ಮಿನಿಬಸ್ ನಲ್ಲಿ ಮಲಗಿದ್ದ ಡ್ರೈವರ್ ಕೊಲೆಗೆ ಯತ್ನ…ಹಣಕ್ಕಾಗಿ ಕೃತ್ಯ…

ಮಿನಿಬಸ್ ನಲ್ಲಿ ಮಲಗಿದ್ದ ಡ್ರೈವರ್ ಕೊಲೆಗೆ ಯತ್ನ…ಹಣಕ್ಕಾಗಿ ಕೃತ್ಯ…

ನಂಜನಗೂಡು,ಜ4,Tv10 ಕನ್ನಡ

ಹಣಕ್ಕಾಗಿ ಮಿನಿಬಸ್ ನಲ್ಲಿ ಮಲಗಿದ್ದ ಡ್ರೈವರ್ ನ ಸಿಮೆಂಟ್ ಇಟ್ಟಿಗೆಯಿಂದ ತಲೆಗೆ ಹೊಡೆದು ಕೊಲೆಗೆ ಯತ್ನಿಸಿದ ಘಟನೆ ನಂಜನಗೂಡು ಟೌನ್ ನಲ್ಲಿ ನಡೆದಿದೆ.ಸುರೇಶ್ (43) ಗಾಯಗೊಂಡಿ ಆಸ್ಪತ್ರೆ ಸೇರಿರುವ ಚಾಲಕ.ಕ್ಲೀನರ್ ಸೂರಿ.ಅ.ಲೂಸ್ ಸೂರಿ ಕೊಲೆಗೆ ಯತ್ನಿಸಿದ್ದಾನೆಂದು ಬಸ್ ಮಾಲೀಕರಾದ ಶಫಿಉಲ್ಲಾ ಖಾನ್ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಶಷಿಉಲ್ಲಾ ಖಾನ್ ರವರಿಗೆ ಸೇರಿದ ಮಿನಿಬಸ್ ಗೆ ಸುರೇಶ್ ಹಲವಾರು ವರ್ಷಗಳಿಂದ ಚಾಲಕರಾಗಿದ್ದಾರೆ.ಜನವರಿ 3 ರಂದು ಮೈಸೂರಿನ ಮಹಾರಾಣಿ ಕಾಲೇಜು ವಿಧ್ಯಾರ್ಥಿನಿಯರನ್ನ ಮಡಿಕೇರಿ ಪ್ರವಾಸಕ್ಕೆ ಕರೆದೊಯ್ದು ಹಿಂದಿರುಗಿ ಬಂದು ಉಳಿಕೆ ಹಣ 9500/- ರೂಗಳನ್ನ ತಮ್ಮ ಬಳಿ ಇಟ್ಟುಕೊಂಡು ಮಿನಿಬಸ್ ನಲ್ಲೇ ಮಲಗಿದ್ದಾರೆ.ಮರುದಿನ ಸುರೇಶ್ ರಕ್ತದ ಮಡುವಿನಲ್ಲಿ ಕಂಡುಬಂದಿದ್ದಾರೆ.ಸಿಮೆಂಟ್ ಇಟ್ಟಿಗೆಯಿಂದ ಸುರೇಶ್ ತಲೆಗೆ ಹೊಡೆದು ಕೊಲೆಗೆ ಯತ್ನಿಸಿರುವುದು ಬೆಳಕಿಗೆ ಬಂದಿದೆ.ಈ ಹಿಂದೆ ಬಸ್ ಕ್ಲೀನರ್ ಆಗಿದ್ದ ಸೂರಿ ಹಣಕ್ಕಾಗಿ ಕೊಲೆ ಮಾಡಿದ್ದಾನೆಂದು ಅನುಮಾನ ವ್ಯಕ್ತಪಡಿಸಿ ಶಫಿಉಲ್ಲಾ ಖಾನ್ ದೂರು ನೀಡಿದ್ದಾರೆ.ಸುರೇಶ್ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.ಸೂರಿ ಇದೀಗ ನಾಪತ್ತೆಯಾಗಿದ್ದಾನೆ.ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

Spread the love

Related post

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ…

Tv10 ವರದಿ ಫಲಶೃತಿ…ಚಿರತೆ ಕಂಡುಬಂದ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ…ಚಿರತೆ ಸೆರೆಗೆ ಕಾರ್ಯಾಚರಣೆ ಮೈಸೂರು,ಸೆ17,Tv10 ಕನ್ನಡ ಜಮೀನಿನ ಮಧ್ಯಭಾಗದಲ್ಲಿ ಚಿರತೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದ ದೃಶ್ಯ ಸಿಸಿ…
ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ…

ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ…ವ್ಯಕ್ತಿಗೆ 1.97 ಕೋಟಿ ವಂಚನೆ… ಮೈಸೂರು,ಸೆ15,Tv10 ಕನ್ನಡ ರಿಮೋಟ್ ಆಕ್ಸೆಸ್ ಟ್ರೋಜನ್ (RAT) ಮೂಲಕ ಸೈಬರ್ ದಾಳಿ ನಡೆಸಿ ವ್ಯಕ್ತಿಯೋರ್ವರಿಗೆ…
ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…

Leave a Reply

Your email address will not be published. Required fields are marked *