TV10 Kannada Exclusive

ಸಿದ್ದರಾಮಯ್ಯ ನಿವಾಸದಲ್ಲಿ ಧಿಢೀರ್ ಸಭೆ…ಪಾದಯಾತ್ರೆ,ಶೋಕಾಸ್ ನೋಟೀಸ್ ಹಿನ್ನಲೆ ಚರ್ಚೆ…

ಮೈಸೂರು,ಆ3,Tv10 ಕನ್ನಡ ಸಿದ್ದರಾಮಯ್ಯಗೆ ರಾಜ್ಯಪಾಲರ ಶೋಕಾಸ್ ನೋಟೀಸ್ ಹಾಗೂ ಬಿಜೆಪಿ ಪಾದಯಾತ್ರೆ ಹಿನ್ನಲೆ ಮೈಸೂರು ನಿವಾಸದಲ್ಲಿ ದಿಢೀರ್ ಸಭೆ ನಡೆದಿದೆ. ಮೈಸೂರು ಭಾಗದ ಸಚಿವರು, ಶಾಸಕರು ಸಭೆಯಲ್ಲಿ ಭಾಗವಹಿಸಿದ್ದಾರೆ. ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ, ಕೆ.ವೆಂಕಟೇಶ್ ಶಾಸಕರಾದ ರವಿಶಂಕರ್, ಹರೀಶಗೌಡ, ಅನಿಲ್ ಚಿಕ್ಕಮಾದು, ಎ.ಆರ್.ಕೃಷ್ಣಮೂರ್ತಿ, ಸೇರಿ ಹಲವು ಶಾಸಕರು ಭಾಗಿ‌ಯಾಗಿದ್ದಾರೆ. ಸಿದ್ದರಾಮಯ್ಯ ಕಾನೂನು ಕಾರ್ಯದರ್ಶಿ, ಶಾಸಕ ಪೊನ್ನಣ್ಣ ಸಹ ಸಭೆಯಲ್ಲಿ ಭಾಗಿಯಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ದಿಢೀರ್ ಸಭೆ ಕುತೂಹಲ ಕೆರಳಿಸಿದೆ…
Read More

ವೆಲ್ಲೆಸ್ಲಿ ಸೇತುವೆ ತಡೆಗೋಡೆ ಕುಸಿತ…ಸಚಿವ ಚೆಲುವರಾಯಸ್ವಾಮಿ ಭೇಟಿ ಪರಿಶೀಲನೆ…

ಮಂಡ್ಯ,ಆ3,Tv10 ಕನ್ನಡಕಾವೇರಿ ನದಿ ಪ್ರವಾಹದಿಂದಾಗಿ ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ ಬಳಿ ಕುಸಿತಗೊಂಡಿದ್ದ ತಡೆಗೋಡೆ,ಹಾನಿಗೊಳಗಾದ ಡಾಂಬಾರ್ ರಸ್ತೆ ಪ್ರದೇಶಗಳನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಚಲುವರಾಯ ಸ್ವಾಮಿ ಹಾಗೂ ಸ್ಥಳೀಯ ಶಾಸಕ ರಮೇಶ ಬಂಡಿಸಿದ್ದೇಗೌಡ ಇತರ ಅಧಿಕಾರಿಗಳ ತಂಡ ವೀಕ್ಷಣೆ ಮಾಡಿದರು.ಐತಿಹಾಸಿಕ ವೆಲ್ಲೆಸ್ಲಿ ಸೇತುವೆ ಬಳಿ ನದಿಗೆ ಕಟ್ಟಲಾಗಿದ್ದ ಬಾರಿ ತಡೆಗೋಡೆ ಸಹ ನೀರಿನ ರಭಸಕ್ಕೆ ಕುಸಿದು ಕೊಚ್ಚಿ ಹೋಗಿತ್ತು ಇದರ ಜೊತೆ ಸಂಪರ್ಕ ಡಾಂಬಾರ್ ರಸ್ತೆ ಸಹಿತ
Read More

ಸುತ್ತೂರು ಮಠದಲ್ಲಿ ಕೊನೆ ಆಷಾಢ ಶುಕ್ರವಾರದ ಸಂಭ್ರಮ…ಚಾಮುಂಡೇಶ್ವರಿಗೆ ವಿಶೇಷ ಪೂಜೆ…ಸುತ್ತೂರು ಶ್ರೀಗಳ ನೇತೃತ್ವದಲ್ಲಿ ಕಾರ್ಯಕ್ರಮ…

ಮೈಸೂರು,ಆ2,Tv10 ಕನ್ನಡ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ಆಷಾಢಮಾಸದ ಕೊನೆ ಶುಕ್ರವಾರವಾದ ಇಂದು ವಿಶೇಷ ಪೂಜೆ ನೆರವೇರಿತು.ಸುತ್ತೂರು ಮಠದ ಆವರಣದಲ್ಲಿರುವ ತಾಯಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಸುತ್ತೂರು ಶ್ರೀಗಳ ನೇತೃತ್ವದಲ್ಲಿ ನಾಡದೇವಿಗೆ ಪೂಜಾ ಕೈಂಕರ್ಯಗಳು ನೆರವೇರಿತು.ಪೂಜೆ ನಂತರ ಭಕ್ತರಿಗೆ ಪ್ರಸಾದ ವಿನಯೋಗ ಕಾರ್ಯಕ್ರಮ ಇತ್ತು.ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದರು.ಸುತ್ತೂರು ಶ್ರೀಗಳೇ ಭಕ್ತರಿಗೆ ಪ್ರಸಾದ ವಿತರಿಸಿದರು…
Read More

ಮೂಲಭೂತ ಸೌಕರ್ಯದಿಂದ ವಂಚತವಾದ ಆದಿವಾಸಿ ಕಾಲೋನಿ…ಅಧಿಕಾರಿಗಳಿಗೆ ಹಿಡಿ ಶಾಪ…

ನಂಜನಗೂಡು,ಆ2,Tv10 ಕನ್ನಡ ಕುಡಿಯುವ ನೀರಿಲ್ಲ,ಬೀದಿ ದೀಪಗಳು ಕೆಟ್ಟುನಿಂತಿವೆ,ಕಸದ ರಾಶಿ,ಸ್ವಚ್ಛತೆ ಮಾಯ ಇದು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿರುವ ವೆಂಕಟಗಿರಿ ಕಾಲೋನಿಯ ದುಃಸ್ಥಿತಿ.ಮೂಲ ಸೌಕರ್ಯಗಳನ್ನ ಒದಗಿಸುವಂತೆ ಮಾಡಿದ ಮನವಿಗಳು ಪ್ರಯೋಜನವಿಲ್ಲದಂತಾಗಿದೆ.ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿರುವ ಕಾಲೋನಿ ಜನ ಇದೀಗ ಪ್ರತಿಭಟನೆ ಹಾದಿ ಹಿಡಿಯಲು ನಿರ್ಧರಿಸಿದ್ದಾರೆ. ಇಲ್ಲಿನ ಕುಡಿಯುವ ನೀರು ಸರಬರಾಜು ಮಾಡುವ ಮೋಟರ್ ಕೆಟ್ಟು ನಿಂತು ತಿಂಗಳುಗಳು ಕಳೆದಿದೆ. ಬೀದಿ ದೀಪ ಮಾಯವಾಗಿ ಕಗ್ಗತ್ತಲು ಆವರಿಸಿದೆ.ಕಸಗಳ ರಾಶಿ ಅಧಿಕಾರಿಗಳ ಕಾರ್ಯವೈಖರಿಯನ್ನ ಹಂಗಿಸುತ್ತಿದೆ.ಸ್ವಚ್ಛತೆಗಾಗಿ
Read More

ಗಂಡು ಮಗು ಹೆತ್ತಿಲ್ಲವೆಂದು ವರದಕ್ಷಿಣೆ ನೆಪದಲ್ಲಿ ಪತ್ನಿಗೆ ಟಾರ್ಚರ್…ಹಿಗ್ಗಾಮುಗ್ಗ ಥಳಿಸಿದ ಪತಿ…ಜೀವಭಯದಲ್ಲಿ ಗೃಹಿಣಿ…

ಕೆ.ಆರ್.ನಗರ,ಆ2,Tv10 ಕನ್ನಡ ಗಂಡು ಮಗು ಹೆತ್ತಿಲ್ಲವೆಂದು ವರದಕ್ಷಿಣೆ ನೆಪವೊಡ್ಡಿ ಪತಿರಾಯ ಪತ್ನಿಗೆ ಹಿಗ್ಗಾಮುಗ್ಗ ಥಳಿಸಿದ ಘಟನೆ ಸಾಲಿಗ್ರಾಮ ತಾಲೂಕು ದಡದಹಳ್ಳಿ ಗ್ರಾಮದಲ್ಲಿ ನಡೆದಿದೆ.ಪತಿ ಕ್ರೂರತನಕ್ಕೆ ಗಾಯಗೊಂಡ ಪತ್ನಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ವರದಕ್ಷಿಣೆ ಹಾಗೂ ಗಂಡುಮಗುವಿನ ವ್ಯಾಮೋಹಕ್ಕೆ ಒಳಗಾದ ಪತಿಯ ಹಿಂಸೆ ಭರಿಸಲು ಸಾಧ್ಯವಾಗದ ಪತ್ನಿ ನ್ಯಾಯಕ್ಕಾಗಿ ಸಾಲಿಗ್ರಾಮ ಪೊಲೀಸರ ಮೊರೆ ಹೋಗಿದ್ದಾರೆ.ಬೃಂದಾ(32) ಪತಿಯಿಂದ ಹಲ್ಲೆಗೆ ಒಳಗಾದ ಗೃಹಿಣಿ.ಹಲ್ಲೆ ನಡೆಸಿದ ಪತಿ ಬಸವರಾಜು,ಅತ್ತೆ ಕಾಳಮ್ಮ ಮತ್ತು ಮಾವ ಚೆಲುವಯ್ಯ ವಿರುದ್ದ
Read More

ಕೇರಳದಲ್ಲಿ ಗುಡ್ಡಕುಸಿದು ದುರಂತ…ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ…ಸಮರೋಪಾದಿಯಲ್ಲಿ ಪರಿಹಾರ ಕಾರ್ಯ…

ಕೇರಳ,ಆ1,Tv10 ಕನ್ನಡಕೇರಳ ಗುಡ್ಡ ಕುಸಿತ ದುರಂತದಲ್ಲಿಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಂಭವವಿದೆ.ಕೇರಳ ಸರ್ಕಾರ ಅಧಿಕೃತವಾಗಿ ಘೋಷಿಸಿದ ಸಾವಿನ ಸಂಖ್ಯೆ 173.ನಾಪತ್ತೆಯಾದವರ ಸಂಖ್ಯೆ 227.ಸುರಕ್ಷಿತವಾಗಿ ರಕ್ಷಣೆಯಾದವರು 1592.ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆದಾಖಲಾದವರು ಅಂದಾಜು 200.ಮೃತ ಮಕ್ಕಳ ಸಂಖ್ಯೆ 23.ನಿನ್ನೆ ಒಂದೇ ದಿನ ಪತ್ತೆಯಾದ ಮೃತ ದೇಹಗಳು 92.ಕುಟುಂಬಸ್ಥರಿಗೆ ಹಸ್ತಾಂತರವಾದ ಮೃತ ದೇಹಗಳು 75.ಅನಧಿಕೃತ ಸಾವಿನ ಸಂಖ್ಯೆ 250 ಕ್ಕೂ ಹೆಚ್ಚು ಎಂದು ಹೇಳಲಾಗಿದೆ…
Read More

ಪ್ರವಾಹದ ನೀರಿಗೆ ಪಂಪ್ ಹೌಸ್ ಜಲಾವೃತ… ಕುಡಿಯುವ ನೀರಿಗೆ ಸಂಕಷ್ಟ…

ನಂಜನಗೂಡು,ಆ1,Tv10 ಕನ್ನಡಕೇರಳದ ವೈನಾಡು ಪ್ರದೇಶದಲ್ಲಿ ಭಾರಿ ಮಳೆ ಹಿನ್ನಲೆ ಕಬಿನಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದೆ.ಈಗಾಗಲೇ 70 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಕಪಿಲಾ ನದಿಗೆ ಬಿಡುಗಡೆಮಾಡಲಾಗಿದೆ.ಮಳೆ ಪ್ರಮಾಣ ಹೆಚ್ಚಾದ ಹಿನ್ನಲೆ ಬಿಡುಗಡೆ ಪ್ರಮಾಣ 80 ಸಾವಿರ ಕ್ಯೂಸೆಕ್ಸ್ ದಾಟುವ ಸಾಧ್ಯತೆ ಇದೆ.ನಂಜನಗೂಡಿನ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ನಗರಕ್ಕೆ ದಿನನಿತ್ಯ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದ ದೇಬೂರು ಗ್ರಾಮದ ಬಳಿ ಇರುವ ಕುಡಿಯುವ ನೀರಿನ ಸರಬರಾಜು ಪಂಪ್ ಹೌಸ್ ಸಹ
Read More

ಕಾವೇರಿ,ಕಪಿಲೆ ಆರ್ಭಟ…ಇಡೀ ಗ್ರಾಮವೇ ಜಲಾವೃತ…ಜನಜೀವನ ಅಸ್ತವ್ಯಸ್ತ…ನೆರವಿಗೆ ಧಾವಿಸಿದ ಜಿಲ್ಲಾಡಳಿತ…

ಮೈಸೂರು,ಆ1,Tv10 ಕನ್ನಡ ಕಾವೇರಿ,ಕಪಿಲೆ ಪ್ರವಾಹಕ್ಕೆ ಟಿ.ನರಸೀಪುರ ತಾಲೂಕು ತಲಕಾಡು ಹೋಬಳಿಯ ನದಿ ಪಾತ್ರದಲ್ಲಿರುವ ತಡಿಮಾಲಂಗಿ ಗ್ರಾಮ ಸಂಪೂರ್ಣ ಜಲಾವೃತವಾಗಿದೆ.ಜನಜೀವನ ಅಸ್ತವ್ಯಸ್ಥವಾಗಿದೆ. ದೈನಂದಿನ ಕೆಲಸ ಕಾರ್ಯಗಳು ಸ್ಥಗಿತವಾಗಿದೆ.ಗ್ರಾಮದ ಇಡೀ ರಸ್ತೆಗಳು ಜಲಾವೃತವಾಗಿದೆ.ಗ್ರಾಮದ ಬಹುತೇಕ ಮಂದಿ ಕಾಳಜಿ ಕೇಂದ್ರ ಆಶ್ರಯ ಪಡೆದಿದ್ದಾರೆ.ಜಿಲ್ಲಾಡಳಿತ ಸಮರೋಪಾದಿಯಲ್ಲಿ ನಿರಾಶ್ರಿತರ ನೆರವಿಗೆ ಧಾವಿಸಿದೆ.ಅಲ್ಲಲ್ಲಿ ಕಾಳಜಿ ಕೇಂದ್ರಗಳನ್ನ ಸ್ಥಾಪಿಸಿ ನಿರಶ್ರಿತರಿಗೆ ನೆರವಾಗಿದ್ದಾರೆ.ನಿನ್ನೆ ನಿರಾಶ್ರಿತರ ಕಾಳಜಿ ಕೇಂದ್ರಕ್ಕೆ ಸರ್ಕಾರದ ವಿಪ್ಪತ್ತು ನಿರ್ವಹಣೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ರವರು ಭೇಟಿ ನೀಡಿ
Read More

ಡಾ.ಬಾಬು ಜಗಜೀವನ್ ರಾಮ್ ಭವನಕ್ಕೆ ಕಾಯ್ದಿರಿಸಿದ್ದ ಜಾಗ ಒತ್ತುವರಿ…ತೆರುವುಗೊಳಿಸಿ ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರ…

ಮೈಸೂರು,ಜು31,Tv10 ಕನ್ನಡಒತ್ತುವರಿಯಾಗಿದ್ದ ಡಾ.ಬಾಬು ಜಗಜೀವನ್ ರಾಮ್ ಭವನ ಕಟ್ಟಡ ನಿರ್ಮಾಣಕ್ಕಾಗಿಕಾಯ್ದಿರಿಸಿದ್ದ ಜಾಗವನ್ನ ತಾಲೂಕು ಆಡಳಿತ ತೆರುವುಗೊಳಿಸಿದೆ.ಸುಮಾರು ಒಂದು ಕೋಟಿ ಬೆಲೆ ಬಾಳುವ ಜಾಗವನ್ನ ತೆರುವುಗೊಳಿಸಿ ವಶಕ್ಕೆ ಪಡೆದು ಸಮಾಜ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲಾಗಿದೆ.ಮೈಸೂರು ತಾಲೂಕು ಕಸಬ ಹೋಬಳಿ ಬಂಡೀಪಾಳ್ಯ ಗ್ರಾಮದ ಸರ್ವೆ ನಂ.60 ರಲ್ಲಿ 20 ಗುಂಟೆ ಜಮೀನು 2018-19 ರಲ್ಲಿ ಡಾ.ಜಗಜೀವನ್ ರಾಮ್ ಭವನ ನಿರ್ಮಿಸುವ ಉದ್ದೇಶಕ್ಕಾಗಿ ಕಾಯ್ದಿರಿಸಲಾಗಿತ್ತು.ಸದರಿ ಜಾಗವನ್ನ ಕೆಲವು ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿದ್ದರು.ಈ ಕುರಿತಂತೆ ತಹಸೀಲ್ದಾರ್
Read More

ದೈನಂದಿನ ಕಚೇರಿ ಕೆಲಸಗಳ ನಿರ್ವಹಣೆಗೆ ಅನುಮತಿ ನೀಡಿ…ಮುಡಾ ಆಯುಕ್ತರಿಂದ ಸರ್ಕಾರಕ್ಕೆ ಪತ್ರ…

ಮೈಸೂರು,ಜು31,Tv10 ಕನ್ನಡ ಮುಡಾ ವಿವಾದ ರಾಜ್ಯದಲ್ಲಿ ಸಂಚಲನ ಮೂಡಿಸಿದೆ.ಅಧಿವೇಶನದಲ್ಲೂ ಸಹ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ.ವಿವಾದವೊಂದು ಸಿಎಂ ಗೂ ಕಂಟಕವಾಗಿ ನಿಂತಿದೆ.ಈ ಎಲ್ಲಾ ಹಿನ್ನಲೆ ಸರ್ಕಾರ ಈ ಹಿಂದೆ ಕೆಲವು ಷರತ್ತುಗಳನ್ನ ಹೇರಿದೆ.ಯಾವುದೇ ಸಭೆಗಳನ್ನ ನಡೆಸಬಾರದು,ಕಡತಗಳ ವಿಲೇವಾರಿ ಮಾಡಬಾರದು,ಈ ಹಿಂದೆ ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನ ಅನುಷ್ಠಾನಗೊಳಿಸಬಾರದು,ಸರ್ಕಾರದ ನಿರ್ದೇಶನವಿಲ್ಲದೆ ಯಾವುದೇ ನಿವೇಶನ ವಿಲೇವಾರಿ ಕುರಿತು ಕ್ರಮ ಜರುಗಿಸಬಾರದೆಂಬ ಷರತ್ತುಗಳನ್ನ ಹಾಕಿದೆ.ಹೀಗಾಗಿ ಮುಡಾ ದಲ್ಲಿ ದೈನಂದಿನ ಕಚೇರಿ ಕೆಲಸಗಳಿಗೆ ಅಡಚಣೆ ಆಗಿದೆ.ಈ
Read More