TV10 Kannada Exclusive

ಮದುವೆ ಆಗುವಂತೆ ಇನ್ಫೋಸಿಸ್ ಉದ್ಯೋಗಿಗೆ ಟಾರ್ಚರ್…ಮನೆಗೆ ನುಗ್ಗಿ ರಂಪಾಟ,ಕೊಲೆ ಬೆದರಿಕೆ…ಯುವಕನ ವಿರುದ್ದ FIR ದಾಖಲು

ಮೈಸೂರು,ಡಿ9,Tv10 ಕನ್ನಡ ಮದುವೆ ಆಗುವಂತೆ ಒತ್ತಾಯಿಸಿದ ಯುವಕನೊಬ್ಬ ಇನ್ಫೋಸಿಸ್ ಉದ್ಯೋಗಿಯ ಮನೆಗೆ ನುಗ್ಗಿ ಹಲ್ಲೆ ನಡೆಸಿ ರಂಪಾಟ ಮಾಡಿ ಕೊಲೆ ಬೆದರಿಕೆ ಹಾಕಿದ ಘಟನೆ ಮೈಸೂರಿನ ಮೇಟಗಳ್ಳಿ ಠಾಣೆ ವ್ಯಾಪ್ತಿಯ ಸುಭಾಷ್ ನಗರದಲ್ಲಿ ನಡೆದಿದೆ.ಟಾರ್ಚರ್ ನೀಡಿ ಹಲ್ಲೆ ನಡೆಸಿದ ಯುವಕನ ವಿರುದ್ದ ಇನ್ಫೋಸಿಸ್ ಉದ್ಯೋಗಿ ಕಾನೂನು ಕ್ರಮ ಕೈಗೊಳ್ಳುವಂತೆ FIR ದಾಖಲಿಸಿದ್ದಾರೆ. ಇನ್ಫೋಸಿಸ್ ನಲ್ಲಿ ಟೆಕ್ನಿಕಲ್ ಸಪೋರ್ಟ್ ಸ್ಪೆಷಲಿಸ್ಟ್ ಆಗಿ ಕೆಲಸ ಮಾಡುತ್ತಿರುವ ಇಂದು ಎಂಬುವರು ಮೇಟಗಳ್ಳಿ ಠಾಣೆಯಲ್ಲಿ ಪ್ರಕರಣ
Read More

ನಾಳೆಯಿಂದ ನಗರದಲ್ಲಿ ಎರಡು ದಿನಗಳ ಕಾಲ ನೀರು ಸರಬರಾಜಿನಲ್ಲಿ ವೆತ್ಯಯ..ಯಾವ್ಯಾವ ಪ್ರದೇಶಗಳು…? ವಿವರ ಇಲ್ಲಿದೆ…

ಮೈಸೂರು,ಡಿ8,Tv10 ಕನ್ನಡ ಡಿಸೆಂಬರ್ 9 ಹಾಗೂ 10 ರಂದು ಮೈಸೂರಿನ ಕೆಲ ಭಾಗಗಳಲ್ಲಿ ನೀರು ಸರಬರಾಜು ವೆತ್ಯಯ ಆಗಲಿದೆ ಎಂದು ವಾಣಿ ವಿಲಾಸ ನೀರು ಸರಬರಾಜು ಕೇಂದ್ರದ ವತಿಯಿಂದ ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿದೆ.ಹೊಂಗಳ್ಳಿ 2 ಮತ್ತು 3 ನೇ ಹಂತ ಯಂತ್ರಾಗಾರಕ್ಕೆ ವಿದ್ಯುತ್ ಸರಬರಾಜು ಮಾಡುವ ಬೆಳಗೋಳಾ ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಹಮ್ಮಿಕೊಂಡಿರುವ ಹಿನ್ನಲೆ ನೀರು ಸರಬರಾಜಿನಲ್ಲಿ ವೆತ್ಯಯವಾಗಲಿದೆ.ವಾರ್ಡ್ 1 ರಿಂದ 7ನೇ ವಾರ್ಡ್ ,20,23,38,42 ರಿಂದ 45,ಹಾಗೂ
Read More

ಮೈಸೂರು-ಬೆಂಗಳೂರು ಹೆದ್ದಾರಿ ರಿಂಗ್ ರಸ್ತೆ ಜಂಕ್ಷನ್ ಬಳಿ ಫ್ಲೈ ಓವರ್ ನಿರ್ಮಾಣಕ್ಕೆ ಅಸ್ತು…ಶೀಘ್ರದಲ್ಲೇ ಟಿಂಡರ್ ಪ್ರಕ್ರಿಯೆ…ಸಂಸದ ಯದುವೀರ್…

ಮೈಸೂರು,ಡಿ7,Tv10 ಕನ್ನಡ ಮೈಸೂರು-ಬೆಂಗಳೂರು ಹೈವೇಯ ಕೆಂಪೇಗೌಡ ವೃತ್ತದ ಬಳಿ (ಮಣಿಪಾಲ್ ಆಸ್ಪತ್ರೆ ಬಳಿ) ಫ್ಲೈ ಓವರ್ ನಿರ್ಮಾಣಕ್ಕೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅನುಮೋದನೆ ನೀಡಿದ್ದಾರೆ.ಶೀಘ್ರದಲ್ಲೇ ಇದಕ್ಕೆ ಟೆಂಡರ್ ಕರೆಯಲಾಗುವುದು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಮೈಸೂರು-ಬೆಂಗಳೂರು ಹೈವೇಯಲ್ಲಿ ಬರುವ ಪ್ರಮುಖ ಪಟ್ಟಣಗಳಿಗೆ ಹೋಗಲು ಟೋಲ್ ವ್ಯವಸ್ಥೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ.ಹೈವೇಯ ಎರಡು ಕಡೆ ಅಂಡರ್ ಪಾಸ್ ನಿರ್ಮಾಣ ಮಾಡಲಾಗುತ್ತದೆ.ಸುಮಾರು 711 ಕೋಟಿ ಅಂದಾಜು
Read More

ಸಾಲದ ಹಣಕ್ಕಾಗಿ ಸಹದ್ಯೋಗಿಯಿಂದ ಕಿರುಕುಳ…ನಾಲೆಯಲ್ಲಿ KSRTC ಬಸ್ ಕಂಡಕ್ಟರ್ ಶವ ಪತ್ತೆ…ಕೊಲೆಯೋ…? ಆತ್ಮಹತ್ಯೆಯೋ…?

ಮೈಸೂರು,ಡಿ7,Tv10 ಕನ್ನಡ ಸಲದ ಹಣ ವಸೂಲಿಗಾಗಿ ಸಹದ್ಯೋಗಿ ನೀಡಿದ ಕಿರುಕುಳಕ್ಕೆ ಬೇಸತ್ತ ಕೆ.ಎಸ್.ಆರ್.ಟಿ.ಸಿ.ಬಸ್ ಕಂಡಕ್ಟರ್ ಮನೆ ಬಿಟ್ಟ ಹತ್ತು ದಿನಗಳ ನಂತರ ವರುಣಾ ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.ಬಸ್ ಕಂಡಕ್ಟರ್ ಸಾವಿನ ಸುತ್ತ ಅನುಮಾನದ ಹುತ್ತ ನಿರ್ಮಾಣವಾಗಿದೆ.ಸಾವು ಆತ್ಮಹತ್ಯೆಯೋ..? ಕೊಲೆಯೋ…? ಪೊಲೀಸರ ತೆನಿಖೆಯಲ್ಲಿ ಖಚಿತವಾಗಬೇಕಿದೆ. ಕುವೆಂಪುನಗರ ಬಸ್ ಡಿಪೋದಲ್ಲಿ ಕಂಡಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಕಾಂತ ಯಲ್ಲಪ್ಪ ಅನುಮಾನಾಸ್ಪದವಾಗಿ ಮೃತಪಟ್ಟವರು.ಸಧ್ಯ ಈತನ ಸಾವಿಗೆ ಕಾರಣವಾಗಿರುವ ಸಹದ್ಯೋಗಿ ಗುರುರಾಜ ಉಪಾಸ ಹಾಗೂ ಇವರ
Read More

ಪತಿಯ ಹಣ ವಸೂಲಿಗಾಗಿ ಲೇಡಿ ಡಾನ್ ಆದ ಪತ್ನಿ…ಖಾಸಗಿ ಕಂಪನಿ ಮುಖ್ಯಸ್ಥನಿಗೆ ಪ್ರಾಣ ಬೆದರಿಕೆ…ಕಚೇರಿಗೆ ನುಗ್ಗಿ ಆವಾಜ್…

ಮೈಸೂರು,ಡಿ7,Tv10 ಕನ್ನಡ ಗಂಡನ ಹಣ ವಸೂಲಿ ಮಾಡಲು ಹಿಂದೆ ವ್ಯವಹಾರ ನಡೆಸುತ್ತಿದ್ದ ಕಂಪನಿ ಕಚೇರಿಗೆ ಸಹಚರರ ಜೊತೆ ನುಗ್ಗಿದ ಪತ್ನಿ ಲೇಡಿ ಡಾನ್ ನಂತೆ ವರ್ತಿಸಿ ಕೊಲೆ ಬೆದರಿಕೆ ಹಾಕಿ ಕಚೇರಿ ಧ್ವಂಸ ಮಾಡುವುದಾಗಿ ಆವಾಜ್ ಹಾಕಿ ನೌಕರರಿಗೆ ಕಿರುಕುಳ ನೀಡಿದ ಘಟನೆ ಸರಸ್ವತಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಪಿರಿಯಾಪಟ್ಟಣ ತಾಲೂಕು ಲಕ್ಷ್ಮೀಪುರ ಗ್ರಾಮದ ನಿವಾಸಿ ಸುಮಿತ್ರ ಲೇಡಿ ಡಾನ್ ನಂತೆ ವರ್ತಿಸಿದ ಮಹಿಳೆ.ಸಧ್ಯ ಸುಮಿತ್ರಳ ಆವಾಜ್ ಗೆ ಹೆದರಿದ
Read More

ಕ್ಷುಲ್ಲಕ ವಿಚಾರಕ್ಕೆ ಸ್ನೇಹಿತರ ನಡುವೆ ಜಗಳ…ಓರ್ವನ ಕೊಲೆಯಲ್ಲಿ ಅಂತ್ಯ…

ಮೈಸೂರು,ಡಿ7,Tv10 ಕನ್ನಡ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಶುರುವಾದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಬೀಡಿ ಕಾಲೋನಿಯಲ್ಲಿ ನಡೆದಿದೆ.ಮುದಾಸಿರ್ ಪಾಷಾ(38) ಮೃತ ದುರ್ದೈವಿ.ರಿಜ್ವಾನ್ ಕೊಲೆ ಮಾಡಿದ ಸ್ನೇಹಿತ.ಇಬ್ಬರು ಕೂಲಿ ಕೆಲಸ ಮಾಡಿ ಕೆಸಿಬಿ ಸಮುದಾಯದ ಭವನದ ಬಳಿ ಮಲಗಿದ್ದರು.ನಿನ್ನೆ ರಾತ್ರಿ ಕ್ಷುಲ್ಲಕ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಆಗಿದೆ.ಈ ವೇಳೆ ಸಿಮೆಂಟ್ ಇಟ್ಟಿಗೆಯಿಂದ ರಿಜ್ವಾನ್ ತನ್ನ ಸ್ನೇಹಿತ ಮುದಾಸಿರ್ ಪಾಷಾ ತಲೆಗೆ ಹೊಡೆದಿದ್ದಾನೆ.ಮುದಾಸಿರ್
Read More

ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆ…ಪೌರಕಾರ್ಮಿಕರ ನಿವಾಸಿಗಳಿಗೆ ಕಂಬಳಿ ವಿತರಿಸಿ ಆಚರಣೆ…

ಮೈಸೂರು,ಡಿ7,Tv10 ಕನ್ನಡ ಜೀವದಾರ ರಕ್ತ ನಿಧಿ ಕೇಂದ್ರ ಹಾಗೂ ಕೆ ಎಂ ಪಿ ಕೆ ಚಾರಿಟಬಲ್ ಟ್ರಸ್ಟ್ ವತಿಯಿಂದಅಂಬೇಡ್ಕರ್ ಮಹಾಪರಿನಿರ್ವಾಣ ಅಂಗವಾಗಿಪೌರಕಾರ್ಮಿಕರ ನಿವಾಸಿಗಳಿಗೆ ಕಂಬಳಿ ವಿತರಿಸಿ ಅರ್ಥಪೂರ್ಣವಾಗಿ ಆಚರಿಸಲಾಯಿತು.ಸುಮಾರು 25 ಕ್ಕೂ ಹೆಚ್ಚು ಮಂದಿಗೆ ವಿತರಿಸಿದ ನಂತರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮಾತನಾಡಿದೇಶದ ಶೋಷಿತರಿಗೆ ಸಮಾನತೆ ನೀಡಲು ಜೀವನವನ್ನೇ ಮುಡಿಪಾಗಿಟ್ಟ ಡಾ.ಬಿ.ಆರ್.ಅಂಬೇಡ್ಕರ್ ಎಲ್ಲರ ಹೃದಯಗಳಲ್ಲಿ ಸದಾ ಜೀವಂತವಾಗಿದ್ದಾರೆ.‘ದೇಶ, ವಿದೇಶಗಳಲ್ಲಿ ಶಿಕ್ಷಣ ಪಡೆದು ಶೋಷಿತರ ಸಮಾನತೆಗಾಗಿ ಶಾಸನ ಬದ್ಧ
Read More

ಸುಭ್ರಹ್ಮಣ್ಯ ಷಷ್ಠಿ…ಸಿದ್ದಿಲಿಂಗಪುರ ದೇವಾಲಯದಲ್ಲಿ ವಿಶೇಷ ಪೂಜೆ…ಹರಿದು ಬಂದ ಭಕ್ತಸಾಗರ…

ಮೈಸೂರು,ಡಿ7,Tv10 ಕನ್ನಡ ಮೈಸೂರು-ಬೆಂಗಳೂರು ರಸ್ತೆಯಲ್ಲಿರುವ ಸಿದ್ದಲಿಂಗಪುರದಲ್ಲಿನ ಸುಬ್ರಮಣ್ಯೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಷಷ್ಠಿ ಪ್ರಯುಕ್ತ ಇಂದು ವಿಶೇಷ ಪೂಜಾ ಕೈಂಕರ್ಯಗಳನ್ನು ವಿಜೃಂಭಣೆಯಿಂದ ನೆರವೇರಿಸಲಾಯಿತು.ಷಷ್ಠಿ ಪ್ರಯುಕ್ತ ಸುಬ್ರಮಣ್ಯೇಶ್ವರ ಸ್ವಾಮಿಗೆ ಇಂದು ಮುಂಜಾನೆ ಶುದ್ಧೋದಕ ಸ್ನಾನ, ಪಂಚಾಮೃತ ಅಭಿಷೇಕ, ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ ನೆರವೇರಿಸಿ ನಂತರ ಸುಬ್ರಮಣ್ಯೇಶ್ವರ ಸ್ವಾಮಿಗೆ ಮೈಸೂರು ಅರಸರು ನೀಡಿದ ನಾಗಾಭರಣವನ್ನು ಧಧಾರಣೆ ಮಾಡಲಾಯಿತು.ಆನಂತರ ದೇವರಿಗೆ ಅಷ್ಟೋತ್ತರ, ಸಹಸ್ರನಾಮ, ಅಷ್ಟಾವಧಾನ ಸೇವೆಯನ್ನು ನೆರವೇರಿಸಿ ಮಹಾಮಂಗಳಾರತಿ ಮಾಡಿ ಭಕ್ತಾದಿಗಳಿಗೆ 3:30ರ ನಂತರ ದೇವರ
Read More

ಲಷ್ಕರ್ ಠಾಣೆ ಪೊಲೀಸರ ಕಾರ್ಯಾಚರಣೆ…ಸರಗಳ್ಳಿಯ ಬಂಧನ…3.90 ಲಕ್ಷ ಮೌಲ್ಯದ ಚಿನ್ನದ ಸರ ವಶ…

ಮೈಸೂರು,ಡಿ6,Tv10 ಕನ್ನಡ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಮಹಿಳೆಯರ ಚಿನ್ನದ ಸರ ಕಳುವು ಮಾಡುತ್ತಿದ್ದ ಸರಗಳ್ಳಿಯನ್ನ ಬಂಧಿಸುವಲ್ಲಿ ಲಷ್ಕರ್ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.ಬಂಧಿತಳಿಂದ 3.90 ಲಕ್ಷ ಮೌಲ್ಯದ ಒಟ್ಟು 54 ಗ್ರಾಂ ತೂಕದ ಎರಡು ಚಿನ್ನದ ಸರಗಳನ್ನ ವಶಪಡಿಸಿಕೊಂಡಿದ್ದಾರೆ.ಕೆ.ಆರ್.ನಗರ ಮೂಲದ ಲತಾ ಸಿಕ್ಕಿಬಿದ್ದ ಸರಗಳ್ಳಿ. ಇತ್ತೀಚೆಗೆ ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಮಹಿಳೆಯರ ಸರಗಳ್ಳತನ ಪ್ರಕರಣ ನಡೆದಿತ್ತು.ಆರೋಪಿಯ ಬಂಧನಕ್ಕೆ ಲಷ್ಕರ್ ಠಾಣೆ ಪೊಲೀಸರು ತಂಡ ರಚಿಸಿದ್ದರು.ಗ್ರಾಮಾಂತರ ಬಸ್ ನಿಲ್ದಾಣದಲ್ಲೇ ಸಿಕ್ಕಿಬಿದ್ದ ಆರೋಪಿ
Read More

ದೇವಸ್ಥಾನದಲ್ಲಿ ಕಳ್ಳರ ಕೈಚಳಕ…ಹುಂಡಿ ಹಣ ಕದ್ದೊಯ್ದ ಖದೀಮರು…

ನಂಜನಗೂಡು,ಡಿ6,Tv10 ಕನ್ನಡ ಶ್ರೀ ಮಹದೇಶ್ವರ ದೇವಸ್ಥಾನದಲ್ಲಿ ಹುಂಡಿ ಹಣ ಕದ್ದೊಯ್ದ ಘಟನೆನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಹೊರವಲಯದಲ್ಲಿರುವ ಶ್ರೀ ಮಹದೇಶ್ವರ ಸ್ವಾಮಿ ದೇವಾಲಯದಬೀಗ ಮುರಿದು ಹುಂಡಿ ಹೊಡೆದು ಕಳ್ಳತನ ಮಾಡಲಾಗಿದೆ.ಸುಮಾರು 1 ಲಕ್ಷಕ್ಕೂ ಹೆಚ್ಚು ಹಣ ಕಳ್ಳರ ಪಾಲಾಗಿದೆ. ಮೂರನೇ ಬಾರಿಗೆ ಈ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ.ಕಳ್ಳರನ್ನು ಪತ್ತೆ ಹಚ್ಚುವಂತೆ ಗ್ರಾಮಸ್ಥರ ಆಗ್ರಹಿಸಿದ್ದಾರೆ.ಕವಲಂದೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ…
Read More