ಆರೋಪಿಯನ್ನ ಅರೆಸ್ಟ್ ಮಾಡಲು ತೆರಳಿದ ಪೊಲೀಸರಿಗೆ ಪ್ರತಿರೋಧ…ದಲಿತ ಸಂಘಟನೆ ಮುಖಂಡನ ವಿರುದ್ದ ಹೆಚ್.ಡಿ.ಕೋಟೆ ಇನ್ಸ್ಪೆಕ್ಟರ್ ರಿಂದ ದೂರು ದಾಖಲು…

ಆರೋಪಿಯನ್ನ ಅರೆಸ್ಟ್ ಮಾಡಲು ತೆರಳಿದ ಪೊಲೀಸರಿಗೆ ಪ್ರತಿರೋಧ…ದಲಿತ ಸಂಘಟನೆ ಮುಖಂಡನ ವಿರುದ್ದ ಹೆಚ್.ಡಿ.ಕೋಟೆ ಇನ್ಸ್ಪೆಕ್ಟರ್ ರಿಂದ ದೂರು ದಾಖಲು…

ಟಿ.ನರಸೀಪುರ,ಡಿ31,Tv10 ಕನ್ನಡ

ಆರೋಪಿಯೊಬ್ಬನನ್ನ ಅರೆಸ್ಟ್ ಮಾಡಲು ಬಂದ ಹೆಚ್.ಡಿ.ಕೋಟೆ ಪೊಲೀಸರ ವಿರುದ್ದ ತಿರುಗಿಬಿದ್ದ ಘಟನೆ ಟಿ.ನರಸೀಪುರದಲ್ಲಿ ನಡೆದಿದೆ.ಈ ಸಂಭಂಧ ಹೆಚ್.ಡಿ.ಕೋಟೆ ಠಾಣೆ ಇನ್ಸ್ಪೆಕ್ಟರ್ ಶಬ್ಬೀರ್ ಹುಸೇನ್ ರವರು ದಲಿತ ಸಂಘಟನೆ ಮುಖಂಡ ಸೋಮಣ್ಣ ಹಾಗೂ ಇತರರ ವಿರುದ್ದ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಭೂಮಿ ವಿವಾದ ಹಿನ್ನಲೆ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ಜಮೀನು ಮಾಲೀಕ ಹಾಗೂ ಕುಟುಂಬದ ಮೇಲೆ ಹಲ್ಲೆ ನಡೆದಿತ್ತು.ದಲಿತ ಸಂಘಟನೆ ಮುಖಂಡ ಸಣ್ಣಕುಮಾರ ಹಾಗೂ ಇತರರ ಮೇಲೆ ಹೆಚ್.ಡಿ.ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣ ನಡೆದು ಹಲವು ದಿನಗಳಾದರೂ ಆರೋಪಿಗಳನ್ನ ಪೊಲೀಸರ ಬಂಧಿಸಿರಲಿಲ್ಲ.ಈ ಸಂಭಂಧ ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯ ಬಳಿ ಹಲ್ಲೆಗೊಳಗಾದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿ ಆರೋಪಿಗಳ ಬಂಧನಕ್ಕೆ ಒತ್ತಡ ಹೇರಿದ್ದರು.ಆರೋಪಿ ಸಣ್ಣಕುಮಾರ ಟಿ.ನರಸೀಪುರ ತಾಲೂಕು ಬನ್ನಳ್ಳಿಹುಂಡಿಯ ದಲಿತ ಸಂಘಟನೆಯ ಮುಖಂಡ ಸೋಮಣ್ಣ ಎಂಬುವರ ಮನೆಯಲ್ಲಿ ಇರುವ ಬಗ್ಗೆ ಹೆಚ್.ಡಿ.ಕೋಟೆ ಠಾಣೆ ಪೊಲೀಸರಿಗೆ ಬಂದಿತ್ತು.ಈ ಹಿನ್ನಲೆ ನಿನ್ನೆ ಇನ್ಸ್ಪೆಕ್ಟರ್ ಶಬ್ಬೀರ್ ಹುಸೇನ್ ಹಾಗೂ ಇತರರು ಸೋಮಣ್ಣ ಮನೆಗೆ ತೆರಳಿದಾಗ ಸಹಕರಿಸದೆ ಪ್ರತಿರೋಧ ಮಾಡಿದ್ದರು.ಹೀಗಾಗಿ ಪೊಲೀಸರು ಬರಿಗೈಲಿ ಹಿಂದಿರುಗಬೇಕಾಯಿತು.ಸಧ್ಯ ಪೊಲೀಸರ ಕರ್ತವ್ಯಕ್ಕೆ ಸಹಕರಿಸದ ಹಿನ್ನಲೆ ಇನ್ಸ್ಪೆಕ್ಟರ್ ಶಬ್ಬೀರ್ ಹುಸೇನ್ ರವರು ಸೋಮಣ್ಣ ಹಾಗೂ ಇತರರ ವಿರುದ್ದ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *