ಬೆಂಗಳೂರು ಪೊಲೀಸರ ವಶಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್…ಕೊಲೆ ಪ್ರಕರಣವೊಂದರ ವಿಚಾರಣೆ ಹಿನ್ನಲೆ…
ಮೈಸೂರು,ಜೂ11,Tv10 ಕನ್ನಡ ಕೊಲೆ ಪ್ರಕರಣವೊಂದಕ್ಕೆ ಸಂಭಂಧಪಟ್ಟಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರನ್ನ ಬೆಂಗಳೂರು ಪೊಲೀಸರು ವಿಚಾರಣೆಗೆ ಕರೆದೊಯ್ದಿದ್ದಾರೆ.ಮೈಸೂರಿನಲ್ಲಿ ಶೂಟಿಂಗ್ ಒಂದರಲ್ಲಿ ನಿರತರಾಗಿದ್ದ ದರ್ಶನ್ ರವರನ್ನ ಟಿ.ನರಸೀಪುರ ರಸ್ತೆಯಲ್ಲಿರುವ ಫಾರಂ ಹೌಸ್ ನಿಂದ ಕರೆದೊಯ್ದಿದ್ದಾರೆ.ಬೆಂಗಳೂರು ಸಿಸಿಬಿ ಹಾಗೂ ಕಲಾಸಿಪಾಳ್ಯಂ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ವಿಚಾರಣೆಗಾಗಿ ಬೆಂಗಳೂರಿಗೆ ಕರದೊಯ್ದಿದ್ದಾರೆ…
Read More