TV10 Kannada Exclusive

ಬೀದಿ ನಾಯಿಗಳ ದಾಳಿ…ಜಿಂಕೆ ಬಲಿ…

ನಂಜನಗೂಡು,ಮಾ1,Tv10 ಕನ್ನಡ ಬೀದಿನಾಯಿಗಳ ದಾಳಿಗೆ ಜಿಂಕೆಯೊಂದು ಬಲಿಯಾಗಿರುವ ಘಟನೆ ನಂಜನಗೂಡು ತಾಲ್ಲೂಕಿನ ಏಚಗುಂಡ್ಲ ಗ್ರಾಮದಲ್ಲಿ ನಡೆದಿದೆ.ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಜಿಂಕೆಯನ್ನು ಬೀದಿ ನಾಯಿಗಳು ಸುತ್ತು ವರೆದು ಪ್ರಾಣ ತೆಗೆದಿವೆ.ಸ್ಥಳೀಯ ರೈತರೊಬ್ಬರು ನಾಯಿಗಳಿಂದ ಜಿಂಕೆ ರಕ್ಷಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ. ನಂಜನಗೂಡು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾಯಿಗಳ ದಾಳಿಗೆ ಬಲಿಯಾಗಿರುವ ಜಿಂಕೆಯನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ…
Read More

ಸಾಲಗಾರರ ಕಿರುಕುಳ…ಡೆತ್ ನೋಟ್ ಬರೆದು ಲೇಡೀಸ್ ಪಿಜಿ ಓನರ್ ಆತ್ಮಹತ್ಯೆ…12 ಮಂದಿ ವಿರುದ್ದ FIR ದಾಖಲು…

ಮೈಸೂರು,ಮಾ1,Tv10 ಕನ್ನಡ ಸಾಲಗಾರರ ಕಾಟಕ್ಕೆ ಬೇಸತ್ತ ಲೇಡೀಸ್ ಪಿಜಿ ಓನರ್ ಡೆತ್ ನೋಟ್ ಬರೆದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ರೈಲ್ವೆ ಬಡಾವಣೆಯಲ್ಲಿ ನಡೆದಿದೆ.ಜಯಶ್ರೀ ಆತ್ಮಹತ್ಯೆಗೆ ಶರಣಾದ ಲೇಡೀಸ್ ಪಿಜಿ ಓನರ್.ವಿಜಯನಗರ ನಿವಾಸಿಗಳಾದ ಸಾವಿತ್ರಿ,ಸುಕನ್ಯ,ಪ್ರೇಮಾ,ದೇವಮ್ಮ,ಸಾಕಮ್ಮ,ಪುಷ್ಪಲತಾ,ಪುಷ್ಪ,ಸುಮ,ಶೋಭಾ,ವಿಜಯ,ಫೈನಾನ್ಸ್ ಮಾಲೀಕ ಪ್ರದೀಪ್ ಹಾಗೂ ಕುಮಾರ್ ಎಂಬುವರು ಕಿರುಕುಳ ನೀಡುತ್ತಿದ್ದಾರೆಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿರುವ ಹಿನ್ನಲೆ FIR ದಾಖಲಾಗಿದೆ. ಕಳೆದ 10 ವರ್ಷಗಳಿಂದ ಜಯಶ್ರೀ ರವರು
Read More

ಸಾಗುವಳಿ ಚೀಟಿ ನೀಡಲು ಲಂಚ…ಹೆಚ್.ಡಿ.ಕೋಟೆ ಗ್ರಾಮ ಸಹಾಯಕ ಲೋಕಾ ಬಲೆಗೆ…

ಮೈಸೂರು,ಫೆ29,Tv10 ಕನ್ನಡ ರೈತರೊಬ್ಬರಿಗೆ ಸಾಗುವಳಿ ಚೀಟಿ ನೀಡಲು ಲಂಚ ಪಡೆಯುತ್ತಿದ್ದ ಗ್ರಾಮ ಸಹಾಯಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಹೆಚ್.ಡಿ.ಕೋಟೆ ತಹಸೀಲ್ದಾರ್ ಕಚೇರಿ ಗ್ರಾಮ ಸಹಾಯಕ ಕೃಷ್ಣ(32)ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಸಹಾಯಕ.20 ಸಾವಿರಕ್ಕೆ ಲಂಚದ ಬೇಡಿಕೆ ಇಟ್ಟಿದ್ದುಮುಂಗಡವಾಗಿ 15,000 ಸ್ವೀಕರಿಸಿದ್ದರು.ಉಳಿದ 5 ಸಾವಿರ ಲಂಚದ ಹಣ ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳಿಗೆ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾನೆ.ಹುಣಸೂರು ನಿವಾಸಿ ಮರಿಸ್ವಾಮಿ ಎಂಬುವರಿಂದ ಲಂಚದ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಲೋಕಾಯುಕ್ತ
Read More

ಖಾಸಗಿ ಕಂಪನಿ ಸಲಹೆ ಮೇರೆಗೆ ಶೇರ್ ಮಾರ್ಕೆಟ್ ನಲ್ಲಿ ಹಣಹೂಡಿಕೆ…ಗೃಹಿಣಿಗೆ 33 ಲಕ್ಷ ವಂಚನೆ…

ಮೈಸೂರು,ಫೆ27,Tv10 ಕನ್ನಡ ಇನ್ಸ್ಟಾಗ್ರಾಮ್ ಮೂಲಕ ವಾಟ್ಸಾಪ್ ಗ್ರೂಪ್ ಗೆ ಸೇರಿದ ಗೃಹಿಣಿಯೊಬ್ಬರು ಅವರ ಸಲಹೆ ಸೂಚನೆ ಮೇರೆಗೆ ಶೇರ್ ಗಳ ಮೇಲೆ ಹೂಡಿದ ಹಣ ವಂಚನೆಯಾಗಿದೆ.ಮೈಸೂರಿನ ನಿವೇದಿತಾನಗರ ನಿವಾಸಿ ಮಹಾಲಕ್ಷ್ಮಿ 33,11,164/- ರೂ ಹಣ ಕಳೆದುಕೊಂಡಿದ್ದಾರೆ.ಇನ್ಸ್ಟಾಗ್ರಾಂ ಲಿಂಕ್ ಕ್ಲಿಕ್ ಮಾಡಿ Mining potential what’s up ಗ್ರೂಪ್ ಸೇರಿದ್ದಾರೆ.ಇವರ ಸಲಹೆ ಸೂಚನೆ ಮೇರೆಗೆ demat ಅಕೌಂಟ್ ನಲ್ಲಿ ಶೇರ್ ಗಳನ್ನ‌ ಖರೀದಿಸಲು ಸಾಧ್ಯವಾಗಿಲ್ಲ.ಕಾರಣ skyrim capital institution ಎಂಬ ಕಂಪನಿಯಲ್ಲಿ
Read More

ಚಿಕ್ಕಮ್ಮನ ಮಗಳ ಕೈಚಳಕ…45 ಗ್ರಾಂ ಚಿನ್ನಾಭರಣ ಕಳುವು…48 ಗಂಟೆಗಳಲ್ಲಿ ಆರೋಪಿ ಪೊಲೀಸರ ವಶಕ್ಕೆ…

ಮೈಸೂರು,ಫೆ25,Tv10 ಕನ್ನಡ ಮನೆಯಲ್ಲಿ ಇಟ್ಟಿದ್ದ 45 ಗ್ರಾಂ ಚಿನ್ನದ ಆಭರಣಗಳನ್ನ ಕಳುವು ಮಾಡಿದ ಚಿಕ್ಕಮ್ಮನ ಮಗಳು ಪೊಲೀಸರ ಅತಿಥಿಯಾದ ಘಟನೆ ಮೇಟಗಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಲಿಂಗಪುರದಲ್ಲಿ ನಡೆದಿದೆ.ರಾಧಾಶ್ರೀ (26) ಚಿನ್ನದ ಆಭರಣಗಳನ್ನ ಕಳುವು ಮಾಡಿದ ಆರೋಪಿ.ಸಿದ್ದಲಿಂಗಪುರದ ಜಾಹ್ನವಿ ರವರು ತಮ್ಮ ತಾಯಿ ಬಳಿಯಿಂದ ಪಡೆದಿದ್ದ 45 ಗ್ರಾಂ ತೂಕದ ಚಿನ್ನಾಭರಣಗಳನ್ನ ಪರ್ಸ್ ಒಂದರಲ್ಲಿ ಮನೆಯ ಕಿಟಕಿ ಬಳಿ ಇಟ್ಟು ಕೆಲಸಕ್ಕೆ ತೆರಳಿದ್ದರು.ಈ ವೇಳೆ ಮನೆಯಲ್ಲಿದ್ದ ಚಿಕ್ಕಮ್ಮನ ಮಗಳು ರಾಧಾಶ್ರೀ
Read More

ಸಿಸಿಬಿ ಪೊಲೀಸರ ಕಾರ್ಯಾಚರಣೆ…ಮಾರಕಾಸ್ತ್ರಗಳ ಸಮೇತ ರೌಡಿ ಶೀಟರ್ ಅಂದರ್…ಮೂರು ಡ್ರಾಗರ್ ವಶಕ್ಕೆ…

ಮೈಸೂರು,ಫೆ25,Tv10 ಕನ್ನಡ ರೌಡಿಶೀಟರ್ ಗಳ ಹುಟ್ಟಡಗಿಸಲು ಮೈಸೂರು ಸಿಸಿಬಿ ಪೊಲೀಸ್ ಮಿಂಚಿನ ಕಾರ್ಯಾಚರಣೆ ನಡೆಸುತ್ತಿದೆ.ರೌಡಿಶೀಟರ್ ಗಳ ಚಲನವಲನಗಳ ಮೇಲೆ ನಿಗಾ ಇಡುತ್ತಿರುವ ಪೊಲೀಸರು ಸ್ವಲ್ಪ ಡೌಟ್ ಬಂದ್ರೂ ರೌಂಡ್ ಅಪ್ ಮಾಡುತ್ತಿದ್ದಾರೆ.ರೌಡಿಗಳ ಆಕ್ಟಿವಿಟಿಗಳ ಮೇಲೆ ಹದ್ದಿನ ಕಣ್ಣಿಟ್ಟ ಸಿಸಿಬಿ ಪೊಲೀಸರಿಗೆ ತಿಮಿಂಗಿಲವೊಂದು ಬಲೆಗೆ ಬಿದ್ದಿದೆ.ಬೆಂಗಳೂರು ಹಾಗೂ ಮೈಸೂರು ನಗರದಲ್ಲಿ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿ ಲಷ್ಕರ್ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಖಾತೆ ತೆಗೆಸಿಕೊಂಡಿರುವ ಜಾವೆದ್ ಖಾನ್@ ಸೈನೆಡ್ ಜಾವೆದ್ (42) ಸಿಸಿಬಿ
Read More

ಮೃತವ್ಯಕ್ತಿ ಹೆಸರಲ್ಲಿದ್ದ ಆಸ್ತಿ ಲಪಟಾಯಿಸಲು ನಕಲಿ ದಾಖಲೆ ಸೃಷ್ಟಿ…ಮೂವರ ವಿರುದ್ದ FIR ದಾಖಲಿಸಲು ಮುಂದಾದ ಜಿಲ್ಲಾಡಳಿತ…

ಮೃತವ್ಯಕ್ತಿ ಹೆಸರಲ್ಲಿದ್ದ ಆಸ್ತಿ  ಲಪಟಾಯಿಸಲು ನಕಲಿ ದಾಖಲೆ ಸೃಷ್ಟಿ…ಮೂವರ ವಿರುದ್ದ FIR ದಾಖಲಿಸಲು ಮುಂದಾದ ಜಿಲ್ಲಾಡಳಿತ… ಮೈಸೂರು,ಫೆ25,Tv10.ಕನ್ನಡ ಮೃತವ್ಯಕ್ತಿಯ ಹೆಸರಿನಲ್ಲಿದ್ದ ಕೋಟ್ಯಾಂತರ ಬೆಲೆ ಬಾಳುವ ಜಮೀನು ಲಪಟಾಯಿಸಲು ನಕಲಿ ದಾಖಲೆ ಸೃಷ್ಟಿಸಿದ ಮೂವರು ಭೂಗಳ್ಳರ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಿದೆ.ಮೃತ ವ್ಯಕ್ತಿಯಿಂದ ಜಿಪಿಎ ಪಡೆದಂತೆ ನಕಲಿ ದಾಖಲೆ ಸೃಷ್ಟಿಸಿ ನಂತರ ಸದರಿ ಆಸ್ತಿಯನ್ನ ಖರೀದಿ ಮಾಡಿದ ಇಬ್ಬರು ವ್ಯಕ್ತಿಗಳನ್ನ ಬಂಧಿಸುವಂತೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ರವರ ಆದೇಶದ ಮೇರೆಗೆ
Read More

ಹೆತ್ತವರ ವಿರೋಧ ಲೆಕ್ಕಿಸದೆ ಅಪ್ರಾಪ್ತೆಯೊಂದಿಗೆ ವಿವಾಹ…ಮದುಮಗ ಸೇರಿದಂತೆ ಮೂವರ ವಿರುದ್ದ FIR

ಮೈಸೂರು,ಫೆ23,Tv10 ಕನ್ನಡ ಹೆತ್ತವರ ವಿರೋಧವಿದ್ದರೂ ಲೆಕ್ಕಿಸದೆ ಅಪ್ರಾಪ್ತೆಯನ್ನ ವಿವಾಹವಾ ಮದುಮಗ ಹಾಗೂ ಪೋಷಕರ ವಿರುದ್ದ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮದುಮಗ ರಿಹಾನಾಚಪಾಷಾ,ಆತನ ತಂದೆ ಶೇಕ್ ಮೊಹಿದ್ದೀನ್ ತಾಯಿ ಫರ್ವೀನ್ ತಾಜ್ ವಿರುದ್ದ ಬಾಲ್ಯವಿವಾಹ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.16 ವರ್ಷದ ಅಪ್ರಾಪ್ತೆಯನ್ನ ವಿವಾಹವಾಗಲು ಬಯಸಿದ್ದ ರಿಹಾನ್ ಪಾಷಾ ಮನವಿಯನ್ನ ಬಾಲಕಿಯ ತಾಯಿ ವಿರೋಧಿಸಿದ್ದಾರೆ.ಬಾಲಕಿಗೆ ಕೇವಲ 16 ವರ್ಷ ಕಾರಣ ಮದುವೆ ಮಾಡಿಕೊಡಲು ನಿರಾಕರಿಸಿದ್ದಾರೆ.ವರನ ಕಡೆಯವರು ಎಂಗೇಜ್ ಮೆಂಟ್ ಮಾಡಿಕೊಡಿ ನಂತರ
Read More

ಮೈಸೂರು ವಲಯ ಕಚೇರಿ 1 ಮತ್ತು 2 ರಲ್ಲಿ ಪೌರಕಾರ್ಮಿಕರಿಗೆ ಆಯುಷ್ಮಾನ್ ಕಾರ್ಡ್ ವಿತರಣೆ…40 ಕ್ಕೂ ಹೆಚ್ಚು ಮಂದಿಗೆ ವಿತರಣೆ…

ಮೈಸೂರು,ಫೆ23,Tv10 ಕನ್ನಡ ಇಂದು ಮೈಸೂರು ವಲಯ ಕಚೇರಿ 1 ಮತ್ತು 2 ರಲ್ಲಿ ಪೌರಕಾರ್ಮಿಕರಿಗೆ ಉಚಿತವಾಗಿ ಅಯುಷ್ಮಾನ್ ಭಾರತ್ ಪ್ರದಾನ ಮಂತ್ರಿ ಜನಾರೋಗ್ಯ ಮುಖ್ಯಮಂತ್ರಿಗಳ ಅರೋಗ್ಯ ಕರ್ನಾಟಕ ಕಾರ್ಡ್ ಅನ್ನು ಮಾಡಿಕೊಡಲಾಯಿತು.ಕರ್ನಾಟಕ ಒನ್ ಮೈಸೂರು ಜಿಲ್ಲೆ ಸಂಯೋಜಕರಾದ ಮೋಹನ್ ಕುಮಾರ್ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಇದೇ ವೇಳೆ ಪೌರಕಾರ್ಮಿಕರಿಗರಆಯುಷ್ಮನ್ ಕಾರ್ಡ ನ ಪ್ರಯೋಜನಗಳನ್ನ ತಿಳಿಸಿಕೊಡಲಾಯಿತು.40 ಕ್ಕೂ ಹೆಚ್ಚು ಪೌರ ಕಾರ್ಮಿಕರು ಕಾರ್ಡ್ ಪಡೆದುಕೊಂಡರು.ಹಾಗೂ ಕಾರ್ಡ್ ನ ಮಹತ್ವವನ್ನ ತಿಳಿಸಿಕೊಡಲಾಯಿತು. ಆಯುಷ್ಮಾನ್ ಕಾರ್ಡ್
Read More

ಸಾಲದ ಹಣಕ್ಕೆ ಟಾರ್ಚರ್…ಗೃಹಿಣಿ ಹ್ಯಾಂಗ್…ಮೂವರು ಅಂದರ್…

ಮೈಸೂರು,ಫೆ22,Tv10 ಕನ್ನಡ ಸಾಲದ ಹಿಂದಿರುಗಿಸುವಂತೆ ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತ ಗೃಹಿಣಿ ನೇಣುಬಿಗಿದು ಆತ್ಮಹತ್ಯೆ ಶರಣಾದ ಘಟನೆ ಮೈಸೂರಿನ ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಶಹನಾ ಶರೀನ್ (25) ಮೃತ ಗೃಹಿಣಿ.ಹಣಕ್ಕಾಗಿ ಪೀಡಿಸಿದ ಸಂಘ ಸಂಸ್ಥೆಯೊಂದ ಪ್ರಮುಖರಾದ ಫರ್ಜಾನಾ,ನಾಜಿಯಾ ಹಾಗೂ ಮುಬಾರಕ್ ರನ್ನ ಮಂಡಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಶೋಕಾ ರಸ್ತೆ ನಿಜಾಮಿಯಾ ಸ್ಕೂಲ್ ಹಿಂಬಾಗದ ಮನೆಯೊಂದರಲ್ಲಿ ವಾಸವಿದ್ದ ಶಹನಾ ಶಿರೀನ್ ಮೂರು ಸಂಘ ಸಂಸ್ಥೆಯೊಂದರಲ್ಲಿ ಸದಸ್ಯರಾಗಿದ್ದರು.ಪತಿಗೆ ಗೂಡ್ಸ್ ವಾಹನ
Read More