ಲೆಕ್ಚರರ್ ಜೊತೆ ಸ್ಟೂಡೆಂಟ್ ಎಸ್ಕೇಪ್…ಪಾಠ ಹೇಳಿಕೊಟ್ಟ ಮೇಷ್ಟ್ರನ್ನ ವರಿಸಿದ ವಿಧ್ಯಾರ್ಥಿನಿ…ಹಾಸಿಗೆ ಹಿಡಿದ ತಂದೆ…ವಿದ್ಯೆ ಹೇಳಿಕೊಡುವ ಗುರು ಕೆಲಸವಾ ಇದು…?

ಲೆಕ್ಚರರ್ ಜೊತೆ ಸ್ಟೂಡೆಂಟ್ ಎಸ್ಕೇಪ್…ಪಾಠ ಹೇಳಿಕೊಟ್ಟ ಮೇಷ್ಟ್ರನ್ನ ವರಿಸಿದ ವಿಧ್ಯಾರ್ಥಿನಿ…ಹಾಸಿಗೆ ಹಿಡಿದ ತಂದೆ…ವಿದ್ಯೆ ಹೇಳಿಕೊಡುವ ಗುರು ಕೆಲಸವಾ ಇದು…?

ಹುಣಸೂರು,ಡಿ31,Tv10 ಕನ್ನಡ

ಶಿಕ್ಷಕಿಯಾಗಲು ಬಿಎಡ್ ಕಾಲೇಜ್ ಗೆ ಸೇರಿದ ಯುವತಿ ಪಾಠ ಹೇಳಿಕೊಟ್ಟ ಗುರುವಿನ ಜೊತೆಗೆ ಓಡಿ ಹೋಗಿ ಮದುವೆ ಆದ ಘಟನೆ ಹುಣಸೂರಿನಲ್ಲಿ ಬೆಳಕಿಗೆ ಬಂದಿದೆ.ಮನೆಯವರ ವಿರೋಧ ಲೆಕ್ಕಿಸದೆ ತನಗಿಂತ 15 ವರ್ಷ ಹಿರಿಯನಾದ ಲೆಕ್ಚರ್ ನ್ನ ಮದುವೆ ಆಗಿದ್ದಲ್ಲದೆ ರಕ್ಷಣೆ ಕೋರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.ಮಗಳ ವರ್ತನೆಗೆ ಬೇಸತ್ತ ಪೋಷಕರು ಶಾಕ್ ಗೆ ಒಳಗಾಗಿದ್ದಾರೆ.ಮಗಳ ಯೋಚನೆಯಲ್ಲಿ ತಂದೆ ಹಾಸಿಗೆ ಹಿಡಿದಿದ್ದಾರೆ.

ಹುಣಸೂರಿನ ನಿವಾಸಿ ಪೂರ್ಣಿಮ(24) ಎಂಎ ಮುಗಿಸಿ ಬಿಎಡ್ ಗಾಗಿ ಹುಣಸೂರಿನ ಮಹಾವೀರ್ ಕಾಲೇಜ್ ಆಫ್ ಎಜುಕೇಷನ್ ಗೆ ಸೇರಿದ್ದಾಳೆ.ಪಾಠ ಕಲಿಯುವ ಜೊತೆಗೆ ಲೆಕ್ಚರರ್ ಯಶೋದಕುಮಾರ್(39) ಜೊತೆ ಲವ್ವಿಡವ್ವಿ ಶುರುವಾಗಿದೆ.ಈ ವಿಚಾರ ಮನೆಯವರ ಗಮನಕ್ಕೆ ಬಂದಿದೆ.ಇಬ್ಬರು ಪ್ರೇಮಿಗಳು ಮದುವೆ ಆಗಲು ತೀರ್ಮಾನಿಸಿದ್ದಾರೆ.ಪೂರ್ಣಿಮ ಮನೆಯಲ್ಲಿ ವಿರೋಧ ವ್ಯಕ್ತವಾಗಿದೆ.ಕಾಲೇಜಿಗೆ ಹೋಗದಂತೆ ತಡೆ ಒಡ್ಡಿದ್ದಾರೆ.ಆದ್ರೆ ಮೊಬೈಲ್ ನಲ್ಲೇ ಇವರ ಪ್ರೇಮಕತೆ ಮುಂದುವರೆದಿದೆ.ಡಿ.26 ರಂದು ಸರ್ಟಿಫಿಕೇಟ್ ತರುವುದಾಗಿ ತಿಳಿಸಿ ಮನೆ ಬಿಟ್ಟ ಪೂರ್ಣಿಮ ಹಿಂದಿರುಗಿಲ್ಲ.ಮೊಬೈಲ್ ನಲ್ಲಿ ಮದುವೆ ಆಗಿರುವುದಾಗಿ ಮೆಸೇಜ್ ಹಾಕಿದ್ದಾಳೆ.ನಮ್ಮಿಬ್ಬರಿಗೂ ತೊಂದರೆ ನೀಡಬಾರದೆಂಬ ಉದ್ದೇಶದಿಂದ ರಕ್ಷಣೆಗಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ತಿಳಿಸಿದ್ದಾಳೆ.ಮಕ್ಕಳಿಗೆ ಪಾಠ ಹೇಳಿಕೊಟ್ಟು ಬುದ್ದಿ ಕಲಿಸಬೇಕಿದ್ದ ಶಿಕ್ಷಕರೇ ಹಾದಿ ತಪ್ಪಿದ್ದಾರೆ.

ಬೀದಿಬದಿ ಸೊಪ್ಪುಮಾರಿ 2 ಲಕ್ಷ ಸಾಲ ಮಾಡಿ ಕಾಲೇಜ್ ಗೆ ಸೇರಿಸಿದ ಮಗಳು ಮಾಡಿದ ಕೆಲಸಕ್ಕೆ ಹೆತ್ತವರು ಶಾಕ್ ಆಗಿದ್ದಾರೆ.ಪಾಠ ಹೇಳಿಕೊಡಬೇಕಾದ ಗುರುವಿನ ಕೆಲಸ ಇದೇನಾ ಎಂದು ತಾಯಿ ಮಹದೇವಮ್ಮ ಹಿಡಿ ಶಾಪ ಹಾಕುತ್ತಿದ್ದಾರೆ.ಹಾಸಿಗೆ ಹಿಡಿದ ತಂದೆ ಸಜ್ಜೇಗೌಡ ಎರಡು ಲಕ್ಷ ಸಾಲ ಮಾಡಿ ಓದಿಸಿ ಮುಂದಿನ ದಿನಗಳಲ್ಲಿ ನಮ್ಮ ನೆರವಿಗೆ ಬರುತ್ತಾಳೆ ಎಂದುಕೊಂಡ್ರೆ ಹೀಗಾ ಮಾಡೋದು ಎಂದು ನೊಂದಿದ್ದಾರೆ.ಒಟ್ಟಾರೆ.ಪೂರ್ಣಿಮಾ ಕೊಟ್ಟ ಶಾಕ್ ಸಜ್ಜೇಗೌಡ ಕುಟುಂಬದಲ್ಲಿ ಬಿರುಗಾಳಿ ಬೀಸಿದಂತಾಗಿದೆ…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *