ಮೈಸೂರು ದಿನಾಂಕ:16-03-2023ರ ಗುರುವಾರದಂದು ಬೆಳಿಗ್ಗೆ:10.30ಕ್ಕೆ ಕೆ.ಆರ್.ಆಸ್ಪತ್ರೆಯ ಸ್ಟೋನ್ ಬಿಲ್ಡಿಂಗ್ ಪಕ್ಕದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅನುದಾನ
- TV10 Kannada Exclusive
- March 16, 2023
- No Comment
- 99
ಮೈಸೂರು ದಿನಾಂಕ:16-03-2023ರ ಗುರುವಾರದಂದು ಬೆಳಿಗ್ಗೆ:10.30ಕ್ಕೆ ಕೆ.ಆರ್.ಆಸ್ಪತ್ರೆಯ ಸ್ಟೋನ್ ಬಿಲ್ಡಿಂಗ್ ಪಕ್ಕದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅನುದಾನ ರೂ: 46.00 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಸಖಿ ಒನ್ ಸ್ಟಾಫ್ ಸೆಂಟರ್ ಕಟ್ಟಡದ ಉಧ್ಘಾಟನೆಯನ್ನು ಮೈಸೂರು
ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ ಡೀನ್ ಡಾ: ದಾಕ್ಷಾಯಿಣಿ, ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶ್ರೀ ಬಸವರಾಜು ರವರುಗಳೊಂದಿಗೆ ನೆರವೇರಿಸಿದ ಚಾಮರಾಜ ಕ್ಷೇತ್ರದ ಶಾಸಕರಾದ ಶ್ರೀ ಎಲ್.ನಾಗೇಂದ್ರ ರವರು ನೆರವೇರಿಸಿ ಮಾತನಾಡಿದ ಶಾಸಕರು ರಾಜ್ಯ ಸರ್ಕಾರದ ಅನುದಾನದಲ್ಲಿ ನಿರ್ಮಾಣಗೊಂಡ ಈ ಕಟ್ಟಡದಲ್ಲಿ ದಿನದ 24 ಗಂಟೆ ಏಳೂ ದಿವಸಗಳು ದೌರ್ಜನ್ಯಕ್ಕೊಳಗಾದ, ಅತ್ಯಚಾರಕ್ಕೊಳಗಾದ ಯುವತಿ/ಮಹಿಳೆಗೆ ಶೀಘ್ರವಾಗಿ ಸೂಕ್ತ ವೈದ್ಯಕೀಯ ಚಿಕತ್ಸೆ, ಕಾನೂನು ನೆರವು, ಆಪ್ತ ಸಮಾಲೋಚನೆ, ಪೊಲೀಸ್ ನೆರವು ಹಾಗೂ ತಾತ್ಕಾಲಿ ಆಶ್ರಯ ಒದಗಿಸುವ ಕಟ್ಟಡವಾಗಿದ್ದು, ಇಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ಸಿಬ್ಬಂದಿಯೂ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು.
*ಈ ಕಾರ್ಯಕ್ರಮದಲ್ಲಿ ಆಶ್ರಯ ಸಮಿತಿ ಸದಸ್ಯ ಅನೂಜ್ ಸಾರಸ್ವತ್, ನಗರ ಭಾ.ಜ.ಪ ಉಪಾಧ್ಯಕ್ಷ ಹರ್ಷ, ಚಾಮರಾಜ ಉಪಾಧ್ಯಕ್ಷ ಜಯಣ್ಣ, ಎಂ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಅರವಿಂದ ವಾರ್ಡ ಅಧ್ಯಕ್ಷ ಗಣೇಶ, ಯುವ ಮೋರ್ಚಾ ಯೋಗಿಶ್, ಕೇಬಲ್ ವಿಜಯ್, ನಿರ್ಮಿತಿ ಕೇಂದ್ರದ ಇಂಜಿನಿಯರ್ ಲವ ಮುಂತಾದವರು ಹಾಜರಿದ್ದರು.
*ಬೆಳಿಗ್ಗೆ:11.00ಕ್ಕೆ ವಾರ್ಡ್ ಸಂ-23 ರ ವ್ಯಾಪ್ತಿಯ ಶಾಂತಲಾ ಚಿತ್ರ ಮಂದಿರದ ಎದುರಿನ ಸ್ವಾತಂತ್ರ ಹೋರಾಟಗಾರರ ಉದ್ಯಾನವನದಲ್ಲಿ ಚಾಮರಾಜ ಕ್ಷೇತ್ರದ ಶಾಸಕರಾದ ಶ್ರೀ ಎಲ್ ನಾಗೇಂದ್ರ ರವರು ಮಹಾ ನಗರ ಪಾಲಿಕೆ ಉಪ ಮಹಾಪೌರರಾದ ಶ್ರೀಮತಿ ಜಿ. ರೂಪ, ಮಹಾ ನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಪ್ರಮೀಳಾ ಭರತ್, ಮೈಸೂರು ರವರೊಂದಿಗೆ ದಿವಂಗತ ಡಾ:ಎಂ.ಜಿ.ಕೃಷ್ಣಮೂರ್ತಿ ಹಾಗೂ ದಿವಂತ ಪ್ರೊ: ಮೇಜರ್ ಹೆಚ್.ಎನ್.ಅಶ್ವತ್ಥನಾರಾಯಣ ರವರುಗಳ ಸ್ಮರಣಾರ್ಥ ನಿರ್ಮಾಣ ಮಾಡಿರುವ ಕೃಷ್ಣಾಶ್ವತ್ಥ ಎಂಬ ಹೆಸರಿನಲ್ಲಿ ಆಯುರ್ವೇದ ಸಸ್ಯಕಾಶಿ ಉದ್ಯಾನವನ್ನು ಹಾಗೂ 14ನೇ ಹಣಕಾಸು ಯೋಜನೆ ಅನುದಾನ ರೂ:18.00 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಯೋಗ ಮಂಟಪವನ್ನು ಉಧ್ಘಾಟನೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಮೈಸೂರು ನಗರ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಸಂಘದ ಅಧ್ಯಕ್ಷರಾದ ಶ್ರೀ Y.C. ರೇವಣ್ಣ, ಸಂಘದ ಖಜಾಂಚಿ ಶ್ರೀ ರಂಗ ಶೆಟ್ಟರು, ಮೈಸೂರು ನಗರ ಬಿಜೆಪಿ ಉಪಾಧ್ಯಕ್ಷರಾದ ಹರ್ಷ, 23 ನೇ ವಾರ್ಡಿನ ಕಾರ್ಯದರ್ಶಿಯವರಾದ ಶ್ರೀನಿವಾಸ್, ವಿಘ್ನೇಶ್ವರ ಭಟ್, ಗೋಪಾಲಕೃಷ್ಣ, ಸುದರ್ಶನ್, ಸಚಿನ್. R, ಮಂಜುನಾಥ್, ಚರಣ್, ಪಾಪಣ್ಣ,, ಅನೂಜ್ ಸರಸ್ವತ್,ರವಿಶಂಕರ್, ವಿಜಯಾನಂದ, ಲೋಹಿತ್, ಸ್ವಾಮಿನಾಥ್, ರವಿ. S, ಸುಕನ್ಯಾ, ಪಿಂಕಿ, ಪದ್ಮಾ, ಯೋಗೇಶ್, ಮಂಜು,ನಿಶಾಂತ್, ಶ್ರೀನಿವಾಸ್ ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.