TV10 Kannada Exclusive

ಗಾಳಿಪಟ ಹಾರಿಸಿ ಸಂಭ್ರಮಿಸಿದ ಶಾಸಕ ಶ್ರೀವತ್ಸ…ಆರ್ಯವೈಶ್ಯ ಸಮುದಾಯದ ಕೈಟ್ ಫೆಸ್ಟಿವಲ್ ನಲ್ಲಿ ಭಾಗಿ…

ಮೈಸೂರು,ಜು30,Tv10 ಕನ್ನಡ ರಾಜಕೀಯ ಜಂಜಾಟವನ್ನ ಮರೆತ ಕೆ.ಆರ್.ಕ್ಷೇತ್ರದ ಬಿಜೆಪಿ ಶಾಸಕ ಶ್ರೀವತ್ಸ ಇಂದು ಬಾಲ್ಯದ ದಿನಗಳನ್ನ ನೆನೆದು ಸವಿದರು.ದಸರಾ ವಸ್ತುಪ್ರದರ್ಶನ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಆರ್ಯವೈಶ್ಯ ಸಮುದಾಯದ ಗಾಳಿಪಟದ ಹಬ್ಬದಲ್ಲಿ ಭಾಗಿಯಾಗುವ ಮೂಲಕ ತಮ್ಮ ಬಾಲ್ಯದ ದಿನಗಳನ್ನ ನೆನೆದರು.ಚಿಣ್ಣರಂತೆ ಗಾಳಿಪಟ ಹಾರಿಸಿ ಸಂಭ್ರಮಿಸಿದರು. ಆರ್ಯವೈಶ್ಯ ಸಮುದಾಯದವರು ಹಮ್ಮಿಕೊಂಡಿದ್ದ ಗಾಳಿಪಟ ಹಬ್ಬ ಹಾಗೂ ಸಂತೋಷ ಕೂಟದಲ್ಲಿ ಭಾಗಿಯಾಗಿದ್ದರು.ರಾಜಕೀಯ ಒತ್ತಡಗಳನ್ನ ಬದಿಗಿಟ್ಟು ಗಾಳಿಪಟ ಹಾರಿಸಿ ಖುಷಿಪಟ್ಟರು.ಸಂತೋಷಕೂಟದ ಹಿನ್ನಲೆ ಆಯೋಜಿಸಲಾಗಿದ್ದ ಪೊಲೀಸ್ ಬ್ಯಾಂಡ್ ನ ಸಂಗೀತಕ್ಕೆ
Read More

ಜಿ-20 ಶೃಂಗಸಭೆ ಭಾಗವಹಿಸುವ ವಿದೇಶಿ ಗಣ್ಯರ ಭೇಟಿ ಹಿನ್ನಲೆ…ಅರಮನೆ ಪ್ರವೇಶ ನಿರ್ಭಂಧ…

ಮೈಸೂರು,ಜು30,Tv10 ಕನ್ನಡಜಿ-20 ಶೃಂಗಸಭೆಯಲ್ಲಿ ಭಾಗವಹಿಸುವ ವಿದೇಶಿ ಗಣ್ಯರು ಅರಮನೆಗೆ ಭೇಟಿ ನೀಡುವ ಹಿನ್ನಲೆಅಗತ್ಯ ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ. ಪ್ರವಾಸಿಗರ ಪ್ರವೇಶಕ್ಕೆ‌ನಿರ್ಬಂಧ ವಿಧಿಸಲಾಗಿದೆ. ಅರಮನೆ ಆಡಳಿತ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಭ್ರಹ್ಮಣ್ಯಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.ಆ 01/08/2023 ರಂದು ಮಧ್ಯಾಹ್ನ 2.30 ರಿಂದ ಮೈಸೂರು ಅರಮನೆಗೆ ನಿರ್ಬಂಧ ವಿಧಿಸಲಾಗಿದೆ.ಆ 02/08/2023 ರಂದು ರಾತ್ರಿ 7 ರಿಂದ 8 ರವರೆಗೆ ನಡೆಯುವ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ವೀಕ್ಷಣೆಗೂ ನಿರ್ಬಂಧ ವಿಧಿಸಲಾಗಿದೆ…
Read More

ಸಚಿವರಿಂದ ವೈಯಕ್ತಿಕ ಪರಿಹಾರ ವಿತರಣೆ

ನಾಲೆಗಳ ಬಳಿ ಅಪಘಾತ ಸ್ಥಳಗಳನ್ನು ಗುರುತಿಸಿ ತಡೆಗೋಡೆ ನಿರ್ಮಿಸಲು ರೈತರು, ಶಾಸಕರು, ಸಂಘಟನೆಗಳು ಒಟ್ಟಾಗಿ ಸೇರಿ ಚಿಂತಿಸಬೇಕಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ತಿಳಿಸಿದರು ಅವರು ಇಂದು ಮಿಮ್ಸ್ ನಲ್ಲಿ ಶ್ರೀರಂಗಪಟ್ಟಣ ತಾಲ್ಲೂಕಿನ ಗಾಮನಹಳ್ಳಿ ಬಳಿ‌ ಇರುವ ನಾಲೆಗೆ ಕಾರು ಪಲ್ಟಿ ಒಡೆದು ಮೃತಪಟ್ಟವರ ಅಂತಿಮ ದರ್ಶನ ಪಡೆದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಕುಟುಂಬಸ್ಥರಿಗೆ ವೈಯಕ್ತಿಕವಾಗಿ 50,000/- ರೂ ಪರಿಹಾರ ನೀಡಿ ಮಾತನಾಡಿದರು.
Read More

ಮೊಹರಂ:ಅಲಿ ದೇವರು ಹೊತ್ತಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು…

ಗದಗ,ಜು30,Tv10 ಕನ್ನಡ ಮೊಹರಂ ಸಂಭ್ರಮಾಚರಣೆ ವೇಳೆ ಅಲಿ ದೇವರು ಹೊತ್ತಿದ್ದ ವ್ಯಕ್ತಿ ಹೃದಯಘಾತದಿಂದ ಸಾವನ್ನಪ್ಪಿದ ಘಟನೆ ಗದಗ ತಾಲೂಕಿನ ಹರ್ಲಾಪುರ ಗ್ರಾಮದಲ್ಲಿ ನಡೆದಿದೆ.ಶರೀಫ್ ಮೂಲಿಮನಿ (40) ಮೃತ ವ್ಯಕ್ತಿ.ಸಂಭ್ರಮದಲ್ಲಿದ್ದ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ…
Read More

ರಾಕೇಶ್ ಸಿದ್ದರಾಮಯ್ಯ ಪುಣ್ಯಸ್ಮರಣೆ…ಸಮಾಧಿಗೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ…

ಮೈಸೂರು,ಜು29,Tv10 ಕನ್ನಡ ಸಿಎಂ ಸಿದ್ದರಾಮಯ್ಯ ರವರ ಹಿರಿಯ ಪುತ್ರ ರಾಕೇಶ್ ಸಿದ್ದರಾಮಯ್ಯ ಪುಣ್ಯಸ್ಮರಣೆ.ಮೈಸೂರಿನ ಟಿ.ಕಾಟೂರಿನ ತೋಟದ ಮನೆಯಲ್ಲಿ ನಿರ್ಮಿಸಲಾದ ರಾಕೇಶ್ ಸಿದ್ದರಾಮಯ್ಯ ಸಮಾಧಿಗೆ ಸಿದ್ದರಾಮಯ್ಯ ಕುಟುಂಬ ಸಮೇತ ಪೂಜೆ ಸಲ್ಲಿಸಿದರು.ಪ್ರತಿ ವರ್ಷ ಇಲ್ಲಿಗೆ ಆಗಮಿಸಿ ಪೂಜೆ ಸಲ್ಲಿಸುವ ಸಿಎಂ ಸಿದ್ದರಾಮಯ್ಯ…
Read More

ಹಬ್ಬ ಅಂದಮೇಲೆ ಕಷ್ಟವೋ ಸುಖವೋ ಮರಿಯಂತೂ ಹೊಡೆಯುತ್ತೇವೆ…ದಸರಾ ಆಚರಣೆ ಬಗ್ಗೆ ಜಿಲ್ಲಾ ಉಸ್ತುವಾರಿ ಹೇಳಿಕೆ…

ಮೈಸೂರು,ಜು29,Tv10 ಕನ್ನಡ ದಸರಾ ಮಹೋತ್ಸವ ಈ ಬಾರಿ ಅದ್ಧೂರಿಯಾಗಿ ನಡೆಯುತ್ತಾ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಪ್ರತಿಕ್ರಿಯಿಸಿದ್ದಾರೆ.ಹಬ್ಬಕ್ಕೆ ನೆಂಟರಿಷ್ಟರನ್ನು ಕರೆದು ಅರ್ಧ ಊಟ ಮಾಡಿ ಎಂದು ಹೇಳಲು ಸಾಧ್ಯನಾ?ಕಷ್ಟವೋ ಸುಖವೋ ಮರಿಯಂತು ಹೊಡೆಯುತ್ತೇವೆ ಅಲ್ವಾ.ದಸರಾ ಮಹೋತ್ಸವವನ್ನೂ ಹಾಗೆ ಎಲ್ಲರನ್ನು ಕರೆದು ಅದ್ದೂರಿಯಾಗಿಯೇ ಮಾಡೋಣ.ಕೋವಿಡ್ ನಿಂದ ಜನ ತತ್ತರಿಸಿ ಹೋಗಿದ್ದರು.ಈಗ ಎಲ್ಲವೂ ಸುಭೀಕ್ಷವಾಗಿ ನಡೆಯುತ್ತಿದೆ.ಹೊಸ ಸರ್ಕಾರ ಬಂದಿದೆ, ಮಳೆಯಾಗಿದೆ.ಎಲ್ಲರೂ ಮನ ಬಿಚ್ಚಿ ಉತ್ತಮ ದಸರಾ ಮಾಡೋಣ.ಮೈಸೂರಿನ
Read More

ಎಸ್.ಸಿ, ಎಸ್.ಟಿ.ಹಾಗೂ ಹಿಂದುಳಿದ ವರ್ಗಗಳ ರಾಜ್ಯ ಮುಖಂಡರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ…

ಬೆಂಗಳೂರು,ಜು28,Tv10 ಕನ್ನಡಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ರಾಜ್ಯದ ಎಸ್.ಸಿ, ಎಸ್.ಟಿ ಮತ್ತು ಹಿಂದುಳಿದ ವರ್ಗಗಳ ಅಲೆಮಾರಿ, ಅರೆ ಅಲೆಮಾರಿ, ವಿಮುಕ್ತ ಬುಡಕಟ್ಟು ಸಂಘಟನೆಗಳ ಸಮನ್ವಯ ಸಮಿತಿಯ ರಾಜ್ಯ ಮುಖಂಡರು ಅಲೆಮಾರಿ ಜನರ ಕುಂದುಕೊರತೆಗಳ ಕುರಿತು ಸಭೆ ನಡೆಸಿ ಚರ್ಚಿಸಿದರು.ಸಚಿವರಾದ ಭೈರತಿ ಸುರೇಶ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಶಾಸಕ ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯ ಅನಿಲ್ ಕುಮಾರ್, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಹಿರಿಯ
Read More

ಮೈಸೂರು ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕರಾಗಿ ಮ.ವಿ. ರಾಮಪ್ರಸಾದ್ ನೇಮಕ…

ಮೈಸೂರು,ಜು28,Tv10 ಕನ್ನಡ 55 ನೇ ವಾರ್ಡ್ ನ ಕಾರ್ಪೊರೇಟರ್ ಮ.ವಿ.ರಾಂಪ್ರಸಾದ್ ರವರನ್ನ ಮೈಸೂರು ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕರಾಗಿ ನೇಮಕ ಮಾಡಲಾಗಿದೆ.ಇಂದು ನಡೆದ ಮೈಸೂರು ಮಹಾನಗರ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಮಹಾಪೌರರು ಘೋಷಿಸಿದ್ದಾರೆ.ನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಪಕ್ಷವಾಗಿರುವುದರಿಂದ ಆ ಪಕ್ಷದ ಅಧ್ಯಕ್ಷರು ಹಾಗೂ ಶಾಸಕರಾದ ಟಿ ಎಸ್ ಶ್ರೀವತ್ಸ ರವರು ಮಹಾಪೌರರಿಗೆ ಪತ್ರ ಬರೆದು ಮ ವಿ ರಾಮಪ್ರಸಾದ್ ಅವರನ್ನು ಆಡಳಿತ ಪಕ್ಷದ ನಾಯಕರಾಗಿ ಮಾಡಬೇಕೆಂದು ತಿಳಿಸಿರುವ
Read More

ಅಂಗನವಾಡಿ ಕಟ್ಟಡ ಪೂರ್ಣಗೊಳಿಸಲು ಒತ್ತು…ಅಧಿಕಾರಿಗಳೊಂದಿಗೆ ಜಿ.ಪಂ.ಸಿಇಓ ವಿಡಿಯೋ ಸಂವಾದ…

ಮೈಸೂರು,ಜು28,Tv10 ಕನ್ನಡ ಇಂದು ಜಿಲ್ಲಾ ಪಂಚಾಯತ್ ನ ಮಿನಿ ಸಭಾಂಗಣದಲ್ಲಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿಗಳಾದ ಕೆ.ಎಂ ಗಾಯಿತ್ರಿ ರವರ ಅಧ್ಯಕ್ಷತೆಯಲ್ಲಿ ಅಂಗನವಾಡಿ ಕಟ್ಟಡವನ್ನು ಶೀಘ್ರವಾಗಿ ಪೂರ್ಣಗೊಳಿಸುವ ಕುರಿತು ಹಾಗೂ ಗ್ರಂಥಾಲಯದ ಕುರಿತು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ಆಯ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ವಿಡಿಯೋ ಸಂವಾದ ನಡೆಸಿದರು.ಶೀಘ್ರದಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವ ಕುರಿತಂತೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಕೆಲವು ಸಲಹೆಗಳನ್ನ ನೀಡಿದರು…
Read More

ಮಳೆ ಎಫೆಕ್ಟ್…ನಾಗರಹೊಳೆ ಸಫಾರಿ ತಾತ್ಕಾಲಿಕ ಬಂದ್…

ಮೈಸೂರು,ಜು28,Tv10 ಕನ್ನಡ ಹೆಚ್.ಡಿ.ಕೋಟೆ ಭಾಗದಲ್ಲಿ ಮಳೆ ಪ್ರಮಾಣ ಹೆಚ್ಚಾದ ಹಿನ್ನಲೆ ನಾಗರಹೊಳೆ ಸಫಾರಿ ತಾತ್ಕಾಲಿಕ ಬಂದ್ ಮಾಡಲಾಗಿದೆ.ಸಫಾರಿ ರಸ್ತೆ ಮಣ್ಣಿನಿಂದ ಕೂಡಿದ್ದು ಜಾರುವ ಸಾಧ್ಯತೆ.ಮರಗಳು ರಸ್ತೆಗೆ ಅಡ್ಡಲಾಗಿ ಬೀಳುವ ಸಂಭವ ಇದೆ ಹೀಗಾಗಿಪ್ರಾವಾಸಿಗರ ಹಿತದೃಷ್ಟಿಯಿಂದ ತಾತ್ಕಾಲಿಕ ಬಂದ್ ಗೆ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಧಾರಿಸಿದ್ದಾರೆ.ಜುಲೈ 31 ರವರಗೆ ಸಫಾರಿ ಬಂದ್ ಮಾಡಲಾಗಿದೆ.ಮುಂಗಡ ಬುಕ್ಕಿಂಗ್ ರದ್ದು ಮಾಡಿ ಮುಂದಿನ ಆದೇಶದ ವರಗೆ ಸಫಾರಿ ಸೇವೆ ನಿರ್ಬಂಧ ವಿಧಿಸಲಾಗಿದೆ.ನಾಗರಹೊಳೆ ವಲಯಾಧಿಕಾರಿಗಳಿಂದ ಪ್ರಕಟಣೆ ಹೊರಡಿಸಲಾಗಿದೆ…
Read More