TV10 Kannada Exclusive

ದನಗಳ ಕೊಟ್ಟಿಗೆಯಾದ ಪೊಲೀಸ್ ಕ್ವಾಟ್ರಸ್…ಠಾಣೆ ಆವರಣದಲ್ಲಿರುವ ವಸತಿ ಗೃಹಗಳ ನಿರ್ಲಕ್ಷ್ಯ…

ನಂಜನಗೂಡು,ಸೆ6,Tv10 ಕನ್ನಡ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ಅನುಕೂಲಕ್ಕಾಗಿ ಲಕ್ಷಾಂತರ ವೆಚ್ಚದಲ್ಲಿ ನಿರ್ಮಿಸಲಾದ ಪೊಲೀಸ್ ವಸತಿಗೃಹಗಳು ದನಗಳ ಕೊಟ್ಟಿಗೆಯಾಗಿ ಮಾರ್ಪಟ್ಟಿವೆ.ನಂಜನಗೂಡು ತಾಲೂಕಿನ ಬಿಳಿಗೆರೆ ಪೊಲೀಸ್ ಠಾಣೆಗೆ ಸೇರಿದ ವಸತಿಗೃಹಗಳ ದುಃಸ್ಥಿತಿ ಇದು.ಸುಮಾರು 10 ಕುಟುಂಬಗಳು ನೆಲಸಲು ವಸತಿಗೃಹಗಳನ್ನ ನಿರ್ಮಿಸಲಾಗಿದೆ.ಠಾಣೆಯ ಆವರಣದಲ್ಲೇ ಲಕ್ಷಾಂತರ ಹಣ ಖರ್ಚು ಮಾಡಿ ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ.ಹಲವಾರು ವರ್ಷಗಳಿಂದ ಯಾವೊಬ್ಬ ಅಧಿಕಾರಿಯಾಗಲಿ ಅಥವಾ ಸಿಬ್ಬಂದಿಯಾಗಲಿ ಈ ವಸತಿಗೃಹದಲ್ಲಿ ನೆಲೆಸಿಲ್ಲ.ನಿರ್ಲಕ್ಷ್ಯಕ್ಕೆ ಒಳಗಾದ ವಸತಿಗೃಹಗಳನ್ನ ಸಮೀಪದ ನಿವಾಸಿಗಳು ದನಗಳ ಕೊಟ್ಟಿಗೆಯಂತೆ ಬಳಸಿಕೊಂಡಿದ್ದಾರೆ.ಪೋಲೀಸ್
Read More

ಬಾವಿಗೆ ಬಿದ್ದು ದಂಪತಿ ಸಾವು…ಎಮ್ಮೆ ತೊಳೆಯುವ ವೇಳೆ ದುರ್ಘಟನೆ…

ಮಂಡ್ಯ,ಸೆ5,Tv10 ಕನ್ನಡ ಎಮ್ಮೆ ತೊಳೆಯುವ ವೇಳೆ ಬಾವಿಗೆ ಬಿದ್ದು ದಂಪತಿ ಧಾರುಣ ಸಾವನ್ನಪ್ಪಿದ ಘಟನೆ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನಅರೆಬೊಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ. ವಸಂತಮ್ಮ(65) ಹಾಗೂ ಕಾಳೇಗೌಡ(70) ಮೃತ ದುರ್ದೈವಿಗಳು.ಎಮ್ಮೆ ತೊಳೆಯಲು ಹೋಗಿದ್ದ ವೇಳೆ ಪತ್ನಿ ತೆರೆದ ಬಾವಿಗೆ ಬಿದ್ದಿದ್ದಾರೆ.ಪತ್ನಿಯನ್ನ ರಕ್ಷಿಸಲು ಹೋದ ಪತಿ ಕೂಡ ಇಳಿದಿದ್ದಾರೆ.ಇಬ್ಬರೂ ಸಾವನ್ನಪ್ಪಿದ್ದಾರೆ.ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ…
Read More

ಅಂಗಡಿ ಮಾಲೀಕನ ಜೊತೆ ಪತ್ನಿ ಅಕ್ರಮ ಸಂಬಂಧ…ಪತಿ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಕಳ್ಳ ಪ್ರೇಮಿಗಳು…ಕಳ್ಳತನ ಆರೋಪದ ಮೇಲೆ ಜೈಲಿಗೆ

ಅಂಗಡಿ ಮಾಲೀಕನ ಜೊತೆ ಪತ್ನಿ ಅಕ್ರಮ ಸಂಬಂಧ…ಪತಿ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಕಳ್ಳ ಪ್ರೇಮಿಗಳು…ಕಳ್ಳತನ ಆರೋಪದ ಮೇಲೆ ಜೈಲಿಗೆ ಕಳಿಸುವುದಾಗಿ ಪತಿಗೆ ಬೆದರಿಕೆ…ಚಿನ್ನಾಭರಣ,ಮನೆ ಪತ್ರಗಳ ಜೊತೆ ಪತ್ನಿ ಎಸ್ಕೇಪ್… ಮೈಸೂರು,ಸೆ2,Tv10 ಕನ್ನಡ ಅಂಗಡಿ ಮಾಲೀಕನ ಜೊತೆ ಪತ್ನಿ ಅಕ್ರಮ ಸಂಬಂಧ ಬೆಳೆಸಿ ಪತಿಗೆ ಬೆದರಿಕೆ ಹಾಕಿ ಮನೆ ದಾಖಲೆ ಪತ್ರ ಹಾಗೂ ಚಿನ್ನಾಭರಣಗಳ ಸಮೇತ ಪರಾರಿಯಾಗಿರುವ ಘಟನೆ ಮೈಸೂರಿನ ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯ ಗರಡಿಕೇರಿಯಲ್ಲಿ ಬೆಳಕಿಗೆ ಬಂದಿದೆ.ಕಳ್ಳ
Read More

ರಾಷ್ಟ್ರಪತಿಗಳಿಗೆ ಆತಿಥ್ಯ ವಹಿಸಿ ಗೌರವಿಸಿದ್ದು ಅತೀವ ಸಂತೋಷ ತಂದಿದೆ…ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್…

ಮೈಸೂರು,ಸೆ2,Tv10 ಕನ್ನಡ ಭಾರತದ ಗೌರವಾನ್ವಿತ ರಾಷ್ಟ್ರಪತಿಗಳು ಮತ್ತು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರನ್ನು ನಮ್ಮ ನಿವಾಸದಲ್ಲಿ ಸ್ವಾಗತಿಸಲು ನನಗೆ ಅಪಾರ ಸಂತೋಷ ಮತ್ತು ಹೆಮ್ಮೆ ಮತ್ತು ನನ್ನ ಆಹ್ವಾನವನ್ನು ಸ್ವೀಕರಿಸಿ ಗೌರವಿಸಿದ್ದಕ್ಕಾಗಿ ನಾನು ಅವರಿಗೆ ಹೃತ್ಪೂರ್ವಕವಾಗಿ ಧನ್ಯವಾದ ಹೇಳುತ್ತೇನೆ. ಈ ಹೆಮ್ಮೆ ಮತ್ತು ಗೌರವದ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ ಎಂದು ರಾಜವಂಶಸ್ಥೆ ಪ್ರಮೋದದೇವಿ ಒಡೆಯರ್ ತಿಳಿಸಿದ್ದಾರೆ.ಬೆಳಗಿನ ಉಪಹಾರದ ಮೆನು… ಎಳನೀರು, ಕಿವಿ, ಪ್ಲಮ್ ಮತ್ತು ಪಪ್ಪಾಯಿ ಸೇರಿದಂತೆ ಹಣ್ಣುಗಳು…ಸಾಂಪ್ರದಾಯಿಕ
Read More

ಆಸ್ತಿ ಹಂಚಿಕೆ ವಿಚಾರ…ಸಹೋದರರ ನಡುವೆ ಗಲಾಟೆ ಅಣ್ಣನ ಕೊಲೆಯಲ್ಲಿ ಅಂತ್ಯ…

ಮೈಸೂರು,ಸೆ1,Tv10 ಕನ್ನಡ ಆಸ್ತಿ ಹಂಚಿಕೆ ವಿಚಾರದಲ್ಲಿ ತಮ್ಮನೇ ಅಣ್ಣನನ್ನ ಭೀಕರವಾಗಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಇಲವಾಲ ಪೊಲೀಸ್ ಠಾಣಾ ವ್ಯಾಪ್ತಿಯ ಬೋರೆ ಆನಂದೂರು ಗ್ರಾಮದಲ್ಲಿ ನಡೆದಿದೆ. ಅಣ್ಣ ಮಹೇಶ್ (45) ಮೃತ ದುರ್ದೈವಿ. ತಮ್ಮ ರವಿ (43) ಕೊಲೆ ಆರೋಪಿಯಾಗಿದ್ದು, ತಲೆ ಮರೆಸಿಕೊಂಡಿದ್ದಾನೆ. ಈತ ತನ್ನ ತಂದೆ, ಕೃಷ್ಣೇಗೌಡ, ಅತ್ತಿಗೆ ಲಕ್ಷಿ ಮೇಲೂ ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾನೆ. ತಂದೆ ಕೃಷ್ಣೇಗೌಡ ಇತ್ತೀಚೆಗೆ ಅಣ್ಣ ತಮ್ಮಂದಿರಿಗೆ ಜಮೀನು ಹಂಚಿಕೆ
Read More

ವಿಷ್ಣು ಸಮಾಧಿ ಇದ್ದ ಸ್ಥಳ ಮುಟ್ಟುಗೋಲು…ಮೈಸೂರಿನಲ್ಲಿ ಅಭಿಮಾನಿಗಳ ಸಂಭ್ರಮ…

ಮೈಸೂರು,ಆ29,Tv10 ಕನ್ನಡ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಸಮಾಧಿ ಇದ್ದ ಸ್ಥಳವನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡ ಕ್ರಮವನ್ನ ಅಭಿಮಾನಿಗಳು ಸಂತಸದಿಂದ ಸ್ವಾಗತಿಸಿದ್ದಾರೆ. ಪುಣ್ಯಭೂಮಿಯನ್ನುಸಂರಕ್ಷಿಸಲು ಮುಂದಾಗಿರುವ ಸರ್ಕಾರದ ನಿಲುವನ್ನು ಸಮರ್ಥಿಸಿದ್ದಾರೆ. ವಿಷ್ಣುವರ್ಧನ್ ಅಭಿಮಾನಿಗಳು ಮೈಸೂರಿನ ಅಗ್ರಹಾರ ವೃತ್ತದಲ್ಲಿ ಸಾಹಸಸಿಂಹ ನ ಭಾವಚಿತ್ರ ಹಿಡಿದು ಜೈಕಾರ ಕೂಗುತ್ತಾ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.ಅಭಿಮಾನಿಗಳ 15 ವರ್ಷಗಳ ಹೋರಾಟಕ್ಕೆ ಸಂದ ಜಯ ಎಂದು ಬಣ್ಣಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ವಿಷ್ಣುವರ್ಧನ್ ಅಭಿಮಾನಿಗಳ ಒಕ್ಕೂಟದ ಅಧ್ಯಕ್ಷ ಎಂ
Read More

ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಸ್ತಾಕ್ ಆಯ್ಕೆ ಹಿಂಪಡೆಯಿರಿ…ಮೈಸೂರಿನಲ್ಲಿ ಪ್ರತಿಭಟನೆ

ಮೈಸೂರು,ಆ29,Tv10 ಕನ್ನಡ ದಸರಾ ಉದ್ಘಾಟನೆಗೆ ಸಾಹಿತಿ ಬಾನು ಮುಸ್ತಾಕ್ ಆಯ್ಕೆ ಮಾಡಿರುವ ವಿಚಾರ ದಿನೇ ದನೇ ವಿರೋಧ ಹೆಚ್ಚಾಗುತ್ತಿದೆ.ಆಯ್ಕೆ ಹಿಂಪಡೆಯುವಂತೆ ಅಗ್ರಹಿಸಿ ಮೈಸೂರಿನಲ್ಲಿ ಪ್ರತಿಭಟನೆ ನಡೆದಿದೆ.ಹಳೇ ಜಿಲ್ಲಾಧಿಕಾರಿ ಬಳಿ ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ನಡೆಸಿದ್ದಾರೆ.ತಾಯಿ ಚಾಮುಂಡೇಶ್ವರಿಯನ್ನ ನವರಾತ್ರಿಯ 9 ದಿನಗಳ ಕಾಲ ಆರಾಧಿಸುವ ಹಿಂದೂಗಳು ಈ ಆಯ್ಕೆಯನ್ನ ವಿರೋಧಿಸುತಿದ್ದೇವೆ.ಕನ್ನಡಾಂಬೆ ತಾಯಿ ಭುವನೇಶ್ವರಿಯ ಬಗ್ಗೆ, ಅರಿಶಿನ ಕುಂಕುಮದ ಬಗ್ಗೆ, ಕನ್ನಡ ಭಾಷೆಯ ವೈಶಾಲ್ಯತೆಯ ಬಗ್ಗೆ, ನಾಡಿನ ಸಂಸ್ಕೃತಿಯ ಬಗ್ಗೆ ಸಂಕುಚಿತವಾಗಿ
Read More

ಧರ್ಮಸ್ಥಳ ವಿವಾದ…ಮೈಸೂರಿನಲ್ಲೂ ಮಹೇಶ್ ತಿಮ್ಮರೋಡಿ ಸಭೆ…?ಎರಡು ವರ್ಷಗಳ ಹಿಂದಿನ ಫೋಟೋ ವೈರಲ್…

ಮೈಸೂರು,ಆ29,Tv10 ಕನ್ನಡ ಧರ್ಮಸ್ಥಳದ ವಿಚಾರವಾಗಿ ಮಹೇಶ್ ತಿಮ್ಮರೋಡಿ ಮೈಸೂರಿನಲ್ಲೂ ಸಭೆ ನಡೆಸಿದ್ದ ಬಗ್ಗೆ ಗುಮಾನಿ ವ್ಯಕ್ತವಾಗಿದೆ.ಸದ್ಯ ಮೈಸೂರು ಹುಣಸೂರು ರಸ್ತೆಯಲ್ಲಿರುವ ಸರ್ಕಾರಿ ಅತಿಥಿ ಗೃಹದ ಮುಂಭಾಗ ನಿಂತಿರುವ 2 ವರ್ಷದ ಹಿಂದಿನ ಪೋಟೋ ವೈರಲ್ ಆಗಿದೆ.ಪ್ರವೀಣ್ ಎಂಬುವರುಸಾಮಾಜಿಕ ಜಾಲತಾಣದಲ್ಲಿ ಪೋಟೋ ಹಂಚಿಕೊಂಡಿದ್ದಾರೆ.ಅಂದು ತಿಮ್ಮರೋಡಿ ಜೊತೆಗಿದ್ದ ವಸಂತ್ ಗಿಳಿಯಾರ್ ಕಾಣಿಸಿಕೊಂಡಿದ್ದಾರೆ.ಇಂದು ತಿಮ್ಮರೋಡಿ ವಿರುದ್ದ ಹಾಗೂ ಧರ್ಮಸ್ಥಳದ ಪರ ಧ್ವನಿ ಎತ್ತಿದ್ದಾರೆ.ಅಣ್ಣನ ಜೊತೆ ಎರಡು ವರ್ಷದ ಹಿಂದೆ ಸತ್ಯಶೋಧನೆ ಆರಂಭದ ದಿನ ಅಂತಾ
Read More

ಕಡಿಮೆ ದರದಲ್ಲಿ ಸಿಮೆಂಟ್,ಕಬ್ಬಿಣ ಕೊಡಿಸುವ ಆಮಿಷ…2.30 ಕೋಟಿ ಪಂಗನಾಮ…ರಾತ್ರೋ ರಾತ್ರಿ ಎಸ್ಕೇಪ್…ದಂಪತಿ ವಿರುದ್ದ FIR…

ಮೈಸೂರು,ಆ28,Tv10 ಕನ್ನಡ ಕಡಿಮೆ ದರದಲ್ಲಿ ಸಿಮೆಂಟ್ ಹಾಗೂ ಕಬ್ಬಿಣ ಕೊಡಿಸುವುದಾಗಿ ನಂಬಿಸಿದ ದಂಪತಿ 16 ಮಂದಿಗೆ 2,30,85,000/- ವಂಚಿಸಿ ಪರಾರಿಯಾದ ಘಟನೆ ಮೈಸೂರಿನ ಶ್ರೀರಾಂಪುರ ಬಡಾವಣೆಯಲ್ಲಿ ಬೆಳಕಿಗೆ ಬಂದಿದೆ.ಈ ಸಂಬಂಧ ವಂಚನೆಗೆ ಒಳಗಾದ 16 ಮಂದಿ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದಂಪತಿ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.ರಾತ್ರೋ ರಾತ್ರಿ ದಂಪತಿ ಮನೆ ಹಾಗೂ ಮಳಿಗೆ ಬೀಗ ಹಾಕಿ ಎಸ್ಕೇಪ್ ಆಗಿದೆ. ಶ್ರೀರಾಂಪುರದಲ್ಲಿರುವ ಶುಭಂ ಸ್ಟೀಲ್ಸ್ ಅಂಡ್ ಸಿಮೆಂಟ್ಸ್ ಮತ್ತು ಬಿಲ್ಡರ್ಸ್ ಸಂಸ್ಥೆಯ
Read More

ಮಹಿಳಾ ಪೌರಕಾರ್ಮಿಕರಿಗೆ ಬಾಗಿನ…ಗೌರಿ ಗಣೇಶ ಹಬ್ಬದ ಅಂಗವಾಗಿ ಕಾರ್ಯಕ್ರಮ…

ಮಹಿಳಾ ಪೌರಕಾರ್ಮಿಕರಿಗೆ ಬಾಗಿನ…ಗೌರಿ ಗಣೇಶ ಹಬ್ಬದ ಅಂಗವಾಗಿ ಕಾರ್ಯಕ್ರಮ… ಮೈಸೂರು,ಆ22,Tv10 ಕನ್ನಡ ಅಥರ್ವ ಲೈಫ್ ಸ್ಕಿಲ್ಸ್ ಫೌಂಡೇಶನ್ ಹಾಗೂಕರುಣೆ ಸೇವಾ ಟ್ರಸ್ಟ್ ವತಿಯಿಂದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಅರಮನೆಯಲ್ಲಿ ಸ್ವಚ್ಛತಾ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕ ಮಹಿಳೆಯರಿಗೆ ಬಾಗಿನ ನೀಡಿ ಗೌರವಿಸಲಾಯಿತು.ಅರಿಶಿಣ -ಕುಂಕುಮ, ಸೀರೆ, ಬಳೆ ಮೊರದ ಬಾಗಿನ ನೀಡಲಾಯಿತು.ಇದೇ ವೇಳೆ ಮಾತನಾಡಿದಕರುಣೆ ಸೇವಾ ಟ್ರಸ್ಟ್ ಅಧ್ಯಕ್ಷರಾದ ರುಕ್ಮಿಣಿಮೈಸೂರಿನ ಅರಮನೆ ಸುಂದರವಾಗಿ ಹಾಗೂ ಸ್ವಚ್ಛವಾಗಿ ಕಾಣಲು ಪೌರಕಾರ್ಮಿಕರ ಶ್ರಮ ಹೆಚ್ಚು.ಅಂಥವರನ್ನು
Read More