಲಿಸಿದ್ದಾರೆ.

ಇನ್ಫೋಸಿಸ್ ನಲ್ಲಿ ಟೆಕ್ನಿಕಲ್ ಸಪೋರ್ಟ್ ಸ್ಪೆಷಲಿಸ್ಟ್ ಆಗಿ ಕೆಲಸ ಮಾಡುತ್ತಿರುವ ಇಂದು ಎಂಬುವರು ಮೇಟಗಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಬೆಂಗಳೂರಿನ ಕೆಂಗೇರಿಯ ಸುಂಕಲ್ ಪಾಳ್ಯ ನಿವಾಸಿ ಮಧುನಂದನ್ ವಿರುದ್ದ ಪ್ರಕರಣ ದಾಖಲಾಗಿದೆ.

ಇಂದು ಹಾಗೂ ಮಧುನಂದನ್ ರವರ ಮದುವೆಗೆ ಜೂನ್ ತಿಂಗಳಿನಲ್ಲಿ ಮಾತುಕತೆ ಆಗಿತ್ತು.ನಂತರದ ದಿನಗಳಲ್ಲಿ ಇಂದು ವಿಚಾರದಲ್ಲಿ ಅನಗತ್ಯವಾಗಿ ಸಂಶಯಪಡುವುದು,ನೀನು ವರ್ಜಿನಾ..?,ಫೋನ್ ಮಾಡಿದ್ರೆ ಯಾಕೆ ರಿಸೀವ್ ಮಾಡಿಲ್ಲ,ಎಲ್ಲಿಗೆ ಹೋಗಿದ್ದೆ ಹೀಗೆ ಪ್ರಶ್ನೆಗಳನ್ನ ಹಾಕಿ ಮಧುನಂದನ್ ಅನುಮಾನ ವ್ಯಕ್ತಪಡಿಸುತ್ತಿದ್ದ.ಇದರಿಂದ ಮನನೊಂದ ಇಂದು ತನ್ನ ಮನೆಯವರೊಂದಿಗೆ ಚರ್ಚಿಸಿ ಮದುವೆ ರದ್ದು ಮಾಡಿಕೊಂಡರು.ಇದರಿಂದ ದ್ವೇಷ ಬೆಳೆಸಿಕೊಂಡ ಮಧುನಂದನ್ ತನ್ನ ಅಕ್ಕ ಸರಿತಾ,ಅಕ್ಕನ ಮಗ ಚಿರು,ಭಾವ ಯೋಗೇಶ್ ಜೊತೆ ಮನೆಗೆ ಪ್ರವೇಶಿಸಿ ಮದುವೆ ಆಗುವಂತೆ ಪೀಡಿಸಿದ್ದಾನೆ.ಇದನ್ನ ನಿರಾಕರಿಸಿದಾಗ ಇಂದು ಮೇಲೆ ಹಲ್ಲೆ ನಡೆಸಿದ್ದಾನೆ.ಅಡ್ಡ ಬಂದ ತಂಗಿ ಮೇಲೂ ಹಲ್ಲೆ ನಡೆಸಿ ರಂಪಾಟ ಮಾಡಿದ್ದಾನೆ.ನನ್ನನ್ನ ಮದುವೆ ಆಗದಿದ್ದರೆ ಯಾರು ಮದುವೆ ಆಗದಂತೆ ಮಾಡುವುದಾಗಿ ಹೆದರಿಸಿ ಕೊಲೆ ಬೆದರಿಕೆ ಹಾಕಿದ್ದಾನೆ.ಮಧುನಂದನ್ ರಿಂದ ಹಲ್ಲೆಗೊಳಗಾದ ಇಂದು ಹಾಗೂ ಮನೆಯವರು ಚಿಕಿತ್ಸೆ ಪಡೆದು ನಂತರ ಆತನ ವಿರುದ್ದ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ.

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ…

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ. ಹನೂರು Tv10 ಕನ್ನಡ ಹನೂರು: ಹನೂರು ತಾಲೂಕನ್ನು ಬರಪೀಡಿತ…
ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…?

ವಿವಾದಿತ ಸರ್ಕಲ್ ನಲ್ಲಿ ರಾರಾಜಿಸಿದ ಪೊಲೀಸ್ ಜೀಪ್…ಇದು ಮುನ್ನೆಚ್ಚರಿಕೆ ಕ್ರಮವೇ…? ಮೈಸೂರು,ಸೆ13,Tv10 ಕನ್ನಡ ವಿವಾದಿತ ಮಾತೃಮಂಡಳಿ ವೃತ್ತವೀಗ ಪೊಲೀಸ್ ಜೀಪ್ ಗೆ ಆಶ್ರಯ ನೀಡಿದೆ.ಪ್ರತಿಮೆ ಇರಬೇಕಿದ್ದ ಜಾಗದಲ್ಲಿ ಪೊಲೀಸ್…
ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ…

ಇ ಖಾತೆ ಮಾಡಿಕೊಡಲು 50 ಸಾವಿರ ಲಂಚ ಪಡೆದ ಆರ್ ಐ ಮಂಜುನಾಥ್ ಸಸ್ಪೆಂಡ್…ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಆದೇಶ… ಮೈಸೂರು,ಸೆ10,Tv10 ಕನ್ನಡ ಇ ಖಾತೆ ಮಾಡಿಕೊಡಲು ವಕೀಲರೊಬ್ಬರಿಂದ 50…

Leave a Reply

Your email address will not be published. Required fields are marked *