TV10 Kannada Exclusive

ಹೆಚ್ಚು ಲಾಭದ ಆಮಿಷ…7 ಲಕ್ಷಕ್ಕೆ ಪಂಗನಾಮ…

ಮೈಸೂರು,ಫೆ4,Tv10 ಕನ್ನಡ ಹೂಡಿಕೆ ಹಣಕ್ಕೆ ಹೆಚ್ಚು ಲಾಭಾಂಶ ನೀಡುವ ಆಮಿಷ ತೋರಿಸಿ ವ್ಯಕ್ತಿಯೊಬ್ಬರಿಗೆ 7 ಲಕ್ಷ ವಂಚಿಸಿರುವ ಪ್ರಕರಣ ಸೆನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ವಿಜಯನಗರ ಬಡಾವಣೆ ನಿವಾಸಿ ಆದರ್ಶ್ ಅರಸ್ ಹಣ ಕಳೆದುಕೊಂಡವರು.ಸ್ನೇಹಿತರೊಬ್ಬರ ಸಲಹೆ ಮೇರೆಗೆ ಎಲ್ಲಿ ಲಿಲ್ಲಿ ಎಂಬ ಕಂಪನಿಯಲ್ಲಿ ಹಣ ಹೂಡಿದ್ದಾರೆ.ಪ್ರಾರಂಭದಲ್ಲಿ 540/- ರೂ ಪಾವತಿಸಿ ನೊಂದಣಿ ಮಾಡಿಕೊಂಡಿದ್ದಾರೆ.ವಾಟ್ಸಾಪ್ ಗ್ರೂಪ್ ನಲ್ಲಿ ಲಿಂಕ್ ಕಳುಹಿಸಿ ಹೂಡಿಕೆ ಬಗ್ಗೆ ಮಾಹಿತಿ ನೀಡಿದ್ದಾರೆ.ಹೂಡಿಕೆ ಹಣಕ್ಕೆ ದಿನ ಶೇ 3%ರಿಂದ 10
Read More

ಗಂಡನ ಅಕ್ರಮ ಸಂಭಂಧ ವಿಡಿಯೋ ತೆಗೆಯಲು ಯತ್ನಿಸಿದ ಪತ್ನಿ…ಕಾರಿನಿಂದ ಢಿಕ್ಕಿ ಹೊಡೆದು ಪ್ರಿಯಕರಳ ಜೊತೆ ಎಸ್ಕೇಪ್ ಆದ ಪತಿ…

ಮೈಸೂರು,ಫೆ4,Tv10 ಕನ್ನಡ ಪರಸ್ರ್ತೀಯೊಂದಿಗೆ ಅಕ್ರಮ ಸಂಭಂಧ ಇರಿಸಿಕೊಂಡ ಪತಿಯ ವಿಡಿಯೋ ತೆಗೆಯಲು ಹೋದ ಪತ್ನಿ ಮೇಲೆ ಕಾರಿನಿಂದ ಢಿಕ್ಕಿ ಹೊಡೆದು ಗಾಯಗೊಳಿಸಿದ ಘಟನೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಪತಿ ಹಾಗೂ ಪ್ರಿಯಕರಳ ಮೇಲೆ ಪತ್ನಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಕೆಸಿ ಲೇಔಟ್ ನಿವಾಸಿಯಾದ ಪತ್ನಿ ವಿಜಯನಗರದ ಸುದೀಪ್ ಎಂಬುವರನ್ನ ವಿವಾಹವಾಗಿದ್ದಾರೆ.ಕಳೆದ ಮೂರು ವರ್ಷಗಳಿಂದ ಸುದೀಪ್ ಪರಸ್ತ್ರೀಯೊಂದಿಗೆ ಅಕ್ರಮ ಸಂಭಂಧ ಬೆಳೆಸಿದ್ದಾರೆ.ಈ ಕುರಿತಂತೆ ಪತ್ನಿ ಸುದೀಪ್ ವಿರುದ್ದ ಜಯಲಕ್ಷ್ಮಿಪುರಂ
Read More

ಹೋಟೆಲ್ ಕೊಠಡಿ ಬಾಡಿಗೆ ಕಟ್ಟದೆ ಗಿರಾಕಿ ಎಸ್ಕೇಪ್…ಸದರನ್ ಸ್ಟಾರ್ ಹೋಟೆಲ್ ಗೆ ವಂಚನೆ…

ಮೈಸೂರು,ಫೆ4,Tv10 ಕನ್ನಡ ಮೈಸೂರಿನ ವಿನೋಬಾ ರಸ್ತೆಯಲ್ಲಿರುವ ಐಷಾರಾಮಿ ಸದರನ್ ಸ್ಟಾರ್ ಹೋಟೆಲ್ ನಲ್ಲಿ ಕೊಠಡಿ ಬಾಡಿಗೆ ಪಡೆದು ಹಣ ಪಾವತಿಸದೆ ಗ್ರಾಹಕನೊಬ್ಬ ವಂಚಿಸಿ ಎಸ್ಕೇಪ್ ಆದ ಪ್ರಕರಣ ದೇವರಾಜ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.ಹಾಸನ ತಾಲೂಕು ಚೆನ್ನರಾಯಪಟ್ಟಣ ತಾಲೂಕಿನ ರಂಜನ್ ಎಂಬಾತನ ಮೇಲೆ ವಂಚನೆ ಪ್ರಕರಣ ದಾಖಲಾಗಿದೆ.ಹೋಟೆಲ್ ನ ಮ್ಯಾನೇಜರ್ ಕರಿಯಪ್ಪ ಎಂಬುವರು ಪ್ರಕರಣ ದಾಖಲಿಸಿದ್ದಾರೆ. ಆರೋಪಿ ರಂಜನ್ ಸದರನ್ ಸ್ಟಾರ್ ಹೋಟೆಲ್ ಹಳೇ ಗ್ರಾಹಕ.2021 ರಿಂದ ಆಗಾಗ ಬಂದು ತಿಂಗಳುಗಳ
Read More

ಇ-ತ್ಯಾಜ್ಯ ಇಂದು ಬಹುಮುಖ್ಯ ಸಮಸ್ಯೆ -ಲಯನ್ ಟಿ.ಹೆಚ್ .ವೆಂಕಟೇಶ್ .

ಇ-ತ್ಯಾಜ್ಯ ಇಂದು ಪ್ರಪಂಚದಲ್ಲಿ ಬಹು ಮುಖ್ಯವಾದ ಸಮಸ್ಯೆಯಾಗಿ ಪರಿಣಮಿಸಿದೆ. ಹಾಗಾಗಿ ಇಂದಿನಿಂದಲೇ ಇದರ ಬಗ್ಗೆ ಕಾಳಜಿ ವಹಿಸಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿದರೆ ಮುಂದೆ ಬಹುದೊಡ್ಡ ಅನಾಹುತವನ್ನು ತಪ್ಪಿಸಬಹುದು ಎಂದು ಲಯನ್ಸ್ ಜಿಲ್ಲೆ 317 ಜಿ ನ ಸಂಪುಟ ಕಾರ್ಯದರ್ಶಿಯಾದ ಲಯನ್ ಟಿ.ಹೆಚ್ . ವೆಂಕಟೇಶ್ ರವರು ಹೇಳಿದರು. ಅವರು ಲಯನ್ಸ್ ಕ್ಲಬ್ ಆಫ್ ಮೈಸೂರ್ ಅಂಬಾಸಿಡರಸ್ ಮತ್ತು ಜಿಲ್ಲಾ ಅಧ್ಯಕ್ಷರು ಇ-ತ್ಯಾಜ್ಯ ವತಿಯಿಂದ ಹಮ್ಮಿಕೊಂಡಿದ್ದ ಇ-ತ್ಯಾಜ್ಯ ಸಂಗ್ರಹಣೆ ಕಾರ್ಯಕ್ರಮದಲ್ಲಿ
Read More

ಸಿದ್ದಲಿಂಗಪುರ ಚಂದ್ರಮೌಳೇಶ್ವರ ದೇವಾಲಯದಲ್ಲಿ ಕಳುವು…

ಮೈಸೂರು,ಫೆ4,Tv10 ಕನ್ನಡ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿರುವ ಸಿದ್ದಲಿಂಗಪುರ ಗ್ರಾಮದ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ.ಗರ್ಭಗುಡಿಯ ಬಾಗಿಲ ಬೀಗ ಮುರಿದು ಪ್ರವೇಶಿಸಿದ ಕಳ್ಳರು 500 ಗ್ರಾಂ ತೂಕದ ಬೆಳ್ಳಿಕಂಠಾಭರಣ ದೋಚಿ ಪರಾರಿಯಾಗಿದ್ದಾರೆ.ಈ ಸಂಭಂಧ ಅರ್ಚಕರಾದ ನಂದಕುಮಾರ್ ರವರು ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಕಳುವಾದ ಬೆಳ್ಳಿಕಂಠಾಭರಣದ ಮೌಲ್ಯ 30 ಸಾವಿರ ಎಂದು ಅಂದಾಜಿಸಲಾಗಿದೆ…
Read More

ಸಾಲಗಾರರ ಹಾವಳಿಗೆ ಹೆದರಿ ನಾಪತ್ತೆಯಾದ ಕುಟುಂಬ ಸೇಫ್…ಸುರಕ್ಷಿತವಾಗಿ ಹಿಂದಿರುಗಿದ ಫ್ಯಾಮಿಲಿ… ಡೆತ್ ನೋಟ್ ವಾಯ್ಸ್ ಮೆಸೇಜ್ ಹಾಕಿ ನಾಪತ್ತೆಯಾಗಿದ್ದ 5

ಮೈಸೂರು,ಫೆ4,,Tv10 ಕನ್ನಡ ಸಾಲಗಾರರ ಕಾಟಕ್ಕೆ ಹೆದರಿ ಇಡೀ ಕುಟುಂಬ ನಾಪತ್ತೆಯಾದ ಪ್ರಕರಣ ಸುಖಾಂತ್ಯ ಕಂಡಿದೆ.ಮಿಸ್ಸಿಂಗ್ ಆದ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಸಂಪರ್ಕಕ್ಕೆ ದೊರೆತ ಕುಟುಂಬ ಮತ್ತೆ ಮೈಸೂರಿಗೆ ವಾಪಸ್ ಬಂದಿದ್ದಾರೆ.ಸಾಲಗಾರರ ಧಂಕಿ ಹೆದರಿದ್ದ ಕುಟುಂಬ ಇದೀಗ ಸೇಫ್ ಆಗಿ ಹಿಂದಿರುಗಿದೆ. ಮೈಸೂರು ಕೆ.ಜಿ.ಕೊಪ್ಪಲಿನ ಮಹೇಶ್(35),ಈತನ ಪತ್ನಿ ಭವಾನಿ(28),ಪುತ್ರಿ ಪ್ರೇಕ್ಷಾ(3) ಇವರ ತಂದೆ ಮಹದೇವಪ್ಪ(65) ಹಾಗೂ ತಾಯಿ ಸುಮಿತ್ರ(55) ರವರು ಸಾಲಗಾರರ ಕಾಟಕ್ಕೆ ಬೇಸತ್ತು ಜನವರಿ 20 ರಂದು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು.ಸ್ನೇಹಿತರ ಮೊಬೈಲ್
Read More

ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಪಾಲುದಾರಿಕೆ ಆಮಿಷ…ವ್ಯಕ್ತಿಗೆ 55 ಲಕ್ಷ ವಂಚನೆ…ಇಬ್ಬರ ವಿರುದ್ದ FIR ದಾಖಲು…

ಮೈಸೂರು,ಫೆ4,Tv10 ಕನ್ನಡ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಪಾಲುದಾರಿಕೆ ನೀಡುವ ಆಮಿಷ ನೀಡಿ ವ್ಯಕ್ತಿಯೊಬ್ಬರಿಗೆ 55 ಲಕ್ಷ ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.ಈ ಸಂಭಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಇಬ್ಬರು ರಿಯಲ್ ಎಸ್ಟೇಟ್ ಉದ್ಯಮಿಗಳ ವಿರುದ್ದ FIR ದಾಖಲಾಗಿದೆ.ಬಾಬಯ್ಯ ಸ್ವಾಮಿ ನಾಯ್ಡು ಹಾಗೂ ಬ್ರಹ್ಮಾನಂದ ರೆಡ್ಡಿ ಎಂಬುವರ ವಿರುದ್ದ ವಂಚನೆಗೆ ಒಳಗಾದ ಗಜಾನನ ಭಟ್ ಎಂಬುವರು ಪ್ರಕರಣ ದಾಖಲಿಸಿದ್ದಾರೆ. ಭಾರತೀಯ ಪ್ರವಾಸೋದ್ಯಮ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಗಜಾನನ ಭಟ್ ರವರಿಗೆ
Read More

ರೇಡಿಯೆಂಟ್ ಆಸ್ಪತ್ರೆ ಉಸ್ತುವಾರಿ ಡಾ.ರಾಜೀವ್ ವಿರುದ್ದ ವಂಚನೆ ಆರೋಪ…ಟ್ರಸ್ಟಿಗಳಿಂದ FIR ದಾಖಲು

… ಮೈಸೂರು,ಫೆ4,Tv10 ಕನ್ನಡ ಮೈಸೂರಿನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಒಂದಾದ ರೇಡಿಯೆಂಟ್ ಆಸ್ಪತ್ರೆ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಡಾ.ರಾಜೀವ್ ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.ಟ್ರಸ್ಟಿಗಳ ಗಮನಕ್ಕೆ ಬಾರದಂತೆ ಮತ್ತೊಂದು ಸಂಸ್ಥೆ ಜೊತೆ ರೇಡಿಯೆಂಟ್ ಆಸ್ಪತ್ರೆಯನ್ನ ವಿಲೀನ ಮಾಡಿ ಹಣ ಪಡೆದುಕೊಂಡಿದ್ದಾರೆಂದು ಆರೋಪಿಸಿ ವಂಚನೆ ಪ್ರಕರಣ ದಾಖಲಿಸಲಾಗಿದೆ.ಟ್ರಸ್ಟಿಗಳಾದ ಬಿ.ಜಗದೀಶ್,ಹರಿಪ್ರಕಾಶ್ ಶರ್ಮ ಹಾಗೂ ಸರಿತಾ ಶರ್ಮ ರವರು ಡಾ.ರಾಜೀವ್ ವಿರುದ್ದ FIR ದಾಖಲಿಸಿದ್ದಾರೆ. 1997 ರಲ್ಲಿ ಬಿ.ಜಗದೀಶ್ ರವರು ಡಾ.ಬಸಪ್ಪ ಮತ್ತು
Read More

ಆನೆ ತುಳಿತಕ್ಕೆ ವ್ಯಕ್ತಿ ಬಲಿ ಪ್ರಕರಣ…15 ಲಕ್ಷ ಪರಿಹಾರ ಚೆಕ್ ವಿತರಣೆ…

ಹುಣಸೂರು,ಫೆ3,Tv10 ಕನ್ನಡ ಆನೆ ತುಳಿತಕ್ಕೆ ಮೃತಪಟ್ಟ ಚೆಲುವಯ್ಯ ರವರ ಮನೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ 15 ಲಕ್ಷ ಪರಿಹಾರದ ಚೆಕ್ ವಿತರಿಸಿದರು.ಇಂದು ಬೆಳಿಗ್ಗೆ ವೀರನಹೊಸಳ್ಳಿಯ ಜಮೀನಿನಲ್ಲಿ ಚೆಲುವಯ್ಯ ಕೆಲಸ ಮಾಡುತ್ತಿದ್ದ ವೇಳೆ ಧಿಢೀರ್ ಪ್ರತ್ಯಕ್ಷವಾದ ಸಲಗ ದಾಳಿ ನಡೆಸಿ ಬಲಿ ಪಡೆದಿತ್ತು.ಕುಟುಂಬಸ್ಥರಿಗೆ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದರು.ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿ ಲಿಂಗರಾಜು ರವರು ಚೆಲುವಯ್ಯ ರವರ ಮನೆಗೆ ಭೇಟಿ ನೀಡಿ ಮೃತರ
Read More

ಹುಣಸೂರು: ಬೋನಿಗೆ ಬಿದ್ದ ಚಿರತೆ…ಅರಣ್ಯ ವಲಯಕ್ಕೆ ರವಾನೆ…

ಹುಣಸೂರು,ಫೆ2,Tv10 ಕನ್ನಡ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನಲ್ಲಿ ಚಿರತೆ ಬೋನಿಗೆ ಬಿದ್ದಿದೆ.ಸುಮಾರು ಎರಡು ವರ್ಷದ ಗಂಡು ಚಿರತೆ ಸೆರೆಯಾಗಿದೆ.ಹುಣಸೂರು ಅಗ್ನಿಶಾಮಕ ಠಾಣೆ ಬಳಿಗಿರೀಶ್ ಎಂಬುವವರ ಮನೆ ಬಳಿ ಕಾಣಿಸಿಕೊಂಡಿತ್ತು.ಅರಣ್ಯ ಇಲಾಖೆ ಸಿಬ್ಬಂದಿಗಳು ನಾಯಿ ಕಟ್ಟಿದ ಬೋನು ಇರಿಸಿದ್ದರು.ನಾಯಿ ಬೇಟೆಗೆ ಬಂದ ಚಿರತೆ ಬೋನಿಗೆ ಬಿದ್ದಿದೆ.ಸೆರೆ ಸಿಕ್ಕ ಚಿರತೆಗೆ ಚಿಪ್ ಅಳವಡಿಸಿ ನಾಗರಹೊಳೆ ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿದೆ…
Read More