ವಿಚ್ಛೇದನ ಪಡೆದಿದ್ದರೂ ಅತ್ತೆ,ಗಂಡನಿಂದ ಕಿರುಕುಳ ಆರೋಪ…ಗೃಹಿಣಿ ಆತ್ಮಹತ್ಯೆ…
ಮೈಸೂರು,ಮಾ30,Tv10 ಕನ್ನಡ ವಿಚ್ಛೇದನ ಪಡೆದಿದ್ದರೂ ಅತ್ತೆ ಹಾಗೂ ಗಂಡ ನೀಡಿದ ಮಾನಸಿಕ ಕಿರುಕುಳಕ್ಕೆ ಬೇಸತ್ತ ಗೃಹಿಣಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ಜನತಾನಗರದಲ್ಲಿ ನಡೆದಿದೆ.ಲಕ್ಷ್ಮಿ(39) ಮೃತ ದುರ್ದೈವಿ.19 ವರ್ಷಗಳ ಹಿಂದೆ ನಾರಾಯಣ ಎಂಬಾತನನ್ನ ವಿವಾಹವಾಗಿದ್ದ ಲಕ್ಷ್ಮಿ ಎರಡು ಮಕ್ಕಳ ತಾಯಿ ಆಗಿದ್ದರು.ಕೌಟುಂಬಿಕ ಕಲಹ ಹಿನ್ನಲೆ ಇಬ್ಬರೂ ವಿಚ್ಛೇದನ ಪಡೆದಿದ್ದರು.ಹೀಗಿದ್ದರೂ ಇಬ್ಬರನ್ನ ಒಂದು ಮಾಡುವ ರಾಜಿ ಸಂಧಾನ ವಿಫಲವಾಗಿತ್ತು.ಮಕ್ಕಳು ಗಂಡನ ಜೊತೆ ಇದ್ದರು. ಜನತಾ ನಗರದ ಒಂದೇ ರಸ್ತೆಯಲ್ಲಿ
Read More