ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಹಸ್ರ ಚಂದ್ರ ದರ್ಶನ ಸಂಭ್ರಮ…ಅದ್ದೂರಿ ಚಾಲನೆ…

ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಹಸ್ರ ಚಂದ್ರ ದರ್ಶನ ಸಂಭ್ರಮ…ಅದ್ದೂರಿ ಚಾಲನೆ…

ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಹಸ್ರ ಚಂದ್ರ ದರ್ಶನ ಸಂಭ್ರಮ…ಅದ್ದೂರಿ ಚಾಲನೆ…

ಮೈಸೂರು,ಫೆ1,Tv10 ಕನ್ನಡ
ಮೈಸೂರು-ಊಟಿ ರಸ್ತೆಯಲ್ಲಿರುವ ಶ್ರೀ ‌ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ‌ಸ್ವಾಮೀಜಿಯ ವರ ಸಹಸ್ರ ಚಂದ್ರ‌ ದರ್ಶನ‌ ಶಾಂತಿ ಮಹೋತ್ಸವದ ಸಂಭ್ರಮ‌ ಮನೆ ಮಾಡಿದೆ.ಗಣಪತಿ ಶ್ರೀಗಳು ಇಂದು ವೈಭವಯುತ ಚಾಲನೆ

ನೀಡಿದ್ದಾರೆ.ಶಾಂತಿ ಮಹೋತ್ಸವ ಸಂಗವಾಗಿ ಶ್ರೀ ದತ್ತ ವೆಂಕಟೇಶ್ವರ ‌ದೇವಸ್ಥಾನದಲ್ಲಿ‌‌ ವಿಶೇಷ ಪೂಜೆ ನೆರವೇರಿಸಿ ನಂತರ ವಿಷ್ಣು ಸಹಸ್ರ ಪಠಣ‌ ನಡೆಯಿತು.ನಂತರ ಶ್ರೀಗಳನ್ನ ಭಕ್ತರು ಶ್ರೀ ದತ್ತ ವೆಂಕಟೇಶ್ವರ ‌ಸ್ವಾಮಿ‌‌ ದೇವಾಲಯದಿಂದ‌ ಸಾಲಂಕೃತ ರಥದಲ್ಲಿ ಭವ್ಯ ಮೆರವಣಿಗೆ ಮೂಲಕ ನಾದ‌ ಮಂಟಪಕ್ಕೆ‌

ಕರೆತಂದರು.ಗಾರುಡಿ ಗೊಂಬೆಗಳು, ಪೂಜಾ‌ ಕುಣಿತ, ಪಟದ ಕುಣಿತ‌‌, ಡೊಳ್ಳು‌ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ಮೇಳ ಮೆರವಣಿಗೆಗೆ ಮೆರುಗು ನೀಡಿತು.ಪೂರ್ಣಕುಂಬ ‌ಹೊತ್ತ ಮಹಿಳೆಯರು, ಶ್ರೀ‌ ಲಕ್ಷ್ಮೀ ಸಮೇತ ಶ್ರೀ ‌ದತ್ತ ವೆಂಕಟೇಶ್ವರ, ಶ್ರೀ ‌ಆಂಜನೇಯ, ಪಾರ್ವತಿ‌ದೇವಿಯ, ಉತ್ಸವ ಮೂರ್ತಿಯೊಂದಿಗೆ ಗೋವು, ಕುದರೆ ಮೆರವಣಿಗೆಯಲ್ಲಿ ಸಾಗಿದವು.ಅಲಂಕೃತಗೊಂಡ ರಥದಲ್ಲಿ ಆಸೀನರಾದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರನ್ನು‌ ಋತ್ವಿಕರುಗಳು ಹಾಗೂ ಅವಧೂತ‌ ದತ್ತಪೀಠದ ಕಿರಿಯ ಸ್ವಾಮೀಜಿಗಳಾದ‌ ಶ್ರೀ ದತ್ತ‌ ವಿಜಯಾನಂದ ತೀರ್ಥ ಸ್ವಾಮೀಜಿಯವರು ನಾದ ಮಂಟಪಕ್ಕೆ ಕರೆತಂದರು. ಹಲವು‌ ದೇವಾಲಯಗಳಿಂದ‌ ಆಗಮಿಸಿದ್ದ ಋತ್ವಿಕರನ್ನು ಹಾಗೂ ವಿದ್ವಾಂಸರನ್ನು ಸ್ವಾಮೀಜಿಯವರು ಗೌರವಿಸಿದರು.ನಂತರ ಕೃಚುರಾಛರಣ, ದಾನಸಂಕಲ್ಪದೊಂದಿಗೆ ಕೂಷ್ಮಾಂಡ ಹೋಮಕ್ಕೆ ಚಾಲನೆ ನೀಡಲಾಯಿತು.ಈ ವೇಳೆ ಕಿರಿಯ ಶ್ರೀಗಳಾದ ಶ್ರೀ ದತ್ತ ‌ವಿಜಯಾನಂದ ತೀರ್ಥ ‌ಸ್ವಾಮೀಜಿ ಅವರು ಭಕ್ತರನ್ನುದ್ದೇಶಿಸಿ ಆಶೀರ್ವಚನ ನೀಡಿ ಈ ಸಹಸ್ರ ಚಂದ್ರ ‌ದರ್ಶನ ಶಾಂತಿ ಮಹೋತ್ಸವದಲ್ಲಿ ಪಾಲ್ಗೊಳ್ಳುವುದು‌ ಪುಣ್ಯದ ಕೆಲಸ ಎಂದು ಹೇಳಿದರು.ಸಾಮಾನ್ಯ ಮನುಷ್ಯರು ಮಾಡಿಕೊಳ್ಳುವ ಸಹಸ್ರ‌‌ ಚಂದ್ರ ದರ್ಶನ ಶಾಂತಿಯಲ್ಲಿ ಭಾಗವಹಿಸುವುದೇ ಇಷ್ಟು ಪುಣ್ಯದ ಕೆಲಸ.ಅಂತಹುದರಲ್ಲಿ‌ ಆಧ್ಯಾತ್ಮಿಕ ‌ಮೇರು ಪರ್ವತದಂತಿರುವ ಗುರು ನಮ್ಮ ಗಣಪತಿ‌ ಸಚ್ಚಿದಾನಂದ ಸ್ವಾಮೀಜಿಯವರ ಸಹಸ್ರ ಚಂದ್ರ ದರ್ಶನ ಶಾಂತಿ ಮಹೋತ್ಸವದಲ್ಲಿ ಪಾಲ್ಗೊಳ್ಳುವುದು ನಿಜಕ್ಕೂ ಅತ್ಯಂತ ಪುಣ್ಯ ಎಂದು ತಿಳಿಸಿದರು.ಸಹಸ್ರ ಚಂದ್ರ ದರ್ಶನ ಶಾಂತಿ ಮಹೋತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು…

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ ಪುತ್ರ ಮಂಜುನಾಥ್(50) ಹೃದಯಾಘಾತದಿಂದ ಮೈಸೂರಿನ ಖಾಸಗಿ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *