TV10 Kannada Exclusive

ಹುಲಿ ದಾಳಿಗೆ ಎರಡು ಹಸುಗಳು ಬಲಿ…ಗ್ರಾಮಸ್ಥರಲ್ಲಿ ಭೀತಿ…

ಹುಣಸೂರು,ಡಿ6,Tv10 ಕನ್ನಡ ಹುಲಿ ದಾಳಿಗೆಎರಡು ಹಸುಗಳು ಬಲಿಯಾದ ಘಟನೆಹುಣಸೂರು ತಾಲ್ಲೂಕು ನೇಗತ್ತೂರು ಗ್ರಾಮದಲ್ಲಿ ನಡೆದಿದರ.ರೈತ ಆಕಾಶ್ ಎಂಬುವವರಿಗೆ ಸೇರಿದ ಹಸುಗಳು ಬಲಿಯಾಗಿವೆ.ನಾಗರಾಹೊಳೆ ಅಭಯಾರಣ್ಯದಿಂದ ಬಂದಿರುವ ಹುಲಿ ದಾಳಿ ನಡೆಸಿದೆ.ಗ್ರಾಮದ ಕೆರೆ ಬಳಿ ನೀರು ಕುಡಿಯುತ್ತಿದ್ದ ವೇಳೆಪೊದೆಯಿಂದ ಬಂದ ಹುಲಿ ಏಕಾಏಕಿ ದಾಳಿ ಮಾಡಿದೆ.ಸಮೀಪದಲ್ಲೇ ಇದ್ದ ಆಕಾಶ್ ದೂರ ಸರಿದು ತಪ್ಪಿಸಿಕೊಂಡಿದ್ದಾರೆ.ಘಟನೆಯಿಂದ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಮನೆಯಿಂದ ಹೊರ ಬರಲು ಭಯ ಪಡುತ್ತಿದ್ದಾರೆ.ಹುಲಿ ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ…
Read More

ರಾಜಾ ಕಾಲುವೆ ಮೇಲೆ ಬಂಬೂ ಬಿರಿಯಾನಿ ಹೋಟೆಲ್…ಕಣ್ಮುಚ್ಚಿ ಕುಳಿತ ಅಧಿಕಾರಿಗಳು…

ಮೈಸೂರು,ಡಿ5,Tv10 ಕನ್ನಡ ರಾಜಾಕಾಲುವೆ ಮೇಲೆ ಬಂಬೂ ಬಿರಿಯಾನಿ ಹೋಟೆಲ್ ತಲೆ ಎತ್ತಿದ್ದರೂ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ.ಮೈಸೂರಿನ ಗೋಕುಲಂ ಬಡಾವಣೆ ವಾರ್ಡ್ ನಂ 6 ನಿರ್ಮಲಾ ಕಾನ್ವೆಂಟ್ ಬಳಿ ಹೋಟೆಲ್ ನಿರ್ಮಾಣವಾಗಿದ್ದು ಪ್ರಾರಂಭಕ್ಕೆ ಸಜ್ಜಾಗಿದೆ.ದುರಂತವೆಂದರೆ ರಾಜಾ ಕಾಲುವೆ ಮೇಲೆ ಹೋಟೆಲ್ ನಿರ್ಮಾಣವಾಗಿದ್ದರೂ ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ 4 ರ ಯಾವುದೇ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ.ಈಗಾಗಲೇ ಕಟ್ಟಡದ ಮಾಲೀಕ ಬಾಡಿಗೆ ಫಿಕ್ಸ್ ಮಾಡಿ ಹೋಟೆಲ್ ನಡೆಸಲು ಅನುಮತಿ ನೀಡಿದ್ದಾನೆ.ಇಷ್ಟೆಲ್ಲಾ ಬೆಳವಣಿಗೆ
Read More

ದಸರಾ ಆನೆ ಅರ್ಜುನ ಸಾವು…ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಘಟನೆ…8 ವರ್ಷ ಅಂಬಾರಿಯನ್ನ ಹೊತ್ತು ಗಮನ ಸೆಳೆದಿದ್ದ ಅರ್ಜುನ ಇನ್ನಿಲ್ಲ…

ದಸರಾ ಆನೆ ಅರ್ಜುನ ಸಾವು…ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಘಟನೆ…8 ವರ್ಷ ಅಂಬಾರಿಯನ್ನ ಹೊತ್ತು ಗಮನ ಸೆಳೆದಿದ್ದ ಅರ್ಜುನ ಇನ್ನಿಲ್ಲ… ಹಾಸನ,ಡಿ4,Tv10 ಕನ್ನಡ ಎಂಟು ವರ್ಷಗಳ ಕಾಲ ನಾಡದೇವಿ ಚಾಮುಂಡೇಶ್ವರಿ ಇರುವ ಚಿನ್ನದ ಅಂಬಾರಿಯನ್ನ ಹೊತ್ತು ಸಾಗಿ ಲಕ್ಷಾಂತರ ಮಂದಿಯ ಕಣ್ಮಣಿಯಾಗಿದ್ದ ಅರ್ಜುನ ಸಾವನ್ನಪ್ಪಿದ್ದಾನೆ.ಕಾಡಾನೆ ಸೆರೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ವೇಳೆ ಪುಂಡಾನೆ ತಿವಿದ ಪರಿಣಾಮ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.ಈ ಬಾರಿ ದಸರಾದಲ್ಲಿ ಭಾಗವಹಿಸಿತ್ತು.ಅಭಿಮನ್ಯು ತಂಡದಲ್ಲಿ ಭಾಗವಹಿಸಿ ಗಮನ ಸೆಳೆದಿತ್ತು.ಇಂದು ಕಾಡಾನೆ ಸೆರೆ
Read More

ಹುಣಸೂರು ಪೊಲೀಸ್ ಸಿಬ್ಬಂದಿಗೆ ಯೋಗಾಭ್ಯಾಸ…ಆರೋಗ್ಯಕ್ಕೆ ಒತ್ತು…

ಹುಣಸೂರು,ಡಿ3,Tv10 ಕನ್ನಡ  ಕಾನೂನು ಮತ್ತು ಸುವ್ಯವಸ್ಥೆಯಲ್ಲೇ ನಿರತರಾಗಿ ಸಾರ್ವಜನಿಕರ ಸೇವೆಗೆ ಮುಡುಪಾದ ಪೊಲೀಸರಿಗೆ ಆರೋಗ್ಯಕ್ಕೆ ಒತ್ತು ನೀಡುವ ಕಾರ್ಯಕ್ರಮ ಹುಣಸೂರು ಪೊಲೀಸ್ ಠಾಣೆಯಲ್ಲಿ ಏರ್ಪಡಿಸಲಾಗಿತ್ತು.ಕರ್ತವ್ಯದ ವೇಳೆ ಸದಾ ಚಟುವಟಿಕೆಯಿಂದ ಇರಲು ಆರೋಗ್ಯ ಪ್ರಮುಖ ಸಾಧನ.ಈ ಹಿನ್ನಲೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಹಿನ್ನಲೆ ಹುಣಸೂರು ಠಾಣೆ ಪೊಲೀಸರಿಗೆ ಯೋಗ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಹುಣಸೂರು ಪೊಲೀಸ್ ಠಾಣೆ ಮುಂಭಾಗ ಇಂದು ಮುಂಜಾನೆ ಸೇರಿದ ಹುಣಸೂರು ಖಾಕಿ ಪಡೆ ಯೋಗಾಸನದಲ್ಲಿ ನಿರತವಾಯಿತು.ನುರಿತ ಯೋಗಪಟುವಿನ ಮಾರ್ಗದರ್ಶನದಲ್ಲಿ
Read More

ಭ್ರೂಣ ಹತ್ಯೆಯು ಸಮಾಜ ಘಾತುಕ ಕೆಲಸವಾಗಿದೆ: ನಾಗಣ್ಣಗೌಡ

ಮಂಡ್ಯ,ಡಿ, 01:-ಹೆಣ್ಣು ಭ್ರೂಣ ಹತ್ಯೆಯು ಸಮಾಜ ಘಾತುಕ ಕೆಲಸವಾಗಿದ್ದು, ಈ ರೀತಿಯ ಕೃತ್ಯಗಳಿಗೆ ಅವಕಾಶ ನೀಡಬಾರದು. ಕಾನೂನಿನ ಮೂಲಕ ಅಗತ್ಯ ಕ್ರಮ ತೆಗೆದುಕೊಂಡು ಈ ರೀತಿಯ ಕೃತ್ಯಗಳನ್ನು ತಡೆಯುತ್ತೇವೆ  ಎಂದು ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗದ ರಾಜ್ಯಾಧ್ಯಾಕ್ಷರಾದ ನಾಗಣ್ಣಗೌಡ ಅವರು ತಿಳಿಸಿದರು. ಅವರು ಇಂದು ಮಂಡ್ಯ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಹೆಣ್ಣು ಭ್ರೂಣ ಹತ್ಯೆ ಸಂಬಂಧಪಟ್ಟಂತೆ ತುರ್ತು ಸಭೆ ನಡೆಸಿ ಮಾತನಾಡಿದರು. 21ನೇ ಶತಮಾನದಲ್ಲೂ ಕೂಡ ಇಂತಹ ಭ್ರೂಣ
Read More

ಜಮೀನು ವಿಚಾರ…ಅಣ್ಣನ ಮಗನಿಂದ ಚಿಕ್ಕಪ್ಪನ ಕೊಲೆ…

ನಂಜನಗೂಡು,ನ30,Tv10 ಕನ್ನಡ ಜಮೀನಿನ ವಿಚಾರವಾಗಿ ಅಣ್ಣತಮ್ಮಂದಿರ ನಡುವೆ ಶುರುವಾದ ಜಗಳ ತಮ್ಮ ಕೊಲೆಯಲ್ಲಿ ಅಂತ್ಯವಾಗಿದೆ.ಅಣ್ಣನ‌ಮಗನೇ ಚಿಕ್ಕಪ್ಪನನ್ನ ಕೊಂದಿದ್ದಾನೆ.ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಮರಳ್ಳಿಪುರ ಗ್ರಾಮದಲ್ಲಿ ಘಟನೆ ನಡೆದಿದೆ.ಪರಶಿವಪ್ಪ(65) ಮೃತ ದುರ್ದೈವಿ.ಪರಶಿವಪ್ಪನ ಅಣ್ಣನ ಮಗ ಆದೀಶ್ ಕೊಂದ ಆರೋಪಿ.ಜಮೀನು ವಿಚಾರದಲ್ಲಿ ಪರಶಿವಪ್ಪ ಹಾಗೂ ಅಣ್ಣ ಪ್ರಭುಸ್ವಾಮಿ ನಡುವೆ ಗಲಾಟೆ ನಡೆದಿತ್ತು.ಈ ವೇಳೆ ಮಧ್ಯ ಪ್ರವೇಶಿಸಿದ ಪ್ರಭುಸ್ವಾಮಿ ಮಗ ಅದೀಶ್ ಚಿಕ್ಕಪ್ಪನಿಗೆ ಮೊಚ್ಚಿನಿಂದ ಹಲ್ಲೆ ನಡೆಸಿ ಕಾಲಿನಿಂದ ತುಳಿದುಹಾಕಿದ್ದಾನೆ.ತೀವ್ರವಾಗಿ ಗಾಯಗೊಂಡ ಪರಶಿವಪ್ಪರನ್ನ ಮೈಸೂರಿನ
Read More

ಮೈಸೂರು ವಿ.ವಿ ಪ್ರಾಧ್ಯಾಪಕಿ ವಿರುದ್ದ ಪಿಹೆಚ್ಡಿ ವಿಧ್ಯಾರ್ಥಿನಿಯಿಂದ ದೂರು…ಜಾತಿ ನಿಂದನೆ,ಮಾನಸಿಕ ಕಿರುಕುಳ ಆರೋಪ…

ಮೈಸೂರು,ನ30,Tv10 ಕನ್ನಡ ಮೈಸೂರು ವಿವಿ ಪ್ರಾಧ್ಯಾಪಕಿ ವಿರುದ್ದ ಪಿಎಚ್ಡಿ ವಿದ್ಯಾರ್ಥಿನಿಜಾತಿ ನಿಂದನೆ, ಮಾನಸಿಕ‌ ಕಿರುಕುಳ ಆರೋಪದ ಮೇಲೆ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಮಾನಸ ಗಂಗೋತ್ರಿ ಮೈಕ್ರೋ ಬಯೋಲಜಿ ವಿಭಾಗದ ಪ್ರಾಧ್ಯಾಪಕಿ ಪ್ರೊ. ಶುಭಾ ಗೋಪಲ್ ವಿರುದ್ದ ದೂರು ದಾಖಲಾಗಿದೆ.ಪ್ರೊ. ಶುಭಾ ಗೋಪಲ್ ಬಳಿ ಫೆಲೋಶಿಪ್ ಅಡಿಯಲ್ಲಿ ವಿಧ್ಯಾರ್ಥಿ ಪಿಎಚ್ಡಿ ಮಾಡುತ್ತಿದ್ದರು.ನನ್ನ ಮನೆಯ ಟಾಯ್ಲೆಟ್ ತೊಳೆಯಬೇಕು, ಕಾಲಿಗೆ ಚಪ್ಪಲಿ ಹಾಕಿಸಿಕೊಂಡು ಜಾತಿ ನಿಂದನೆ ಮಾಡುತ್ತಿದ್ದರೆಂದು ಆರೋಪ ಮಾಡಿದ್ದಾರದ.ಫೆಲೋಶಿಪ್ ಬಿಲ್‌ಗೆ ಸಹಿ
Read More

ಮೊಬೈಲ್ ವಿಚಾರದಲ್ಲಿ ತಂದೆ ಮಗನ ನಡುವೆ ಗಲಾಟೆ…ಮಗನ ಕೊಲೆಯಲ್ಲಿ ಅಂತ್ಯ…

ಮೈಸೂರು,ನ28,Tv10 ಕನ್ನಡ ಮೊಬೈಲ್ ವಿಚಾರದಲ್ಲಿ ತಂದೆ ಮಗನ ನಡುವೆ ಶುರುವಾದ ಗಲಾಟೆ ಮಗನ ಕೊಲೆಯಲ್ಲಿ ಅಂತ್ಯವಾದ ಘಟನೆ ಮೈಸೂರಿನ ಬನ್ನಿಮಂಟಪದಲ್ಲಿ ನಡೆದಿದೆ.ಉಮೇಜ್(23) ತಂದೆಯ ಕೈಯಿಂದಲೇ ಕೊಲೆಯಾದ ದುರ್ದೈವಿ.ಮಗನ ಕೊಂದ ತಂದೆ ಅಸ್ಲಂಪಾಷ ಇದೀಗ ಪೊಲೀಸರ ಅತಿಥಿ.ತಾಯಿಯ ಮೊಬೈಲ್ ನ ಅನುಮತಿ ಪಡೆಯದೇ ಉವೇಜ್ ಬಳಸಿದ್ದಾನೆ.ಈ ವಿಚಾರದಲ್ಲಿ ತಂದೆ ಮಗನ ನಡುವೆ ಗಲಾಟೆ ಶುರುವಾಗಿದೆ.ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.ಅಸ್ಲಂಪಾಷ ಚಾಕುವಿನಿಂದ ಮಗ ಉವೇಜ್ ಗೆ ಇರಿದು ಕೊಂದಿದ್ದಾನೆ.ಕ್ಷುಲ್ಲಕ ಕಾರಣಕ್ಕೆ ಮಗನನ್ನು ಕೊಂದ ತಂದೆ
Read More

ವಾರ್ಡ್ ನಂ 59 ರಲ್ಲಿ ಶಾಸಕ ಶ್ರೀವತ್ಸ ಪಾದಯಾತ್ರೆ…ಖಾಲಿ ನಿವೇಶನಗಳ ಸ್ವಚ್ಚತೆಗೆ ಸೂಚನೆ…

ಮೈಸೂರು,ನ28,Tv10 ಕನ್ನಡ ಇಂದು ಕುವೆಂಪುನಗರದ ವಾರ್ಡ್ ನಂಬರ್ 59 ರ ವ್ಯಾಪ್ತಿಯ ಕುವೆಂಪುನಗರ ಬಸ್ ಡಿಪೋ,ಕುವೆಂಪುನಗರ ಎಂ.ಬ್ಲಾಕ್, ೨ ನೇ ಹಂತ, ಸುತ್ತಮುತ್ತಲಿನ ಪ್ರದೇಶದಲ್ಲಿ ಕೆ.ಅರ್.ಕ್ಷೇತ್ರದ ಶಾಸಕ ಟಿ.ಎಸ್. ಶ್ರೀ ವತ್ಸ ಪಾದಯಾತ್ರೆ ಕೈಗೊಂಡು ಸ್ಥಳೀಯರ ಸಮಸ್ಯೆಗಳನ್ನ ಪರಿಹರಿಸುವ ಪ್ರಯತ್ನ ನಡೆಸಿದರು.ಪಾದಯಾತ್ರೆ ಯ ವೇಳೆ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಹಾಜರಿದ್ದರು.ಪಾದಯಾತ್ರೆ ವೇಳೆ ಸಾರ್ವಜನಿಕರ ಕುಡಿಯುವ ನೀರಿನ ಸಮಸ್ಯೆ, ಒಳ ಚರಂಡಿ,ಖಾಲಿ ನಿವೇಶನ ಗಳ ಸ್ವಚ್ಚತೆ,ಬೀದಿ ದೀಪಗಳ ಅಳವಡಿಕೆ,ಬೀದಿ,ಪಾರ್ಕ್ ನ
Read More

ಕ್ರೈಂ ಡೈರಿ ಖ್ಯಾತಿಯ ಪತ್ರಕರ್ತ ರಾ. ಪ್ರವೀಣ್ ಇನ್ನಿಲ್ಲ.

ಶ್ವಾಸಕೋಶದ ಸೋಂಕಿಗೆ ಒಳಗಾಗಿ ಕಳೆದ 16 ರಂದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ರಾ. ಪ್ರವೀಣ್, ಚಿಕಿತ್ಸೆ ಫಲಿಸದೆ ಇಂದು ಬೆಳಗಿನ ಜಾವ 6 ಗಂಟೆಗೆ ನಿಧನರಾದರು. ಅವರಿಗೆ 55 ವರ್ಷ ವಯಸ್ಸಾಗಿತ್ತು. ಪತ್ನಿ ಕೋಮಲ, ಮಗ ತನೀಶ್ ಮತ್ತು ಬಂಧು ಬಳಗವನ್ನು ಅವರು ಅಗಲಿದ್ದಾರೆ. ಅವರ ಅಂತ್ಯಕ್ರಿಯೆ ಇಂದು ಅವರ ಹುಟ್ಟೂರಾದ ಆನೇಕಲ್ ನಲ್ಲಿ ನಡೆಯಲಿದೆ ಎಂದುಕುಟುಂಬಸ್ಥರು ತಿಳಿಸಿದ್ದಾರೆ. ಮೂಲತಃ ಆನೇಕಲ್ ನವರಾದ,ಶ್ರೀರಾಮ್ ಪುರ ವಾಸಿ ರಾ. ಪ್ರವೀಣ್ ಅಣ್ಣಾವ್ರ
Read More