ಸಿಸಿಬಿ ಪೊಲೀಸರ ಕಾರ್ಯಾಚರಣೆ…ಜೂಜಾಟ ಆಡುತ್ತಿದ್ದ 8 ಮಂದಿ ಬಂಧನ…ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 12.54 ಲಕ್ಷ ನಗದು ವಶ…
- CrimeMysore
- March 16, 2023
- No Comment
- 83
ಮೈಸೂರು,ಮಾ16,Tv10 ಕನ್ನಡ
ಅಂದರ್ ಬಾಹರ್ ಜೂಜಾಟದ ಕೇಂದ್ರಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 12.54 ಲಕ್ಷ ನಗದು ಹಾಗೂ 7.60 ಲಕ್ಷ ಮುಖಬೆಲೆಯ ವಿವಿಧ ಕಾಯಿನ್ ಗಳನ್ನ ವಶಪಡಿಸಿಕೊಂಡಿದ್ದಾರೆ.ಹುಣಸೂರು ರಸ್ತೆಯಲ್ಲಿರುವ ಸಿಟಿ ಸ್ಪೋರ್ಟ್ಸ್ ಕ್ಲಬ್ ಮೇಲೆ ದಾಳಿ ನಡೆಸಿ 12,50,660/- ರೂ ನಗದು ವಶಪಡಿಸಿಕೊಂಡಿದ್ದು ಮೂವರನ್ನ ಬಂಧಿಸಿದ್ದಾರೆ.ಮತ್ತೊಂದು ಪ್ರಕರಣದಲ್ಲಿ ಚಾಮುಂಡಿ ಬೆಟ್ಟದ ಬಳಿಯ ಜೆ.ಸಿ.ನಗರದ ಕಟ್ಟಡವೊಂದರ ಮೇಲೆ ದಾಳಿ ನಡೆಸಿ ಅಂದರ್ ಬಾಹರ್ ಆಟದಲ್ಲಿ ತೊಡಗಿದ್ದ 5 ಮಂದಿಯನ್ನ ಬಂಧಿಸಿ 7.60 ಲಕ್ಷ ಮೌಲ್ಯದ ವಿವಿದ ಬಣ್ಣದ ಕಾಯಿನ್ ಗಳನ್ನ ಹಾಗೂ 4105/- ರೂ ನಗದನ್ನ ವಶಪಡಿಸಿಕೊಂಡಿದ್ದಾರೆ.
ಸಿಸಿಬಿ ಎಸಿಪಿ ಸಂದೇಶ್ ಕುಮಾರ್ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಗಳಾದ ಅನೂಪ್ ಮಾದಪ್ಪ ಹಾಗೂ ಸಿ.ಕೃಷ್ಣಕುಮಾರ್ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ಯಶಸ್ವಿಗೊಳಿಸಿದ್ದಾರೆ…