TV10 Kannada Exclusive

ಖಾಸಗಿ ಕಂಪನಿ ಸಲಹೆ ಮೇರೆಗೆ ಶೇರು ಮಾರುಕಟ್ಟೆಯಲ್ಲಿ ಹೂಡಿದ ಹಣ ಗಾಯಬ್…64 ಲಕ್ಷ ಕಳೆದುಕೊಂಡ ವೃದ್ದ…

ಮೈಸೂರು,ಫೆ10,Tv10 ಕನ್ನಡ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿದರೆ ಹೇರಳ ಲಾಭ ಪಡೆಯಬಹುದೆಂದು ಖಾಸಗಿ ಕಂಪನಿಯೊಂದು ನೀಡಿದ ಸಲಹೆ ನಂಬಿ ಮೈಸೂರಿನ ವೃದ್ದರೊಬ್ಬರು 64 ಲಕ್ಷ ಹಣ ಕಳೆದುಕೊಂಡಿದ್ದಾರೆ.ಜಯಲಕ್ಷ್ಮೀಪುರಂ ನಿವಾಸಿ ರವಿರಾಮ್ ಚಂದ್ರನ್(76) ಹಣ ಕಳೆದುಕೊಂಡವರು.ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿ ಲಾಭಗಳಿಸಲು ಚಿಂತಿಸಿದ ರವಿರಾಮಚರಣ್ ರವರು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸರ್ಚ್ ಮಾಡಿದಾಗ A9 FEDILITY EXCHANGE GROUP MUMBAI ನವರು ಸಲಹೆ ನೀಡಲು ಮುಂದಾಗಿದ್ದಾರೆ.ಸಂಸ್ಥೆ ನೀಡಿದ ಸಲಹೆ ಮೇರೆಗೆ
Read More

ಫೆ.11 ಸುತ್ತೂರಿಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಭೇಟಿ…

ಮೈಸೂರು,ಫೆ10,Tv10 ಕನ್ನಡ ಫೆಬ್ರವರಿ 11 ರಂದು ಸುತ್ತೂರಿಗೆ ಕೇಂದ್ರ ಗೃಹಮಂತ್ರಿ ಹಾಗೂ ಸಹಕಾರ ಸಚಿವ ಸುತ್ತೂರಿಗೆ ಭೇಟಿ ನೀಡಲಿದ್ದಾರೆ.ಅಂದು ಬೆಳಿಗ್ಗೆ 11 ಗಂಟೆಗೆ ಸುತ್ತೂರು ಕ್ಷೇತ್ರದಲ್ಲಿ ನಿರ್ಮಿಸಲಾಗಿರುವ ಶ್ರೀಮತಿ ಪಾರ್ವತಮ್ಮ ಹಾಗೂ ಶ್ರೀ ಶಾಮನೂರು ಶಿವಶಂಕರಪ್ಪ ರವರ ಅತಿಥಿ ಗೃಹವನ್ನ ಉದ್ಘಾಟಿಸಲಿದ್ದಾರೆ.ಫೆ10 ರಂದು ನಿಗದಿಯಾಗಿದ್ದ ಕಾರ್ಯಕ್ರಮ ಒಂದು ದಿನ ಮುಂದೂಡಲಾಗಿದ್ದು ಫೆ.11 ಕ್ಕೆ ನಡೆಯಲಿದೆ.ಸಂಸತ್ ಅಧಿವೇಶನ‌ ಮುಂದೂಡಿರುವ ಕಾರಣ ಸುತ್ತೂರು ಕ್ಷೇತ್ರದ ಕಾರ್ಯಕ್ರಮವನ್ನೂ ಸಹ ಒಂದು ದಿನ ಮುಂದೂಡಲಾಗಿದೆ…
Read More

ಶಾಲೆ ಮಿನಿಬಸ್ ಗೆ ಟ್ಯಾಂಕರ್ ಢಿಕ್ಕಿ…7 ಮಕ್ಕಳಿಗೆ ಗಾಯ…

ಮೈಸೂರು,ಫೆ10,Tv10 ಕನ್ನಡ ಖಾಸಗಿ ಶಾಲೆಯ ಮಿನಿ ಬಸ್‌ಗೆ ಟ್ಯಾಂಕರ್ ಡಿಕ್ಕಿಹೊಡೆದ ಪರುಣಾಮ 7 ಮಕ್ಕಳು ಗಾಯಗೊಂಡ ಘಟನೆ ಕೆ.ಆರ್.ನಗರದ ಭೇರ್ಯ ಬಳಿಯ ಕುರುಬ ಹಳ್ಳಿ ಗೇಟ್ ಬಳಿ ನಡೆದಿದೆ.ಢಿಕ್ಕಿ ಹೊಡೆದ ರಭಸಕ್ಕೆ ಮಕ್ಕಳನ್ನ ಕರೆದೊಯ್ಯುತ್ತಿದ್ದ ಮಿನಿ ಬಸ್ಉರುಳಿ ಬಿದ್ದಿದೆ.ಭೇರ್ಯ ಗ್ರಾಮದ ಕಡೆಯಿಂದ ಸಾಲಿಗ್ರಾಮಕ್ಕೆ ತೆರಳುತ್ತಿದ್ದ ಟ್ಯಾಂಕರ್ಕುರುಬಹಳ್ಳಿ ಗ್ರಾಮದಿಂದ ಮಿರ್ಲೆ ಗ್ರಾಮಕ್ಕೆ ಮಿನಿ ಬಸ್ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ.ಮಿನಿ ಬಸ್‌ನಲ್ಲಿದ್ದ 15 ಮಕ್ಕಳ ಪೈಕಿ 7 ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದೆ.ಸಾಲಿಗ್ರಾಮ
Read More

ಕೇಂದ್ರೀಯ ಭಾಷಾ ಸಂಶೋಧನಾ ಸಂಸ್ಥೆ ಹಿರಿಯ ಸಂಶೋಧಕಿಗೆ ಸಹದ್ಯೋಗಿಯಿಂದ ಲೈಂಗಿಕ ಕಿರುಕುಳ…ನಗ್ನ ಚಿತ್ರಗಳನ್ನ ಕಳುಹಿಸಿ ಮಾನಸಿಕ ಹಿಂಸೆ…FIR ದಾಖಲು…

ಮೈಸೂರು,ಫೆ9,Tv10 ಕನ್ನಡ ಮೈಸೂರಿನ ಕೇಂದ್ರೀಯ ಭಾಷಾ ಸಂಶೋಧನಾ ಸಂಸ್ಥೆಯಲ್ಲಿ ಹಿರಿಯ ಸಂಪನ್ಮೂಲ ವ್ಯಕ್ತಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಡಾ.ಕೋಮಲಾ(ಹೆಸರು ಬದಲಿಸಲಾಗಿದೆ) ಎಂಬುವರಿಗೆ ಸಹದ್ಯೋಗಿ ಸಂತೋಷ್ ಕುಮಾರ್ ಮೊಹಂತಿ ಎಂಬುವರು ಮೊಬೈಲ್ ನಲ್ಲಿ ನಿರಂತರವಾಗಿ ತನ್ನ ನಗ್ನ ಚಿತ್ರಗಳನ್ನ ಕಳುಹಿಸುವ ಮೂಲಕ ಲೈಂಗಿಕ ಕಿರುಕುಳ ನೀಡುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.ತಮಗಾದ ಕಿರುಕುಳಕ್ಕೆ ಬೇಸತ್ತ ಡಾ.ಕೋಮಲಾ ನ್ಯಾಯಾಲಯದ ಮೊರೆ ಹೋಗಿ ಅನುಮತಿ ಪಡೆದು ಕಿರುಕುಳ ನೀಡುತ್ತಿರುವ ಸಂತೋಷ್ ಕುಮಾರ್ ಮೊಹಂತಿ ಮೇಲೆ ವಿವಿ ಪುರಂ
Read More

ಸಾಂಸ್ಕೃತಿಕ ನಗರಿಯಲ್ಲಿ ಪಂಚಗರುಡೋತ್ಸವ ಸಂಭ್ರಮ…ಯದಯವೀರ್ ರಿಂದ ಮೆರವಣಿಗೆ ಉದ್ಘಾಟನೆ…

ಮೈಸೂರು,ಫೆ9,Tv10 ಕನ್ನಡ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮೊಟ್ಟಮೊದಲ ಬಾರಿಗೆ ಪಂಚಗರುಡೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ವಿವಿ ಮೊಹಲ್ಲಾ ಕಾಳಿದಾಸ ರಸ್ತೆಯಲ್ಲಿರುವ ಯದುಗಿರಿ ಯತಿರಾಜ ಮಠ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಪಂಚಗರುಡೋತ್ಸವ ಮೆರವಣಿಗೆಗೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ಚಾಲನೆ ನೀಡಿದರು.ಪರಕಾಲ ಮಠದ ಪೀಠಾಧಿಪತಿಗಳಾದ ಶ್ರೀಮದಭಿನವ ವಾಗೀಶ ಬ್ರಹ್ಮತಂತ್ರ ಪರಕಾಲ ಸ್ವಾಮಿ ಹಾಗೂ ಮೇಲುಕೋಟೆ ಶ್ರೀ ಯದುಗಿರಿ ಯತಿರಾಜ ಮಠದ ಪೀಠಾಧಿಪತಿಗಳಾದ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯವರ್
Read More

ಅಗಸ್ತ್ಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆ…

ಮೈಸೂರು,ಫೆ9,Tv10 ಕನ್ನಡ ನಗರದ ಕೃಷ್ಣಮೂರ್ತಿ ಪುರಂನಲ್ಲಿರುವ ಅಗಸ್ತ್ಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 2024-2029ರ ಅವಧಿಗೆ ಅಧ್ಯಕ್ಷರಾಗಿ ಎಂ ಡಿ ಗೋಪಿನಾಥ್, ಉಪಾಧ್ಯಕ್ಷರಾಗಿ ಎಂ ಎನ್ ಸೌಮ್ಯ ಹಾಗೂ ಖಜಾಂಚಿಯಾಗಿ ಕೆ ನಾಗರಾಜ ರವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಸಂಘದ ರಿಟರ್ನಿಂಗ್ ಅಧಿಕಾರಿಯವರಾದ ಶ್ರೀ ಬಿ ರಾಜುರವರು ಪದಾಧಿಕಾರಿಗಳಿಗೆ ಹಾಗೂ ನಿರ್ದೇಶಕ ಮಂಡಲಿ ಸದಸ್ಯರಿಗೆ ಪ್ರಮಾಣಪತ್ರ ನೀಡಿ ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರು ಹಾಗೂ ಹಾಲಿ ನಿರ್ದೇಶಕರಾದ ಸಿ ವಿ
Read More

ಪೊಲೀಸರು ವಶಪಡಿಸಿಕೊಂಡಿದ್ದ ಮಾದಕ ದ್ರವ್ಯಗಳು ನಿಯಮಾನುಸಾರ ನಾಶ…

ದಾಬಸ್ ಪೇಟ್,ಫೆ9,Tv10 ಕನ್ನಡ ಕರ್ನಾಟಕ ರಾಜ್ಯ ಪೊಲೀಸ್ ವತಿಯಿಂದ ಮಾನ್ಯ ಗೃಹ ಸಚಿವರ ಸಮ್ಮುಖದಲ್ಲಿ ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ದಾಬಸ್ ಪೇಟೆಯಲ್ಲಿರುವ Karnataka waste management project ಘಟಕದಲ್ಲಿ ಮಾದಕ ದ್ರವ್ಯ ವಿನಾಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮೈಸೂರು ನಗರದ ಪೊಲೀಸ್ ಠಾಣೆಗಳಲ್ಲಿ ಎನ್‌ಡಿಪಿಎಸ್ ಕಾಯಿದೆ ಅಡಿಯಲ್ಲಿ ಅಮಾನತು ಪಡಿಸಿಕೊಂಡಿದ್ದ ಮಾದಕ ದ್ರವ್ಯಗಳಲ್ಲಿ ನ್ಯಾಯಾಲಯದಿಂದ ವಿಲೇವಾರಿಗೆ ಅನುಮತಿಯಾಗಿದ್ದ ಒಟ್ಟು 38 ಪ್ರಕರಣಗಳಲ್ಲಿ 134 ಕೆಜಿ 291 ಗ್ರಾಂ
Read More

9 ಕೋಟಿ ಆಸೆಗೆ ಮರುಳಾಗಿ 65 ಲಕ್ಷ ಕಳೆದುಕೊಂಡ ವೃದ್ದೆ…ಆನ್ ಲೈನ್ ದೋಖಾ…

ಮೈಸೂರು,ಫೆ9,Tv10 ಕನ್ನಡ 9.16 ಕೋಟಿ ಆಸೆಗೆ ಮರುಳಾಗಿ ವೃದ್ದೆಯೊಬ್ಬರು 65.76 ಲಕ್ಷ ಕಳೆದುಕೊಂಡ ಪ್ರಕರಣವೊಂದು ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಬೋಗಾದಿಯ ನಿವಾಸಿ ಗೀತಾ ನಾಯರ್ (65) ಹಣ ಕಳೆದುಕೊಂಡ ವೃದ್ದೆ.9,16,98,663/- ಗೂಗಲ್ ಅವಾರ್ಡ್ ಬಂದಿದೆ ಇದನ್ನ ಪಡೆದುಕೊಳ್ಳಲು ಕೆಲವು ಚಾರ್ಜಸ್ ಕಟ್ಟಬೇಕು ಎಂಬ ಮೆಸೇಜ್ ನಂಬಿದ ಗೀತಾ ನಾಯರ್ ಹಂತಹಂತವಾಗಿ 65,72,376/- ರೂಗಳನ್ನ ಪಾವತಿಸಿದ್ದಾರೆ.ಮತ್ತಷ್ಟು ಹಣ ಪಾವತಿಸುವಂತೆ ಹೇಳಿದಾಗ ಅನುಮಾನಗೊಂಡು ಹಣ ಪಾವತಿಸುವುದನ್ನ ಸ್ಥಗಿತಗೊಳಿಸಿದ್ದಾರೆ.ನಂತರ ತಾವು ವಂಚನೆಗೆ ಒಳಗಾಗಿರುವುದು ಖಚಿತವಾಗಿ
Read More

ಮೈಸೂರು:ನೇಣು ಬಿಗಿದು ವಕೀಲ ಆತ್ಮಹತ್ಯೆ…

ಮೈಸೂರು,ಫೆ8,Tv10 ಕನ್ನಡ ವಕೀಲರೊಬ್ಬರು ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ರಾಜೀವ್ ನಗರದಲ್ಲಿ ನಡೆದಿದೆ.ನಿಂಗರಾಜು(33) ಮೃತ ದುರ್ದೈವಿ.ಮಾನಸಿಕ ಖಿನ್ನತೆ ಆತ್ಮಹತ್ಯೆಗೆ ಕಾರಣ ಎಂದು ಹೇಳಲಾಗಿದೆ.ನಿಂಗರಾಜು ಆತ್ಮಹತ್ಯೆ ಹಿನ್ನಲೆ ನ್ಯಾಯಾಲಯದಲ್ಲಿ ವಕೀಲರು ಮೌನ ಆಚರಿಸಿ ಶ್ರದ್ದಾಂಜಲಿ ಅರ್ಪಿಸಿದ್ದಾರೆ.ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…
Read More

ರಾಜ್ಯಕ್ಕೆ ಕೇಂದ್ರದಿಂದ ಅನ್ಯಾಯ ಆರೋಪ…ದೆಹಲಿಯಲ್ಲಿ ಕಾಂಗ್ರೆಸ್ ಫ್ರತಿಭಟನೆ…

ದೆಹಲಿ,ಫೆ7,Tv10 ಕನ್ನಡ ಕನ್ನಡರಾಜ್ಯಕ್ಕೆ ಸರಿಯಾಗಿ ಅನುದಾನ ನೀಡಿಲ್ಲ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ ದ ವತಿಯಿಂದ ಪ್ರತಿಭಟನೆ ನಡೆಯಿತು.ಈ ವೇಳೆ ಮಾತನಾಡಿದ ಸಿಎಂ ಇದು ರಾಜಕೀಯ ಚಳವಳಿ ಅಲ್ಲ,ಇದು ರಾಜಕೀಯೇತರ ಚಳವಳಿ, ಕರ್ನಾಟಕ ಕನ್ನಡಿಗರ ಹಿತ ಕಾಯಲು ಮಾಡುತ್ತಿರುವ ಪ್ರತಿಭಟನೆ ಎಂದು ತಿಳಿಸಿದರು.ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ, ಈ ಪ್ರತಿಭಟನೆ ಯಾವುದೇ ಪಕ್ಷದ ವಿರುದ್ಧ ಅಲ್ಲ ಎಂದು ಸ್ಪಷ್ಟಪಡಿಸಿದರು.ಕರ್ನಾಟಕ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು
Read More