TV10 Kannada Exclusive

ತಂದೆಯಾದ ಸಂಭ್ರಮದಲ್ಲೇ ಕೊನೆ ಉಸಿರೆಳೆದ ತಂದೆ…ಚೆಲುವಾಂಬ ಆಸ್ಪತ್ರೆ ಆವರಣದಲ್ಲಿ ಮನಕಲಕುವ ಘಟನೆ…

ಮೈಸೂರು,ಜ13,Tv10 ಕನ್ನಡ ತಂದೆಯಾದ ಸಂಭ್ರಮದಲ್ಲಿ ರಾತ್ರಿ ಮಲಗಿದ ತಂದೆ ಚಿರನಿದ್ರೆಗೆ ಜಾರಿದ ಮನಕಲಕುವ ಘಟನೆ ಮೈಸೂರಿನ ಚೆಲುವಾಂಬ ಆಸ್ಪತ್ರೆ ಆವರಣದಲ್ಲಿ ನಡೆದಿದೆ.ಆಸ್ಪತ್ರೆಯಲ್ಲಿ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ರೆ ಇತ್ತ ಪತಿ ರಾತ್ರಿ ಸಂತಸದಿಂದ ಮಲಗಿದವರು ಮುಂಜಾನೆಯ ಸೂರ್ಯನ ಕಿರಣಗಳನ್ನ ನೋಡಿಲ್ಲ.ಜನ್ಮ ನೀಡಿದ ತಾಯಿ ಚೆಲುವಾಂಬ ಆಸ್ಪತ್ರೆಯ ಐಸಿಯೂ ನಲ್ಲಿ ಚೇತರಿಸಿಕೊಳ್ಳುತ್ತಿದ್ದರೆ ಪತಿ ಆಸ್ಪತ್ರೆ ಆವರಣದಲ್ಲಿ ರಾತ್ರಿ ಮಲಗಿದವರು ಸಾವಿಗೆ ಶರಣಾಗಿದ್ದಾರೆ. ಗುಂಡ್ಲುಪೇಟೆ ತಾಲೂಕು ಚೌಡಳ್ಳಿ ಗ್ರಾಮದ ರಾಜೇಶ್(35) ಮೃತ
Read More

ಸಾಲಭಾಧೆ:ಡೆತ್ ನೋಟ್ ಬರೆದು ವ್ಯಕ್ತಿ ನಾಪತ್ತೆ…ಕುಟುಂಬಸ್ಥರಲ್ಲಿ ಆತಂಕ…

ಮೈಸೂರು,ಜ13,Tv10 ಕನ್ನಡ ಸಾಲ ತೀರಿಸಲು ಸಾದ್ಯವಾಗದೆ ಮನೆ ಬಿಟ್ಟು ಹೋಗುತ್ತಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟ್ ಬರೆದು ವ್ಯಕ್ತಿ ನಾಪತ್ತೆ ಆಗಿರುವ ಘಟನೆ ಮೈಸೂರಿನ ಶಾರದಾದೇವಿ ನಗರದಲ್ಲಿ ನಡೆದಿದೆ.ಪತಿಯನ್ನ ಹುಡುಕಿ ಕೊಡುವಂತೆ ಪತ್ನಿ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಪ್ರಕರಣ ದಾಖಲಿಸಿದ್ದಾರೆ. ರಾಜೇಶ್ ಡೆತ್ ನೋಟ್ ಬರೆದು ನಾಪತ್ತೆಯಾದವರು.ಕಂಗಾಲಾದ ಪತ್ನಿ ಚೈತ್ರ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿದ್ದಾರೆ.ಬ್ಯೂಟಿ ಪಾರ್ಲರ್ ಇಟ್ಟುಕೊಂಡು ಜೀವನ ಸಾಗಿಸುತ್ತಿರುವ ಚೈತ್ರ ಪತಿ ರಾಜೇಶ್ ಎರಡು ವರ್ಷಗಳ
Read More

ATM ನಲ್ಲಿ ಕಳ್ಳರ ಕೈಚಳಕ…ವೃದ್ದರೊಬ್ಬರ ಗಮನ ಬೇರೆಡೆ ಸೆಳೆದು ಕಾರ್ಡ್ ಕದ್ದ ಖದೀಮರು…52,000 ಡ್ರಾ ಮಾಡಿ ಎಸ್ಕೇಪ್…ಹೈದರಾಬಾದ್ ನಲ್ಲಿ ಸಿಕ್ಕಿಬಿದ್ದ

ಮೈಸೂರು,ಜ12,Tv10 ಕನ್ನಡ ಎಟಿಎಂ ನಲ್ಲಿ ಹಣ ಡ್ರಾ ಮಾಡಲು ಬಂದ ವೃದ್ದರೊಬ್ಬರ ಗಮನ ಬೇರೆಡೆ ಸೆಳೆದು ಕಾರ್ಡ್ ಲಪಟಾಯಿಸಿ ನಂತರ 52 ಸಾವಿರ ಡ್ರಾ ಮಾಡಿ ಎಸ್ಕೇಪ್ ಆಗಿದ್ದ ವಂಚಕರನ್ನ ಹೈದರಾಬಾದ್ ನಲ್ಲಿ ಪತ್ತೆ ಮಾಡಲಾಗಿದೆ.ಈ ಸಂಭಂಧ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಲ್ಯಾಣಗಿರಿ ನಿವಾಸಿ ನೂರ್ ಅಹಮದ್ (75) ಎಂಬುವರು ಹಣ ಡ್ರಾ ಮಾಡಲು ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ಎಟಿಎಂ ಗೆ ಹೋಗಿದ್ದಾರೆ.8 ಸಾವಿರ ಹಣ
Read More

ಹುಣಸೂರು:ಗುರುಪುರದಲ್ಲಿ ಹನುಮ ಜಯಂತಿ ಸಂಭ್ರಮ…ಹೆಜ್ಜೆ ಹಾಕಿದ ಶಾಸಕ ಹರೀಶ್ ಗೌಡ…

ಹುಣಸೂರು,ಜ12,Tv10 ಕನ್ನಡ ಹುಣಸೂರು ತಾಲ್ಲೂಕಿನ ಮಾಜಿ ಗುರುಪುರದಲ್ಲಿ ಹನುಮ ಜಯಂತೋತ್ಸವ ಅದ್ದೂರಿಯಾಗಿ ನೆರವೇರಿತು.ಶಾಸಕ ಹರೀಶ್ ಗೌಡಹನುಮ ಜಯಂತಿ ಮೆರವಣಿಗೆಗೆ ಚಾಲನೆ ನೀಡಿದರು.ಗ್ರಾಮದ ಬೀದಿಗಳಲ್ಲಿ ಹನುಮ ಮೆರವಣಿಗೆ ಸಾಗಿತು.ಜೈ ಶ್ರೀರಾಮ್ ಜೈ ಶ್ರೀರಾಮ್ ಎಂಬ ಘೋಷಣೆ ಮುಗಿಲು ಮುಟ್ಟಿತು. ಕೇಸರಿ ಶಾಲು ಹಾಕಿ ಹನುಮ ಭಕ್ತರು ಕುಣಿದು ಸಂಭ್ರಮಿಸಿದರು.ಶಾಸಕ ಹರೀಶ್ ಗೌಡ ಶ್ರೀರಾಮ ಭಕ್ತರ ಜೊತೆ ಹೆಜ್ಜೆ ಹಾಕಿದರು.ಹನುಮ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು…
Read More

ಸಹಕಾರಿ ಸಂಘದ ಹಣ ಗುಳುಂ…ಸಿಇಓ ವಿರುದ್ದ FIR…30.18 ಲಕ್ಷ ದುರುಪಯೋಗ ಆರೋಪ…

ಮೈಸೂರು,ಜ12,Tv10 ಕನ್ನಡ ಮೈಸೂರಿನ ಜಯನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ ನೇಗಿಲಯೋಗಿ ವಿವಿದೋದ್ದೇಶ ಸಹಕಾರ ಸಂಘದ 30.18 ಲಕ್ಷ ಹಣ ದುರುಪಯೋಗಪಡಿಸಿಕೊಂಡ ಆರೋಪದ ಮೇಲೆ ಸಿಇಓ ವಿರುದ್ದ ಅಶೋಕಾಪುರಂ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್.ದಾಖಲಾಗಿದೆ.ಸಂಸ್ಥೆಯ ಅಧ್ಯಕ್ಷರಾದ ಪರಮೇಶ್ವರ ರವರು ಸಿಇಓ ಆಗಿ ಕಾರ್ಯನಿರ್ವಹಿಸುತ್ತಿದ್ದ ವೆಂಕಟೇಶ್ ಎಂಬುವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಪ್ರಕರಣ ದಾಖಲಿಸಿದ್ದಾರೆ. ಕಳೆದ 10 ವರ್ಷಗಳಿಂದ ವೆಂಕಟೇಶ್ ಸಂಸ್ಥೆಯಲ್ಲಿ ಸಿಇಓ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.ನೇಗಿಲಯೋಗಿ ವಿವಿದೋದ್ದೇಶವಸೌಹಾರ್ಧ ಸಹಕಾರಿ ಸಂಸ್ಥೆಯು ಮರುಳೇಶ್ವರ ಸೇವಾ ಟ್ರಸ್ಟ್ ಗೆ
Read More

ಅಂಧಕಾಸುರ ಸಂಹಾರ ಆಚರಣೆ…ಹೊಸ ಚಿತ್ರ ಬಿಡುಗಡೆ…ಮತ್ತೆ ಅಪಸ್ವರ…ಆಚರಣೆಯಲ್ಲಿ ಮಾರ್ಪಾಡು ತರುವಂತೆ ಆಗ್ರಹ…ಒಪ್ಪದ ಯುವ ಬ್ರಿಗೇಡ್…ಮತ್ತೆ ಗೊಂದಲ…

ನಂಜನಗೂಡು,ಜ11,Tv10 ಕನ್ನಡ ದಕ್ಷಿಣಕಾಶ ನಂಜನಗೂಡಿನಲ್ಲಿ ಪ್ರತಿ ವರ್ಷ ನಡೆಯುವಂತೆ ಆಚರಿಸುವ ಅಂಧಕಾಸುರ ಸಂಹಾರ ಕಾರ್ಯಕ್ರಮಕ್ಕೆ ಮತ್ತೆ ಅಪಸ್ವರ ಬಂದಿದೆ.ಆಚರಣೆಯಲ್ಲಿ ಮಾರ್ಪಾಡು ತರುವಂತೆ ದಲಿತ ಸಂಘಟನೆ ಮುಖಂಡರು ಆಗ್ರಹಿಸಿದ್ದಾರೆ.ಆದ್ರೆ ಯುವ ಬ್ರಿಗೇಡ್ ದಲಿತ ಸಂಘಟನೆಗಳ ಆಗ್ರಹವನ್ನ ತಿರಸ್ಕರಿಸಿದೆ.ಈ ಮಧ್ಯೆ ಆಕ್ಷೇಪಕ್ಕೆ ಕಾರಣವಾದ ಅಂಧಕಾಸುರನ ಚಿತ್ರಪಟವನ್ನ ಬದಲಾಯಿಸಿ ತಾಲೂಕು ಆಡಳಿತ ಬಿಡುಗಡೆ ಮಾಡಿದೆ.ಇದರಲ್ಲೂ ದಲಿತ ಸಂಘಟನೆ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಇಂದು ನಡೆದ ಶಾಂತಿ ಸಭೆ ಗೊಂದಲದಲ್ಲೇ ಮುಗಿದಿದೆ. ಜ.12 ರಂದು ನಡೆಯಲಿರುವ ಅಂದಾಕಾಸುರ
Read More

ಚರಂಡಿಯಲ್ಲಿ ನವಜಾತ ಶಿಶು ಪತ್ತೆಯಾದ ಪ್ರಕರಣ…ತಾಯಿ ಪತ್ತೆ…

ಎಚ್.ಡಿ.ಕೋಟೆ,ಜ11,Tv10 ಕನ್ನಡ ನಾಲ್ಕು ದಿನಗಳ ಹಿಂದೆ ನವಜಾತ ಗಂಡು‌ ಶಿಶುವಿನ ಪ್ರಕರಣದ ಸಂಭಂಧ ಇದೀಗ ಪಾಪಿ ತಾಯಿ ಪತ್ತೆಯಾಗಿದ್ದಾಳೆ.ಆರೋಗ್ಯ ಇಲಾಖೆ ಅಧಿಕಾರಿಗಳು ಹರಸಾಹಸ ನಡೆಸಿ ತಾಯಿಯನ್ನ ಪತ್ತೆ ಮಾಡಿದ್ದಾರೆ.16 ವರ್ಷದ ಅಪ್ರಾಪ್ತ ಬಾಲಕಿಯೇ ಮಗುವಿನ ತಾಯಿ ಆಗಿದ್ದಾಳೆ.ಮದುವೆಯಾಗದೇ ಇದ್ದರೂ ಮಗು ಜನಿಸಿದ್ದರಿಂದ ಮಗು ಜೀವಂತವಾಗಿ ಚರಂಡಿಗೆ ಎಸೆದಿರುವುದಾಗಿ ಬಾಲಕಿ ಒಪ್ಪಿಕೊಂಡಿದ್ದಾಳೆ.ತಾಯಿ ಮಾಡಿದ ತಪ್ಪಿಗೆ ಮಗು ಅನಾಥವಾಗಿ ಜಿಲ್ಲಾಸ್ಪತ್ರೆಯ ಆಶ್ರಯದಲ್ಲಿದೆ.ಎಚ್.ಡಿ.ಕೋಟೆ ತಾಲೋಕಿನ ರಾಜೇಗೌಡನಹುಂಡಿ ಗ್ರಾಮದಲ್ಲಿ ಘಟನೆ ನಡೆದಿತ್ತು.ರಾಜೇಗೌಡನಹುಂಡಿ ಗ್ರಾಮದ ಅಪ್ರಾಪ್ತ ಬಾಲಕಿಯೇ
Read More

ಅಪ್ರಾಪ್ತ ಬೈಕ್ ಚಾಲನೆ…25 ಸಾವಿರ ದಂಡ ವಸೂಲಿ…ಗದಗ್ ನ್ಯಾಯಾಲಯದ ಆದೇಶದ ಮೇರೆಗೆ ಫೈನ್…

ಗದಗ್,ಜ9,Tv10 ಕನ್ನಡ ಅಪ್ರಾಪ್ತರಿಗೆ ಬೈಕ್ ಚಾಲನೆಗೆ ಅವಕಾಶ ನೀಡುವ ಪೋಷಕರೇ ಎಚ್ಚರ ಸಿಕ್ಕಿಬಿದ್ದಲ್ಲಿ ಭಾರಿ ದಂಡ ಕಟ್ಟಬೇಕಾದ್ದು ಗ್ಯಾರೆಂಟಿ.ಗದಗ್ ನ್ಯಾಯಾಲಯ ಇಂತಹ ಒಂದು ಪ್ರಕರಣದಲ್ಲಿ 25 ಸಾವಿರ ದಂಡ ವಸೂಲಿ ಮಾಡಿದೆ.ಅಪ್ರಾಪ್ತ ಮಗನಿಗೆ ಬೈಕ್ ಚಾಲನೆ ಮಾಡಲು ಕೊಟ್ಟ ಪರಿಣಾಮ ತಂದೆ ವಿ.ಬಿ.ಬಿನ್ನಲ್ ಎಂಬುವರಿಂದ ನ್ಯಾಯಾಲಯ ಮುಲಾಜು ನೋಡದೆ 25 ಸಾವಿರ ದಂಡ ವಸೂಲಿ ಮಾಡಿದೆ…
Read More

ಮೈಸೂರು:ಮುದುಕನ ಮದುವೆ ನಾಟಕ ಪ್ರದರ್ಶನ…ರಕ್ತದಾನಿ,ರಂಗಭೂಮಿ ಕಲಾವಿದರಿಗೆ ಸನ್ಮಾನ…

ಮೈಸೂರು:ಮುದುಕನ ಮದುವೆ ನಾಟಕ ಪ್ರದರ್ಶನ…ರಕ್ತದಾನಿ,ರಂಗಭೂಮಿ ಕಲಾವಿದರಿಗೆ ಸನ್ಮಾನ… ಮೈಸೂರು,ಜ9,Tv10ಕನ್ನಡ ದಿ.ಪಿ.ಬಿ.ರೈ ಬೆಳ್ಳಾರೆ ಅವರ ಸವಿ ನೆನಪಿನಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹ ಯೋಗದೊಂದಿಗೆ, ಮಂಗಳೂರಿನ ಶ್ರೀ ನಂದಿ ಕೇಶ್ವರ ನಾಟಕ ಸಂಘದ ೪೧ನೇ ವರ್ಷದ ಸಂಭ್ರ ಮದ ಅಂಗವಾಗಿ ಮೈಸೂರಿನ ಪುರಭವನದ ಆವರಣದಲ್ಲಿ ಇಂದು ‘ಮುದುಕನ ಮದುವೆ’ ಹಾಸ್ಯಮಯ ನಾಟಕ ಪ್ರದರ್ಶನ ಆಯೋಜಿಸಲಾಗಿತ್ತು.ದಿ.ಪಿ.ಬಿ.ದುತ್ತರಗಿ ವಿರಚಿತ ಈ ನಾಟಕವನ್ನು ತಂಡದ ಬಿ.ಮಲ್ಲಿಕಾರ್ಜುನ(ಹೊಸದುರ್ಗ), ಯಶಸ್ವಿನಿ ಲೋಕೇಶ್ವರ(ಮಂಡ್ಯ), ಶರತ್ ತಾಲೂರು(ಬಳ್ಳಾರಿ), ಜಯರಾಮ್ (ಮಂಡ್ಯ),
Read More

ದತ್ತ ವೆಂಕಟೇಶ್ವರ ದೇವಾಲಯದಲ್ಲಿ ವೈಕುಂಠ ಏಕಾದಶಿಗೆ ಸಿದ್ದತೆ…ಬೆಳಿಗ್ಗೆ 6 ಗಂಟೆಗೆ ಉತ್ತರ ಧ್ವಾರ ದರುಶನ…

ಮೈಸೂರು,ಜ9,Tv10 ಕನ್ನಡ ವೈಕುಂಠ ಏಕಾದಶಿ ಅಂಗವಾಗಿ ಮೈಸೂರು ನಂಜನಗೂಡು ರಸ್ತೆಯಲ್ಲಿರುವ ಶ್ರೀದತ್ತ ವೆಂಕಟೇಶ್ವರ ದೇವಾಲಯದಲ್ಲಿ ಶುಕ್ರವಾರ ಬೆಳಿಗ್ಗೆ 6 ಗಂಟೆಗೆ ಉತ್ತರ ಧ್ವಾರ ದರುಶನ ಏರ್ಪಡಿಸಲಾಗಿದೆ.ಬೆಳಿಗ್ಗೆ 6 ರಿಂದ ಮಧ್ಯಾಹ್ನ 2.30 ಹಾಗೂ 3 ಗಂಟೆಯಿಂದ ರಾತ್ರಿ 9 ರವರೆಗೆ ದರುಶನ ವ್ಯವಸ್ಥೆ ಏರ್ಪಡಿಸಲಾಗಿದೆ.ಆಶ್ರಮದ ಮುಖ್ಯ ಧ್ವಾರದಿಂದ ಭಕ್ತರಿಗೆ ಪ್ರವೇಶ ಕಲ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ…
Read More