TV10 Kannada Exclusive

ಪಾಲಿಕೆ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜು ಮರಳಿ ಮಾತೃ ಇಲಾಖೆಗೆ…

ಪಾಲಿಕೆ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜು ಮರಳಿ ಮಾತೃ ಇಲಾಖೆಗೆ… ಮೈಸೂರು,ಜು5,Tv10 ಕನ್ನಡಮೈಸೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜು ರನ್ನ ಮರಳಿ ಮಾತೃ ಇಲಾಖೆಗೆ ಹಿಂದಿರುಗುವಂತೆ ಸರ್ಕಾರ ಆದೇಶ ಹೊರಡಿಸಿದೆ.ತಕ್ಷಣವೇ ಜಾರಿಗೆ ಬರುವಂತೆ ಸರ್ಕಾರದ ಅಧೀನ ಕಾರ್ಯದರ್ಶಿ ರಾಜು.ಪಿ ರವರು ಆದೇಶಿಸಿದ್ದಾರೆ.ಡಾ.ಡಿ.ಜಿ.ನಾಗರಾಜು ಇನ್ಮುಂದೆ ಮಾತೃ ಇಲಾಖೆಯಾದ ಆರೋಗ್ಯ ಮತ್ತು ಕುಟುಂಬ ಇಲಾಖೆಯಲ್ಲಿ ಕರ್ತವ್ಯ ಮುಂದುವರೆಸಲಿದ್ದಾರೆ…
Read More

ಮೈಸೂರು ತಾಲ್ಲೂಕು ಕಚೇರಿಗೆ ಜಿಲ್ಲಾಧಿಕಾರಿಗಳ ಭೇಟಿ… ಸಾರ್ವಜನಿಕರಿಂದ ಅಹವಾಲು ಸ್ವೀಕಾರ…

ಮೈಸೂರು ತಾಲ್ಲೂಕು ಕಚೇರಿಗೆ ಜಿಲ್ಲಾಧಿಕಾರಿಗಳ ಭೇಟಿ… ಸಾರ್ವಜನಿಕರಿಂದ ಅಹವಾಲು ಸ್ವೀಕಾರ… ಮೈಸೂರು, ಜು 4,Tv10 ಕನ್ನಡಮೈಸೂರು ತಾಲ್ಲೂಕು ಕಚೇರಿಗೆ ಭೇಟಿ ನೀಡಿ ತಾಲ್ಲೂಕಿನ ಎಲ್ಲಾ ಹೋಬಳಿಯ ಉಪತಹಸೀಲ್ದಾರರು, ರಾಜಸ್ವ ನಿರೀಕ್ಷಕರು ಮತ್ತು ಗ್ರಾಮ ಆಡಳಿತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿದರು.ಈ ಸಂದರ್ಭದಲ್ಲಿ ಆರ್ ಟಿ ಸಿ ಕಾಲಂ 3 ಮತ್ತು 9 ರಲ್ಲಿರುವ ವ್ಯತ್ಯಾಸಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಪ್ರಗತಿಯು ಕುಂಠಿತವಾಗಿರುವುದನ್ನು ಗಮನಿಸಿ ಪ್ರಥಮಾಧ್ಯತೆ ಮೇರೆ ಇದನ್ನು ಸರಿಪಡಿಸಲು
Read More

ಲಿಂಗಾಂಭುಧಿ ಕೆರೆ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ|| ಕೆ.ವಿ ರಾಜೇಂದ್ರ ಭೇಟಿ ಪರಿಶೀಲನೆ…ಪಾಲಿಕೆ ಅಧಿಕಾರಿಗಳು ಸಾಥ್…

ಮೈಸೂರು,ಜು4,Tv10 ಕನ್ನಡಮೈಸೂರಿನ ಲಿಂಗಾಂಭುಧಿ ಕೆರೆ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಕೆರೆ ಅಭಿವೃದ್ದಿ ಬಗ್ಗೆ ಪಾಲಿಕೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.ಸ್ವಚ್ಛತೆಗೆ ಆಧ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಪಾಲಿಕೆ ಆಯುಕ್ತರಾದ ಶ್ರೀ ಲಕ್ಷ್ಮೀಕಾಂತ್ ರೆಡ್ಡಿ ಹಾಗೂ ಉಪಾಯುಕ್ತ ಮಹೇಶ್ (ಅಭಿವೃದ್ಧಿ) ಹಾಗೂ ಇತರರು ಹಾಜರಿದ್ದರು…
Read More

ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯಿಂದ ಗುರುಪೌರ್ಣಿಮೆ ಆಚರಣೆ…

ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯಿಂದ ಗುರುಪೌರ್ಣಿಮೆ ಆಚರಣೆ… ಮೈಸೂರು,ಜು3,Tv10 ಕನ್ನಡಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ವತಿಯಿಂದ ರಾಮಾನುಜ ರಸ್ತೆಯಲ್ಲಿ ಗುರುಪೂರ್ಣಿಮೆ ಅಂಗವಾಗಿ ನಡೆದ ಗೋಪೂಜೆ ಹಾಗೂ ಶಾಲಾ ಮಕ್ಕಳಿಗೆ ಪುಸ್ತಕ ಮತ್ತು ಸಸಿ ನೆಡುವ ಮೂಲಕ ಗುರುವಂದನಾ ಕಾರ್ಯಕ್ರಮ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಘುರಾಮ್ ವಾಜಪೇಯಿ ಮಾತನಾಡಿ ನಮ್ಮಲ್ಲಿರುವ ಚಂಚಲ ಬುದ್ಧಿ ಹೋಗಲಾಡಿಸಲು ಗುರುಗಳ ಧ್ಯಾನ ಮಾಡುತ್ತಾ ಆತ್ಮ ಚಿಂತನೆಯನ್ನು ಮಾಡಬೇಕು,ನಮ್ಮ ಸಂಸ್ಕೃತಿಯಲ್ಲಿ ಗುರುವಿನ ಸಂಪ್ರದಾಯಕ್ಕೆ
Read More

ಗೌರವಾನ್ವಿತ ರಾಜ್ಯಪಾಲರಾದ ಥಾವರ್‌ ಚಂದ್‌ ಗೆಹ್ಲೋಟ್ ಹಾಗೂ ಮುಖ್ಯಮಂತ್ರಿ @siddaramaiah ಅವರು ಇಂದು ರಾಜ್ಯ ಪ್ರವಾಸಕ್ಕಾಗಿ ಬೆಂಗಳೂರಿಗೆ ಆಗಮಿಸಿದ ಗೌರವಾನ್ವಿತ

ಗೌರವಾನ್ವಿತ ರಾಜ್ಯಪಾಲರಾದ ಥಾವರ್‌ ಚಂದ್‌ ಗೆಹ್ಲೋಟ್ ಹಾಗೂ ಮುಖ್ಯಮಂತ್ರಿ @siddaramaiah ಅವರು ಇಂದು ರಾಜ್ಯ ಪ್ರವಾಸಕ್ಕಾಗಿ ಬೆಂಗಳೂರಿಗೆ ಆಗಮಿಸಿದ ಗೌರವಾನ್ವಿತ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.ಸಚಿವರಾದ @thekjgeorge ಅವರು ಈ ವೇಳೆ ಹಾಜರಿದ್ದರು.
Read More

*ವಿಧಾನ ಪರಿಷತ್‌ನ ನೂತನ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಜಗದೀಶ್ ಶೆಟ್ಟರ್, ಬೋಸರಾಜು ಮತ್ತು ತಿಪ್ಪಣ್ಣ ಕಮಕನೂರ ಅವರಿಗೆ ಮುಖ್ಯಮಂತ್ರಿ

*ವಿಧಾನ ಪರಿಷತ್‌ನ ನೂತನ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಜಗದೀಶ್ ಶೆಟ್ಟರ್, ಬೋಸರಾಜು ಮತ್ತು ತಿಪ್ಪಣ್ಣ ಕಮಕನೂರ ಅವರಿಗೆ ಮುಖ್ಯಮಂತ್ರಿ @siddaramaiah ಅವರು ಅಭಿನಂದಿಸಿ, ಶುಭ ಹಾರೈಸಿದರು*
Read More

ಮುಕ್ತವಿವಿ 18 ನೇ ಘಟಿಕೋತ್ಸವ…ಎನ್.ರಾಮಚಂದ್ರಯ್ಯ,ವೆಂಕಟಲಕ್ಷ್ಮಿ ನರಸಿಂಹರಾಜು ರಿಗೆ ಗೌರವ ಡಾಕ್ಟರೇಟ್ ಪ್ರಧಾನ…

ಮುಕ್ತವಿವಿ 18 ನೇ ಘಟಿಕೋತ್ಸವ…ಎನ್.ರಾಮಚಂದ್ರಯ್ಯ,ವೆಂಕಟಲಕ್ಷ್ಮಿ ನರಸಿಂಹರಾಜು ರಿಗೆ ಗೌರವ ಡಾಕ್ಟರೇಟ್ ಪ್ರಧಾನ… ಮೈಸೂರು,ಜು2,Tv10 ಕನ್ನಡಕರ್ನಾಟಕ ಮುಕ್ತ ವಿವಿಯ 18 ನೇ ವಾರ್ಷಿಕೋತ್ಸವದ ಕಾರ್ಯಕ್ರಮ ಘಟಿಕೋತ್ಸವ ಭವನದಲ್ಲಿ ನಡೆಯುತ್ತಿದೆ.ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಎನ್.ರಾಮಚಂದ್ರಯ್ಯ ಹಾಗೂ ವಕಟಲಕ್ಷ್ಮಿ ನರಸಿಂಹರಾಜು ರವರಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಯಿತು.ರಾಜ್ಯಪಾಲ ಥಾವರಚಂದ್ ಗೆಹಲೋಟ್ ಪ್ರಧಾನ ಮಾಡಿದರು. ಗೌ.ಡಾ.ಸ್ವೀಕರಿಸಬೇಕಿದ್ದ ರಾಷ್ಟ್ರಪತಿ ದ್ರೌಪದಿ ಮರ್ಮು ರವರು ಗೈರಾಗಿದ್ದರು.ಕಾರ್ಯಕ್ರಮದಲ್ಲಿ ಹೈ ಕೋರ್ಟ್ ನ್ಯಾಯಾಧೀಶರಾದ ಅಶೋಕ್.ಎಸ್.ಕಿಣಗಿ,ಮುಕ್ತ ವಿವಿ ಕುಲಪತಿ ಪ್ರೊ.ಶರಣಪ್ಪ.ವಿ.ಹಲಸ ಹಾಗೂ
Read More

ಪ್ರತಾಪ್ ಸಿಂಹ ವಿರುದ್ದ ಅವಹೇಳನಾಕಾರಿ ಪೋಸ್ಟ್…ಹೆಡ್ ಕಾನ್ಸ್ಟೇಬಲ್ ಪ್ರಕಾಶ್ ಸಸ್ಪೆಂಡ್…

ಮೈಸೂರು,ಜು1,Tv10 ಕನ್ನಡಸಂಸದ ಪ್ರತಾಪ್ ಸಿಂಹ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಾಕಾರಿಯಾಗಿ ಪೋಸ್ಟ್ ಮಾಡಿದ ಮೈಸೂರು ವಿ ವಿ ಪುರಂ ಪೊಲೀಸ್ Traffic ಠಾಣೆಯಲ್ಲಿ ಹೆಡ್ ಕಾನ್ಸ್‌ಟೇಬಲ್ ಪ್ರಕಾಶ್ ಅಮಾನತಾಗಿದ್ದಾರೆ.ಪ್ರತಾಪ್ ಸಿಂಹ ರವರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ…
Read More

ಹುಲಿ ಜೊತೆ ಕಾದಾಡಿ ಸಾವನ್ನಪ್ಪಿದ ಚಿರತೆ…ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಅಂತ್ಯಕ್ರಿಯೆ…

ಮೈಸೂರು,ಜೂ30,Tv10 ಕನ್ನಡಹುಲಿ ಜೊತೆ ಕಾದಾಡಿ ಸಾವನ್ನಪ್ಪಿದ ಚಿರತೆಯ ಅಂತ್ಯಕ್ರಿಯೆಯನ್ನ ಇಂದು ನೆರವೇರಿಸಲಾಯಿತು.ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ದೊಡ್ಡಹಳ್ಳ ಗಸ್ತಿನ ರಸ್ತೆ ಬಳಿ ಚಿರತೆ ಕಳೇಬರ ಪತ್ತೆಯಾಗಿತ್ತು.ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು ಹಾಗೂ ಪಶುವೈದ್ಯಾಧಿಕಾರಿಗಳು ಪರಿಶೀಲನೆ ನಡೆಸಿ ಹುಲಿ ಕಾದಾಟದಿಂದ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದರು.ಇಂದು ಅರಣ್ಯಾಧಿಕಾರಿಗಳಾದ ಹರ್ಷಕುಮಾರ್ ಚಿಕ್ಕನರಗುಂದ,ಕೆ.ಎನ್.ಮಾದಪ್ಪ,ಡಾ.ಕೆ.ಸಿ ತಿಮ್ಮಯ್ಯ,ಕೆ.ಪಿ.ಗೋಪಾಲ್,ಪಶುವೈಧ್ಯಾಧಿಕಾರಿಗಳಾದ ಡಾ.ರಮೇಶ್,ಡಾ.ಚಂದ್ರಶೇಖರ್ ಸಮ್ಮುಖದಲ್ಲಿ ಚಿರತೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ…
Read More

ಮೈಸೂರು ಉಪವಿಭಾಗಾಧಿಕಾರಿಯಾಗಿ ಕೆ.ಆರ್.ರಕ್ಷಿತ್ ನೇಮಕ…ಇಂದು ಅಧಿಕಾರ ಸ್ವೀಕಾರ…

ಮೈಸೂರು,ಜೂ30,Tv10 ಕನ್ನಡಮೈಸೂರು ಉಪವಿಭಾಗಾಧಿಕಾರಿಯಾಗಿ ಕೆ.ಆರ್.ರಕ್ಷಿತ್ ರನ್ನ ನೇಮಿಸಲಾಗಿದೆ.ಚುನಾವಣೆ ಹಿನ್ನಲೆ ಸ್ಥಳ ನಿರೀಕ್ಷಣೆಯಲ್ಲಿ ರಕ್ಷಿತ್ ರವರನ್ನ ಮೈಸೂರು ಉಪವಿಭಾಗಾಧಿಕಾರಿಯಾಗಿ ಸರ್ಕಾರ ನೇಮಕ ಮಾಡಿದೆ.ಕೆಎಟಿ ನ್ಯಾಯಾಲಯದ ಆದೇಶದಂತೆ ರಕ್ಷಿತ್ ಇಂದು ಅಧಿಕಾರ ವಹಿಸಿಕೊಂಡಿದ್ದಾರೆ.ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿದ್ದ ಕಮಲಾಬಾಯಿ ರವರನ್ನ ಬೆಂಗಳೂರು ಕೆ.ಎಸ್.ಟಿ.ಡಿ.ಸಿ.ಪ್ರಧಾನ ವ್ಯವಸ್ಥಾಪಕರಾಗಿ ಸರ್ಕಾರ ನೇಮಕ ಮಾಡಿದೆ…
Read More