TV10 Kannada Exclusive

ವಿಧ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ…ಶಿಕ್ಷಕ ಅಂದರ್…ಮುಖ್ಯ ಶಿಕ್ಷಕನ ವಿರುದ್ದ FIR…

ಮೈಸೂರು,ಏ10,Tv10 ಕನ್ನಡ ಅಪ್ರಾಪ್ತ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನಲೆ ಮೈಸೂರು ವಿಜಯನಗರ ಠಾಣೆ ಪೊಲೀಸರು ಶಿಕ್ಷಕನೊರ್ವನನ್ನ ಬಂಧಿಸಿದ್ದಾರೆ.ಲೈಂಗಿಕ ಕಿರುಕುಳದ ಬಗ್ಗೆ ಬರೋಬ್ಬರಿ 20 ವಿದ್ಯಾರ್ಥಿನಿಯರು ದೂರು ಸಲ್ಲಿಸಿದ ಹಿನ್ನಲೆ ಕ್ರಮ ಕೈಗೊಳ್ಳಲಾಗಿದೆ.ಮೂಲತಃ ತಿ.ನರಸೀಪರ ನಿವಾಸಿ ಹಾಗೂ ನಗರದ ವಿಜಯನಗರದಲ್ಲಿನ ಸಿದ್ದೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ ತೋಟಗಾರಿಕೆ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹೆಚ್.ಎಂ.ಶಿವಮೂರ್ತಿ ಎಂಬಾತನೇ ಬಂಧಿತ.ಕೃತ್ಯದ ಬಗ್ಗೆ ಕೂಡಲೇ ಇಲಾಖೆಯ ಗಮನಕ್ಕೆ ತರದೆ ತಡ ಮಾಡಿದ ಆರೋಪದಲ್ಲಿ ಶಾಲೆಯ
Read More

ಉಘೇ ಮಾದೇಗೌಡ್ರು ಪ್ರಚಾರ ವಾಹನಕ್ಕೆ ಚಾಲನೆ…ಮೈಸೂರು ಮಿತ್ರ ಪತ್ರಿಕೆ ಸಂಸ್ಥಾಪಕ ಕೆ.ಬಿ.ಗಣಪತಿ ರಿಂದ ಹಸಿರು ನಿಶಾನೆ…

ಮೈಸೂರು,ಏ8,Tv10 ಕನ್ನಡ CITB ಮಾಜಿ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡರವರಿಗೆ ಹಮ್ಮಿಕೊಳ್ಳಲಾದ ಅಭಿನಂದನಾ ಕಾರ್ಯಕ್ರಮದ ಪ್ರಚಾರ ವಾಹನಕ್ಕೆ ಮೈಸೂರು ಮಿತ್ರ ದಿನಪತ್ರಿಕೆ ಸಂಸ್ಥಾಪಕರಾದ ಕೆ.ಬಿ.ಗಣಪತಿ ರವರು ಚಾಲನೆ ನೀಡಿದರು.ವಿಜಯನಗರದಲ್ಲಿರುವ ಶ್ರೀ ಯೋಗಾನರಸಿಂಹ ಸ್ವಾಮಿ ದೇವಾಲಯದ ಸನ್ನಿಧಿಯಲ್ಲಿ ಶ್ರೀ ಭಾಷ್ಯಂ ಸ್ವಾಮೀಜಿ ರವರ ಸಾನಿಧ್ಯದಲ್ಲಿ ಹಸಿರು ನಿಶಾನೆ ತೋರಿದರು.ಡಿ.ಮಾದೇಗೌಡರ ಅಭಿನಂದನಾ ಸಮಿತಿಯು ಕಲಾಮಂದಿರದಲ್ಲಿ ಏಪ್ರಿಲ್ 13 ರಂದು ಕಾರ್ಯಕ್ರಮ ಹಮ್ಮಿಕೊಂಡಿದೆ.ಮೈಸೂರು ನಗರದ ಅಭಿವೃದ್ದಿಗಾಗಿ ಶ್ರಮಿಸಿದ ಮಾದೇಗೌಡರ ಕಾರ್ಯ
Read More

ಪಿಯು ಫಲಿತಾಂಶ…ಎಂ.ಎ.ತೇಜಸ್ವಿನಿ ರಾಜ್ಯಕ್ಕೆ 2 ನೇ ಸ್ಥಾನ…ವಾಣಿಜ್ಯ ವಿಭಾಗದಲ್ಲಿ 600ಕ್ಕೆ 598 ಅಂಕ…

ಪಿರಿಯಾಪಟ್ಟಣ,ಏ8,Tv10 ಕನ್ನಡ ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಭಾರತಮ್ಮ ಕಾಲೇಜು ವಿಧ್ಯಾರ್ಥಿನಿ ಎಂ.ಎ.ತೇಜಸ್ವಿನಿ ಪಿಯು ಫಲಿತಾಂಶದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ.ಇವರು ವಾಣಿಜ್ಯ ವಿಭಾಗದಲ್ಲಿ 600 ಕ್ಕೆ 598 ಅಂಕ ಗಳಿಸಿದ್ದಾರೆ.ತಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ…
Read More

ಕಾವೇರಿ ನೀರಾವರಿ ನಿಗಮ ಇ.ಇ.ಮತ್ತು ಅಕೌಂಟ್ ಸೂಪರಿಡೆಂಟ್ ಲೋಕಾಬಲೆಗೆ…ನಂಜನಗೂಡು ಕಚೇರಿಯಲ್ಲೇ ಲಂಚ ಸ್ವೀಕಾರ ವೇಳೆ ದಾಳಿ…

ನಂಜನಗೂಡು,ಏ7,Tv10 ಕನ್ನಡ ಕಾಮಗಾರಿ ಬಿಲ್ ಪಾಸ್ ಮಾಡಲು ಲಂಚ ಪಡೆಯುತ್ತಿದ್ದಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರರು ಕಾವೇರಿ ರಂಗನಾಥ್‌ ಹಾಗೂಅಕೌಂಟ್ ಸೂಪರಿಡೆಂಟ್ ಉಮಾಮಹೇಶ್ ಲೋಕಾ ಬಲೆಗೆ ಸಿಲುಕಿದ್ದಾರೆ.ಟೆಂಡರ್ ಹಣ ಬಿಡುಗಡೆಗೆ ಡಿಮ್ಯಾಂಡ್ ಮಾಡಿ ಹಣ ಸ್ವೀಕಾರ ಮಾಡುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.ಚಾಮರಾಜನಗರ ನಿವಾಸಿ ಅಬ್ದುಲ್ ಅಜೀಜ್ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರು.2022 ರಲ್ಲಿ ನಾಲೆ ರಿಪೇರಿಗೆ ಟೆಂಡರ್‌ ಕರೆಯಲಾಗಿತ್ತು.23 ಲಕ್ಷದ 10 ಸಾವಿರ ರೂ.ಗೆ ಕಾಮಗಾರಿ.ಕಾಮಗಾರಿಯ ಹಣ ಬಿಡುಗಡೆಗೆ ಶೇ.6ರಷ್ಟು
Read More

ಯುವತಿಯನ್ನ ಹಿಂಬಾಲಿಸಿ ಟಾರ್ಚರ್…ಯುವಕನ ವಿರುದ್ದ ಎಫ್.ಐ.ಆರ್…

ಮೈಸೂರು,ಏ7,Tv10 ಕನ್ನಡ ಯುವತಿಯನ್ನ ಹಿಂಬಾಲಿಸಿ ಟಾರ್ಚರ್ ನೀಡುತ್ತಿರುವ ಯುವಕನ ವಿರುದ್ದ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಅರುಣ ಎಂಬಾತನ ವಿರುದ್ದ ಎಫ್.ಐ.ಆರ್.ದಾಖಲಾಗಿದೆ.ಶ್ರೀರಾಂಪುರ ಯುವತಿಯ ಹಿಂದೆ ಬಿದ್ದಿರುವ ಅರುಣ ಪದೇ ಪದೇ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾನೆ.ಈ ಹಿಂದೆ ಈತನ ವಿರುದ್ದ ಇದೇ ಆರೋಪದ ಹಿನ್ನಲೆ ಪ್ರಕರಣ ದಾಖಲಾಗಿದ್ದರೂ ಬುದ್ದಿಕಲಿಯದ ಅರುಣ ಮತ್ತೆ ಹಿಂಬಾಲಿಸಿ ಟಾರ್ಚರ್ ನೀಡುತ್ತಿದ್ದಾನೆಂದು ಆರೋಪಿಸಿ ಯುವತಿಯ ಮನೆಯವರು ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…
Read More

ನಕಲಿ ದಾಖಲೆ ಸೃಷ್ಟಿಸಿ 26 ಲಕ್ಷ ಸಾಲ…ಕರ್ನಾಟಕ ಬ್ಯಾಂಕ್ ಗೆ 26 ಲಕ್ಷ ಪಂಗನಾಮ…ದಂಪತಿ ವಿರುದ್ದ FIR ದಾಖಲು…

ಮೈಸೂರು,ಏ7,Tv10 ಕನ್ನಡ ನಕಲಿ ದಾಖಲೆ ಸೃಷ್ಟಿಸಿ ಸಾಲ ಪಡೆದು ಕರ್ನಾಟಕ ಬ್ಯಾಂಕ್ ಗೆ ದಂಪತಿ 26 ಲಕ್ಷ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.ಕಾನೂನು ಕ್ರಮ ಕೈಗೊಳ್ಳುವಂತೆ ಬ್ಯಾಂಕ್ ಮ್ಯಾನೇಜರ್ ಪ್ರಶಾಂತ್ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದಂಪತಿ ವಿರುದ್ದ FIR ದಾಖಲಿಸಿದ್ದಾರೆ. ಮೀನಾಕ್ಷಿ ಹಾಗೂ ಗಣೇಶ್ ಬಾಬು ಎಂಬುವರ ವಿರುದ್ದ ವಂಚನೆ ಪ್ರಕರಣ ದಾಖಲಾಗಿದೆ.2019 ರಲ್ಲಿ ಮೈಸೂರಿನ ಸರಸ್ವತಿಪುರಂ ನಲ್ಲಿರುವ ಕರ್ನಾಟಕ ಬ್ಯಾಂಕ್ ನಲ್ಲಿ ವ್ಯಾಪಾರದ ಉದ್ದೇಶಕ್ಕಾಗಿ ಗಣೇಶ್ ಬಾಬು ರವರ
Read More

ವಾಕಿಂಗ್ ಮಾಡುತ್ತಿದ್ದ ಮಹಿಳೆಯ ಚಿನ್ನದ ಸರ ಕಸಿದ ಖದೀಮರು…

ಮೈಸೂರು,ಏ5,Tv10 ಕನ್ನಡ ವಾಕಿಂಗ್ ಮಾಡುತ್ತಿದ್ದ ಮಹಿಳೆಯ ಚಿನ್ನದ ಸರ ಕಿತ್ತ ಇಬ್ಬರು ಖದೀಮರು ಪರಾರಿಯಾಗಿದ್ದಾರೆ.ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ವೆಸ್ಲಿ ರಸ್ತೆ ಬಳಿ ಘಟನೆ ನಡೆದಿದೆ.1.45 ಲಕ್ಷ ಮೌಲ್ಯದ 35 ಗ್ರಾಂ ಮಾಂಗಲ್ಯ ಸರ ಕಳ್ಳರ ಪಾಲಾಗಿದೆ.ಲಲಿತ(53) ಚಿನ್ನದ ಸರ ಕಳೆದುಕೊಂಡವರು.ಮನೆ ಹಿಂಬಾಗದ ರಸ್ತೆಯಲ್ಲಿ ವಾಕಿಂಗ್ ಮಾಡುವ ವೇಳೆ ಸ್ಕೂಟರ್ ನಲ್ಲಿ ಬಂದ ಇಬ್ಬರು ಖದೀಮರು ಸರ ಕಸಿದು ಪರಾರಿಯಾಗಿದ್ದಾರೆ.ಈ ಸಂಭಂಧ ಲಲಿತ ರವರು ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ
Read More

ಮೈಸೂರು ಮೃಗಾಲಯದಲ್ಲಿ ಒರಾಂಗೂಟಾನ್ ಸಾವು…

ಮೈಸೂರು,ಏ4,Tv10 ಕನ್ನಡ ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಒರಾಂಗೂಟನ್ ಮೃತಪಟ್ಟಿದೆ. ಸುಮಾರು 10 ವರ್ಷ 8 ತಿಂಗಳ ಮಿನ್ನಿ ಹೆಣ್ಣು ಸಾವನ್ನಪ್ಪಿದೆ.ಪ್ರಾಣಿ ವಿನಿಮಯ ಕಾರ್ಯಕ್ರಮದಡಿ 2021 ರಲ್ಲಿ ಮಲೇಷಿಯಾ ಮೃಗಾಲಯದಿಂದ ಮಿನ್ನಿಯನ್ನು ಆಮದು ಮಾಡಿಕೊಂಡ ನಂತರ ಸುಮಾರು 4 ವರ್ಷಗಳ ಅವಧಿಯವರೆಗೆ ಮೈಸೂರು ಮೃಗಾಲಯದಲ್ಲಿ ಪ್ರದರ್ಶನಕ್ಕಿಡಲಾಗಿತ್ತು.ಮಿನ್ನಿಯು ಶ್ವಾಸಕೋಶ ಸಮಸ್ಯೆ ಹಿನ್ನೆಲೆಯಲ್ಲಿ ಆಗಾಗ ಉಸಿರಾಟದ ತೊಂದರೆಯಿಂದ ಬಳಲುತಿತ್ತು. ಚಿಕಿತ್ಸೆ ಫಲಿಸದೆ ಮಿನ್ನಿ ನಿಧನ ಹೊಂದಿದೆ.ಮೈಸೂರು ಮೃಗಾಲಯದ ತಜ್ಞ ಪಶುವೈದ್ಯರಿಂದ ಮೃಗಾಲಯದ ಪರೀಕ್ಷಾ
Read More

ಮೊದಲ ಪತ್ನಿ ಇದ್ದರೂ ಎರಡನೇ ಮದುವೆ ಮಾಡಿಕೊಂಡು ವಂಚನೆ…50 ಲಕ್ಷಕ್ಕೆ ಉಂಡೆನಾಮ…ಉಂಡೂಹೋದ ಕೊಂಡೂಹೋದ…

ಮೈಸೂರು,ಏ4,Tv10 ಕನ್ನಡ ಮೊದಲ ಪತ್ನಿ ಇದ್ದರೂ ವಿಚ್ಛೇದನ ನೀಡಿರುವುದಾಗಿ ಫೇಕ್ ಡಾಕ್ಯುಮೆಂಟ್ ಕ್ರಿಯೇಟ್ ಮಾಡಿ ಎರಡನೇ ಮದುವೆಯಾಗಿ ಪತ್ನಿಗೆ 50 ಲಕ್ಷ ರೂ ವಂಚಿಸಿದ ಭೂಪ ಪರಾರಿಯಾದ ಘಟನೆ ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ವಂಚನೆಗೆ ಒಳಗಾದ ಪತ್ನಿ ರೋಜಾ ಎಂಬುವರು ಪ್ರಕರಣ ದಾಖಲಿಸಿದ್ದಾರೆ.ವಂಚಿಸಿದ ಖದೀಮ ಶರತ್ ರಾಮ್ ಇದೀಗ ತಲೆಮರೆಸಿಕೊಂಡಿದ್ದಾನೆ. ಕುವೆಂಪುನಗರದಲ್ಲಿ ಲೇಡೀಸ್ ಪಿಜಿ ನಡೆಸುತ್ತಿರುವ ರೋಜಾ ಮೊದಲ ಪತಿಯಿಂದ ಕಾರಣಾಂತರದಿಂದ ವಿಚ್ಛೇದನ ಪಡೆದಿದ್ದಾರೆ.ಮಗನಿಗೆ ಆಸರೆಗಾಗಿ ಎರಡನೇ ಮದುವೆ
Read More

ಕೆರೆಯಲ್ಲಿ ಮುಳುಗಿ ಮೂವರ ಸಾವು ಪ್ರಕರಣ…ಮೃತರ ಮನೆಗೆ ಡಾ.ಯತೀಂದ್ರ ಸಿದ್ದರಾಮಯ್ಯ ಭೇಟಿ…

ನಂಜನಗೂಡು,ಏ3,Tv10 ಕನ್ನಡ ಹಸು ತೊಳೆಯಲು ಹೋಗಿ ಕೆರೆಯಲ್ಲಿ ಮೂವರು ಸಾವನ್ನಪ್ಪಿದ ಮನೆಗೆ ಡಾ.ಯತೀಂದ್ರ ಸಿದ್ದರಾಮಯ್ಯ ಭೇಟಿ ನೀಡಿ ಸಾಂತ್ವನ ಹೇಳಿದರು.ನಂಜನಗೂಡು ತಾಲ್ಲೂಕಿನ ಕಾಮಳ್ಳಿ ಗ್ರಾಮದ ಕೆರೆಯಲ್ಲಿ ದುರಂತ ಸಂಭವಿಸಿತ್ತು.ಯುಗಾದಿ ಹಬ್ಬದಂದು ಹಸು ತೊಳೆಯಲು ಹೋಗಿದ್ದಾಗ ಘಟನೆ ನಡೆದಿತ್ತು.ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಗಮನಕ್ಕೆ ತಂದು ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.ವಿನೋದ್ (19)ಬಸವೇಗೌಡ (45) ಮುದ್ದೇಗೌಡ (45) ಮೃತಪಟ್ಟಿದ್ದರು…
Read More