TV10 Kannada Exclusive

ಮತದಾನದಲ್ಲಿ ಯುವ ಮತದಾರರ ಮಹತ್ವ ಹೆಚ್ಚಿನದು -ಲಯನ್ ಸಿಆರ್ ದಿನೇಶ್ ಅಭಿಮತ

ಭಾರತದಂತಹ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ರಾಜಕೀಯ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಚಬೇಕು. ಯುವ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ ಉತ್ತೇಜಿಸುವ ಸಲುವಾಗಿ ಶಾಲಾ ಕಾಲೇಜುಗಳಲ್ಲಿ ಮತದಾನ ಸಾಕ್ಷರತಾ ಸಂಘಗಳನ್ನು ಸ್ಥಾಪಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಮತದಾನದ ಜಾಗೃತಿ ಮೂಡಿಸಬಹುದು ಎಂದು ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಲಯನ್ ಸಿ.ಆರ್ ದಿನೇಶ್ ರವರು ಅಭಿಮತ ವ್ಯಕ್ತಪಡಿಸಿದರು.ನಂಜನಗೂಡು ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಮತದಾನದ
Read More

ಭಾರತ ತಂಡದ ಗೆಲುವಿಗಾಗಿ ಬೈಕ್ ರಾಲಿ…

ಮೈಸೂರು,ನ19,Tv10 ಕನ್ನಡ ಆಸ್ಟ್ರೇಲಿಯ ವಿರುದ್ದ ಭಾರತ ತಂಡ ಜಯಭೇರಿ ಭಾರಿಸಿ ವಿಶ್ವಕಪ್ ತನ್ನ ಮುಡಿಗೇರಿಸಲೆಂದು ಹಾರೈಸಿ ಕ್ರಿಕೆಟ್ ಅಭಿಮಾನಿಗಳು ಇಂದು ಬೈಕ್ ರಾಲಿ ನಡೆಸಿ ಶುಭಕೋರಿದರು.ವಿದ್ಯಾರಣ್ಯಪುರಂ ನ ವಿವಿದ ರಸ್ತೆಗಳಲ್ಲಿ ಭಾರತದ ಧ್ವಜ ಪ್ರದರ್ಶಿಸುತ್ತಾ ಮೆರವಣಿಗೆಯಲ್ಲಿ ಸಾಗಿ ಬೆಸ್ಟ್ ಆಫ್ ಲಕ್ ಹೇಳಿದರು.50 ಕ್ಕೂ ಹೆಚ್ಚು ಬೈಕ್ ಸವಾರರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು…
Read More

ಮೈಸೂರು:ಇಬ್ಬರು ತಹಸೀಲ್ದಾರ್ ಗಳಿಗೆ ವರ್ಗಾವಣೆ…

ಮೈಸೂರು,ನ19,Tv10 ಕನ್ನಡ ಇಬ್ಬರು ತಹಸೀಲ್ದಾರ್ ಗಳಿಗೆ ವರ್ಗಾವಣೆಯಾಗಿದೆ. ಮೈಸೂರು ತಾಲೂಕು ತಹಸೀಲ್ದಾರ್ ಆಗಿ ಕೆ.ಎಂ.ಮಹೇಶ್ ಕುಮಾರ್ ರವರನ್ನ ನೇಮಕ ಮಾಡಲಾಗಿದೆ.ಈ ಹಿಂದೆ ಇವರು ಕೋಲಾರ ಜಿಲ್ಲೆಯ ಚುನಾವಣಾ ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.ಹಾಗೂ ಮೈಸೂರು ತಾಲೂಕು ತಹಸೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿ.ಎನ್.ಗಿರೀಶ್ ರವರನ್ನ ಮೈಸೂರು ಜಿಲ್ಲೆ ಚುನಾವಣಾ ತಹಸೀಲ್ದಾರ್ ಆಗಿ ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.ಮೈಸೂರು ತಾಲೂಕು ತಹಸೀಲ್ದಾರ್ ಆಗಿ ಕೆ.ಎಂ.ಮಹೇಶ್ ಕುಮಾರ್ ಅಧಿಕಾರ ಸ್ವೀಕಾರ ಮಾಡಿದ್ದಾರೆ…
Read More

ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವಕಪ್ 2023 ಫೈನಲ್…ಚಾಮುಂಡಿವಿಹಾರ ಕ್ರೀಡಾಂಗಣದಲ್ಲಿ ಪಂದ್ಯಾವಳಿಯ ನೇರಪ್ರಸಾರ…

ಮೈಸೂರು,ನ18,Tv10 ಕನ್ನಡ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ಮಧ್ಯೆ ಇಂದು ಮಧ್ಯಾಹ್ನ 2 ಗಂಟೆಗೆ ಆರಂಭವಾಗಲಿರುವ ವಿಶ್ವಕಪ್ 2023ರ ಫೈನಲ್ ಪಂದ್ಯಾವಳಿಯ ಉಚಿತ ನೇರ ಪ್ರಸಾರವನ್ನು ಉತ್ತಮವಾದ ಎಲ್ ಸಿ ಡಿ ಪರದೆ ಮತ್ತು ಸೌಂಡ್ ಸಿಸ್ಟಮ್ ನೊಂದಿಗೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ. ಸದರಿ ಕ್ರಿಕೆಟ್ ಪಂದ್ಯಾವಳಿಯ ವೀಕ್ಷಣೆಗೆ ಕ್ರೀಡಾಪಟುಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ…
Read More

ಇನ್ಸ್ಪೆಕ್ಟರ್ ಗಳ ವರ್ಗಾವಣೆ…ಪಿಐ ವಿವೇಕಾನಂದ ಟ್ರಾನ್ಫರ್…ವೈರಲ್ ಆದ ವಿಡಿಯೋದಲ್ಲಿ ವಿವೇಕಾನಂದ ಹೆಸರು ಪ್ರಸ್ತಾಪಿಸಿದ್ದ ಡಾ.ಯತೀಂದ್ರ ಸಿದ್ದರಾಮಯ್ಯ…

ಮೈಸೂರು,ನ18,Tv10 ಕನ್ನಡ ರಾಜ್ಯದಾದ್ಯಂತ ಪೊಲೀಸ್ ಇನ್ಸಪೆಕ್ಟರ್‌ಗಳ ವರ್ಗಾವಣೆಯಾಗಿದೆ.ಮೈಸೂರು ಜಿಲ್ಲೆಯಲ್ಲಿ ನಾಲ್ಕು ಇನ್ಸಪೆಕ್ಟರ್‌ಗಳ ವರ್ಗಾವಣೆಯಾಗಿದೆ.ಪೊಲೀಸ್ ಇನ್ಸಪೆಕ್ಟರ್ ವರ್ಗಾವಣೆಯಲ್ಲೂ ವಿವೇಕಾನಂದ ಹೆಸರು ಸದ್ದು ಮಾಡಿದೆ.ಮೈಸೂರು ವಿವಿ ಪುರಂ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದೆ. ವಿವೇಕಾನಂದರಾಜ್ಯ ಗುಪ್ತವಾರ್ತೆಗೆ ವರ್ಗಾವಣೆಗೊಂಡಿದ್ದರು.ಡಾ ಯತೀಂದ್ರ ಸಿದ್ದರಾಮಯ್ಯ ವೈರಲ್ ವಿಡಿಯೋದಲ್ಲಿ ವಿವೇಕಾನಂದ ಹೆಸರು ಪ್ರಸ್ತಾಪವಾಗಿತ್ತು.ವಿವೇಕಾನಂದನಾ ? ಎಲ್ಲಿಗೆ ? ಎಂದು ಪ್ರಶ್ನಿಸಿದ್ದರು.ರಾಜ್ಯಾದ್ಯಂತ ವಿಡಿಯೋ ಸಂಚಲನ ಮೂಡಿಸಿತ್ತು.ಇದು ವರ್ಗಾವಣೆಯ ಪಟ್ಟಿಯ ಮಾತುಕತೆ ಎಂದಿದ್ದ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ.ವಿಡಿಯೋದಲ್ಲಿ ನಾನು ಕೊಟ್ಟಿರುವ
Read More

ಮೈಸೂರು ಗ್ರಾಮಾಂತರ ಡಿವೈಎಸ್ಪಿ ಆಗಿ ಅಬ್ದುಲ್ ರಾವುತರ್ ನೇಮಕ…

ಮೈಸೂರು,ನ17,Tv10 ಕನ್ನಡ ಮೈಸೂರು ಗ್ರಾಮಾಂತರ ಉಪವಿಭಾಗ ಡಿವೈಎಸ್ಪಿ ಆಗಿ ಅಬ್ದುಲ್ ರಾವುತರ್ ರವರನ್ನ ನೇಮಕ ಮಾಡಲಾಗಿದೆ.ಪ್ರಸ್ತುತ ಸಿಐಡಿ ವಿಭಾಗದಲ್ಲಿ ಅಬ್ದುಲ್ ರಾವುತರ್ ಕರ್ತವ್ಯ ನಿರ್ವಹಿಸುತ್ತಿದ್ದರು…
Read More

ನಾಲ್ವಡಿ ಕೃಷ್ಣರಾಜ ಕನ್ವೆನ್ಷನ್ ಹಾಲ್ ಸೀಜ್…Tv10 ಕನ್ನಡ ವಾಹಿನಿ ವರದಿ ಎಫೆಕ್ಟ್…ಗುತ್ತಿಗೆ ಹಣ ಬಾಕಿ ಹಿನ್ನಲೆ ಮುಡಾದಿಂದ ಕ್ರಮ…

ಮೈಸೂರು,ನ16,Tv10 ಕನ್ನಡ 55 ಲಕ್ಷ ಗುತ್ತಿಗೆ ಹಣ ಬಾಕಿ ಇದ್ದರೂ ಎರಡು ವರ್ಷಕ್ಕೆ ಗುತ್ತಿಗೆ ನವೀಕರಿಸಿದ್ದ ನಾಲ್ವಡಿ ಕೃಷ್ಣರಾಜ ಕನ್ವೆನ್ಷನ್ ಹಾಲ್ ಗೆ ಮುಡಾ ಅಧಿಕಾರಿಗಳು ಬೀಗ ಜಡಿದು ಸೀಜ್ ಮಾಡಿದ್ದಾರೆ. ಗುತ್ತಿಗೆ ಹಣ ಬಾಕಿ ಉಳಿಸಿಕೊಂಡಿದ್ದರೂ ಕುಂಟು ನೆಪವೊಡ್ಡಿ ಗುತ್ತಿಗೆದಾರನಿಗೆ ಅನುಕೂಲ ಮಾಡಿಕೊಟ್ಟಿದ್ದ ಅಧಿಕಾರಿಗಳ ಬಣ್ಣವನ್ನ Tv10 ಕನ್ನಡ ವಾಹಿನಿ ವರದಿ ಮಾಡಿತ್ತು.ಈ ಸಂಭಂಧ ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರ ಮಾಹಿತಿ ಹಕ್ಕಿನ ಮೂಲಕ ದಾಖಲೆಗಳನ್ನ ಪಡೆದು ಅಧಿಕಾರಿಗಳ ಬಣ್ಣ ಬಯಲು
Read More

ಲಕ್ಷಾಂತರ ಗುತ್ತಿಗೆ ಹಣ ಬಾಕಿ ಇದ್ದರೂ ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ವೆನ್ಷನ್ ಹಾಲ್ ಗುತ್ತಿಗೆ ಕರಾರು ವಿಸ್ತರಣೆ…ಮುಡಾ ಅಧಿಕಾರಿಗಳ ಜಾಣ

ಮೈಸೂರು,ನ15,Tv10 ಕನ್ನಡ ಮುಡಾ ಅಧಿಕಾರಿಗಳ ಬೇಜವಾಬ್ದಾರಿತನದ ಬಗ್ಗೆ ಎಷ್ಟು ಬರೆದರೂ ಡೋಂಟ್ ಕೇರ್ ಅನ್ನೋ ಹಾಗೇ ಕಾಣ್ತಿದೆ.ಅಕ್ರಮಗಳನ್ನ ಬಯಲಿಗೆ ಎಳೆದಷ್ಟೂ ಮತ್ತಷ್ಟು ಅಕ್ರಮಗಳಲ್ಲಿ ಭಾಗಿಯಾಗುತ್ತಲೇ ಬರುತ್ತಿದ್ದಾರೆ.ಹೆಬ್ಬಾಳ್ ಬಡಾವಣೆ ಮುಖ್ಯರಸ್ತೆಯಲ್ಲಿ ನಿರ್ಮಿಸಲಾದ ಸುಸಜ್ಜಿತ ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ವೆನ್ಷನ್ ಹಾಲ್ ನ ಗುತ್ತಿಗೆದಾರನಿಗೆ ಅನುಕೂಲವಾಗುವಂತೆ ಅಧಿಕಾರಿಗಳು ಶಾಮೀಲಾಗಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.ಗುತ್ತಿಗೆದಾರನಿಂದ ಲಕ್ಷಾಂತರ ಗುತ್ತಿಗೆ ಹಣ ಬಾಕಿ ಇದ್ದರೂ ವಸೂಲಿ ಮಾಡದೆ ಕರಾರನ್ನ ಮತ್ತೆರಡು ವರ್ಷಕ್ಕೆ ನವೀಕರಿಸುವ ಮೂಲಕ ಸಾರ್ವಜನಿಕರ ತೆರಿಗೆ
Read More

ಮಹದೇಶ್ವರ ಬೆಟ್ಟದಲ್ಲಿ ಜಾತ್ರಾ ಮಹೋತ್ಸವ…ಹರಿದುಬಂದ ಭಕ್ತಸಾಗರ…

ಕೊಳ್ಳೆಗಾಲ,ನ14,Tv10 ಕನ್ನಡ ಮಲೈ ಮಹದೇಶ್ವರ ಬೆಟ್ಟದಲ್ಲಿ ಇಂದು ಅದ್ದೂರಿಯಾಗಿ ಜಾತ್ರಾ ಮಹೋತ್ಸವ ನೆರವೇರಿತು.ಮಾದಪ್ಪನ ಜಾತ್ರೆಯನ್ನ ಕಣ್ತುಂಬಿಕೊಳ್ಳಲು ನಾಡಿನ ಮೂಲೆ ಮೂಲೆಗಳಿಂದ ಭಕ್ತರು ಸಾಗರೋಪಾದಿಯಲ್ಲಿ ಹರಿದು ಬಂದರು.ಉಘೇ ಉಘೇ ಮಾದಪ್ಪ ಎಂಬ ಹರ್ಷೋದ್ಘಾರದೊಂದಿಗೆ ಭಕ್ತರು ಪೂಜಾ ಕೈಂಕರ್ಯಗಳಲ್ಲಿ ತಲ್ಲೀನರಾದರು.ದೀಪಾವಳಿ ಹಬ್ಬವಾದ ಇಂದು ನಡೆದ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾದ ಲಕ್ಷಾಂತರ ಭಕ್ತರು ಮಾದಪ್ಪನ ದರುಶನ ಪಡೆದು ಪುನೀತರಾದರು…
Read More

ಅನ್ನಭಾಗ್ಯ ಅಕ್ಕಿ ದುರುಪಯೋಗ ಆರೋಪ…ಅಪ್ರಾಪ್ತರ ಬಳಕೆ…

ಮೈಸೂರು,ನ14,Tv10 ಕನ್ನಡ ಸರ್ಕಾರದ ಅನ್ನಭಾಗ್ಯ ಯೋಜನೆ ದುರುಪಯೋಗವಾಗುತ್ತಿದೆ.ಸಿದ್ದರಾಮಯ್ಯ ತವರು ಜಿಲ್ಲೆಯಲ್ಲೇ ಬೆಳಕಿಗೆ ಬಂದಿದೆ.ದಂಧೆಕೋರರು ಮನೆ ಮನೆಗೆ ತೆರಳಿ ಅನ್ನಭಾಗ್ಯ ಅಕ್ಕಿ ಖರೀದಿ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.ಅಪ್ರಾಪ್ತರನ್ನ ಬಳಸಿಕೊಂಡು ದಂಧೆ ನಡೆಸುತ್ತಿದ್ದಾರೆ.15 ರಿಂದ 16 ರೂಪಾಯಿಗೆ ಅನ್ನಭಾಗ್ಯ ಅಕ್ಕಿ ಖರೀದಿ ಮಾಡಲಾಗುತ್ತಿದೆ.50 ರಿಂದ 60 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.ಮೈಸೂರಿನ ಎನ್ ಆರ್ ಮೊಹಲ್ಲಾ ಸೇರಿ ಹಲವು ಕಡೆ ದಂಧೆ ನಡೆಯುತ್ತಿದೆ.ಇದುವರೆಗೂ ಹಲವು ವಾಹನಗಳನ್ನ ಪೊಲೀಸರ ವಶಕ್ಕೆ ಪಡೆದಿದ್ದಾರೆ.ಆದರೂ ಅನ್ನಭಾಗ್ಯ ದಂಧೆಗೆ
Read More