TV10 Kannada Exclusive

ಕರಸೇವಕರಿಗೆ ಸನ್ಮಾನ…ನಮೋ ಬ್ರಿಗೇಡ್ ನಿಂದ ಕಾರ್ಯಕ್ರಮ…

ಮೈಸೂರು,ಜ5,Tv10. ಕನ್ನಡ 1992 ರ ಕರಸೇವೆಯಲ್ಲಿ ಭಾಗಿಯಾಗಿದ್ದ ಕರಸೇವಕರನ್ನ ನಮೋ ಬ್ರಿಗೇಡ್ ವತಿಯಿಂದ ಮೈಸೂರಿನಲ್ಲಿ ಸನ್ಮಾನಿಸಲಾಗಿದೆ.ಎನ್ ಆರ್ ಮೊಹಲ್ಲಾದಲ್ಲಿ ಕಾರ್ಯಕ್ರಮ ನಡೆದಿದೆ.ನಿಮ್ಮ ಸಾಹಸಕ್ಕೆ ನಮ್ಮ ನಮನ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು20ಕ್ಕೂ ಹೆಚ್ಚು ಕರಸೇವಕರಿಗೆ ಗೌರವ ಸಮರ್ಪಿಸಲಾಗಿದೆ..
Read More

ದೆಹಲಿ ವಿಮಾನ ನಿಲ್ದಾಣದಲ್ಲಿ ತೆಂಡೊಲ್ಕರ್ ಗೆ ಎದುರಾದ ಸಿಎಂ ಸಿದ್ದು ಭೇಟಿ…

ಮೈಸೂರು,ಜ4,Tv10 ಕನ್ನಡ ಕ್ರಿಕೆಟ್‌ನ ದಂತಕಥೆ, ಲಿಟ್ಲ್ ಮಾಸ್ಟರ್ ಸಚಿನ್ ತೆಂಡೂಲ್ಕರ್ ರವರನ್ನ ದೆಹಲಿ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಸ್ಪರ ಎದುರಾಗಿದ್ದಾರೆ. ಆಕಸ್ಮಿಕವಾಗಿ ಎದುರಾದ ವೇಳೆ ಕುಶಲೋಪರಿ ವಿಚಾರಿಸಿ ಪ್ರೀತಿಯಿಂದ ಬೀಳ್ಕೊಟ್ಟಿರುವುದಾಗಿ ಸಿದ್ದರಾಮಯ್ಯ ತಮ್ಮ ಸಂತಸವನ್ನ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಮೇತ ಹಂಚಿಕೊಂಡಿದ್ದಾರೆ.ಸಚಿನ್ ತೆಂಡೂಲ್ಕರ್ ನನ್ನ ಅಚ್ಚುಮೆಚ್ಚಿನ ಆಟಗಾರ, ದಶಕಗಳ ಕಾಲ ತೆಂಡೂಲ್ಕರ್ ರವರ ಆಟವನ್ನ ಆಸ್ವಾಧಿಸಿರುವುದಾಗಿ ತಿಳಿಸಿದ್ದಾರೆ…
Read More

ಮಹಿಳೆಯರ ದಾರಿ ದೀಪ ಸಾವಿತ್ರಿ ಬಾಯಿ ಪುಲೆ-ಭವ್ಯ ಬಾಲಸುಬ್ರಹ್ಮಣ್ಯಂ

ದೇಶದಲ್ಲಿ ಮೊದಲ ಬಾರಿಗೆ ಮಹಿಳೆಯರಿಗೆ ಅಕ್ಷರ ಜ್ಞಾನವನ್ನು ಉಣಪಡಿಸಿ ಶೋಷಿತರು ಮತ್ತು ಮಹಿಳೆಯರ ಏಳಿಗೆಗೆ ಶ್ರಮಿಸಿದವರು ಸಾವಿತ್ರಿಬಾಯಿ ಫುಲೆ. ಇವರು ಹೆಣ್ಣು ಮಕ್ಕಳಿಗೆ ದಾರಿದೀಪ ಎಂದು ಆಂಗ್ಲ ಭಾಷೆಯ ಉಪನ್ಯಾಸಕಿ ಭವ್ಯ ಬಾಲಸುಬ್ರಮಣ್ಯಂ ರವರು ನಂಜನಗೂಡಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಾವಿತ್ರಿಬಾಯಿ ಪುಲೆ ರವರ ಜನ್ಮದಿನಾಚರಣೆಯನ್ನು ವಿಶೇಷ ಉಪನ್ಯಾಸ ನೀಡುತ್ತಾ ವಿದ್ಯಾರ್ಥಿಗಳಿಗೆ ಸಾವಿತ್ರಿ ಬಾಯಿ ಫುಲೆ ರವರ ಜೀವನ ಚಿತ್ರಣವನ್ನು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ
Read More

ಅಂಧಕಾಸುರನ ಸಂಹಾರ ವಿವಾದ…ಇಂದು ನಂಜನಗೂಡು ಬಂದ್…ಸಾರ್ವಜನಿಕರಲ್ಲಿ ಗೊಂದಲ…

ನಂಜನಗೂಡು,ಜ4,Tv10 ಕನ್ನಡ ಅಂಧಕಾಸುರ ಸಂಹಾರ ಆಚರಣೆ ವೇಳೆ ನಡೆದ ವಿವಾದಾತ್ಮಕ ಘಟನೆ ಹಿನ್ನಲೆ ಶ್ರೀಕಂಠೇಶ್ವರನ ಭಕ್ತರು ನಂಜನಗೂಡು ಬಂದ್ ಕರೆ ನೀಡಿದ್ದಾರೆ.ಮತ್ತೊಂದೆಡೆ ಜಿಲ್ಲಾಡಳಿತ ಬಂದ್ ಆಚರಿಸದಂತೆ ಶಾಂತಿ ಸಭೆ ನಡೆಸಿ ಕರೆ ನೀಡಿದ ಭಕ್ತರಿಗೆ ಮನವಿ ಮಾಡಿದೆ.ಅಲ್ಲದೆ ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನ ಮುಚ್ಚಿಸಬಾರದೆಂದು ಜಿಲ್ಲಾಡಳಿತ ಸೂಚನೆ ನೀಡಿದೆ.ಸ್ವಯಂಪ್ರೇರಿತರಾಗಿ ಬಂದ್ ಮಾಡುವಂತೆ ಎಲ್ಲರಿಗೂ ಭಕ್ತರು ಪಾಂಪ್ಲೆಟ್ ಹಂಚಿ ಮನವಿ ಮಾಡಿದ್ದಾರೆ.ಜಿಲ್ಲಾಡಳಿತದ ಸೂಚನೆಯನ್ನ ಲೆಕ್ಕಿಸದೆ ಶ್ರೀಕಂಠೇಶ್ವರನ ಭಕ್ತರು ಬಂದ್ ಕರೆ ಯಶಸ್ವಿಗೊಳಿಸಲು ಮುಂದಾಗಿದ್ದಾರೆ.ಇವೆಲ್ಲ
Read More

ತುಂಡು ಭೂಮಿ ಹಂಚಿಕೆ,ಭೂ ಪರಿಹಾರವಾಗಿ ಜಾಗ ನೀಡುವ ನಿರ್ದೇಶನಗಳ ಉಲ್ಲಂಘನೆ ಪ್ರಕರಣಗಳ ಕಡತ ಸಲ್ಲಿಸಿ…ಮುಡಾ ಆಯುಕ್ತರಿಗೆ ತನಿಖಾ ಸಮಿತಿ ಅಧ್ಯಕ್ಷರಿಂದ

ಮೈಸೂರು,ಜ4,Tv10 ಕನ್ನಡ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ ತುಂಡು ಭೂಮಿ ಹಂಚಿಕೆ,,ಭೂ ಪರಿಹಾರವಾಗಿ ಜಾಗ ನೀಡುವ ಕುರಿತು 14-03-2023 ರ ನಿರ್ದೇಶನಗಳನ್ನ ಉಲ್ಲಂಘನೆಯಾಗಿರುವ ಪ್ರಕರಣಗಳನ್ನ ತನಿಖೆ ನಡೆಸಲು ಸಮಿತಿ ರಚನೆಯಾಗಿದೆ.14-03-2023 ರಿಂದ ಇಲ್ಲಿಯವರೆಗೆ ಭೂ ಪರಿಹಾರವಾಗಿ ಬದಲಿ ನಿವೇಶನ ಹಂಚಿಕೆ,ತುಂಡು ಭೂಮಿ ಹಂಚಿಕೆ ವಿಷಯಕ್ಕೆ ಸಂಭಂಧಿಸಿದಂತೆ ಕ್ರಮ ವಹಿಸಿರುವ ಎಲ್ಲಾ ಪ್ರಕರಣಗಳ ಪ್ರಕರಣಾವಾರು ಮೂಲ ಕಡತಗಳನ್ನ ಸಲ್ಲಿಸುವಂತೆ ಮುಡಾ ಆಯುಕ್ತರಿಗೆ ಸೂಚಿಸಲಾಗಿತ್ತು.ಕಡತಗಳ ಪ್ರಮಾಣ ಹೆಚ್ಚಾದ ಕಾರಣ ಸಮಯದ ಕಾಲಾವಕಾಶ ಕೋರಿದ್ದರು.ಕಾಲಾವಕಾಶ ಪೂರ್ಣಗೊಂಡರೂ
Read More

ಪೈಲೆಟ್ ಗಳ ಕಣ್ಣಿಗೆ ಲೇಸರ್ ಬೆಳಕು…ಮೈಸೂರು ವಿಮಾನ ನಿಲ್ದಾಣದಲ್ಲಿ ಕಿಡಿಗೇಡಿಗಳ ಕಿರೀಕ್…

ಮೈಸೂರು,ಜ3,Tv10 ಕನ್ನಡ ಮೈಸೂರು ವಿಮಾನ ನಿಲ್ದಾಣದಲ್ಲಿ ಕಿಡಿಗೇಡಿಗಳ ಹಾವಳಿಯಿಂದ ಪೈಲೆಟ್ ಗಳಿಗೆ ಸಮಸ್ಯೆ ಎದುರಾಗಿದೆ. ವಿಮಾನ ಲ್ಯಾಂಡಿಂಗ್ ಹಾಗೂ ಟೇಕ್ ಆಫ್ ಆಗುವ ವೇಳೆ ಕಿಡಿಗೇಡಿಗಳು ಪೈಲೆಟ್ ಗಳಿಗೆ ತೊಂದರೆ ಆಗುವಂತೆ ಲೇಸರ್ ಲೈಟ್ ಬಿಡುತ್ತಿದ್ದಾರೆ.ಸಂಜೆ ವೇಳೆ ಚೆನ್ನೈಗೆ ತೆರಳುವ ವಿಮಾನದ ಲ್ಯಾಂಡಿಂಗ್ ಹಾಗೂ ಟೇಕ್ ಆಫ್ ಸಮಯದಲ್ಲಿ ಕಿರಿಕಿರಿಯಾಗುತ್ತಿದೆ.ಸುಮಾರು ಒಂದು ತಿಂಗಳು ಇಂತಹ ಕಹಿ ಅನುಭವ ಆಗಿದೆ.ಮರಸೆ ಗ್ರಾಮದ ದಿಕ್ಕಿನಿಂದ ಹಾಗೂ ಮಂಡಕಳ್ಳಿ ಗ್ರಾಮದ ದಿಕ್ಕಿನಿಂದ ಲೇಸರ್ ಲೈಟ್
Read More

ಮೈಸೂರು:ಶಾರದಾದೇವಿ ಜಯಂತಿ ಆಚರಣೆ…ಶಾರದಾಮಾತೆ ಪ್ರತಿಮೆ ಸ್ಥಾಪನೆಗೆ ಒತ್ತಾಯ…

ಮೈಸೂರು,ಜ3,Tv10 ಕನ್ನಡ ಮೈಸೂರಿನ ಶಾರದಾ ದೇವಿ ನಗರ ವೃತ್ತದಲ್ಲಿ ಶ್ರೀ ಶಾರದಾದೇವಿ 171ನೇ ಜಯಂತಿಯನ್ನ ಆಚರಿಸಲಾಯಿತು. ಆಧ್ಯಾತ್ಮಿಕ ಲೋಕ ಕಾರ್ಯಕ್ರಮದಲ್ಲಿ ಶ್ರೀ ಶಾರದಾ ಮಾತೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಸಿಹಿ ವಿತರಿಸಲಾಯಿತು. ಮಾತನಾಡಿದ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ತಮ್ಮ ಸಾಧನೆ, ತ್ಯಾಗ ಮತ್ತು ಪರಿಶ್ರಮದಿಂದ ಶ್ರೀ ರಾಮಕೃಷ್ಣ ಪರಮಹಂಸರು ಹಾಗೂ ವೀರಸನ್ಯಾಸಿ ಸ್ವಾಮಿ ವಿವೇಕಾನಂದರನ್ನು ಆಧ್ಯಾತ್ಮಿಕವಾಗಿ ಬೆಳೆಸಿದ
Read More

ಟಿ.ನರಸೀಪುರ ತಾಲೂಕಿನಲ್ಲಿ ನಿರ್ಮಾಣವಾಗಲಿದೆ ಕ್ರೀಡಾಂಗಣ…ಕ್ರೀಡಾ ಸಚಿವರಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ…

ಮೈಸೂರು,ಜ1,Tv10 ಕನ್ನಡ ವರುಣಾ ವಿಧಾನಸಭಾ ಕ್ಷೇತ್ರದ ಟಿ.ನರಸೀಪುರ ತಾಲೂಕಿನಲ್ಲಿ ನೂತನವಾಗಿ ಕ್ರೀಡಾಂಗಣ ಅಸ್ತಿತ್ವಕ್ಕೆ ಬರಲಿದೆ.ಕ್ರೀಡಾಂಗಣ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ಹಾಗೂ ವರುಣಾ ಕ್ಷೇತ್ರದ ಶಾಸಕರೂ ಆದ ಸಿದ್ದರಾಮಯ್ಯನವರು ಯವಸಬಲೀಕರಣ ಹಾಗೂ ಕ್ರೀಡಾ ಸಚಿವರಾದ ಬಿ.ನಾಗೇಂದ್ರ ರವರಿಗೆ ಪತ್ರ ಬರೆದಿದ್ದಾರೆ.ಟಿ.ನರಸೀಪುರ ತಾಲೂಕು ವ್ಯಾಪ್ತಿಯ ಶಾಲಾ ಕಾಲೇಜು ವಿಧ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಕ್ರೀಡಾಂಗಣ ಇಲ್ಲದೆ ತೊಂದರೆಯಾಗಿದೆ.ಈ ಹಿನ್ನಲೆ ಕ್ರೀಡಾಂಗಣ ನಿರ್ಮಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಪತ್ರ ಬರೆದು ಮನವಿ
Read More

ನಿರ್ವಹಣೆ ಇಲ್ಲದೆ ಸೊರಗಿದ ಇ-ಟಾಯ್ಲೆಟ್…ಸಾರ್ವಜನಿಕರ ತೆರಿಗೆ ಹಣ ಪೋಲು…ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಸಂಪ್…

ಮೈಸೂರು,ಡಿ31,Tv10 ಕನ್ನಡ ಸಾರ್ವಜನಿಕರ ಬಳಕೆಗಾಗಿ ನಿರ್ಮಿಸಲಾದ ಇ-ಟಾಯ್ಲೆಟ್ ಸೂಕ್ತ ನಿರ್ವಹಣೆ ಇಲ್ಲದೆ ಸೊರಗಿದೆ.ರಾಮಕೃಷ್ಣನಗರದ ಉಪನೊಂದಣಿ ಕಚೇರಿ ಮುಂಭಾಗ ಇರುವ ಇ-ಶೌಚಾಲಯದ ದುಃಸ್ಥತಿಯನ್ನ ಕೇಳುವವರೇ ಇಲ್ಲದಂತಾಗಿದೆ.ಸಬ್ ರಿಜಿಸ್ಟ್ರಾರ್ ಕಚೇರಿ ಮಾತ್ರವಲ್ಲದೆ ಈ ಸ್ಥಳದಲ್ಲಿ ಹಲವು ಸರ್ಕಾರಿ ಕಚೇರಿಗಳಿವೆ.ಇಲ್ಲಿಗೆ ಬರುವ ಸಾರ್ವಜನಿಕರ ಬಳಕೆಗಾಗಿ ಇ-ಶೌಚಾಲಯ ನಿರ್ಮಿಸಲಾಗಿದೆ.ಆದರೆ ಇ-ಟಾಯ್ಲೆಟ್ ಕೆಟ್ಟು ನಿಂತು ತಿಂಗಳುಗಳೇ ಉರುಳಿದೆ.ಬಾಗಿಲುಗಳು ಭದ್ರವಾಗಿಲ್ಲದೆ ತೆರೆದ ಮನೆಯಂತಾಗಿದೆ.ಸಮರ್ಪಕವಾಗಿ ಬಳಕೆಯಲ್ಲಿ ಇಲ್ಲದಿದ್ದರೂ ವಿದ್ಯುತ್ ಸಂಪರ್ಕ ಚಾಲ್ತಿಯಲ್ಲಿದೆ.ವಿದ್ಯುತ್ ಉಪಕರಣಗಳನ್ನ ಅಳವಡಿಸಿರುವ ಪೆಟ್ಟಿಗೆ ಓಪನ್ ಆಗಿ ಅಪಾಯಕ್ಕೆ
Read More

LPG ಗ್ಯಾಸ್ ಸಬ್ಸಿಡಿ…ಇ-ಕೆವೈಸಿ ಮಾಡಿಸಲು ಕೊನೆ ದಿನಾಂಕ ನಿಗದಿಯಾಗಿಲ್ಲ…ಆಹಾರ ಇಲಾಖೆ ಸ್ಪಷ್ಟನೆ…

ಮೈಸೂರು,ಡಿ30,Tv10 ಕನ್ನಡ ಎಲ್.ಪಿ.ಜಿ.ಗ್ಯಾಸ್ ಸಬ್ಸಿಡಿ ಪಡೆಯಲು ಏಜೆನ್ಸಿಗಳಲ್ಲಿ ಇ-ಕೆವೈಸಿ ದಾಖಲಿಸಲು ಯಾವುದೇ ಕೊನೆಯ ದಿನಾಂಕ ನಿಗದಿಪಡಿಸಿಲ್ಲವೆಂದು ಆಹಾರ,ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆ ಸ್ಪಷ್ಟಪಡಿಸಿದೆ.ಡಿಸೆಂಬರ್ 31 ರೊಳಗೆ ಇ-ಕೆವೈಸಿ ದಾಖಲಿಸಬೇಕೆಂದು ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದೆ.ಇದು ಸತ್ಯಕ್ಕೆ ದೂರವಾಗಿದ್ದು ಯಾವುದೇ ಕೊನೆ ದಿನಾಂಕ ನಿಗದಿಯಾಗಿರುವುದಿಲ್ಲ ಹಾಗೂ ಈ ಪ್ರಕ್ರಿಯೆ ಉಚಿತವಾಗಿರುತ್ತದೆಂದು ಸ್ಪಷ್ಟವಾಗಿ ತಿಳಿಸಲಾಗಿದೆ…
Read More