TV10 Kannada Exclusive

ಸಾಲಗಾರರ ಹಾವಳಿ ಹಿನ್ನಲೆ…ಇಡೀ ಕುಟುಂಬ ಮಿಸ್ಸಿಂಗ್…ಡೆತ್ ನೋಟ್ ವಾಯ್ಸ್ ಮೆಸೇಜ್ ಹಾಕಿ ನಾಪತ್ತೆ…

ಮೈಸೂರು,ಜ29,Tv10 ಕನ್ನಡ ಸಾಲಗಾರರ ಕಾಟಕ್ಕೆ ಹೆದರಿ ಇಡೀ ಕುಟುಂಬ ನಾಪತ್ತೆಯಾದ ಘಟನೆ ಮೈಸೂರಿನ ಕೆ.ಜಿ.ಕೊಪ್ಪಲಿನಲ್ಲಿ ನಡೆದಿದೆ.ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸ್ನೇಹಿತರೊಬ್ಬರ ಮೊಬೈಲ್ ಗೆ ವಾಯ್ಸ್ ಮೆಸೇಜ್ ಕಳುಹಿಸಿ ನಾಪತ್ತೆಯಾಗಿದೆ.ಇಡೀ ಕುಟುಂಬ ನಾಪತ್ತೆಯಾಗಿ 8 ದಿನ ಕಳೆದರೂ ಸುಳಿವು ಪತ್ತೆಯಾಗಿಲ್ಲ. ಕೆ.ಜಿ.ಕೊಪ್ಪಲಿನ ಮಹೇಶ್(35),ಈತನ ಪತ್ನಿ ಭವಾನಿ(28),ಪುತ್ರಿ ಪ್ರೇಕ್ಷಾ(3) ಇವರ ತಂದೆ ಮಹದೇವಪ್ಪ(65) ಹಾಗೂ ತಾಯಿ ಸುಮಿತ್ರ(55) ನಾಪತ್ತೆಯಾದವರು.ಈ ಸಂಭಂಧ ಭವಾನಿ ಸಹೋದರ ಜಗದೀಶ್ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿದ್ದಾರೆ.ಮಾರ್ಕೆಟಿಂಗ್ ಬಿಸಿನೆಸ್
Read More

ಕಾಲು ಜಾರಿ ನದಿಗೆ ಬಿದ್ದು ಮಹಿಳೆ ಸಾವು…ಮಹದೇವತಾತ ಗದ್ದುಗೆ ಪೂಜೆಗೆ ಬಂದ ಮಹಿಳೆ ನೀರು ಪಾಲು…

ನಂಜನಗೂಡು,ಜ27,Tv10 ಕನ್ನಡ ಧಾರ್ಮಿಕ ಪುಣ್ಯಕ್ಷೇತ್ರ ಸಂಗಮ ಬಳಿ ಇರುವ ಶ್ರೀ ಮಹದೇವತಾತ ಗದ್ದುಗೆ ಪೂಜೆಗೆ ಬಂದ ಮಹಿಳೆ ಕಪಿಲ ನದಿಯಲ್ಲಿ ಜಾರಿ ಬಿದ್ದು ಸಾವನ್ನಪ್ಪಿದ್ದಾರೆ.ಪೂಜೆಗೆ ತೆರಳುವ ಮುನ್ನ ಕಾಲು ತೊಳೆಯಲು ನದಿಗೆ ಇಳಿದಾಗ ದುರ್ಘಟನೆ ನಡೆದಿದೆ.ಹುಳಿಮಾವು ಗ್ರಾಮದ ನಂಜಪ್ಪ ಸ್ವಾಮಿ ಎಂಬವರ ಪತ್ನಿ ಶಕುಂತಲಾ (46)ಮೃತ ಮಹಿಳೆ.ನಂಜನಗೂಡು ತಾಲೂಕಿನ ಚಂದ್ರವಾಡಿ ಗ್ರಾಮದಿಂದ ಹುಳಿಮಾವು ಗ್ರಾಮಕ್ಕೆ ವಿವಾಹವಾಗಿದ್ದರು.ನೆನ್ನೆ ಧಾರ್ಮಿಕ ಪುಣ್ಯಕ್ಷೇತ್ರವಾಗಿರುವ ಮಹದೇವ ತಾತ ಗದ್ದಿಗೆ ಪೂಜಿ ಸಲ್ಲಿಸಲು ಕುಟುಂಬ ಸಮೇತ ಬಂದಿದ್ದರು.
Read More

34 ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ…ಅನಿಲ್ ಚಿಕ್ಕಮಾದು ಜಂಗಲ್ ರೆಸಾರ್ಟ್ಸ್,ಪುಟ್ಟರಂಗಶೆಟ್ಟಿಗೆ MSIL ಸ್ಥಾನ…

ಬೆಂಗಳೂರು,ಜ26,Tv10 ಕನ್ನಡ 34 ಶಾಸಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗಣರಾಜ್ಯೋತ್ಸವದ ಗಿಫ್ಟ್ ಕೊಟ್ಟಿದ್ದಾರೆ.32 ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ ಪಟ್ಟಿ ಇಂದು ಬಿಡುಗಡೆ ಮಾಡಿದ್ದಾರೆ.ಇದರಲ್ಲಿ ಮೈಸೂರಿಗೆ ಒಂದು ನಿಗಮ ಮಂಡಳಿ ಸ್ಥಾನ ಮಾತ್ರ ನೀಡಲಾಗಿದೆ.ಹೆಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾದ ಅನಿಲ್ ಚಿಕ್ಕಮಾದು ಗೆ ಜಂಗಲ್ ರೆಸಾರ್ಟ್ಸ್ ಅಧ್ಯಕ್ಷ ಸ್ಥಾನ ನೀಡಲಾಗಿದೆ.ಚಾಮರಾಜನಗರದಿಂದ ಚುನಾಯಿತರಾದ ಪುಟ್ಟರಂಗಶೆಟ್ಟಿಗೆ MSIL ಅದ್ಯಕ್ಷ ಸ್ಥಾನ ನೀಡಲಾಗಿದೆ,ಶ್ರೀರಂಗಪಟ್ಟಣದಿಂದ ಚುನಾಯಿತರಾದ ರಮೇಶ್ ಬಂಡಿ ಸಿದ್ದೇಗೌಡ ರವರಿಗೆ ಚೆಸ್ಕಾಂ ಅಧ್ಯಕ್ಷ ಸ್ಥಾನ ನೀಡಲಾಗಿದೆ.ಇಂದಿನಿಂದ
Read More

ಮೈಸೂರು:ಸಾಲಭಾಧೆ…ಯುವಕ ನೇಣು ಬಿಗಿದು ಆತ್ಮಹತ್ಯೆ…

ಮೈಸೂರು,ಜ24,Tv10 ಕನ್ನಡ ಸಾಲಭಾಧೆ ಹಿನ್ನಲೆ ಯುವಕ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಮಹದೇವಪುರದಲ್ಲಿ ನಡೆದಿದೆ.ದರ್ಶನ್(24) ಮೃತ ದುರ್ದೈವಿ.ಕ್ಯಾಟರಿಂಗ್ ನಲ್ಲಿ ಕೆಲಸ ಮಾಡುತ್ತಾ ಕರಸ್ಪಾಂಡೆನ್ಸ್ ಕೋರ್ಸ್ ಮಾಡುತ್ತಿದ್ದ ದರ್ಶನ್ ವ್ಯಾಸಂಗ ಪೂರೈಸಿದ್ದ.ಸಾಕಷ್ಟು ಸಾಲ ಮಾಡಿದ್ದ ದರ್ಶನ್ ಜೀವನದಲ್ಲಿ ಜಿಗುಪ್ಸೆ ಹೊಂದಿ ತನ್ನ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ.ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…
Read More

ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷನ ಕೊಲೆ ಪ್ರಕರಣ…ಆರೋಪಿ ಶಿವು ಬಂಧನ…

ನಂಜನಗೂಡು,ಜ24,Tv10 ಕನ್ನಡ ಹಾಲು ಉತ್ಪಾದಕರಿಗೆ ನೀಡಬೇಕಾದ ಹಣ ಪಾವತಿಸುವಂತೆ ಬುದ್ದಿವಾದ ಹೇಳಿದ ಉಪಾಧ್ಯಕ್ಷನ ಮೇಲೆ ಹಲ್ಲೆ ನಡೆಸಿ ಸಾವಿಗೆ ಕಾರಣನಾದ ಕಾರ್ದರ್ಶಿಯನ್ನ ಹುಲ್ಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಂಜನಗೂಡು ತಾಲೂಕಿನ ಎಬ್ಜಾಲ ಗ್ರಾಮದ ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿ ಶಿವು ಬಂಧಿತ ಆರೋಪಿ. ಹಾಲು ಉತ್ಪಾದಕರಿಗೆ ಹಣ ನೀಡದೆ ಸತಾಯಿಸುತ್ತಿದ್ದ ಕಾರ್ಯದರ್ಶಿ ಶಿವು ಗೆ ಉಪಾಧ್ಯಕ್ಷ ಮಹದೇವನಾಯಕ ಬುದ್ದಿವಾದ ಹೇಳಿದ್ದರು.ಶಿವು ತಾಯಿ ರವಿಯಮ್ಮ ಗೆ ವಿಚಾರ ತಿಳಿಸಿ ಹಣ ಪಾವತಿಸುವಂತೆ
Read More

ಹುಣಸೂರು:ರೆಸ್ಟೋರೆಂಟ್ ಕಿಟಕಿಗೆ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ…

ಹುಣಸೂರು,ಜ24,Tv10 ಕನ್ನಡ ರೆಸ್ಟೋರೆಂಟ್ ಕಿಟಕಿಗೆ ನೇಣುಬಿಗಿದು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಣಸೂರು ತಾಲೂಕಿನ ಬಿಳಿಕೆರೆಯಲ್ಲಿ ನಡೆದಿದೆ.ಕೆ ಆರ್ ನಗರ ತಾಲೂಕಿನ ಬಸವಾಪುರ ಗ್ರಾಮದ ನಿವಾಸಿ ಮಹದೇವ್ (50) ಮೃತ ವ್ಯಕ್ತಿ. ಮಾದೇಶ್ವರ ದೇವಸ್ಥಾನದ ರಸ್ತೆಯಲ್ಲಿರುವ ರೆಸ್ಟೋರೆಂಟ್ ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಮಹದೇವ್ ಮೃತದೇಹ ಪತ್ತೆಯಾಗಿದೆ. ದೇವಸ್ಥಾನದ ಅರ್ಚಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತ ಮಹದೇವ್ ಗಾರೆ ಕೆಲಸ ಮಾಡಿಕೊಂಡಿದ್ದನೆಂದು ಹೇಳಲಾಗಿದೆ.ಕೆಲವು ವರ್ಷಗಳಿಂದ ತನ್ನ ಮನೆಗೆ ತೆರಳಿಲ್ಲವೆಂದು ತಿಳಿದು
Read More

ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ…ಇಬ್ಬರು ಪೆಡ್ಲರ್ ಗಳ ಬಂಧನ…20.19 ಲಕ್ಷ ಮೌಲ್ಯದ ಗಾಂಜಾ ವಶ…

ಮೈಸೂರು,ಜ23,Tv10 ಕನ್ನಡ ಸಿಸಿಬಿ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಇಬ್ಬರು ಪೆಡ್ಲರ್ ಗಳನ್ನ ಬಂಧಿಸಲಾಗಿದ್ದು 20.19 ಲಕ್ಷ ಮೌಲ್ಯದ 57 ಕೆಜಿ 700 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.ಆಸಿಮ್ ಹಾಗೂ ನದೀಮ್ ಬಂಧಿತ ಆರೋಪಿಗಳು.ಮತ್ತೋರ್ವ ಆರೋಪಿ ಫರ್ಜು ಪರಾರಿಯಾಗಿದ್ದಾನೆ. ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ನಿಮ್ರಾ ಮಸೀದಿ ಬಳಿ ನಂಬರ್ ಪ್ಲೇಟ್ ಇಲ್ಲದ ವಾಹನದಲ್ಲಿ ತೆರಳುತ್ತಿದ್ದ ಯುವಕರನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಾಗ 1 ಕೆಜಿ ಗಾಂಜಾ ದೊರೆತಿದೆ.ಆರೋಪಿಗಳನ್ನ ಠಾಣೆಗೆ ಕರೆತಂದು
Read More

ಮೈಸೂರು:ರಾಮಲುಲ್ಲಾ ಪ್ರತಿಷ್ಠಾಪನೆ ಹಿನ್ನಲೆ…ರಂಗೋಲಿಯಲ್ಲಿ ಮೂಡಿಬಂದ ಬೃಹತ್ ರಾಮ…

ಮೈಸೂರು,ಜ22,Tv10 ಕನ್ನಡ ಅಯೋಧ್ಯೆಯಲ್ಲಿ ರಾಮಲುಲ್ಲಾ ಪ್ರಾಣ ಪ್ರತಿಷ್ಠಾಪನೆ ಹಿನ್ನಲೆ ಮೈಸೂರಿನ ಹೆಸರಾಂತ ಕಲಾವಿದ ಶ್ರೀ ಪ್ರವೀಣ್ ರವರ ಕೈ ಚಳಕದಲ್ಲಿ ಬೃಹದಾಕಾರದ ರಾಮ ರಂಗೋಲಿಯಲ್ಲ ಮೂಡಿ ಬಂದಿದ್ದಾನೆ. ವಿಶೇಷ ಕಾಳಜಿಯಿಂದ 80×100 ಅಡಿ ರಂಗೋಲಿಯಲ್ಲಿ ಶ್ರೀ ರಾಮನ ಚಿತ್ರವನ್ನು ಬಿಡಿಸಿದ್ದಾರೆ.ಕುವೆಂಪುನಗರದ ಸೌಗಂಧಿಕಾ ಪಾರ್ಕ್ ನಲ್ಲಿ ಆಕರ್ಷಣೀಯವಾದ ಚಿತ್ರ ಮೂಡಿ ಬಂದಿದ್ದು ಅಪಾರ ಸಂಖ್ಯೆಯ ಭಕ್ತರ ಗಮನವನ್ನ ಸೆಳೆದಿದೆ. ಶಾಸಕ ಶ್ರೀವತ್ಸ ರವರು ಸಾರ್ವಜನಿಕರ ವೀಕ್ಷಣೆಗೆ ಚಾಲನೆ ನೀಡಿದ್ದಾರೆ…
Read More

ಕನ್ಯಕಾ ಪರಮೇಶ್ವರಿ ದೇವಸ್ಥಾನದ ಶ್ರೀರಾಮ ಜ್ಯೋತಿ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆ ಬ್ರೇಕ್…ಜನಸಂದಣಿ ಹಿನ್ನಲೆ ರದ್ದು…

ಮೈಸೂರು,ಜ21,Tv10 ಕನ್ನಡ ನಾಳೆ ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನಲೆ ಮೈಸೂರಿನ ಶ್ರೀ ಕನ್ಯಕಾ ಪರಮೇಶ್ವರಿ ದೇವಸ್ಥಾನದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶ್ರೀರಾಮ ಜ್ಯೋತಿ ಕಾರ್ಯಕ್ರಮಕ್ಕೆ ಮೈಸೂರು ನಗರ ಪೊಲೀಸರು ಬ್ರೇಕ್ ಹಾಕಿದ್ದಾರೆ.ಹೆಚ್ಚು ಜನಸಂದಣಿ ಹಾಗೂ ವಾಹನ ಸಂಚಾರ ಇರುವುದರಿಂದ,ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುವ ಕಾರಣ ನೀಡಿ ಡಿಸಿಪಿ ಮುತ್ತುರಾಜ್ ರವರು ಕಾರ್ಯಕ್ರಮದ ಅನುಮತಿಯನ್ನ ರದ್ದುಪಡಿಸಿರುವುದಾಗಿ ಹಿಂಬರಹ ನೀಡಿದ್ದಾರೆ.ಮುಖ್ಯ ಅಂಚೆ ಕಚೇರಿಯಿಂದ ದೊಡ್ಡಗಡಿಯಾರದ ವರೆಗೆ ದೀಪ ಹಚ್ಚುವ ಕಾರ್ಯಕ್ರಮಕ್ಕೆ ಈ ಹಿಂದೆ
Read More

ಲಷ್ಕರ್ ಠಾಣೆ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ…ಆಟೋದಲ್ಲಿ ಮರೆತು ಹೋಗಿದ್ದ ಚಿನ್ನಬೆಳ್ಳಿ ಪದಾರ್ಥ ಮಾಲೀಕರಿಗೆ ವಾಪಸ್…

ಮೈಸೂರು,ಜ20,Tv10 ಕನ್ನಡ ಲಷ್ಕರ್ ಠಾಣೆ ಪೊಲೀಸರು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಆಟೋದಲ್ಲಿ ಮರೆತಹೋಗಿದ್ದ ಚಿನ್ನ ಬೆಳ್ಳಿ ಪದಾರ್ಥಗಳಿದ್ದ ಬ್ಯಾಗ್ ಮಾಲೀಕರಿಗೆ ಸೇರಿದೆ.40 ಗ್ರಾಂ ತೂಕದ ಚಿನ್ನದ ವಡವೆಗಳು ಹಾಗೂ 30 ಗ್ರಾಂ ತೂಕದ ಬೆಳ್ಳಿ ಪದಾರ್ಥಗಳು ಮಾಲೀಕರಿಗೆ ಸೇರಿದೆ.ಲಷ್ಕರ್ ಠಾಣೆಯ ಕ್ಷಿಪ್ರ ಕಾರ್ಯಾಚರಣೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಶಂಸಿಸಿದ್ದಾರೆ. ಬೆಂಗಳೂರಿನ ನಾಯಂಡನಗರದ ನಿವಾಸಿ ಇದಾಯತ್ ಉಲ್ಲಾ ರವರು ಇಂದು ಸಂಭಂಧಿಕರ ಮದುವೆಗೆ ಅಟೆಂಡ್ ಮಾಡಲು ಬಂದಿದ್ದರು.ಉದಯಗಿರಿಯ ಫಂಕ್ಷನ್ ಹಾಲ್ ಒಂದರಲ್ಲಿ
Read More