
ವಿವಿ ಪುರಂ ಪೊಲೀಸರ ಕಾರ್ಯಾಚರಣೆ…ಸರಗಳ್ಳತನ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಅಂದರ್…1.80 ಲಕ್ಷ ಮೌಲ್ಯದ ಚಿನ್ನದ ಸರ ವಶ…
- CrimeMysore
- March 16, 2023
- No Comment
- 104
ವಿವಿ ಪುರಂ ಪೊಲೀಸರ ಕಾರ್ಯಾಚರಣೆ…ಸರಗಳ್ಳತನ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಅಂದರ್…1.80 ಲಕ್ಷ ಮೌಲ್ಯದ ಚಿನ್ನದ ಸರ ವಶ…
ಮೈಸೂರು,ಮಾ16,Tv10 ಕನ್ನಡ
ಸರಗಳ್ಳತನ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನ ಬಂಧಿಸುವಲ್ಲಿ ವಿವಿ ಪುರಂ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.ಬಂಧಿತನಿಂದ 1.80 ಲಕ್ಷ ಮೌಲ್ಯದ 65 ಗ್ರಾಂ ಮಾಂಗಲ್ಯ ಸರವನ್ನ ವಶಪಡಿಸಿಕೊಂಡಿದ್ದಾರೆ.ವಿಜಯನಗರದ ನಿವಾಸಿ ವಿಕಾಸ್(26) ಬಂಧಿತ.
ಇಂದು ಬೆಳಿಗ್ಗೆ ಯಾದವಗಿರಿಯ ನಿವಾಸಿ 65 ವರ್ಷದ ಪುಷ್ಪಾದೇವಿ ರವರು ವಾಯುವಿಹಾರಕ್ಕೆ ತೆರಳಿದ್ದ ಸಂಧರ್ಭದಲ್ಲಿ ಬೈಕ್ ನಲ್ಲಿ ಬಂದ ಆರೋಪಿ ವಿಕಾಸ್ ಮಾಂಗಲ್ಯ ಸರ ಕಸಿದು ಪರಾರಿಯಾಗಿದ್ದಾನೆ.ಪ್ರಕರಣ ದಾಖಲಿಸಿಕೊಂಡ ವಿವಿ ಪುರಂ ಠಾಣೆ ಪೊಲೀಸರು ಕಾರ್ಯೋನ್ಮುಖರಾಗಿ ಸಿಸಿ ಕ್ಯಾಮರಾಗಳ ನರವಿನಿಂದ ಆರೋಪಿಯನ್ನ ಪತ್ತೆಹಚ್ಚಿ ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಪರಾಧ ಮತ್ತು ಸಂಚಾರ ಡಿಸಿಪಿ ಎಸ್.ಜಾಹ್ನವಿ ರವರ ಮಾರ್ಗದರ್ಶನದಲ್ಲಿ,ಎನ್.ಆರ್.ವಿಭಾಗದ ಎಸಿಪಿ ಅಶ್ವತ್ಥ್ ನಾರಾಯಣ್ ಉಸ್ತುವಾರಿಯಲ್ಲಿ ವಿವಿಪುರಂ ಠಾಣೆ ಇನ್ಸ್ಪೆಕ್ಟರ್ ಮೋಹನ್ವಕುಮಾರ್,ಪಿಎಸ್ಸೈ ಲೇಪಾಕ್ಷ.ಕೆ ಮತ್ತು ಮೋಹನ್ ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳಾದ ಪ್ರಸನ್ನ,ರವಿಗೌಡ,ಪರಶುರಾಮ್ ರಾಠೋಡ್,ಮಹೇಶ್,ಸುರೇಶ್,ಈರಣ್ಣ,ಉಮೇಶ್,ಸುನಿಲ್ ಕಾಂಬಳ್ಳೆ,ಕುಮಾರ್ ರವರು ಕಾರ್ಯಾಚರಣೆಯನ್ನ ಯಶಸ್ವಿಗೊಳಿಸಿದ್ದಾರೆ…