ಹುಣಸೂರು:ಗುರುಪುರದಲ್ಲಿ ಹನುಮ ಜಯಂತಿ ಸಂಭ್ರಮ…ಹೆಜ್ಜೆ ಹಾಕಿದ ಶಾಸಕ ಹರೀಶ್ ಗೌಡ…
ಹುಣಸೂರು,ಜ12,Tv10 ಕನ್ನಡ ಹುಣಸೂರು ತಾಲ್ಲೂಕಿನ ಮಾಜಿ ಗುರುಪುರದಲ್ಲಿ ಹನುಮ ಜಯಂತೋತ್ಸವ ಅದ್ದೂರಿಯಾಗಿ ನೆರವೇರಿತು.ಶಾಸಕ ಹರೀಶ್ ಗೌಡಹನುಮ ಜಯಂತಿ ಮೆರವಣಿಗೆಗೆ ಚಾಲನೆ ನೀಡಿದರು.ಗ್ರಾಮದ ಬೀದಿಗಳಲ್ಲಿ ಹನುಮ ಮೆರವಣಿಗೆ ಸಾಗಿತು.ಜೈ ಶ್ರೀರಾಮ್ ಜೈ ಶ್ರೀರಾಮ್ ಎಂಬ ಘೋಷಣೆ ಮುಗಿಲು ಮುಟ್ಟಿತು. ಕೇಸರಿ ಶಾಲು ಹಾಕಿ ಹನುಮ ಭಕ್ತರು ಕುಣಿದು ಸಂಭ್ರಮಿಸಿದರು.ಶಾಸಕ ಹರೀಶ್ ಗೌಡ ಶ್ರೀರಾಮ ಭಕ್ತರ ಜೊತೆ ಹೆಜ್ಜೆ ಹಾಕಿದರು.ಹನುಮ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು…
Read More